Lakshmi nivasa: ಸಮಯ ಬಂದರೆ ಸಿದ್ದೇಗೌಡರನ್ನೇ ಕೊಲೆಗಾರನ‌ನ್ನಾಗಿಸುತ್ತಾನಾ ರವಿ?

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಭಾವನಾ ಜಾತಕದಲ್ಲಿ ದೋಷವಿದೆ. ಆ ದೋಷದಿಂದ ಯಾರು ಕೂಡ ಮದುವೆಯಾಗುತ್ತಿರಲಿಲ್ಲ. ಆದರೆ ಶ್ರೀಕಾಂತ್ ಅದೆಲ್ಲವನ್ನು ಮೀರಿ ಮದುವೆಯಾಗುವುದಕ್ಕೆ ಹೊರಟಿದ್ದ. ಹಣ, ಆಸ್ತಿಯ ಆಸೆಗೆ ರವಿ ಯಾರಿಗೂ ಗೊತ್ತಾಗದಂತೆ ಅವರನ್ನು ಕೊಂದು ಮುಗಿಸಿದ್ದಾನೆ. ಇದು ಸೌಪರ್ಣಿಕಾಗೂ ತಿಳಿದಿಲ್ಲ. ತಿಳಿದರೆ ಆ ಘಟನೆಯನ್ನು ಅವಳು ಒಪ್ಪುವುದು ಇಲ್ಲ.

ಆ ಆಕ್ಸಿಡೆಂಟ್ ನಡೆದಾಗ ಸಿದ್ದೇಗೌಡರು ಕೂಡ ಅಲ್ಲಿಯೇ ಇದ್ದರು. ಅರ್ಜೆಂಟ್ ಆಗಿ ಎಲ್ಲಿಯೋ ಹೋಗಬೇಕಿತ್ತು. ಅದೇ ಸಮಯಕ್ಕೆ ಆ ದಾರಿಯಲ್ಲಿಯೇ ಬಂದ. ಕಾರು ತಿರುಗಿಸುವಾಗ ಶ್ರೀಕಾಂತ್ ಕಾರಿಗೆ ಟಚ್ ಆಗಿದೆ ಅಷ್ಟೇ. ಅಷ್ಟಕ್ಕೇ ಶ್ರೀಕಾಂತ್ ಕಾರಿಗೆ ತಾನೇ ಅಪಘಾತ ಮಾಡಿರುವುದು ಎಂಬಂತೆ ಫೀಲ್ ಮಾಡಿಕೊಂಡಿದ್ದಾನೆ ಸಿದ್ದೇಗೌಡರು. ಅದು ಭಾವನಾ ಮದುವೆ ಎಂಬುದು ಅವನಿಗೆ ತಿಳಿದಿರಲಿಲ್ಲ. ಹಾಗಂತ ಅವನು ಆಕ್ಸಿಡೆಂಟ್ ಕೂಡ ಮಾಡಿಲ್ಲ. ಆದರೆ ಸಿದ್ದೆಗೌಡ್ರ ತಪ್ಪು ಕಲ್ಪನೆ ರವಿಗೆ ಬಂಡವಾಳವಾಗಬಹುದು.

Lakshmi nivasa kannada serial Written Update on April 16th episode

ಭಾವನಾ ಮನೆಗೆ ಬಂದ ಸೌಪರ್ಣಿಕಾ

ಖುಷಿಗೆ ಕಾಲಿನ ಆಪರೇಷನ್ ಆಗಬೇಕಿದೆ. ಅದಕ್ಕೆ ತಿಂಗಳಿಗೆ ಮೂವತ್ತು ಸಾವಿರ ಹಣದ ಅವಶ್ಯಕತೆ ಇದೆ. ಹೀಗಾಗಿ ಭಾವನಾ ದುಡಿಯುವುದಕ್ಕೆ ಹೋಗುತ್ತಿದ್ದಾಳೆ. ಹಣಕ್ಕೆ ಸಿದ್ದೇಗೌಡರಿಂದ ಪರೋಕ್ಷವಾಗಿ ಸಹಾಯವಾಗುತ್ತಿದೆ. ಇದನ್ನೇ ಬಂಡವಾಳವಾಗಿಟ್ಟುಕೊಂಡು ಸೌಪರ್ಣಿಕಾ ಹಾಗೂ ರವಿ ಮನೆಗೆ ಬಂದಿದ್ದಾರೆ. ಖುಷಿಯ ಆಸ್ಪತ್ರೆಗೆ ತಾವೇ ಖರ್ಚು ಕೊಡುತ್ತೇವೆ ಎಂದಿದ್ದಾರೆ.

