Lakshmi Nivasa: ಹೊಸ್ತಿಲು ತುಳಿಯಲ್ಲ ಎಂದಿದ್ದ ಮನೆ ಒಳಗೆ ಬಂದ ಸಿದ್ದೇಗೌಡ; ಲಕ್ಷ್ಮಕ್ಕನ ಮಗಳ ದರ್ಶನವಾಗುತ್ತಾ..?

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ ಪ್ರೀತಿಯಲ್ಲಿ ಬಿದ್ದಿದ್ದಾನೆ. ವಿಧಿ ಸಿದ್ದೇಗೌಡ- ಭಾವನಾಳನ್ನು ಒಂದು ಮಾಡಬೇಕೆಂದುಕೊಂಡಂತೆ ಕಾಣುತ್ತಿದೆ. ಹೀಗಾಗಿಯೇ ಭಾವನಾಳ ಮದುವೆ ಮಂಟಪದವರೆಗೂ ಬಂದು ನಿಂತು ಹೋಗಿದೆ. ದೇವಸ್ಥಾನದಲ್ಲಿಯೇ ಸಿದ್ದೇಗೌಡ ಪ್ರೀತಿಯಲ್ಲಿ ಬಿದ್ದಿದ್ದಾನೆ. ಪದೇ ಪದೇ ಪರೀಕ್ಷೆ ಮಾಡಿಕೊಂಡು ಇವಳೇ ನನ್ನ ಹುಡುಗಿ ಎಂದು ಫಿಕ್ಸ್ ಆಗಿದ್ದಾನೆ.

ಭಾವನಾಳನ್ನು ನೋಡಿ ಸಿದ್ದೇಗೌಡ ಕಳೆದು ಹೋಗಿದ್ದಾನೆ. ಆದರೆ ಸಿದ್ದೇಗೌಡನ ತಾಯಿ ಬೇರೆಯದ್ದೇ ಕನಸು ಕಂಡಿದ್ದಾಳೆ. ತನ್ನ ಮನೆಗೆ ಸೊಸೆಯಾಗಿ ಬರುವವಳು ಹೀಗೆ ಇರಬೇಕು ಎಂಬ ಬೆಟ್ಟದಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡು ಕುಳಿತಿದ್ದಾಳೆ. ಮಗನಿಗಿಂತ ಚಿಕ್ಕವಳಾಗಿರಬೇಕು, ಜಾತಕದಲ್ಲಿ ಸಣ್ಣ ದೋಷವೂ ಇರಬಾರದೆಂಬಂತೆಲ್ಲಾ ಆಸೆಗಳನ್ನು ಪೋಣಿಸಿಟ್ಟುಕೊಂಡಿದ್ದಾಳೆ.‌ ಆದರೆ ಸಿದ್ದೇಗೌಡ ಇಷ್ಟಪಟ್ಟ ಹುಡುಗಿ‌ ಎಲ್ಲದಕ್ಕೂ ಉಲ್ಟಾ.

Lakshmi nivasa Kannada serial Written Update on February 13th episode

ಬೇಡಿದ ಕೂಡಲೇ ಸಿಕ್ಕಿತು ವರ

ಸಿದ್ದೇಗೌಡ ಇತ್ತಿಚೆಗೆ ದೇವರ ಮುಂದೆ ಹೆಚ್ಚಿನ ಬೇಡಿಕೆ ಇಡುವುದಕ್ಕೆ ಶುರು ಮಾಡಿದ್ದಾನೆ. ಈಗಲೂ ದೇವರ ಬಳಿ ನಿಂತು ಅವಳು ನನ್ನವಳೇ ಆದರೆ ಮತ್ತೆ ನನ್ನ ಕಣ್ಣ ಮುಂದೆ ಬರಲಿ ಎಂದಿದ್ದಾನೆ. ದೇವರು ಪಟ್ ಅಂತ ವರ ನೀಡಿದ್ದು, ಭಾವನಾ ಹಾಗೂ ಜಾಹ್ನವಿ ಅರಳಿ ಕಟ್ಟೆಗೆ ನಮಸ್ಕಾರ ಮಾಡುತ್ತಿದ್ದರು. ಸಿದ್ದೇಗೌಡ ಅಂತೂ ಭಾವನಾಳನ್ನು ನೋಡಿ ನೋಡಿ ಕಳೆದು ಹೋಗುತ್ತಾನೆ.

ಲಕ್ಷ್ಮಕ್ಕನ ಮನೆ ಬಳಿಯೇ ಹುಡುಕಾಟ

ಈ ಬಾರಿ ಭಾವನಾಳ ಬಗ್ಗೆ ಹೆಚ್ಚು ತಿಳಿದುಕೊಳ್ಳಲು ಪ್ರಯತ್ನಿಸಿದ ಸಿದ್ದೇಗೌಡ, ಅವಳ ಮನೆಯನ್ನು ಹುಡುಕಲು ಫಾಲೋ ಮಾಡಿದ್ದಾನೆ. ಆಟೋ ಹಿಂದೆ ಹೋಗುತ್ತಿದ್ದಾಗ ಗಾಡಿ ಕೈಕೊಟ್ಟಿದೆ. ಆದರೆ ಭಾವನಾಳಿಗಾಗಿ ಗಾಡಿ ಬಿಟ್ಟು ಓಡೋಡಿ ಬಂದಿದ್ದಾನೆ. ಅಷ್ಟರಲ್ಲಾಗಲೇ ಭಾವನಾ ಮನೆಯ ಒಳಗೆ ಸೇರಿಕೊಂಡಿದ್ದಳು. ಸಿದ್ದೇಗೌಡ ಅವರ ಮನೆಯ ಮುಂದೆಯೇ ಬಂದು ನಿಂತಿದ್ದ. ಕಣ್ಣಿಗೆ ಬಿದ್ದಿದ್ದು ಭಾವನಾ ಅಲ್ಲ ಅವರ ಅಮ್ಮ ಲಕ್ಷ್ಮೀ.

