Lakshmi Nivasa Serial:ಜಾಹ್ನವಿ ಮನೆಗೆ ಸರ್ಪ್ರೈಸ್ ವಿಸಿಟ್ ಕೊಟ್ಟ ಭಾವನಾ, ಸಿದ್ದು; ಮುಂದೇನಾಯ್ತು?

By ಪೂರ್ವ

ಭಾವನಾ ತನ್ನ ತಂಗಿಯನ್ನು ನೋಡಲೆಂದು ಜಯಂತ್ ಮನೆಗೆ ದಂಪತಿ ಸಮೇತರಾಗಿ ಬರುತ್ತಾರೆ. ಭಾವನಾ ಜೊತೆ ಜಾನು ಮಾತನಾಡಿದ ರೀತಿಯನ್ನು ನೋಡಿ ಭಾವನಾಗೆ ಆತಂಕವಾಗುತ್ತೆ. ಜಾನು ಯಾಕೆ ಈ ರೀತಿ ಮಾತನಾಡುತ್ತಿದ್ದಾಳೆ. ಆಕೆಗೆ ಅಲ್ಲಿ ಏನಾದರೂ ತೊಂದರೆ ಆಗಿರಬಹುದು. ಅದನ್ನು ಹೇಳುವುದಕ್ಕೆ ಪ್ರಯತ್ನ ಮಾಡುತ್ತಿರುಬಹುದು ಎಂದು ಅನಿಸಿದೆ. ಅಜ್ಜಿ ಬಗ್ಗೆ ಜಾನು ಸಿಕ್ಕಾಪಟ್ಟೆ ಹಚ್ಚಿಕೊಂಡಿದ್ದಾಳೆ. ಆದರೆ, ಆಕೆ ಈ ವಿಚಾರವನ್ನು ಇಷ್ಟೊಂದು ಮನಸ್ಸಿಗೆ ಹಚ್ಚಿಕೊಳ್ಳುವುದು ಯಾಕೋ ಸರಿ ಕಾಣುತ್ತಿಲ್ಲ. ತಾನು ಜಾನು ಮನೆಗೆ ಹೋಗಿ ಆಕೆಗೆ ಬುದ್ಧಿವಾದವನ್ನು ಹೇಳಬೇಕೆಂದು ಭಾವನಾ ಅಂದುಕೊಳ್ಳುತ್ತಾಳೆ.

ಭಾವನಾಗೆ ಜಾಹ್ನವಿ ಬಗ್ಗೆ ಆತಂಕವಾಗಿದೆ. ಹಾಗಾಗಿ ಈ ವಿಚಾರವನ್ನು ಸಿದ್ದು ಬಳಿ ಪ್ರಸ್ತಾಪ ಮಾಡಿದಾಗ "ಖಂಡಿತವಾಗಿಯೂ ನಾವು ಜಾಹ್ನವಿ ಮನೆಗೆ ಹೋಗೋಣ. ಆಕೆ ಇರುವ ಸನ್ನಿವೇಶ ಏನು ಅನ್ನೋದನ್ನು ನಾವು ಅಲ್ಲಿಗೆ ಹೋದರೆ ತಿಳಿಯುತ್ತೆ. ಆಕೆಗೆ ಕೊಂಚ ರಿಲ್ಯಾಕ್ಸ್ ಆಗಬಹುದು. ನಮ್ಮ ಜೊತೆ ಮಾತನಾಡಿದಾಗ ಆಕೆಗೆ ಸಮಾಧಾನ ಆಗಬಹುದು" ಎಂದು ಸಿದ್ದು ಭಾವನಾ ಬಳಿ ಹೇಳುತ್ತಾನೆ. ಇನ್ನು ಇತ್ತೀಚೆಗೆ ಭಾವನಾ ಸಿದ್ದು ಮೇಲೆ ಸಾಫ್ಟ್ ಆಗಿರುವಂತೆ ಕಾಣುತ್ತಿದೆ. ಸಿದ್ದು ಆಲೋಚನೆ ಮಾಡುವ ರೀತಿಗೆ ಭಾವನಾ ಪಕ್ಕ ಲವ್‌ನಲ್ಲಿ ಬೀಳೋದು ಸತ್ಯ. ಆ ಮಟ್ಟಿಗೆ ಭಾವನಾಳನ್ನು ಸಿದ್ದು ಇಂಪ್ರೆಸ್ ಮಾಡಿದ್ದಾನೆ ಅಂತ ವೀಕ್ಷಕರು ಮಾಡುತ್ತಿರುವ ಕಾಮೆಂಟ್.

