Lakshmi nivasa: ಜಯಂತ್ ಅತಿಯಾದ ಪ್ರೀತಿ, ಪೊಸೆಸಿವ್ ನೆಸ್, ಜಾಹ್ನವಿಗೆ ಸಂಕಷ್ಟ ತರುತ್ತಾ?
ಲಕ್ಷ್ಮೀ ನಿವಾಸದಲ್ಲಿ ಕಡೆಗೂ ಚಿಕ್ಕ ಮಗಳ ಮದುವೆಯನ್ನು ಅದ್ದೂರಿಯಾಗಿ ಮಾಡಿಕೊಟ್ಟಿದ್ದಾರೆ. ಆದರೆ ಲಕ್ಷ್ಮೀ ಮನೆಯವರಿಗೆ ಅಳಿಯನ ಮನೆ ಎಲ್ಲಿದೆ, ಅಳಿಯನ ಮನೆಗೆ ಹೋದರೆ ಜಾಹ್ನವಿ ಸುಲಭವಾಗಿ ಬಾಗಿಲು ತೆಗೆಯಬಹುದಾ..? ಯಾವುದು ಗೊತ್ತಿಲ್ಲ. ಹೆಣ್ಣು ಕೇಳಲು ಮನೆಗೆ ಬಂದಾಗ ಆಫೀಸ್ ಹಾಗೂ ಸುತ್ತ ಮುತ್ತ ವಿಚಾರಿಸಿದ್ದಾರೆ. ಅವರೆಲ್ಲಾ ಜಯಂತ್ ನ ಒಳ್ಳೆಯ ಮುಖ ನೋಡಿದ ಕಾರಣ ಗುಣವಂತ ಎಂದಿದ್ದಾರೆ.
ಒಳ್ಳೆ ಗುಣವಂತ ಅಳಿಯನಾಗಿ ಬರ್ತಿದ್ದಾನೆ ಎಂದುಕೊಂಡ ಲಕ್ಷ್ಮೀ-ಶ್ರೀನಿವಾಸ ಅಳಿಯ ಹೇಳಿದಂತೆ ಮದುವೆ ಮಾಡಿ ಕಳುಹಿಸಿದ್ದಾರೆ. ಜಾಹ್ನವಿಗೆ ಆರಂಭದಲ್ಲಿಯೇ ದೊಡ್ಡ ಮಟ್ಟದ ತಲೆನೋವು ಏನು ಇಲ್ಲ. ಆದರೆ ಜಾಹ್ನವಿಯ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತ, ತಕ್ಷಣಕ್ಕೆ ಹೊಂದಾಣಿಕೆಯಾಗಲು ಕಷ್ಟವಾಗುವಂತ ರೀತಿಯಲ್ಲಿ ಜಯಂತ್ ನಡೆದುಕೊಳ್ಳುತ್ತಿದ್ದಾನೆ. ಮುಂದೆ ಜಾಹ್ನವಿ, ಈ ಅತಿಯಾದ ಪ್ರೀತಿಯನ್ನು ಸಹಿಸುತ್ತಾಳೋ, ಹೊರ ಬರುತ್ತಾಳೋ ನೋಡಬೇಕಿದೆ.

ಗಂಡನ ಜೊತೆ ಸೇರಿ ಮನೆ ಕ್ಲೀನಿಂಗ್
ಜಾಹ್ನವಿಗೆ ಹೊಸ ಪ್ರಪಂಚ. ಆ ದೊಡ್ಡ ಪ್ರಪಂಚದಲ್ಲಿ ಯಾರೂ ಕೂಡ ಇಲ್ಲ. ಗಂಡ ಆಫೀಸಲ್ಲೇ ಇರುತ್ತಾನೆ. ಮನೆ ಕೆಲಸ, ಅಡುಗೆ ಇಷ್ಟೇ ಜಾಹ್ನವಿಯ ಪ್ರಪಂಚ. ಹೊರಗಡೆ ಹೋಗುವುದಕ್ಕೆ ಸ್ವತಂತ್ರ ಸಿಗುವುದು ಅಷ್ಟು ಸುಲಭವಲ್ಲ. ಹೀಗಾಗಿ ಅಮ್ಮನ ಬಳಿ ಕೇಳಿ ಅಡುಗೆ ಮಾಡಿಟ್ಟಿದ್ದಳು. ಪ್ರೀತಿಯಿಂದ ಬಡಿಸಿ, ತಿನ್ನಬೇಕು ಎನ್ನುವಷ್ಟರಲ್ಲಿ ಜಯಂತ್ ಸಿಂಕ್‌ನಲ್ಲಿದ್ದ ಪಾತ್ರೆ ನೋಡಿದ, ತಾನೇ ತೊಳೆಯುವುದಕ್ಕೆ ಹೋದಾಗ. ಅದನ್ನು ಅರಿತ ಜಾನು, ಜೊತೆಗೆ ಸೇರಿ ತೊಳೆದಿದ್ದಾಳೆ.
ಅಮ್ಮನ ಬಳಿ ಮಾತನಾಡಿರುವುದ ಕನ್ಫರ್ಮ್
ಜಯಂತ್ ಸಿಸಿಟಿವಿಯಲ್ಲಿ ಜಾಹ್ನವಿ ಏನು ಮಾಡುತ್ತಾ ಇದ್ದಾಳೆ ಎಂಬುದನ್ನು ನೋಡಿದ್ದಾನೆ. ಆದರೆ ಯಾರ ಜೊತೆಗೆ ಮಾತನಾಡಿದಳು ಎಂಬ ಆಡಿಯೋ ಕೇಳಿಸಿಲ್ಲ. ಅದರ ಬಗ್ಗೆ ಹೆಚ್ಚು ಅನುಮಾನ ಇತ್ತು. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ಮೊಬೈಲ್ ಅನ್ನು ಹೊರಗಡೆ ಇಡೋಣ ಅಂತ ಜಾಹ್ನವಿ ಬಳಿ ನೆಪ ಹೇಳಿ, ಮೊಬೈಲ್ ಹೊರಗಿಡುವಾಗ ಕಾಲ್ ಲಿಸ್ಟ್ ಚೆಕ್ ಮಾಡಿದ್ದಾನೆ. ಅದರಲ್ಲಿ ಒಂದೂವರೆ ಗಂಟೆ ಅಮ್ಮನ ಜೊತೆಗೆ ಮಾತ್ರ ಮಾತನಾಡಿದ್ದು, ಸಮಾಧಾನ ತಂದಿದೆ.