ಮನೆಯ ಒಳಗೆ ನಡೆದ ಸಿದ್ದೇಗೌಡ

ಲಕ್ಷ್ಮೀ ಹಾಗೂ ಸಿದ್ದೇಗೌಡ ಈಗ ಫ್ರೆಂಡ್ಸ್ ಥರ ಆಗೋಗಿದ್ದಾರೆ. ಮನೆ ಮುಂದೆ ಇದ್ದ ಸಿದ್ದೇಗೌಡನನ್ನು ಲಕ್ಷ್ಮೀ ಮನೆಗೆ ಕರೆದಿದ್ದಾಳೆ. ಕಾಫಿ ಮಾಡಲು ಭಾವನಾಳಿಗೆ ಹೇಳಿದ್ದಾಳೆ. ಅಷ್ಟರಲ್ಲಾಗಲೇ ಸಿದ್ದೇಗೌಡ ಅಜ್ಜಿಯ ಬಳಿ ರಾಜಕುಮಾರ ಅಂತ ಹೊಗಳಿಸಿಕೊಂಡು, ಆಶೀರ್ವಾದ ಬೇರೆ ತೆಗೆದುಕೊಂಡಿದ್ದ. ಭಾವನಾ ಕಾಫಿ ತರುವಷ್ಟರಲ್ಲಿ ಸಿದ್ದೇಗೌಡನಿಗೆ ಯಾವುದೋ ಕಾಲ್ ಬೇರೆ ಬಂದಿತ್ತು. ಭಾವನಾಳನ್ನು ನೋಡುತ್ತಾನೋ ಇಲ್ಲವೋ ಎಂಬ ಕುತೂಹಲವಿದೆ. ಭಾವನಾ, ಲಕ್ಷ್ಮಕ್ಕನ ಮಗಳು ಎಂದು ಗೊತ್ತಾದರೆ ಸಿದ್ದೇಗೌಡನಿಗೆ ಸ್ವರ್ಗ ಮೂರೇ ಗೇಣಿನ ರೀತಿ ಕಾಣಲಿದೆ‌.

Lakshmi nivasa Kannada serial Written Update on February 13th episode

ಹೊಸಿಲು ತುಳಿಯಲ್ಲ ಎಂದಿದ್ದ ಸಿದ್ದೇಗೌಡ

ಲಕ್ಷ್ಮೀ ಹಾಗೂ ಶ್ರೀನಿವಾಸನ ಚಿಕ್ಕ ಮಗನನ್ನೇ ಪ್ರೀತಿಸಿ ಮದುವೆಯಾಗಿದ್ದಾಳೆ. ಇದು ಸಿದ್ದೇಗೌಡನ ಮನೆಯವರಿಗೆ ಸ್ವಲ್ಪವೂ ಇಷ್ಟವಿಲ್ಲ. ಜೊತೆಗೆ ಅದನ್ನು ಸ್ವೀಕರಿಸಿಲ್ಲ ಕೂಡ. ಅಳಿಯನಿಗೆ ಅವಮಾನ ಮಾಡುತ್ತಲೇ ಇರುತ್ತಾರೆ. ಇತ್ತ ಸಿದ್ದೇಗೌಡ ಕೂಡ ಬಾವನ ಮುಖ ನೋಡಲು ಇಷ್ಟ ಪಡುವುದಿಲ್ಲ ಎಂದು ಹೇಳಿದ್ದಾನೆ. ಅದರ ಜೊತೆಗೆ ಅವರ ಮನೆಯ ಹೊಸ್ತಿಲು ತುಳಿಯುವುದಿಲ್ಲ ಎಂದಿದ್ದ.

ಅಭಿಮಾನಿಗಳ ಬೆಂಬಲ

ಈಗ ಭಾವನಾಗೋಸ್ಕರ ನೇರ ಮನೆಗೆ ಬಂದು ಕೂತಿದ್ದಾ‌ನೆ. ಇದನ್ನು ಕಂಡ ಬೆಂಬಲಿಗರು, ಸಿದ್ದೇಗೌಡರು ಮಾತಿಗೆ ತಪ್ಪಿಲ್ಲ, ಬದಲಿಗೆ ಹೊಸ್ತಿಲನ್ನು ದಾಟಿ ಮನೆಯ ಒಳಗೆ ಹೋಗಿದ್ದಾರೆ ಎಂದು ಸಪೋರ್ಟ್ ಮಾಡಿದ್ದಾರೆ. ಇದರ ಜೊತೆಗೆ ಅವರ ಆಕ್ಟಿಂಗ್‌ಗೆ ಮನಸೋತಿದ್ದಾರೆ ಮಹಿಳಾ ಅಭಿಮಾನಿಗಳು.

More from Filmibeat

English summary
Lakshmi nivasa serial today update; Here is the details about fans support to siddegowda;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X