Lakshmi Nivasa Kannada serial March 19th 2025 Full episode Highlights

ಜಾಹ್ನವಿಗೆ ಮಗುವನ್ನು ಕಳೆದುಕೊಂಡಿದ್ದಾಳೆ. ಆದರೆ ಮಗು ಇದೆ ಎಂದು ಎಲ್ಲರೂ ನಂಬುವ ಹಾಗೆ ನಡೆದುಕೊಳ್ಳುತ್ತೇನೆ. ನನಗೆ ಇದೆಲ್ಲ ಮನಸ್ಸಿಗೆ ಸಾಕಷ್ಟು ನೋವು ಕೊಡುತ್ತದೆ. ಆದರೆ ನಾನು ಈ ರೀತಿ ನಟನೆ ಮಾಡಲಿಲ್ಲ ಅಂದರೆ, ಮನೆಯವರಿಗೆ ಜಯಂತ್ ಬಗ್ಗೆ ಅಸಲಿ ವಿಚಾರ ತಿಳಿದು ಹೋಗುತ್ತದೆ. ಜಯಂತ್ ನನ್ನ ಮನೆ ಮಂದಿ ತಪ್ಪಾಗಿ ತಿಳಿದುಕೊಳ್ಳುತ್ತಾರೆ. ಅಜ್ಜಿ ವಿಚಾರವಾಗಿ ಜಯಂತ್ ನಡೆದುಕೊಂಡ ರೀತಿ ಖಂಡಿತವಾಗಿಯೂ ಕ್ಷಮಿಸುವುದಕ್ಕೆ ಯೋಗ್ಯವೇ ಅಲ್ಲ. ಆದರೂ ಆತನ ಜೊತೆ ಬದುಕಿರುವುದು ಮನೆಯವರ ಖುಷಿಗಾಗಿ ಎಂದು ಜಾಹ್ನವಿ ಯೋಚನೆ ಮಾಡುತ್ತಿರುವಾಗ ಜಯಂತ್ ನಿದ್ದೆ ಮಾತ್ರೆ ಹಾಕಿದ ಹಾಲನ್ನು ಜಾಹ್ನವಿ ಬಳಿಗೆ ತೆಗೆದುಕೊಂಡು ಬರುತ್ತಾನೆ.

ಜಾಹ್ನವಿ ನಿದ್ದೆ.. ಭಾವನಾ ಎಂಟ್ರಿ

ಜಾಹ್ನವಿ ಅದೆಷ್ಟು ಬಾರಿ ಹಾಲು ಬೇಡ ಎಂದು ಹೇಳಿದರೂ, ಜಯಂತ್ ಜಾಹ್ನವಿಯ ಮಾತನ್ನು ಕೇಳುವುದಿಲ್ಲ. ಒತ್ತಾಯ ಮಾಡಿ ಜಾಹ್ನವಿಗೆ ಆ ಹಾಲನ್ನು ಕುಡಿಸುತ್ತಾನೆ. ಹಾಲು ಕುಡಿದ ಬಳಿಕವೇ ಜಾಹ್ನವಿಗೆ ಜೋರಾಗಿ ನಿದ್ದೆ ಬರುತ್ತೆ. ಜಾಹ್ನವಿ ಮಲಗುತ್ತಿದ್ದಂತೆ ಜಯಂತ್‌ ಖುಷಿಯಲ್ಲಿ ತೇಲಾಡುತ್ತಾನೆ. ಜಾಹ್ನವಿ ಎಚ್ಚರವಿದ್ದಾರೆ. ನಾನು ಅಜ್ಜಿಯ ಮನೆಗೆ ಹೋಗಿ ತನ್ನ ಕೆಲಸವನ್ನು ಮಾಡಲು ಆಕೆ ಬಿಡುವುದಿಲ್ಲ. ಹೇಗಾದರೂ ಮಾಡಿ ಮಾವನವರ ಮನೆಗೆ ಹೋಗಿ ಅಜ್ಜಿ ಆರೋಗ್ಯ ವಿಚಾರಿಸಬೇಕು ಎಂದುಕೊಂಡಾಗ ಮನೆಗೆ ಯಾರೋ ಬಂದ ಹಾಗೆ ಆಗುತ್ತದೆ. ಜಯಂತ್ ಡೋರ್ ತೆಗೆದು ನೋಡಿದಾಗ ಭಾವನಾ ಹಾಗೂ ಸಿದ್ದು ಮನೆಯ ಹೊರಗಡೆ ನಿಂತಿರುವುದನ್ನು ಕಂಡು ಜಯಂತ್ ಭಯ ಪಡುತ್ತಾನೆ.

