Lakshmi nivasa: ಪುಟಾಣಿ ಖುಷಿ ನಟನೆಗೆ ಕರಗಿದೆ ಪ್ರೇಕ್ಷಕರ ಮನ..!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಖುಷಿ ಈಗ ಅನಾಥೆಯಂತಾಗಿದ್ದಾಳೆ. ಖುಷಿಗೊಬ್ಬಳು ತಾಯಿ ಬೇಕು, ಶ್ರೀಕಾಂತ್‌ಗೊಬ್ಬ ಸಂಗಾತಿ ಬೇಕು ಅಂತ ಬಯಸಿದ್ದು, ಜಾನಕಿ. ಅದಕ್ಕಾಗಿ ಎಲ್ಲಾ ತಯಾರಿಗಳು ಕೂಡ ನಡೆದಿತ್ತು. ಆದರೆ ವಿಧಿ ನಿರ್ಧಾರ ಬೇರೆಯದ್ದೇ ಆಗಿ, ಕಡೆಗೆ ಆ ಬದುಕು ಅರ್ಧಕ್ಕೆ ನಿಂತಿತು. ಶ್ರೀಕಾಂತ್, ಜಾನಕಿ ಸಾವನ್ನಪ್ಪಿ, ಖುಷಿಯನ್ನು ಅನಾಥೆ‌ ಮಾಡಿದರು.

ಭಾವನಾಳನ್ನು ಕಂಡರೆ ಖುಷಿಗೆ ಮೊದಲಿಂದ ಪ್ರೀತಿ. ಅದೇ ಭಾವನಾಳ ಜೊತೆಗಿದ್ದ ಖುಷಿಯನ್ನು ಸೌಪರ್ಣಿಕ ಅಂಡ್ ರವಿ ಪ್ಲ್ಯಾನ್ ಮಾಡಿ ಮನೆಗೆ ಕರೆದುಕೊಂಡು ಬಂದಿದ್ದಾರೆ. ಆದರೆ ಖುಷಿಯ ಮುಖದಲ್ಲಿ ಖುಷಿಯೇ ಇಲ್ಲ. ರವಿ ಹಾಗೂ ಅವರ ಅತ್ತೆ ಹೇಳಿದಂತೆಯೆ ಕುಣಿಯುವ ಸೌಪರ್ಣಿಕ ಖುಷಿಯ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ.

Lakshmi nivasa Kannada serial Written Update on February 16th episode

ಮನೆ ಕೆಲಸವನ್ನೆಲ್ಲಾ ಮಾಡುವ ಖುಷಿ

ಖುಷಿಯನ್ನು ಭಾವನಾಳ ಬಳಿಯೇ ಬಿಟ್ಟರೆ ಆಸ್ತಿಗೆ ಸಮಸ್ಯೆ ಆಗುತ್ತೆ ಎಂದು ತಲೆ ತುಂಬಿದ ರವಿ, ಖುಷಿಯನ್ನು ಕರೆದುಕೊಂಡು ಬರುವಂತೆ ಮಾಡಿದನು. ಆದರೆ ಮನೆಗೆ ಬಂದ ಖುಷಿಯನ್ನು ಮನೆ ಕೆಲದವಳಂತೆ ನೋಡಿಕೊಳ್ಳುತ್ತಿದ್ದಾನೆ. ಆ ಪುಟಾಣಿ ಮಗುವಿಗೆ ಮನೆ ಸ್ವಚ್ಛ ಮಾಡುವ ಕೆಲಸವನ್ನೆಲ್ಲಾ ನೀಡಿದ್ದಾನೆ. ಮೊದಲೇ ನಡೆಯುವುದಕ್ಕೂ ಆಗುವುದಿಲ್ಲ, ಅಂತ ಪರಿಸ್ಥಿತಿಯಲ್ಲಿರುವ ಮಗುಗೆ ಚಿತ್ರ ಹಿಂಸೆ ನೀಡಿದ್ದಾನೆ.

