Lakshmi nivasa: ಜಯಂತ್- ಜಾಹ್ನವಿ ಮದುವೆ ಸಂಭ್ರಮ; ಮದುವೆ ತಡೆಯುತ್ತಾನಾ ವಿಶ್ವ?
ಜಯಂತ್- ಜಾಹ್ನವಿ ಮದುವೆ ಅದ್ದೂರಿಯಾಗಿ ನಡೆಯುತ್ತಿದೆ. ಮದುವೆಗೆ ಸಾಕಷ್ಟು ಅಲಂಕಾರ ಹಾಗೆಯೇ ಸಾಕಷ್ಟು ತಯಾರಿಗಳು ನಡೆದಿದೆ. ಮದುಮಗಳು ಹಾಗೆಯೇ ಮದುಮಗ ಮದುವೆ ಆಗಿ ಹೊಸ ಬಾಳಿಗೆ ಕಾಲಿಡುವ ಹೊತ್ತು ಸನ್ನಿಹಿತವಾಗಿದೆ. ಆದರೆ ಇದಕ್ಕೆಲ್ಲ ವಿಶ್ವ ಅಡ್ಡಗಾಲು ಹಾಕುತ್ತಾನಾ ಎನ್ನುವುದೇ ಎಲ್ಲರ ಪ್ರಶ್ನೆಯಾಗಿದೆ.
ವಿಶ್ವಗೆ ಜಾಹ್ನವಿ ಅಂದರೆ ಹುಚ್ಚು ಪ್ರೀತಿ, ತಾನು ಜಾಹ್ನವಿಯನ್ನು ಎಲ್ಲಿ ಕಳೆದುಕೊಂಡು ಬಿಡುತ್ತೇನೆ ಎನ್ನುವ ಭಯ ಆತನಲ್ಲಿ ಕಾಣುತ್ತಿದೆ. ಆತನಿಗೆ ಜಾಹ್ನವಿಯ ಮದುವೆ ಮಂಟಪ ನೋಡಿದಾಗ ಬಹಳ ಆಘಾತ ಆಗುತ್ತದೆ. ಮದುವೆ ಮಂಟಪದ ಹೊರಗಡೆ ಇಷ್ಟರ ಮಟ್ಟಿಗೆ ಡೆಕೊರೇಶನ್ ಮಾಡಿದ್ದಾರೆ, ಮದುವೆ ಮನೆಯೊಳಗೆ ಇನ್ನೆಷ್ಟು ಚೆನ್ನಾಗಿ ಅಲಂಕಾರ ಮಾಡಿ ಇರಬಹುದು ಎನ್ನುವ ಆಲೋಚನೆ ಆತನಿಗೆ.

ಹೇಗಾದರೂ ಜಾಹ್ನವಿ ಬಳಿ ನಿಜ ವಿಚಾರ ಹೇಳಬೇಕು ಇಲ್ಲವಾದರೆ ಜಾಹ್ನವಿ ಯಾವತ್ತೂ ನಮ್ಮ ಕೈಗೆ ಸಿಗುವುದಿಲ್ಲ ಎಂದು ವಿಶ್ವ ಆತುರಾತುರವಾಗಿ ಹೋಗುತ್ತಾನೆ. ಇನ್ನು ಸಿದ್ದೆಗೌಡ ಮಾತ್ರ ಭಾವನಾ ಮುಖ ನೋಡಿ ಎಲ್ಲವನ್ನು ಮರೆತು ಬಿಟ್ಟಿದ್ದಾನೆ. ತನ್ನ ಅಕ್ಕನ ಮೇಲಿರುವ ಕೋಪವನ್ನು ಕೂಡ ಮರೆತುಬಿಟ್ಟಿದ್ದಾನೆ. ಆತನ ಸಂಭ್ರಮ ನೋಡಿ ಭಾವನಾ, ಅತ್ತಿಗೆ ಬಹಳ ಖುಷಿಯಲ್ಲಿ ಇದ್ದಾಳೆ.
ನನ್ನ ತಮ್ಮ ನನ್ನ ಜೊತೆ ಮಾತನಾಡುತ್ತಾ ಇದ್ದಾನಲ್ಲ. ಇದಕ್ಕಿಂತ ದೊಡ್ಡ ಖುಷಿ ಮತ್ತಿನ್ನೇನು ಇಲ್ಲ ಮನೆಗೆ ಇದುವೇ ಬಹಳ ದೊಡ್ಡ ಉಡುಗೊರೆ ಎಂದು ಆಲೋಚನೆ ಮಾಡುತ್ತಾಳೆ. ಲಕ್ಷ್ಮೀ ಗೆ ಮಾತ್ರ ಬಹಳ ಖುಷಿ ಆಗುತ್ತದೆ. ನಮ್ಮ ಮನೆಯ ಸೊಸೆಯ ತಮ್ಮ ಸಿದ್ದು ಎಂದು ತಿಳಿದು ಬಹಳ ಖುಷಿ ಪಡುತ್ತಾಳೆ. ಮಾದೇಗೌಡ ಹಾಗೂ ಮನೆಯವರು ಮದುವೆಗೆ ಬಂದಾಗ ಮದುವೆ ಮಂಟಪದಲ್ಲಿ ಸಿದ್ದು ಕಂಡು ಬಹಳ ಶಾಕ್ ಆಗುತ್ತಾರೆ. ಮನೆಯಲ್ಲಿ ಅಷ್ಟೆಲ್ಲ ಹಾರಾಡಿದವನು ಮದುವೆ ಮನೆಯಲ್ಲಿ ಇದ್ದಾನಲ್ಲ. ಇದು ಹೇಗೆ ಸಾಧ್ಯ ಎಂದು ಮಾದೇಗೌಡರು ತನ್ನೊಳಗೆ ಪ್ರಶ್ನೆ ಮಾಡುತ್ತಿರುತ್ತಾರೆ.