ಭಾವನಾ ಕಂಡು ಜಯಂತ್‌ಗೆ ನಡುಕ

ಆದರೂ ಅವರನ್ನು ಖುಷಿಯಿಂದಲೇ ಮನೆಗೆ ಸ್ವಾಗತ ಮಾಡುತ್ತಾನೆ. ಜಾಹ್ನವಿ ಮಲಗಿರುವ ಬಗ್ಗೆ ಭಾವನಾ ಬಳಿ ಹೇಳುತ್ತಾನೆ. ಭಾವನಾ, ಜಾಹ್ನವಿಯನ್ನು ಮಾತಾಡಿಸಿಕೊಂಡು ನಾಳೆಯೇ ಹೋಗುವುದು ಎಂದು ಡಿಸೈಡ್ ಮಾಡುತ್ತಾಳೆ. ಅಲ್ಲಿಗೆ ಜಯಂತ್ ಪ್ಲಾನ್ ಎಲ್ಲಾ ಹಾಳಾಗುತ್ತೆ. ಜಾಹ್ನವಿ ಮರುದಿನ ಎದ್ದ ಕೂಡಲೇ ಆಕೆಯ ಪಕ್ಕ ಭಾವನಾ ಇರುವುದನ್ನು ಕಂಡು ಜಾಹ್ನವಿಗೆ ಸಿಕ್ಕಾಪಟ್ಟೆ ಖುಷಿ ಆಗುತ್ತೆ. ಹಾಗೆಯೇ ತನಗೆ ಅಷ್ಟೊಂದು ನಿದ್ದೆ ಬಂದಿರುವ ಬಗ್ಗೆ ಆಕೆಯ ಜೊತೆ ಹೇಳುತ್ತಾಳೆ. ಭಾವನಾ ಜಾಹ್ನವಿಯನ್ನು ಸಮಾಧಾನ ಮಾಡುತ್ತಾಳೆ. ಈ ಸಮಯದಲ್ಲಿ ರೆಸ್ಟ್ ಮಾಡಬೇಕು ಎಂದು ಹೇಳಿ, ಹೊಟ್ಟೆಯಲ್ಲಿರುವ ಮಗುವಿನ ಬಗ್ಗೆ ಭಾವನಾ ಪ್ರಶ್ನೆ ಮಾಡಿದಾಗ, ಜಾನುಗೆ ಬಹಳ ದುಃಖ ಆಗುತ್ತೆ. ಇತ್ತ ಸಂತು ಶ್ರೀನಿವಾಸ್‌ಗೆ ಕೆಲಸ ಇಲ್ಲವಲ್ಲ ಎಂದು ಹಂಗಿಸಿ ಮಾತನಾಡುತ್ತಾನೆ.

