Lakshmi nivasa: ಕೆಲಸ ಅರಸಿ ಹೋಗಿದ್ದ ಭಾವನಾಗೆ ಸಿದ್ದೇಗೌಡರಿಂದ ಕೆಲಸವೂ ಸಿಕ್ತು, ಸಂಬಳವೂ ಸಿಕ್ತು!
ಭಾವನಾ ಮೇಲೆ ಈಗ ಜವಾಬ್ದಾರಿ ಜಾಸ್ತಿ ಇದೆ. ಯಾಕಂದ್ರೆ ಖುಷಿಗಾಗಿ ಎಲ್ಲಾ ಆಸ್ತಿಯನ್ನು ಬಿಟ್ಟು ಬಂದಿದ್ದಾಳೆ. ಖುಷಿಯನ್ನು ನೋಡಿಕೊಳ್ಳುವುದಕ್ಕೂ ಹಣ ಕೇಳಿಲ್ಲ. ಆದರೆ ಖುಷಿಯನ್ನು ನೋಡಿಕೊಳ್ಳುವವರಿಗೆ ಅರ್ಧ ಆಸ್ತಿ ಎಂದು ವಿಲ್‌ನಲ್ಲಿ ಬರೆದಿದ್ದಾರೆ. ಆ ಕಡೆ ಭಾವನಾ ಹೆಚ್ಚು ಗಮನ ಕೊಟ್ಟಿಲ್ಲ. ತನ್ನ ಜೀವನ ಇನ್ಮೇಲೆ ಏನಿದ್ದರು ಖುಷಿಗಾಗಿ ಎಂದೇ ನಿರ್ಧಾರ ಮಾಡಿದ್ದಾಳೆ.
ಆಕ್ಸಿಡೆಂಟ್‌ನಲ್ಲಿ ಖುಷಿಗೂ ಕಾಲಿನ ಸಮಸ್ಯೆ ಉಂಟಾಗಿದೆ. ಕಾಲಿಗೆ ಕಬ್ಬಿಣದ ಸಪೋರ್ಟ್ ತೆಗೆದುಕೊಂಡೆ ಓಡಾಡಬೇಕಾದ ಪರಿಸ್ಥಿತಿ. ಆದರೆ ಅವಳಿಗೂ ಎಲ್ಲರಂತೆ ನಡೆಯುವಂತೆ ಮಾಡಬೇಕೆಂಬ ಆಸೆ ಲಕ್ಷ್ಮೀ ಹಾಗೂ ಭಾವನಾಳದ್ದು. ಅದಕ್ಕೆ ಆಸ್ಪತ್ರೆಗೂ ಹೋಗಿ ಬಂದಿದ್ದಾರೆ. ತಿಂಗಳಿಗೆ 30 ಸಾವಿರ ಬೇಕಾಗಿದೆ. ಅಣ್ಣಂದಿರ ಸಹಾಯ ಕೇಳಿದರೆ ಯಾವ ಸಹಾಯವೂ ಸಿಕ್ಕಿಲ್ಲ. ಖರ್ಚಿಗೆ ಕೊಡುತ್ತೇವೆಂದು ಹೇಳಿ ಎದ್ದು ಹೋಗಿದ್ದಾರೆ. ಈಗ ಆ ಮಗುವಿಗಾಗಿ ಭಾವನಾ ಕೆಲಸದ ಹುಡುಕಾಟದಲ್ಲಿದ್ದಾಳೆ.

ಖುಷಿಗಾಗಿ ದುಡಿಯಲು ಹೊರಟ ಭಾವನಾ
ಭಾವನಾ ಈ ಮೊದಲು ಶ್ರೀಕಾಂತ್ ಆಫೀಸ್‌ನಲ್ಲೇ ಕೆಲಸ ಮಾಡುತ್ತಿದ್ದಳು. ಆದರೆ ಶ್ರೀಕಾಂತ್ ಸತ್ತ ಮೇಲೆ ಮತ್ತೆ ಆಫೀಸ್ ಕಡೆ ಹೋದಾಗ, ಸೌಪರ್ಣಿಕಾ ಹಾಗೂ ರವಿ ಅವಮಾನ ಮಾಡಿ ಕಳುಹಿಸಿದರು. ಕೆಲಸದಿಂದ ವಜಾ ಮಾಡಿದ್ದರು. ಅದಾದ ಬಳಿಕ ಎಲ್ಲೂ ಕೆಲಸಕ್ಕೆ ಹೋಗಿರಲಿಲ್ಲ. ಆದರೆ ಈಗ ಕೆಲಸಕ್ಕೆ ಸೇರುವ ತೀರ್ಮಾನ ಮಾಡಿದ್ದಾಳೆ. ಅದು ಖುಷಿಗಾಗಿ.
ಭಾವನಾಗೆ ಬೇಸರ ತಂದ ಸಂಬಳ
ರೆಸ್ಯೂಮ್ ಹಾಗೂ ಅನುಭವದ ಲೆಟರ್ ಹಿಡಿದುಕೊಂಡು ಭಾವನಾ ಕಂಪನಿಯ ಸುತ್ತಾಟ ನಡೆಸಿದ್ದಾಳೆ. ಭಾವನಾಗೆ ಬೇಕಿರುವುದು ತಿಂಗಳಿಗೆ 30 ಸಾವಿರ ಸಂಬಳ. ಯಾಕಂದ್ರೆ ಖುಷಿಯ ಪ್ರತಿ ತಿಂಗಳ ಖರ್ಚು ಅಷ್ಟೆ ಇದೆ. ಖುಷೊಯ ಜವಾಬ್ದಾರಿಯನ್ನು ಹೊತ್ತ ಭಾವನಾಗೆ ಈಗ ಕೆಲಸದ ಅನಿವಾರ್ಯತೆ ಇದೆ. ಆದರೆ ಕೆಲಸಕ್ಕೆಂದು ಬಂದಾಗ, ಆ ಪೋಸ್ಟ್‌ಗೆ ಇಪ್ಪತ್ತು ಸಾವಿರ ಅಷ್ಟೇ ಕೊಡುವುದು ಎಂದೇ ಹೇಳಿದ್ದಾರೆ.

