'ಲಕ್ಮೀ ನಿವಾಸ' ಕುಟುಂಬದಲ್ಲಿ ಮದುವೆ ಸಂಭ್ರಮ; ಅಲ್ಲೂ ಚಿಕ್ಕಮ್ಮನ ಸ್ಕೆಚ್

By ಪೂರ್ವ

ಲಕ್ಷ್ಮೀ ನಿವಾಸ ಕುಟುಂಬ ಜಯಂತ್ ಜಾಹ್ನವಿ ಮದುವೆಯ ಸಂಭ್ರಮದಲ್ಲಿದ್ದಾರೆ. ಜಾಹ್ನವಿ ಅದ್ದೂರಿಯಾಗಿ ಎಲ್ಲಾ ರೀತಿಯ ಶಾಸ್ತ್ರವನ್ನು ಮಾಡುತ್ತಿದ್ದಾರೆ. ಅರಿಶಿನ ಶಾಸ್ತ್ರ ಆಯಿತು. ಇದೀಗ ಬಳೆ ಶಾಸ್ತ್ರವನ್ನು ಮಾಡುತ್ತಿದ್ದಾರೆ. ಜಾಹ್ನವಿ ಅಂದದ ಗೊಂಬೆಯ ಹಾಗೆ ಕಾಣಿಸುತ್ತಿದ್ದಾರೆ. ಜಯಂತ್ ಜಾಹ್ನವಿಯನ್ನೂ ನೋಡಿ ಬಹಳಷ್ಟು ಖುಷಿಯಲ್ಲಿ ಇದ್ದಾರೆ. ಜಾಹ್ನವಿ ಮಾತ್ರ ಆಕೆಯ ಗೆಳೆಯ ಮದುವೆ ಬರಲಿಲ್ಲ ಎಂದು ಕೊಂಚ ಬೇಸರದಲ್ಲಿ ಇರುತ್ತಾಳೆ. ಗೆಳೆಯನಿಗೆ ವಾಟ್ಸಾಪ್‌ನಲ್ಲಿ ವಾಯ್ಸ್ ಮೆಸೇಜ್ ಕಳುಹಿಸಿದ್ದಾಳೆ.

ಇದನ್ನು ಕೇಳಿಸಿಕೊಂಡ ಆತ ಮದುವೆಗೆ ಬರುವ ಧೈರ್ಯ ಮಾಡುತ್ತಾನಾ ಎಂಬುವುದನ್ನು ನೋಡಬೇಕಾಗಿದೆ. ಇತ್ತ ಜಯಂತ್ ಜಾಹ್ನವಿಯನ್ನೂ ನೋಡಿ ಕಳೆದು ಹೋಗಿದ್ದಾನೆ. ಆತನಿಗೆ ತನ್ನವರು ಎನ್ನುವವರು ಯಾರು ಇಲ್ಲ. ಆತನಿಗೆ ಜಾಹ್ನವಿಯೇ ಎಲ್ಲಾ. ಆದ ಕಾರಣ ಜಾಹ್ನವಿಯನ್ನೂ ಬಹಳ ಪ್ರೀತಿ ಮಾಡುತ್ತಿರುತ್ತಾನೆ. ಮದುಮಗಳಿಗೆ ಯಾಕೆ ಬಳೆಯನ್ನು ತೊಡಿಸುತ್ತಾರೆ ಎಂಬುವುದರ ವಿವರಣೆಯನ್ನು ಲಕ್ಷ್ಮೀ ನೀಡುತ್ತಾಳೆ. ಇದೆಲ್ಲ ಜಯಂತ್‌ಗೆ ಹೊಸತಾಗಿ ಇರುವುದರಿಂದ ಜಯಂತ್ ಮಾತ್ರ ಬಹಳ ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ.

Lakshmi Nivasa kannada serial update on March 20th episode

ಮದುಮಗಳಿಗೆ ಬಳೆ ಶಾಸ್ತ್ರ ಮಾಡುವುದು ಆಕೆ ಮುತ್ತೈದೆಯಾಗಿ ಸದಾ ಕಾಲ ಇರಬೇಕು ಎನ್ನುವ ಕಾರಣಕ್ಕೆ ಈ ಶಾಸ್ತ್ರವನ್ನು ಮಾಡುತ್ತಾರೆ ಎಂದು ಲಕ್ಷ್ಮೀ ಹೇಳುತ್ತಾರೆ. ಇಷ್ಟೆಲ್ಲ ಹೇಳಬೇಕಾದರೆ ಖುಷಿ ಭಾವನಾಳನ್ನು ಕರೆದು ಹೇಳುತ್ತಾರೆ. ಭಾವನಾ ಅಮ್ಮ ನೀವು ಕೂಡ ಬಳೆ ತೊಟ್ಟು ಕೊಳ್ಳಿ ಎಂದು ಹೇಳುತ್ತಾರೆ. ಇದನ್ನು ಕೇಳಿದ ಭಾವನಾಗೆ ಬೇಸರ ಆಗುತ್ತದೆ. ಜೊತೆಗೆ ಖುಷಿ ಬಳಿ ಹೇಳುತ್ತಾಳೆ.

