Lakshminivasa: ನೀಲೂ ಕುತಂತ್ರಕ್ಕೆ ಬಲಿಯಾಗಿಯೇ ಬಿಟ್ರು ಸಿದ್ದೇಗೌಡ್ರು; ಭಾವನಾ ಸಿಗುವುದು ಕನಸಾಗಿಯೇ ಉಳಿಯುತ್ತಾ?
ಸಿದ್ದೇಗೌಡ್ರಿಗೆ ಭಾವನಾ ಎಂದರೆ ತುಂಬಾನೇ ಇಷ್ಟ. ಆದರೆ ಆ ಪ್ರೀತಿಯನ್ನು ಹೇಳಿಕೊಳ್ಳುವ ಧೈರ್ಯ ಸಾಕಾಗುತ್ತಿಲ್ಲ. ಆ ಕಡೆ ಭಾವನಾಗೂ ಗಂಡು ನೋಡುತ್ತಿದ್ದರು. ಮನೆಯಲ್ಲಿ ಎಲ್ಲೆ ಮದುವೆಯಾಗಿದ್ದರು ಭಾವನಾಗೆ ಮಾತ್ರ ಅವಳ ಮೂಲ ನಕ್ಷತ್ರದ ಕಾರಣಕ್ಕೆ ಮದುವೆಯಾಗಿರಲಿಲ್ಲ. ಹೇಗಾದರೂ ಮಾಡಿ ಮಗಳ ಜೀವನ ಸರಿ ಮಾಡಬೇಕು ಎಂದು ಲಕ್ಷ್ಮೀ ಮತ್ತು ಶ್ರೀನಿವಾಸ ಕಾಯುತ್ತಿದ್ದರು. ಅತ್ತ ಜವರೇಗೌಡನ ಮನೆಯಲ್ಲಿ ಸಿದ್ದೇಗೌಡರಿಗೂ ಮದುವೆ ತಯಾರಿ ನಡೆಯುತ್ತಿತ್ತು.
ಸಿದ್ದೇಗೌಡ್ರಿಗೆ ಭಾವನಾಳನ್ನು ಕಳೆದುಕೊಳ್ಳುವ ಭಯ ಶುರುವಾಗಿ, ಯಾರಿಗೂ ಹೇಳದೆ ಕೇಳದೆ ತಾಳಿ ಕಟ್ಟಿದ್ದಾನೆ. ಅದೃಷ್ಟಕ್ಕೆ ಈ ತಾಳಿ ಕಟ್ಟಿದ ವಿಚಾರವನ್ನು ಅವನ ಅತ್ತಿಗೆ ನೀಲೂ ಬಳಿ ಹೇಳಿಲ್ಲ. ತನಗೆ ಭಾವನಾ ಮೇಲೆ ಲವ್ ಆಗಿದೆ ಎಂದು ಹೇಳಿದ್ದಕ್ಕೇನೆ ನೀಲೂ ಮಾಡಿರುವ ಕುತಂತ್ರ ಬುದ್ದಿಗೆ ಇಂದು ಪೇಪರ್ ನಲ್ಲಿ ಸುದ್ದಿಯಾಗಿದ್ದಾನೆ. ಇನ್ನು ತಾಳಿ ವಿಚಾರ ಹೇಳಿದರೆ ಅಷ್ಟೇ.

ಪೇಪರ್‌ನಲ್ಲೆಲ್ಲಾ ಇಬ್ಬರದ್ದೇ ಸುದ್ದಿ
ಮನೆಯವರು ಹರಕೆ ಹೊತ್ತಿದ್ದ ಕಾರಣ ಪೂರ್ವಿ ಹಾಗೂ ಸಿದ್ದೇಗೌಡ್ರು ದೂರದೂರಿಗೆ ಹೋಗಿದ್ದರು. ಪೂಜೆ ಮುಗಿಸಿ ಬರುವಾಗ ಗಾಡಿ ಕೈಕೊಟ್ಟಿದೆ. ಏನು ಮಾಡಬೇಕೆಂದು ತಿಳಿಯದೆ ಪಕ್ಕದಲ್ಲಿಯೇ ಇದ್ದ ಮನೆಯಲ್ಲಿ ಇರುವುದಕ್ಕೆ ಹೋಗಿದ್ದರು. ಅಷ್ಟರಲ್ಲಿ ಸ್ಥಳೀಯರ ಕೈಗೆ ಸಿಕ್ಕಿಬಿದ್ದರು. ಅಲ್ಲಿಗೆ ಬಂದ ಭಾವನಾ ಆ ಇಬ್ಬರನ್ನು ಕಾಪಾಡಿದ್ದಳು. ಈಗ ಆ ಸುದ್ದಿಯೆಲ್ಲಾ ಪೇಪರ್‌ನಲ್ಲಿ ಬಂದಿದೆ. ಎಲ್ಲರಿಗೂ ವಿಚಾರ ಗೊತ್ತಾಗಿದೆ.
ಜವರೇಗೌಡನ ಬಳಿಯೂ ಬಂತು ಸುದ್ದಿ
ಬೆಳಗ್ಗೆ ಎದ್ದು ಪೇಪರ್ ನೋಡುವಾಗ ಆ ಸುದ್ದಿ ಜವರೇಗೌಡನ ಕಣ್ಣಿಗೂ ಬಿದ್ದಿದೆ. ಮನೆಯವರೆಲ್ಲಾ ಮದುವೆ ಸುದ್ದಿ ಈ ರೀತಿ ಅಪಪ್ರಚಾರ ಪಡೆದಿದ್ದಕ್ಕೆ ಬೇಸರವಿದೆ. ಬೀಗರಿಗೂ ಈಗಾಗಲೇ ಈ ವಿಚಾರಕ್ಕೆ ಸಂಬಂಧಿಸಿದಂತೆ ಸಾಕಷ್ಟು ಕರೆಗಳು ಬಂದಿವೆ. ಹೀಗಾಗಿ ಜವರೇಗೌಡ ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಎಲ್ಲರಿಗೂ ಸಿದ್ದೇಗೌಡರ ಮದುವೆಯ ವಿಚಾರವನ್ನು ಅಧಿಕೃತವಾಗಿ ಹೇಳಿಬಿಡಬೇಕೆಂದು ನಿರ್ಧರಿಸಿದ್ದಾರೆ.