ಭಾವನಾಗೆ ಮೆಸೇಜ್ ಮಾಡಿದ ಖುಷಿ

ಖುಷಿಯನ್ನು ಕಂಡರೆ ಮೊದಲಿಂದಾನೂ ರವಿಗೆ ಆಗುವುದಿಲ್ಲ. ಈಗ ಅಪ್ಪನೂ ಇಲ್ಲ, ಅಜ್ಜಿಯೂ ಇಲ್ಲ. ಹೀಗಾಗಿ ಇನ್ನಷ್ಟು ಚಿತ್ರಹಿಂಸೆ ಕೊಟ್ಟಿದ್ದಾನೆ. ಮನೆ ಕೆಲಸ ಮಾಡಿಸುವುದಲ್ಲದೆ, ಚಿತ್ರಹಿಂಸೆ ನೀಡುವುದಲ್ಲದೆ, ಊಟವನ್ನು ಕೊಡದಂತೆ ಉಪವಾಸ ಮಲಗಿಸಿದ್ದಾನೆ. ಖುಷಿಗೆ ಏನು ಮಾಡಬೇಕೆಂದು ತಿಳಿಯದೆ ಸೀದಾ, ರವಿ ಕೋಣೆಗೂ ಬಂದು ತಿಳಿಯದಂತೆ ಭಾವನಾಗೆ ಮೆಸೇಜ್ ಮಾಡಿದ್ದಾಳೆ. ಇಲ್ಲಿ ತುಂಬಾ ಹಿಂಸೆ ನೀಡುತ್ತಿದ್ದಾರೆ. ಊಟವನ್ನು ನೀಡುತ್ತಿಲ್ಲ. ನಂಗೆ ಇರುವುದಕ್ಕೆ ಆಗುತ್ತಿಲ್ಲ ಎಂದು ಮೆಸೇಜ್ ಮಾಡಿದ್ದಾಳೆ. ಮೆಸೇಜ್ ಮಾಡಿ ಹೊರಗೆ ಹೋಗುವ ಸಮಯಕ್ಕೆ ರವಿಗೆ ಎಚ್ಚರವಾಗಿದೆ. ಸದ್ಯ ಖುಷಿ ಮಂಚದ ಕೆಳಗೆ ಬಚ್ಚಿಟ್ಟುಕೊಂಡಿದ್ದಾಳೆ.

ಖುಷಿ ಬಗ್ಗೆ ಭಾವನಾಗೆ ಕೆಟ್ಟ ಕನಸು

ಭಾವನಾಗೆ ಖುಷಿ ಖುಷಿಯಾಗಿಲ್ಲ ಎಂಬುದು ಗೊತ್ತಿದೆ. ಆದರೆ ಏನು ಮಾಡಲು ಆಗದ ಪರಿಸ್ಥಿತಿ. ಅವಳ ಬಗ್ಗೆಯೇ ಚಿಂತೆ ಮಾಡುತ್ತಿದ್ದ ಭಾವನಾಗೆ ಕೆಟ್ಟ ಕನಸು ಬಿದ್ದಿದೆ. ಸಡನ್ ಆಗಿ ಎದ್ದು ಕೂತ ಭಾವನಾಳನ್ನು ಜಾಹ್ನವಿ ಸಮಾಧಾನ ಮಾಡಿದ್ದಾಳೆ. ಅದನ್ನು ತಲೆಯಿಂದ ತೆಗೆದುಹಾಕಿ ಮಲಗಿದ ಭಾವನಾಗೆ ಖುಷಿ ಕಡೆಯಿಂದ ಸಂಕಷ್ಟದಲ್ಲಿರುವ ಮೆಸೇಜ್ ಬಂದಿದೆ. ಇದನ್ನು ಕಂಡು ಕಣ್ಣೀರು ಹಾಕಿದ ಭಾವನಾ, ಹೇಗಾದರೂ ಮಾಡಿ ಖುಷಿಯನ್ನು ಆ ನರಕದಿಂದ ಹೊರಗೆ ತರುತ್ತೀನಿ ಎಂದು ಹೊರಟಿದ್ದಾಳೆ.

Lakshmi nivasa Kannada serial Written Update on February 16th episode

ಖುಷಿ ನಟನೆಗೆ ನೋಡುಗರು ಫಿದಾ

ಪುಟಾಣಿ ಖುಷಿಗೆ ಕಾಲಿನ ಸಮಸ್ಯೆಯಾಗಿದೆ. ಸ್ಟಿಕ್ ಹಿಡಿದುಕೊಂಡೆ ನಡೆದಾಡಬೇಕು. ಹಾಗೇ ಮನೆಯಲ್ಲಿ ಪ್ರೀತಿ ತೋರಿಸುವವರು ಯಾರೂ ಇಲ್ಲ. ಇಂಥ ಪರಿಸ್ಥಿತಿಗೆ ನಟನೆ ಮಾಡುವವರು, ನೋಡುಗರ ಕಣ್ಣಲ್ಲಿ ಕಣ್ಣೀರು ತರಿಸುವಷ್ಟರ ಮಟ್ಟಿಗೆ ಇರಬೇಕು. ಖುಷಿಯ ನಟನೆಯೂ ಹಾಗೇ ಇದೆ. ಅದರಲ್ಲೂ ಹೊಟ್ಟೆ ಉರಿಯುವಷ್ಟು ಅಯ್ಯೋ ಎನಿಸುತ್ತದೆ. ಆ ಅಸಹಾಯಕ ನೋಟ, ನೋವಿನಿಂದ ಕೂಡಿದ ಮುಖ, ಮಾತು ಬಂದರೂ ಆಡಲು ದಿಕ್ಕಿಲ್ಲದೇ ಇರುವುದು ಕಂಡು ವೀಕ್ಷಕರು ಭಾವುಕರಾಗಿದ್ದಾರೆ. ದಯವಿಟ್ಟು ಖುಷಿಯ ಬಳಿ, ಈ ರೀತಿ ನಟನೆ ಮಾಡಿಸಬೇಡಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
Lakshmi nivasa serial today episode; Here is the details about Ravi is torturing Khushi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X