ಜಯಂತ್ ಜೊತೆ ಸಿದ್ದು ಕುಶಲೋಪರಿ
ಇನ್ನೂ ಜಯಂತ್‌ಗೆ ಸಿದ್ದುನ ಪರಿಚಯ ಮಾಡಿ ಕೊಡುತ್ತಾಳೆ ಜಾಹ್ನವಿ ಅತ್ತಿಗೆ. ರಾಜಕಾರಣದಲ್ಲಿ ತೊಡಗಿಸಿಕೊಂಡಿರುವ ಸಿದ್ದುಗೆ ಆಲ್ ದಿ ಬೆಸ್ಟ್ ಎಂದು ಜಯಂತ್ ಹೇಳುತ್ತಾನೆ . ಸಿದ್ದು ಮಾತಿನ ಸ್ಟೈಲ್‌ಗೆ ಆತನ ಅಭಿಮಾನಿಗಳು ಬೋಲ್ಡ್ ಆಗಿದ್ದಾರೆ. ಸಿದ್ದ ಗೆ ಭಾವನಾ ಅಂದರೆ ಬಹಳ ಪ್ರೀತಿ. ತಾನು ಮದುವೆ ಆಗುವ ಹುಡುಗಿ ಹಾಗಿರಬೇಕು ಹೀಗಿರಬೇಕು ಎಂದು ಆಲೋಚನೆ ಮಾಡುತ್ತಿರುತ್ತಾನೆ ಸಿದ್ದು, ಆ ಪ್ರಕಾರವಾಗಿಯೇ ಆಕೆ ಇರುವುದನ್ನು ಕಂಡು ಸಿದ್ದು ಮನಸೋತು ಬಿಟ್ಟಿದ್ದಾನೆ.
ಭಾವನಾಳನ್ನು ನೋಡಿ ಸಿದ್ದುಗೆ ಖುಷಿ
ಸಿದ್ದು, ಖುಷಿಯನ್ನು ಇದುವರೆಗೆ ಕೂಡ ನೋಡಿಲ್ಲ. ಎಲ್ಲಾದರೂ ಖುಷಿಯನ್ನು ಕಂಡರೆ ಸಿದ್ದೇ ಗೌಡರ ನಿಜ ರೂಪ ತಿಳಿಯಬಹುದು. ಖುಷಿಯನ್ನು ರಕ್ಷಣೆ ಮಾಡಿ ಭಾವನಳ ದೃಷ್ಟಿಯಲ್ಲಿ ದೇವರಾಗಿದ್ದಾರೆ ಸಿದ್ದೆಗೌಡರು. ಸಿದ್ದು ಬಗ್ಗೆ ತಪ್ಪಾಗಿ ತಿಳಿದುಕೊಂಡಿರುವ ಭಾವನಾಗೆ ಸಿದ್ದು ನಿಜ ಸ್ವರೂಪ ಅರ್ಥ ಆಗುವುದಾದರು ಯಾವಾಗ? ಕಾದು ನೋಡಬೇಕಿದೆ.
ಖುಷಿ ವಾಪಸ್ ಪಡೆಯಲು ಸೌಪರ್ಣಿಕಾ ಸಂಚು
ಖುಷಿಯನ್ನು ಮ್ತೆ ಪಡೆಯುವ ತವಕದಲ್ಲಿ ಆಕೆಯ ಅತ್ತೆ ಇರುತ್ತಾಳೆ. ಖುಷಿಗೆ 18 ವರುಷ ತುಂಬಿದ ಬಳಿಕ ಆಕೆಯ ತಂದೆಯ ಎಲ್ಲಾ ಆಸ್ತಿಗೆ ಆಕೆಯೇ ಹಕ್ಕುದಾರಳು ಆಗಿರುತ್ತಾಳೆ. ಈ ವಿಚಾರವನ್ನು ಯಾರ ಬಳಿಯೂ ಆಕೆಯ ಅತ್ತೆ ಹೇಳಿರುವುದು ಇಲ್ಲ. ಹೇಗಾದರೂ ಮಾಡಿ ಖುಷಿಯನ್ನು ನಾನು ಪಡೆದುಕೊಳ್ಳಲೇಬೇಕು. ಇಲ್ಲವಾದರೆ ಆಸ್ತಿ ಖಂಡಿತ ನಮ್ಮ ಕೈ ತಪ್ಪುವ ಎಲ್ಲಾ ಲಕ್ಷಣಗಳೂ ಇದೆ ಎಂದು ಹೇಳುತ್ತಿರುತ್ತಾಳೆ. ಆಸ್ತಿಗಾಗಿ ಖುಷಿಯನ್ನು ನೋಡಿಕೊಳ್ಳಲು ಹೊರಟಿದ್ದಾಳೆ ಅತ್ತೆ ಸೌಪರ್ಣಿಕಾ.


Click it and Unblock the Notifications