ಚಿಕ್ಕಮ್ಮನ ಕಾಟದಿಂದ ತಪ್ಪಿಸಿಕೊಂಡ ಖುಷಿ

ಆತನಿಗೆ ತನ್ನ ಅಕ್ಕನ ಮನೆಗೆ ಹೋಗಲು ಸ್ವಲ್ಪವೂ ಇಷ್ಟ ಇಲ್ಲ. ಮನೆಯಲ್ಲಿ ಒಪ್ಪಿಗೆ ಇಲ್ಲದೆ ಸಿದ್ದು ಅಕ್ಕ ಬೇರೆಯವನನ್ನು ಮದುವೆ ಮಾಡಿಕೊಂಡು ಇರುತ್ತಾಳೆ. ಆದರೆ, ಇದೀಗ ಮಾತ್ರ ಆಕೆಯ ಮೇಲೆ ಬಹಳ ಕೋಪ ಮಾಡಿಕೊಂಡು ಇರುತ್ತಾನೆ. ಇತ್ತ ಜಯಂತ್ ಹಾಗೂ ಜಾಹ್ನವಿ ಮದುವೆಯ ವೇಳೆ ಧಾರೆ ಎರೆಯಲು ಬರುತ್ತೇವೆ ಎಂದು ಮಾದೇಗೌಡರು ಹೇಳಿರುತ್ತಾರೆ. ಆದರೆ, ಸಿದ್ದು ಮಾತ್ರ ನೀವು ಎಲ್ಲರೂ ಹೋಗಿ ನಾನು ಬರುವುದು ಇಲ್ಲ ಎಂದು ಖಡಕ್ ನಿರ್ಧಾರ ತೆಗೆದುಕೊಂಡು ಬಿಟ್ಟಿದ್ದಾನೆ.

ತಂಗಿಯ ಮದುವೆಯ ಖುಷಿಯಲ್ಲಿ ಭಾವನಾ

ಇತ್ತ ಖುಷಿ ಬಹಳ ಖುಷಿಯಲ್ಲಿ ಇದ್ದರೆ, ಅದಕ್ಕೂ ಕಲ್ಲು ಹಾಕಲು ಆಕೆಯ ಚಿಕ್ಕಮ್ಮ ಆಗಾಗ ಬರುತ್ತಲೇ ಇರುತ್ತಾಳೆ. ಖುಷಿ ದೊಡ್ಡವಳಾದ ಬಳಿಕ ಆಕೆಗೆ ತನ್ನ ತಂದೆಯ ಸಂಪೂರ್ಣ ಆಸ್ತಿ ಸಿಗುತ್ತದೆ ಎಂದು ಆಕೆಯ ತಂದೆ ವಿಲ್ ಬರೆದು ಇಟ್ಟಿರುತ್ತಾರೆ. ಇದರಿಂದ ಅದು ಖುಷಿ ಪಾಲಾಗಬಾರದು ಎಂಬ ಕೆಟ್ಟ ಉದ್ದೇಶ ಆಕೆಗೆ. ಮದುವೆ ಮನೆಯಲ್ಲಿ ಖುಷಿಯಾಗಿರುವ ಖುಷಿಗೆ ಚಿಕ್ಕಮ್ಮನ ಲೆಕ್ಕಾಚಾರ ಒಂದು ಗೊತ್ತಿಲ್ಲ. ಆದರೆ, ಭಾವನಾಗೆ ಇದರ ಬಗ್ಗೆ ಎಲ್ಲವೂ ಅರಿವಿದೆ.

Lakshmi Nivasa kannada serial update on March 20th episode

ಸಂಭ್ರಮದಲ್ಲಿ ಲಕ್ಷ್ಮೀ ನಿವಾಸ ಕುಟುಂಬ

ಇನ್ನೂ ಮದುವೆ ಸಂಭ್ರಮದಲ್ಲಿ ಇರುವ ಜಾಹ್ನವಿ ಹಾಗೂ ಜಯಂತ್ ಬಹಳ ಖುಷಿಯಲ್ಲಿ ಎಂಜಾಯ್ ಮಾಡುತ್ತಾ ಇದ್ದಾರೆ. ಇನ್ನೂ ಮದುವೆಗೆ ಎಲ್ಲಾ ತಯಾರಿಯನ್ನು ಕೂಡ ಮಾಡಿಕೊಂಡಿದ್ದಾರೆ.

More from Filmibeat

English summary
Lakshmi Nivasa kannada serial update on March 20th episode:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X