ಅಪ್ಪಾಜಿಯನ್ನು ತಡೆಯುವ ಪ್ರಯತ್ನ
ತಂದೆಯ ನಿರ್ಧಾರ ಕೇಳಿ ಸಿದ್ದೇಗೌಡ್ರು ಶಾಕ್ ಆಗಿದ್ದಾರೆ. ಮೊದಲೇ ಭಾವನಾಳಿಗೆ ಸತ್ಯ ಹೇಳಲು ಆಗದೆ ಒದ್ದಾಡುತ್ತಿದ್ದಾನೆ. ಹೇಗಾದರೂ ಮಾಡಿ ಪೂರ್ವಿಗೆ ಈ ಮದುವೆಯಿಂದ ಹಿಂದೆ ಸರಿಯುವಂತೆ ಹೇಳುತ್ತಿದ್ದಾನೆ. ಅದಕ್ಕೆಲ್ಲಾ ಪ್ಲ್ಯಾನ್ ಬೇರೆ ಮಾಡುತ್ತಿದ್ದಾನೆ. ಹೀಗಿರುವಾಗ ಎಲ್ಲರಿಗೂ ಗೊತ್ತಾಗುವಂತೆ ಅಧಿಕೃತವಾಗಿ ಅನೌನ್ಸ್ ಆಗಿ ಬಿಟ್ಟರೆ ಬೇರೆ ದಾರಿಯೇ ಇರುವುದಿಲ್ಲ. ತಂದೆಯ ಮರ್ಯಾದೆ ಸಿದ್ದೇಗೌಡ್ರಿಗೂ ಬಹಳ ಮುಖ್ಯ. ಅವರ ಮಾತಿಗೆ ಎದುರಾಡುವುದಕ್ಕೆ ಸಾಧ್ಯವಾಗದೆ ಪೂರ್ವಿ ಜೊತೆಗೆ ಎಂಗೇಜ್ಮೆಂಟ್ ಮಾಡಿಕೊಂಡಿದ್ದಾನೆ. ಈಗ ಘೋಷಣೆ ಮಾಡಿದರೆ ಏನು ಕಥೆ.
ನೀಲೂ ಕುತಂತ್ರ ವರ್ಕ್ ಆಯ್ತು
ಪೂರ್ವಿ ಮತ್ತು ಸಿದ್ದೇಗೌಡ್ರು ಹೀಗೆ ಲಾಕ್ ಆಗುವುದಕ್ಕೆ ಕಾರಣ ನೀಲೂ. ತನ್ನ ಅತ್ತಿಗೆಯನ್ನು ನಂಬಿ ಗೌಡ್ರು ದೊಡ್ಡ ತಪ್ಪು ಮಾಡಿ ಬಿಟ್ಟರು. ಎಲ್ಲಾ ವಿಚಾರವನ್ನು ಅತ್ತಿಗೆಯ ಬಳಿ ಹೇಳಿದ್ದಾನೆ. ಅಲ್ಲಿ ಗಾಡಿ ಕೆಟ್ಟು ಹೋದ ವಿಚಾರ ತಿಳಿದ ನೀಲೂ, ಜನ ಸೇರಿಸಿದ ಕಿತಾಪತಿ ಮಾಡಿದ್ದು ಅವಳೇ. ನೀಲೂಗೆ ಬೇಕಿರುವುದು ಸಿದ್ದೇಗೌಡ ಹಾಗೂ ಪೂರ್ವಿಯ ಮದುವೆ ಬೇಗ ಆಗುವುದು. ಈಗ ಜವರೇಗೌಡರು ಅದೇ ನಿರ್ಧಾರಕ್ಕೆ ಬಂದಿದ್ದಾರೆ. ಪೂರ್ವಿಗೂ ಇದು ಖುಷಿಯ ವಿಚಾರವೇ ಸರಿ. ಆದ್ರೆ ಒದ್ದಾಡುತ್ತಿರುವುದು ಗೌಡ್ರು ಮಾತ್ರ.


Click it and Unblock the Notifications











