Lakshminivasa: ಭಾವನಾ ಮುಂದೆ ಹೇಳಿದ ಸತ್ಯವನ್ನ ರವಿಶಂಕರ್, ಗೌಡ್ರ ಮುಂದೆ ಹೇಳಲಿ ನೋಡೋಣ!
ಶ್ರೀಕಾಂತ್ ತನ್ನೆಲ್ಲಾ ಆಸ್ತಿಯನ್ನ ಭಾವನಾ ಹೆಸರಿಗೆ ಬರೆದಿಟ್ಟಿದ್ದ. ಆದರೆ ಅದೇ ಆಸ್ತಿಗೋಸ್ಕರ ರವಿಶಂಕರ್ ಪ್ಲ್ಯಾನ್ ಮಾಡಿ ರವಿಶಂಕರ್‌ನ ಕೊಲೆ ಮಾಡಿಸಿದ. ಕಾರು ಅಪಘಾತ ಆಕಸ್ಮಿಕ ಎಂದೇ ಸೌಪರ್ಣಿಕಾ ಭಾವಿಸಿದ್ದಾಳೆ. ಆದರೆ ತನ್ನ ಗಂಡನೇ ಮಾಡಿಸಿದ್ದು ಎಂದು ಗೊತ್ತಾದರೆ ಅದನ್ನು ಸಹಿಸುವುದಿಲ್ಲ. ಸೌಪರ್ಣಿಕಾಗೂ ಹಣ-ಆಸ್ತಿ ಬಗ್ಗೆ ಆಸಕ್ತಿ. ಹಾಗಂತ ಅಣ್ಣ-ಅಮ್ಮನನ್ನು ಕೊಲ್ಲುವುದನ್ನು ಸಹಿಸುವುದಿಲ್ಲ.
ಆಸ್ತಿಗೋಸ್ಕರ ಶ್ರೀಕಾಂತ್‌ನನ್ನು ಕೊಲೆ ಮಾಡಿದರು ಸಹ, ಆ ಆಸ್ತಿ ರವಿಶಂಕರ್‌ಗೆ ಸಿಗಲೇ ಇಲ್ಲ. ಯಾಕಂದ್ರೆ ಭಾವನಾ ಹೆಸರಲ್ಲಿಯೇ ಎಲ್ಲಾ ಆಸ್ತಿ ಇದೆ. ಅವರು ಕೇಳಿದ ಕಡೆ ಸಹಿ ಹಾಕಿಕೊಟ್ಟಿದ್ದಾಳೆ ಭಾವನಾ. ಆದರು ಇನ್ನು ಒಂದಷ್ಟು ಆಸ್ತಿ ಬರಬೇಕಿದೆ. ಭಾವನಾ ಖುಷಿಯನ್ನು ನೆನಪಿಟ್ಟುಕೊಂಡು ಈಗ ಸಹಿ ಹಾಕುತ್ತಿಲ್ಲ. ಅದಕ್ಕೆ ಕಿಡ್ನ್ಯಾಪ್ ಮಾಡಿದ್ದ ರವಿಶಂಕರ್, ಈಗ ಮನೆಗೆ ಬಂದು ಭಯ ಹುಟ್ಟಿಸಲು ಪ್ರಯತ್ನ ಪಟ್ಟಿದ್ದಾನೆ.