ಹಣದ ಅವಶ್ಯಕತೆ ಇಲ್ಲ ಎಂದ ಭಾವನಾ

ಖುಷಿ ನಮಗೂ ಬಹಳ ಮುಖ್ಯ ಈ ಹಣ ತೆಗೆದುಕೋ ಎಂದು ಒಂದಷ್ಟು ಹಣವನ್ನು ಸೌಪರ್ಣಿಕಾ, ಭಾವನಾಳ ಕೈಗೆ ಇಟ್ಟಿದ್ದಾಳೆ. ಆದರೆ ಆ ಹಣವನ್ನು ಮುಟ್ಟದ ಭಾವನಾ, ಮತ್ತೆ ಸೌಪರ್ಣಿಕಾಳ ಕೈಗೆ ಇಟ್ಟು, ನನ್ನ ಮಗಳನ್ನು ಹೇಗೆ ನೋಡಿಕೊಳ್ಳಬೇಕು ಎಂಬುದು ನನಗೆ ಗೊತ್ತು. ನಿಮಗೆ ಬೇಕಾದದ್ದು ನಿಮಗೆ ಸಿಕ್ಕಿದೆಯಲ್ಲ. ಇಲ್ಲಿಂದ ಹೊರಡಿ ಎಂದು ಖಡಕ್ ಆಗಿಯೇ ಉತ್ತರಿಸಿದ್ದಾಳೆ. ಲಕ್ಷ್ಮೀ ಕೂಡ ಎಚ್ಚರಿಕೆ ನೀಡಿದ್ದಾಳೆ. ನಿಮಗೆ ಮಾತ್ರವಲ್ಲ ನಮಗೂ ಕಾನೂನು ಗೊತ್ತು ಎಂದೇ ಹೇಳಿದ್ದಾಳೆ.

Lakshmi nivasa kannada serial Written Update on April 16th episode

ಸಿದ್ದೇಗೌಡರನ್ನು ನೋಡಿ ಸುಮ್ಮನಾದ ರವಿ

ಇದರಿಂದ ರೊಚ್ಚಿಗೆದ್ದ ರವಿ, ಭಾವನಾಗೆ ಅವಾಜ್ ಹಾಕಿದ್ದಾನೆ. ನಮ್ಮ ಆಫೀಸಲ್ಲಿ ಕೆಲಸ ಮಾಡುತ್ತಿದ್ದವಳು ನೀನು. ನಿನ್ನ ಬಳಿ ಇಷ್ಟೆಲ್ಲಾ ರಿಕ್ವೆಸ್ಟ್ ಮಾಡಬೇಕಾ ಎಂದು ಜೋರು ಧ್ವನಿಯಲ್ಲಿ ಕೇಳುವಾಗಲೇ ಸಿದ್ದೇಗೌಡರ ಆಗಮನವಾಗಿದೆ. ಸಿದ್ದೇಗೌಡರನ್ನು ನೋಡುತ್ತಿದ್ದಂತೆ ರವಿ ಮಾತು ನಿಲ್ಲಿಸಿದ್ದಾನೆ. ಒಂದು ಕ್ಷಣ ಹಳೆಯ ಘಟನೆಯನ್ನು ನೆನೆದಿದ್ದಾನೆ. ಸಿದ್ದೇಗೌಡರನ್ನು ಸಾಕಷ್ಟು ಬಾರಿ ನೋಡಿದಾಗಲೂ ಬೇರೆ ಇನ್ನೆನನ್ನೋ ಸ್ಕೆಚ್ ಹಾಕುವಂತೆ ಇದೆ.

ಗೌಡರನ್ನೇ ತಪ್ಪಿತಸ್ಥನನ್ನಾಗಿ ಮಾಡ್ತಾನಾ ರವಿ?

ಅಂದು ಸಿದ್ದೇಗೌಡರದ್ದು ಏನು ತಪ್ಪಿರಲಿಲ್ಲ. ಆದರೆ ತಪ್ಪಾಗಿ ತಿಳಿದು, ತಾನೇ ಆಕ್ಸಿಡೆಂಟ್ ಮಾಡಿದ್ದು ಎಂಬಂತೆ ಫೀಲ್ ಮಾಡಿಕೊಂಡಿದ್ದಾನೆ. ಇದನ್ನು ಮುಚ್ಚಿ ಹಾಕುವುದಕ್ಕೆ ಅವರ ಅಪ್ಪ ಜವರೇಗೌಡ ಕೂಡ ಪ್ರಯತ್ನ ಪಟ್ಟಿದ್ದರು. ಇದೆಲ್ಲವನ್ನು ದೂರದಿಂದಾನೇ ಗಮನಿಸಿದ್ದ ರವಿಗೆ ಇದೇ ಅಸ್ತ್ರವಾಗುವ ಸಾಧ್ಯತೆ ಇದೆ. ಸಮಯ ಸಂದರ್ಭ ಬಂದಲ್ಲಿ, ಅಂದು ಆಕ್ಸಿಡೆಂಟ್ ಮಾಡಿದ್ದು, ಇದೆ ಸಿದ್ದೇಗೌಡ ಎಂದು ಹೇಳಿ ಬಿಡುತ್ತಾನೆ. ಯಾಕಂದ್ರೆ ರವಿ ತಾನೂ ಬಚಾವ್ ಆಗುವುದಕ್ಕೆ ಯಾರನ್ನ ಬೇಕಾದರೂ ತಗಲಾಕುವ ಸಾಧ್ಯತೆ ಇದೆ. ಮೊದಲೇ ನೋವಲ್ಲಿರುವ ಭಾವನಾಗೆ ಸಿದ್ದೇಗೌಡರೇ ತನ್ನ ಗಂಡನಾಗಬೇಕಾದ ಶ್ರೀಕಾಂತ್‌ನನ್ನು ಕೊಂದಿದ್ದಾನೆ ಎಂದು ಗೊತ್ತಾದರೆ ಇನ್ಯಾವತ್ತು ಅವನ ಮೇಲೆ ಪ್ರೀತಿ ಬರುವುದಕ್ಕೆ ಸಾಧ್ಯವೆ ಇರುವುದಿಲ್ಲ.

More from Filmibeat

English summary
Lakshmi nivasa kannada serial today episode. Here is the details about siddegowda entry;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X