ಭಾವನಾಳನ್ನು ಕಂಡ ಸಿದ್ದೇಗೌಡ್ರು
ಭಾವನಾಳನ್ನು ನೋಡುವುದಕ್ಕೆಂದೇ ಸಿದ್ದೇಗೌಡ್ರು ನೆಪ ಹುಡುಕಿಕೊಂಡು ಅವರ ಮನೆಗೆ ಹೋಗುತ್ತಾರೆ. ಆದರೆ ಕೆಲವೊಂದು ಸಲ ಅಚಾನಕ್ಕಾಗಿಯೇ ಭೇಟಿಯಾಗುತ್ತಾರೆ. ಅದನ್ನು ಭಾವನಾ ತಪ್ಪಾಗಿ ಭಾವಿಸುತ್ತಾಳೆ. ಇದೀಗ ಭಾವನಾ ಕೆಲಸ ಹುಡುಕಿಕೊಂಡು ಇಂಟರ್‌ವ್ಯೂಗೆ ಬಂದ ಕಂಪನಿಯಲ್ಲಿಯೇ ಸಿದ್ದೇಗೌಡ್ರು ಏನೋ ಕೆಲಸ ಅರಸಿ ಬಂದಿದ್ದಾರೆ. ಭಾವನಾ ಹೊರಗೆ ಬೇಸರದಿಂದ ಬಂದಿದ್ದನ್ನು ಕಂಡಿದ್ದಾನೆ. ಕೆಲಸ ಸಿಗದೇ ಬೇಸರವಾಗಿರುವುದು ಅರಿವಿಗೆ ಬಂದಿದೆ.
ಆಫೀಸ್ ಮಾಲೀಕನಿಗೆ ಸಿದ್ದೇಗೌಡರ ಕರೆ
ಭಾವನಾಳ ಸ್ಥಿತಿ ಕಂಡು ಕಂಪನಿಯ ಮಾಲೀಕನಿಗೆ ಕರೆ ಮಾಡಿದ್ದಾನೆ. ಸಿದ್ದೇಗೌಡ್ರು ಮೊದಲೇ ಸಮಾಜ ಸೇವಕರು. ಯಾರೇ ಕಷ್ಟದಲ್ಲಿದ್ದರು ಸಹಾಯಕ್ಕೆಂದು ಧಾವಿಸುತ್ತಾರೆ. ಇನ್ನು ತಾನೂ ಪ್ರೀತಿಸುತ್ತಿರುವ ಹುಡುಗಿ ಸಂಕಷ್ಟದಲ್ಲಿದ್ದರೆ ಸಿದ್ದೇಗೌಡ್ರು ಸುಮ್ಮನೆ ಇರುತ್ತಾರೆಯೇ. ಕೆಲಸ ಯಾಕೆ ಸಿಕ್ಕಿಲ್ಲ, ಸಂಬಳ ಎಷ್ಟು ಕೇಳಿದ್ರು ಎಂಬೆಲ್ಲಾ ಮಾಹಿತಿಯನ್ನು ಸಿದ್ದೇಗೌಡ್ರು ಪಡೆದುಕೊಂಡಿದ್ದಾರೆ. ಈಗ ಮೊದಲು ಅವರನ್ನು ಕರೆದು ಕೆಲಸ ಕೊಡು. ಮೂವತ್ತಲ್ಲ ಐವತ್ತು ಸಾವಿರ ಸಂಬಳ ಕೊಡಬೇಕು. ಇಪ್ಪತ್ತು ನೀನು ಕೊಡು, ಇನ್ನುಳಿದ ಮೂವತ್ತು ನಾನು ಕೊಡುತ್ತೀನಿ ಎಂದಿದ್ದಾನೆ. ಇದಕ್ಕೆ ಒಪ್ಪಿದ ಮಾಲೀಕ, ಓಡಿ ಹೋಗಿ ಅವನೇ ಕರೆದು, ಕೆಲಸ ಕೊಟ್ಟಿದ್ದಾನೆ.


Click it and Unblock the Notifications











