Lakshmi nivasa: ಜಯಂತ್ ಪ್ರೀತಿ ಮುಂದೆ ಜಾಹ್ನವಿ ಕೋಪ ಠುಸ್ ಪಟಾಕಿ: ಅತಿ ಆದ್ರೆ, ಅಮೃತ ಕೂಡ ವಿಷವಂತೆ!
ಜಾಹ್ನವಿ ತುಂಬು ಕುಟುಂಬದಲ್ಲಿ ಬೆಳೆದವಳು. ಅಪ್ಪ, ಅಮ್ಮ, ಅಜ್ಜಿ, ಅಕ್ಕಂದಿರು, ಅಣ್ಣಂದಿರು, ಅತ್ತಿಗೆಯಂದಿರು, ಮಕ್ಕಳು ಅಬ್ಬಬ್ಬಾ ತುಂಬಿದ ಮನೆಯಲ್ಲಿ ಜಾಹ್ನವಿಯೇ ಚಿಕ್ಕವಳು. ಬೆಳಗ್ಗೆ ಎದ್ದು ಮಾತಾಡುವುದಕ್ಕೆ ಶುರು ಮಾಡಿದರೆ ಸಾಕು, ಜಾನು ಬಾಯಿಯೇ ಮುಚ್ಚುತ್ತಾ ಇರಲಿಲ್ಲ. ಆದರೆ ಈಗ ಮನೆ ಫುಲ್ ಮೌನವಾಗಿದೆ. ಜಾಹ್ನವಿ ಮನೆಯಲ್ಲಿದ್ದರೆ ಎಲ್ಲರ ಕಾಲು ಎಳೆಯುತ್ತಾ, ಖುಷಿಯಾಗಿ ಇರುತ್ತಾ ಇದ್ದಳು. ಅದರಲ್ಲೂ ಭಾವನಾಗೆ ದೊಡ್ಡ ಶಕ್ತಿಯಾಗಿ ಇದ್ದಳು.
ಮನೆಯಲ್ಲೆಲ್ಲಾ ಖುಷಿಖುಷಿಯಾಗಿ ಅಂತ ಓಡಾಡಿಕೊಂಡು, ಪಟ ಪಟ ಅಂತ ಮಾತಾಡಿಕೊಂಡು ಇದ್ದಂತ ಜಾನು ಈಗ ಮೌನವನ್ನೇ ಹೆಚ್ಚು ಅನುಸರಿಸುತ್ತಿದ್ದಾಳೆ. ದೊಡ್ಡ ಮನೆ, ಆದರೆ ಒಬ್ಬರೇ ಒಬ್ಬರು ಮನೆಯಲ್ಲಿಲ್ಲ. ಮನೆಯಲ್ಲಿದ್ದಾಗ ಜಯಂತ್ ಮಾತ್ರ. ಆಫೀಸ್ ಹೋದರೆ, ಜಾನು ಒಬ್ಬಳೆ. ಬರೀ ಗೋಡೆ ನೋಡಿಕೊಂಡು, ಗಿಡಕ್ಕೆ ನೀರಾಕಿಕೊಂಡೆ ಕಾಲ ಕಳೆಯಬೇಕಾಗಿದೆ.

ಪ್ರೀತಿಸುವ ವಸ್ತು ದೂರಾಗಬಾರದು
ಜಯಂತ್ ತಂದೆ-ತಾಯಿ ಇಲ್ಲದೆ ಬೆಳೆದವನು. ಈಗ ಜಾಹ್ನವಿಯನ್ನು ಮದುವೆಯಾಗಿದ್ದಾನೆ. ಜಾಹ್ನವಿ ಎಂದರೆ ಅತಿಯಾದ ಪ್ರೀತಿ. ಆದರೆ ಜಯಂತ್ ಪ್ರಪಂಚದೊಳಗೆ ಜಾಹ್ನವಿಗೆ ತನ್ನದೇ ಆದ ಸ್ವಾತಂತ್ರ್ಯವಿಲ್ಲ. ಜಯಂತ್‌ಗೆ ಇಷ್ಟವಾಗುವ ರೀತಿ ಮಾತ್ರ ಬದುಕಬೇಕು. ಆತನಿಗೆ ಏನು ಇಷ್ಟವಿರುವುದಿಲ್ಲವೋ ಆ ಕೆಲಸವನ್ನು ಮಾಡಬಾರದು. ತಾನೂ ಪ್ರೀತಿಸುವ ವಸ್ತು ಕೂಡ ಆಚೆ ಈಚೆ ಆಗಬಾರದು. ಒಂದು ವೇಳೆ ಆದರೆ ಜಯಂತ್ ಮನಸ್ಥಿತಿ ಅಲ್ಲೋಲಕಲ್ಲೋಲವಾಗಿ ಬಿಡುತ್ತದೆ. ಜಾಹ್ನವಿ ಮನಸ್ಸು ಒಡೆಯುವಂತೆ ನಡೆದುಕೊಳ್ಳುತ್ತಾನೆ.
ಜಯಂತ್ ಮಾತುಗಳೇ ಜಾಹ್ನವಿಗೆ ಇಕ್ಕಟ್ಟು
ಸೋಫಾ ಮೇಲಿನ ವಸ್ತುಗಳು ಸ್ವಲ್ಪ ಆಚೀಚೆ ಆಗಿತ್ತು. ಅಷ್ಟಕ್ಕೆ ಜಯಂತ್ ಕೋಪದಲ್ಲಿಯೇ ಮಾತನಾಡಿದ. 'ನೀವೂ ಇಷ್ಟಪಟ್ಟ ವಸ್ತುಗಳನ್ನ ಬೇರೆಯವರಿಗೆ ಬಿಟ್ಟು ಕೊಡ್ತೀರಾ. ನಾಳೆ ಬಂದು ಯಾರೋ ನಿಮ್ಮನ್ನ ಬಿಟ್ಟುಕೊಡಿ ಎಂದರೆ ಬಿಟ್ಟು ಕೊಡುವುದಕ್ಕೆ ಆಗುತ್ತಾ. ನಾನು ಪ್ರೀತಿಸುವ ವಸ್ತುಗಳು ಕೂಡ ಕೇರ್ ಫುಲ್ ಆಗಿ ನೋಡಿಕೊಳ್ಳಬೇಕು' ಎಂದೇ ಜಾಹ್ನವಿಗೆ ಕೋಪದಿಂದ ಹೇಳಿದ್ದಾನೆ.