ಮನೆಯವರ ಬಳಿ ಕಡಿಮೆ ಮಾತನಾಡುವಂತೆ ಸೂಚನೆ
ಕಾಲ್ ಹಿಸ್ಟರಿ ನೋಡಿದ ಮೇಲೆ, ಜಾಹ್ನವಿಯ ಬಳಿ ಮಾತನಾಡಿದ್ದಾನೆ. ಮನೆಯವರ ಬಳಿ ಅಷ್ಟೊಂದು ಮಾತನಾಡುವ ನಿಮಗೆ ನನ್ನ ಜೊತೆಗೆ ಸ್ವಲ್ಪ ಸಮಯ ಮಾತನಾಡುವುದಕ್ಕೆ ಆಗಲ್ಲವಾ? ಅಪ್ಪ ಅಮ್ಮನ ಬಳಿ ಹೆಚ್ಚು ಮಾತನಾಡಿದರೆ ಗಂಡನ ಮೇಲೆ ಪ್ರೀತಿ ಇರುವುದಿಲ್ಲವಂತೆ ಎಂದಿದ್ದಾನೆ. ಇದಕ್ಕೆ ಜಾನು ಹಾಗೇನು ಇಲ್ಲ ಎಂದೇ ಉತ್ತರ ಕೊಟ್ಟಿದ್ದಾಳೆ.
ಜಯಂತ್ ಲೆಕ್ಕದಲ್ಲಿ ಹೆಂಡತಿ ಅಂದ್ರೆ?
ಜಾಹ್ನವಿಗೆ ಜಯಂತ್ ನಡವಳಿಕೆಯ ಮೇಲೆ ಅನುಮಾನ ಬಂದಿದೆ. ಆದರೆ ಅದನ್ನು ಬಗೆಹರಿಸಿಕೊಳ್ಳುವುದಕ್ಕೂ ಆಗುತ್ತಿಲ್ಲ. ಇದೀಗ ಮನೆಯವರ ಜೊತೆಗೆ ಅಷ್ಟೊಂದು ಸಮಯ ಮಾತನಾಡಬೇಡ ಎಂದೇ ತಾಕೀತು ಮಾಡುತ್ತಿದ್ದಾನೆ. ಜಾಹ್ನವಿ ಆದಷ್ಟು ಜಯಂತ್ ನಡೆಗಳನ್ನು ಅರಿತು, ಅವನೊಟ್ಟಿಗೆ ಹೆಜ್ಜೆ ಹಾಕುವುದಕ್ಕೆ ಪ್ರಯತ್ನ ಪಡುತ್ತಿದ್ದಾಳೆ. ಆದರೆ ಜಯಂತ್, ಜಾಹ್ನವಿಯನ್ನು ಒಂದು ರೋಬೋ ಥರ ನೋಡುತ್ತಿದ್ದಾನೆ. ಯಾರ ಜೊತೆಗೂ ಮಾತನಾಡದೆ, ಎಲ್ಲಿಯೂ ಹೋಗದೆ. ಬರೀ ಗಂಡ ಗಂಡ ಗಂಡ ಎನ್ನುತ್ತಿರಬೇಕು. ಅದಕ್ಕೆ ಅವಳನ್ನು ಲಾಕ್ ಮಾಡಿಕೊಂಡು ಹೋಗುತ್ತಾನೆ. ಇದೆಲ್ಲವನ್ನು ಜಾಹ್ನವಿ ಸಹಿಸಿಕೊಂಡು ಎಷ್ಟು ದಿನ ಸಂಸಾರ ಮಾಡುತ್ತಾಳೆ? ಗೊತ್ತಿಲ್ಲ.


Click it and Unblock the Notifications