ಎಲ್ಲರ ಮುಂದೆ ಕ್ಷಮೆ ಕೇಳಿದ ರವಿಶಂಕರ್
ಲಕ್ಷ್ಮೀ-ಶ್ರೀನಿವಾಸನ ಮನೆಯಲ್ಲಿ ಹಬ್ಬದ ಸಂಭ್ರಮ ಜೋರಾಗಿತ್ತು. ಎಲ್ಲರು ದೇವರ ಪೂಜೆಯನ್ನು ಮಾಡುತ್ತಿದ್ದರು. ಆದರೆ ಅದೇ ಸಮಯಕ್ಕೆ ಬಂದ ರವಿಶಂಕರ್,ಮನೆಯವರೆಲ್ಲಾ ಗಾಬರಿಯಾಗುವಂತೆ ಮಾಡಿದ್ದಾನೆ. ಭಾವನಾ ಕಿಡ್ನ್ಯಾಪ್ ಆದ ವಿಚಾರ ಲಕ್ಷ್ಮೀಗೆ ಮಾತ್ರ ಗೊತ್ತಿತ್ತು. ಈಗ ಮನೆಯವರಿಗೆಲ್ಲಾ ಗೊತ್ತಾಗುವಂತೆ ಮಾಡಿದ್ದಾನೆ. ಎಲ್ಲರೂ ನನ್ನನ್ನು ಕ್ಷಮಿಸಿ, ಭಾವನಾ ಕಿಡ್ನ್ಯಾಪ್ ಆಗುವುದಕ್ಕೆ ಪರೋಕ್ಷವಾಗಿ ನಾನೇ ಕಾರಣ ಎಂದಿದ್ದಾನೆ.
ಸತ್ಯ ಹೇಳಿದ ರವಿಶಂಕರ್
ಮನೆಯವರೆಲ್ಲರ ಮುಂದೆ ನಾನೇ ಕಾರಣ ಎಂಬ ನಾಟಕ ಆಡಿ, ಭಾವನಾ ಮುಂದೆ ಮಾತ್ರ ಸತ್ಯ ಒಪ್ಪಿಕೊಂಡಿದ್ದಾನೆ. ಮನೆಯಲ್ಲಿ ಎಲ್ಲರ ಜೊತೆಗೂ ಬೆರೆತು, ಪೂಜೆಯಲ್ಲೂ ಭಾಗಿಯಾಗಿ, ರವಿಶಂಕರ್ ಹೊರಟಿದ್ದಾನೆ. ಭಾವನಾ ಕೂಡ ಹೊರಗಡೆ ಬಂದಿದ್ದು, ಆಗ ಭಾವನಾಳ ಬಳಿ ಸತ್ಯ ಹೇಳಿದ್ದಾನೆ. ಮನೆಯವರ ಮುಂದೆ ಕಿಡ್ನ್ಯಾಪ್ ಆಗಲು ನಾನೇ ಕಾರಣ ಅಂತ ಹೇಳಿದ್ದೀನಿ. ಆದ್ರೆ ಕಿಡ್ನ್ಯಾಪ್ ಮಾಡಿಸಿದ್ದು ನಾನೇ ಎಂದಿದ್ದಾನೆ.
ಭಾವನಾಳನ್ನು ಹೆದರಿಸುವ ಯತ್ನ
ಭಾವನಾ ಮೊದಲೇ ತುಂಬಾ ಮುಗ್ಧೆ, ಸೈಲೆಂಟ್ ಅವಳನ್ನ ಹೆದರಿಸಬಹುದು ಎಂಬುದನ್ನು ರವಿಶಂಕರ್ ಅಂದುಕೊಂಡಿದ್ದಾನೆ. ಹೀಗಾಗಿಯೇ ಭಾವನಾಳ ಬಳಿ ಕಿಡ್ನ್ಯಾಪ್ ಮಾಡಿಸಿದ್ದು ನಾನೇ ಎಂದಿದ್ದಾನೆ. ಆಸ್ತಿಯನ್ನು ಬರೆದುಕೊಡದೆ ಹೋದರೆ ಮುಂದಿನ ಪರಿಣಾಮ ಕೆಟ್ಟದಾಗಿರುತ್ತೆ ಎಂಬ ಭಯವನ್ನು ಹುಟ್ಟಿಸಿದ್ದಾನೆ. ಭಾವನಾಗೆ ಹಣ,ಆಸ್ತಿಗಿಂತ ಖುಷಿ ಮುಖ್ಯ ಎಂದವಳು. ಖುಷಿಗಾಗಿಯೇ ಬದುಕುತ್ತಿದ್ದಾಳೆ. ಅವಳ ಆಸ್ಪತ್ರೆ ಖರ್ಚನ್ನು ತನ್ನ ದುಡಿಮೆಯಿಂದಾನೇ ಬರಿಸುತ್ತಿದ್ದಾಳೆ.

ಸಿದ್ದೇಗೌಡ್ರ ಮುಂದೆ ಹೇಳಲಿ ನೋಡೋಣಾ
ರವಿಶಂಕರ್, ಭಾವನಾ ಮನೆಗೆ ಬಂದು ತಾನೇ ಕಿಡ್ನ್ಯಾಪ್ ಮಾಡಿಸಿದ್ದು ಎಂದು ಹೇಳಿದಾಗ ಪ್ರೇಕ್ಷಕರು ನಕ್ಕಿದ್ದಾರೆ. ಭಾವನಾ ಮುಂದೆ ಹೋಗಿ ಹೇಳುವುದಲ್ಲ. ನೋಡೋಣಾ ಸಿದ್ದರಾಮಯ್ಯ ಎಗೌಡ್ರ ಮುಂದೆ ಹೋಗಿ ಈ ಸತ್ಯ ಹೇಳು. ಆಗ ಈ ಧೈರ್ಯವನ್ನು ಮೆಚ್ಚಿಕೊಳ್ಳುತ್ತೇವೆ. ಅದನ್ನ ಬಿಟ್ಟು ಭಾವನಾ ಮುಂದೆ ಹೇಳುವುದಲ್ಲ ಅಂತಿದ್ದಾರೆ. ಭಾವನಾಳ ತಂಟೆಗೆ ಬರ್ತಿರೋದು ರವಿಶಂಕರ್ ಎಂಬುದು ಗೊತ್ತಾದರೆ ರವಿಶಂಕರ್ ಕಥೆ ಮುಗಿದಂತೆಯೇ ಸರಿ. ಭಾವನಾ ಅಂತು ಹೇಳುವುದಕ್ಕೆ ಹೋಗಲ್ಲ. ಏನೇ ನೋವಿದ್ದರು ತನ್ನೊಳಗೆ ಇಟ್ಟುಕೊಳ್ಳುತ್ತಾಳೆ. ಆದರೆ ಗೌಡ್ರಿಗೆ ಸತ್ಯ ಗೊತ್ತಾದರೆ ಅಷ್ಟೇ.


Click it and Unblock the Notifications