ಬೆಳಗ್ಗೆ ಎದ್ದು ಮುನಿಸಿಕೊಂಡ ಜಾನು
ಜಾಹ್ನವಿಗೆ ಜಯಂತ್ ಮನೆಯೇ ಹೊಸದು. ಜೊತೆಗೆ ಸದಾ ಜನಗಳ ಜೊತೆಯಲ್ಲಿದ್ದವಳನ್ನು ಮನೆಯಲ್ಲಿ ಕೂಡಿ ಹಾಕಿದಂತೆ ಆಗಿದೆ. ಹೀಗಾಗಿ ಕೆಲವೊಂದು ಮಿಸ್ಟೇಕ್ ಆಗುತ್ತಿವೆ. ಜಯಂತ್ ಹೇಳುವ ರೀತಿಗೆ ಜಾನು ಬೇಸರದಲ್ಲಿದ್ದಾಳೆ. ಎದ್ದ ಕೂಡಲೇ ಗುಡ್ ಮಾರ್ನಿಂಗ್ ಅಂತ ಹೇಳಿ ಸುಮ್ಮನೆ ಕುಳಿತಿದ್ದಾಳೆ. ಜಯಂತ್‌ಗೆ ಜಾಹ್ನವಿಯ ಕೋಪ ಅರ್ಥವಾಗದೆ ಏನು ಇಲ್ಲ. ಬೇಗನೇ ಅರ್ಥ ಮಾಡಿಕೊಂಡಿದ್ದಾನೆ.
ಜಯಂತ್ ಪ್ರೀತಿ ಮುಂದೆ ಕರಗಿದ ಜಾನು
ಜಾನು ಸೈಲೆಂಟ್ ನೋಡು, ಜಯಂತ್ ರಾತ್ರಿಯಾದ ಘಟನೆಗೆ ಕ್ಷಮೆ ಕೇಳಿದ್ದಾನೆ. ಜಯಂತ್ ನಡೆದುಕೊಂಡ ರೀತಿಗೆ ಜಾನು ಕೋಪ ನೀರಿನಂತೆ ಕರಗಿ ಹೋಗಿದೆ. ಇಷ್ಟೊಂದು ಪ್ರೀತಿ ಮಾಡುವ ನಿಮಗೆ ನಾನು ಕೂಡ ಹರ್ಟ್ ಮಾಡಿದೆ. ಕ್ಷಮೆ ಇರಲಿ ಅಂತ ಇಬ್ಬರು ಕ್ಷಮಾಪಣೆ ಕೇಳಿ ಮತ್ತೆ ಒಂದಾಗಿದ್ದಾರೆ. ಜಾಹ್ನವಿ ತಿಂಡಿ ಮಾಡಲೆಂದು ಹೋಗುವಾಗ, ಜಯಂತ್ ಮಹಾರಾಣಿಯಂತೆ ಅವಳನ್ನು ಟ್ರೀಟ್ ಮಾಡಿದ್ದಾನೆ.
ಮುಂದೆ ಏನಾಗಬಹುದು?
ನೀನು ಕಾಫಿ ಕುಡಿಯುತ್ತಾ ಕುಳಿತುಕೋ. ನಾನು ಇವತ್ತು ಸ್ಪೆಷಲ್ ತಿಂಡಿ ಮಾಡಿ ತರುತ್ತೀನಿ ಎಂದಿದ್ದಾನೆ. ಜಯಂತ್ ಪ್ರೀತಿಗೆ ಜಾನು ಮರುಳಾಗಿ ಹೋಗಿದ್ದಾಳೆ. ಆದರೆ ಜಾನು ಮಾಡೋ ಸಣ್ಣ ಸಣ್ಣ ತಪ್ಪು ಜಯಂತ್‌ಗೆ ಕಿರಿಕಿರಿ ಆಗ್ತಿದೆ. ಅದರಿಂದ ಹೀಗೆ ಇರಬೇಕು ಎಂದೇ ಆರ್ಡರ್ ಮಾಡುತ್ತಿದ್ದಾನೆ. ಇದು ಸಣ್ಣ ಮುನಿಸು ಮುಂದೆ ಜಗಳವೂ ಆಗಬಹುದು ಜಯಂತ್ ನಡೆಯಿಂದ.


Click it and Unblock the Notifications