Take a Poll

ಮಗನ ಮಾತಿಗೆ ಖಡಕ್ ಉತ್ತರ ಕೊಟ್ಟ ಶ್ರೀನಿವಾಸ್

ಆದರೆ ಸಂತೋಷ್ ಮಾತಿಗೆ ಶ್ರೀನಿವಾಸ್ ಯಾವತ್ತೂ ತಲೆ ಕೆಡಿಸಿಕೊಳ್ಳುವುದಿಲ್ಲ. ತನಗೆ ಯಾವುದು ಸರಿಯೋ ಆ ಕೆಲಸವನ್ನು ಮಾಡುತ್ತಾರೆ. ಇದರಿಂದ ಸಂತೋಷ್‌ಗೆ ಬಹಳ ಕೋಪ ಬರುತ್ತದೆ. ತಾನು ಮನೆಯಲ್ಲಿ ಕೆಲಸ ಹೋದ ಬಳಿಕ ಸುಮ್ಮನೆ ಕೂತು ತಿನ್ನುತ್ತಿಲ್ಲ. ಆಟೋ ಕೆಟ್ಟು ಹೋಯಿತು. ಹಾಗೆಯೇ ಸೆಕ್ಯೂರಿಟಿ ಗಾರ್ಡ್ ಕೆಲಸ ಮಾಡುತ್ತಿದ್ದೆ. ಸಡನ್ ಆಗಿ ಆ ಒನರ್‌ಗೆ ಏನಾಯಿತು ಗೊತ್ತಿಲ್ಲ. ಕೆಲಸಕ್ಕೆ ಬರಬೇಡ ಎಂದ ಎಂದಾಗ ಸಂತೋಷ್‌ಗೆ ಮಾತನಾಡಲು ಸರಿ ಕಾಣಲಿಲ್ಲ. ಮಾತು ಮುಂದುವರೆಸಿದ ಶ್ರೀನಿವಾಸ್ ನಾನು ಕೆಲಸಕ್ಕೆ ಹೋದರೆ ನಿನಗೆ ಅವಮಾನ ಆಗುತ್ತದೆ. ಹಾಗಾದರೆ ಕಷ್ಟ ಕಾಲದಲ್ಲಿ ನಿನ್ನ ಗೆಳೆಯರ ಜೊತೆ ಹತ್ತು ಸಾವಿರ ಹಣ ಕೇಳು ಅವರು ಕೊಡುತ್ತಾರ ನೋಡು ಆಮೇಲೆ ಮಾತನಾಡು ಎಂದು ಹೇಳುತ್ತಾರೆ. ಈ ಮಾತನ್ನು ಕೇಳಿ ಸಂತೋಷ್ ಬಾಯಿ ಮುಚ್ಚಿಕೊಂಡು ಊಟ ಮಾಡಿ ಅಲ್ಲಿಂದ ಎದ್ದು ಹೋಗುತ್ತಾನೆ.

ಈ ಹಿಂದಿನ ಎಪಿಸೋಡ್‌ಗಳಿಂದಲೂ ಜಾಹ್ನವಿ ಹಾಗೂ ಜಯಂತ್ ನಡುವೆ ಮೈಮಸ್ಸು ಮೂಡಿದೆ. ಅಜ್ಜಿ ಜೀವಕ್ಕೆ ಸಂಚಕಾರ ತರುವುದಕ್ಕೆ ಹೊರಟಿದ್ದ ಜಯಂತ್ ವಿಚಾರ ಜಾಹ್ನವಿಗೆ ಗೊತ್ತಾದ ದಿನದಿಂದಲೂ ಸರಿಯಾಗಿ ಮಾತಾಡುತ್ತಿಲ್ಲ. ಜಯಂತ್‌ಗೆ ಪ್ರತಿಯೊಂದು ಮಾತಿಗೂ ತಿರುಗೇಟು ಕೊಡುತ್ತಲೇ ಬರುತ್ತಿದ್ದಾಳೆ. ಇದು ಜಯಂತ್‌ಗೆ ಕೋಪ ತರಿಸುತ್ತಿದ್ದರೂ, ಅದೆಲ್ಲವನ್ನೂ ಸಹಿಸಿಕೊಂಡಿದ್ದಾನೆ. ತನ್ನ ಕೋಪವನ್ನು ನಿಯಂತ್ರಣಕ್ಕೆ ತಂದುಕೊಳ್ಳುತ್ತಿದ್ದಾನೆ. ಲಕ್ಷ್ಮಿ ಧಾರಾವಾಹಿಯ ಈ ಸೀರಿಯಲ್‌ನಲ್ಲಿ ಇವರಿಬ್ಬರದ್ದೂ ಒಂದು ಟ್ರಾಕ್ ನಡೆಯುತ್ತಿದೆ.

ಇನ್ನೊಂದು ಟ್ರ್ಯಾಕ್‌ನಲ್ಲಿ ಸಿದ್ದೇಗೌಡ ಹಾಗೂ ಭಾವನಾ ಟ್ರ್ಯಾಕ್ ನಡೆಯುತ್ತಿದೆ. ಇಲ್ಲಿ ಭಾವನಾ ಅತ್ತೆಯ ಕೆಂಗಣ್ಣಿಗೆ ಗುರಿಯಾಗಿದ್ದಾಳೆ. ಇನ್ನೊಂದು ಕಡೆ ಇಷ್ಟು ಇದನ ಸಿದ್ದೇಗೌಡ ಮೇಲೆ ಮುನಿಸಿಕೊಂಡಿದ್ದ ಭಾವನಾ ನಿಧಾನವಾಗಿ ಸಿದ್ದೇಗೌಡರ ಕಡೆಗೆ ವಾಲುತ್ತಿದ್ದಾಳೆ. ಭಾವನಾಗೆ ಸಿದ್ದೇಗೌಡ ಮೇಲೆ ಲೈಟ್ ಆಗಿ ಲವ್ ಆಗಿರುವ ಹಾಗೆ ಕಾಣಿಸುತ್ತಿದೆ.

ಮತ್ತೊಂದು ಕಡೆ ಶ್ರೀನಿವಾಸ್, ಲಕ್ಷ್ಮಿ ಹಾಗೂ ಅವರ ಮಕ್ಕಳ ಕೌಟುಂಬಿಕ ಕಲಹದ ಟ್ರ್ಯಾಕ್ ನಡೆಯುತ್ತಿದೆ. ಮನೆಯಲ್ಲಿ ಅಣ್ಣ ತಮ್ಮದಿರು, ಅತ್ತಿಗೆಯ ನಡುವಿನ ಮಾತಿನ ಸಂಘರ್ಷ, ಶ್ರೀನಿವಾಸ ಹೊಸ ಕೆಲಸ ಹುಡುಕೋದು ನಡೆಯುತ್ತಿದೆ. ಇವೆಲ್ಲವುಗಳ ಮಧ್ಯೆ ಮೊದಲೆರಡು ಟ್ರ್ಯಾಕ್‌ಗಳನ್ನು ಒಟ್ಟಿಗೆ ಸೇರಿಸುವ ಕೆಲಸ ನಡೆದಿದೆ. ಅಂದರೆ, ಜಯಂತ್ ಹಾಗೂ ಜಾಹ್ನವಿ, ಸಿದ್ದೇಗೌಡ ಭಾವನಾ ಜೋಡಿ ಒಂದೇ ಫ್ರೇಮ್‌ನಲ್ಲಿ ಕಾಣಿಸಿಕೊಂಡಿದೆ. ಇದು ವೀಕ್ಷಕರಿಗೆ ಇಷ್ಟ ಆಗುತ್ತಿದೆ.

ಜಾಹ್ನವಿ ಮನೆಗೆ ಭಾವನಾ ಎಂಟ್ರಿ ಕೊಟ್ಟಿದ್ದರಿಂದ ಹೊಸ ಟ್ರ್ಯಾಕ್ ಆರಂಭ ಆಗುವ ಸಾಧ್ಯತೆಯಿದೆ. ಇಲ್ಲಿ ಜಾಹ್ನವಿ ಏನಾದರೂ ಜಯಂತ್ ಸೈಕೋ ಕೃತ್ಯಗಳ ಬಗ್ಗೆ ಬಾಯಿ ಬಿಟ್ಟರೆ? ಕಥೆ ಹೊಸ ದಾರಿಯನ್ನು ಹಿಡಿಯಬಹುದು. ಭಾವನಾ ಹಾಗೂ ಸಿದ್ದೇಗೌಡರು ಜಾಹ್ನವಿಯ ನೆರವಿಗೆ ಬರಬಹುದು. ಆಗ ಏನಾಗುತ್ತೆ? ಜಯಂತ್ ಪಾಡು ಏನಾಗುತ್ತೆ? ಸಿದ್ದೇಗೌಡ ಹಾಗೂ ಜಯಂತ್ ಇಬ್ಬರ ನಡುವಿನ ಸಂಘರ್ಷ ಆಗುತ್ತಾ? ಜಾಹ್ನವಿ ಹಾಗೂ ಭಾವನಾ ಜಯಂತ್‌ಗೆ ಬುದ್ದಿ ಕಲಿಸುತ್ತಾರಾ? ಹೀಗಾಗಿ ಏನೆಲ್ಲ ಸಾಧ್ಯತೆಗಳಿದೆ ಅನ್ನೋದನ್ನು ವೀಕ್ಷಕರು ಲೆಕ್ಕ ಹಾಕುತ್ತಿದ್ದಾರೆ.

More from Filmibeat

English summary
Lakshmi Nivasa Kannada serial March 19th 2025 Full episode Highlights
Read more about: tv show serial filmibeat original
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X