Lakshmi nivasa: ಮದುವೆ ಬಗ್ಗೆ ಹೇಳಲು ಬಂದ ಜಾನುಗೆ ಪ್ರೀತಿ ಹೇಳಿ ಶಾಕ್ ಕೊಟ್ಟ ವಿಶ್ವ

By ಎಸ್ ಸುಮಂತ್

ಶ್ರೀನಿವಾಸ್ ಹಾಗೂ ಲಕ್ಷ್ಮೀ ದಂಪತಿಗೆ ಮದುವೆಯಾಗದೆ ಇನ್ನಿಬ್ಬರು ಹೆಣ್ಣು ಮಕ್ಕಳಿದ್ದಾರೆ. ಎರಡು ಹೆಣ್ಣು ಮಕ್ಕಳಿಗೂ ಬರುತ್ತಿರುವ ಸಂಬಂಧ ತೀರಾ ಶ್ರೀಮಂತರೆ. ಭಾವನಾಳನ್ನು ಮದುವೆಯಾಗುತ್ತೀನಿ ಎಂದು ಬಂದಿದ್ದ ಶ್ರೀಕಾಂತ್ ಒಂದು ಸಂಸ್ಥೆಯ ಮಾಲೀಕ. ಆದರೆ ವಿಧಿ ಅವರಿಬ್ಬರನ್ನು ಒಂದಾಗುವುದಕ್ಕೆ ಬಿಡಲಿಲ್ಲ. ಇದೀಗ ಜಾಹ್ನವಿಗೂ ಅಂಥದ್ದೇ ಸಂಬಂಧ ಬಂದಿದೆ.

ಜಾಹ್ನಿವಿಯನ್ನು ಕಾಲೇಜು ಕಾರ್ಯಕ್ರಮದಲ್ಲಿ ನೋಡಿದ ಜಯಂತ್, ನೇರವಾಗಿ ಅವರ ಮನೆಗೆ ಹೋಗಿ ಹೆಣ್ಣು ಕೇಳಿ ಬಂದಿದ್ದಾನೆ. ಮನೆಯವರಿಗೆಲ್ಲಾ ಜಯಂತ್ ಇಷ್ಟವಾಗಿದ್ದಾನೆ. ಅವನ ಹಿನ್ನೆಲೆಯನ್ನೆಲ್ಲಾ ತಿಳಿದುಕೊಂಡು ಬಂದಿದ್ದಾರೆ. ಆದರೆ ಈಗ ಜಾಹ್ನವಿ ಉತ್ತರಕ್ಕಾಗಿ ಮನೆಯವರೆಲ್ಲಾ ಕಾಯುತ್ತಿದ್ದಾರೆ. ಇದೇ ಸಮಯಕ್ಕೆ ವಿಶ್ವ ಬೇರೆ ತನ್ನ ಪ್ರೀತಿ ಹೇಳಿಕೊಂಡಿದ್ದಾನೆ.

Lakshmi nivasa kannada serial Written Update on February 20th episode

ಗೊಂದಲದಲ್ಲಿರುವ ಜಾಹ್ನವಿ

ಮನೆಯಲ್ಲಿ ಎಲ್ಲರೂ ಮದುವೆ ಸಂಭ್ರಮದಲ್ಲಿದ್ದಾರೆ. ಜಾಹ್ನವಿಯನ್ನು ಕೇಳಿಕೊಂಡು ಬಂದ ಹುಡುಗನ ಬಗ್ಗೆ ಇಬ್ಬರು ಅಣ್ಮಂದಿರು, ಅಪ್ಪ ಹೋಗಿ ವಿಚಾರಿಸಿಕೊಂಡು ಬಂದಿದ್ದಾರೆ. ಹುಡುಗ ಒಳ್ಳೆಯವನು ಎಂಬಂತೆಯೇ ಎಲ್ಲಾ ಕಡೆಯಿಂದ ಉತ್ತರ ಬಂದಿದೆ. ಹೀಗಾಗಿ ಮನೆಯವರಿಗೆಲ್ಲಾ ಹುಡುಗನ ಬಗ್ಗೆ ಒಕೆ ಆಗಿದೆ. ಈಗ ಜಾಹ್ನವಿಯ ಸರದಿ. ಆದರೆ ಜಾಹ್ನವಿಗೆ ಹುಡುಗನ ಬಗೆಗಿನ ಕನಸುಗಳೇ ಬೇರೆ. ಅಪ್ಪ ಅಮ್ಮ ಕೇಳಿದರೆ ಅದಕ್ಕೆ ತಕ್ಷಣಕ್ಕೆ ಉತ್ತರ ಕೊಡುವುದಕ್ಕೆ ಆಗುತ್ತಿಲ್ಲ. ನಂಗೂ ಸ್ವಲ್ಪ ಸಮಯ ಕೊಡಿ ಎಂದೇ ಕೇಳಿ ಸುಮ್ಮನೆ ಆಗಿದ್ದಾಳೆ.

ವಿಶ್ವನಿಗೆ ಕಾಲ್ ಮಾಡಿದ ಜಾಹ್ನವಿ

ಜಾಹ್ನವಿಯ ಬೆಸ್ಟ್ ಫ್ರೆಂಡ್ ವಿಶ್ವ. ಎಲ್ಲಾ ಕಷ್ಟ-ಸುಖ, ಗೊಂದಲಗಳನ್ನು ಅವನ ಬಳಿಯೇ ನಿವಾರಿಸಿಕೊಳ್ಳುತ್ತಾಳೆ. ಇದೀಗ ಮದುವೆ ಎಂಬ ಗೊಂದಲಕ್ಕೆ ಉತ್ತರ ಕಂಡುಕೊಳ್ಳಲು ವಿಶ್ವನಿಗೆ ಕಾಲ್ ಮಾಡಿದ್ದಾಳೆ. ಭೇಟಿ ಮಾಡಲು ತಿಳಿಸಿದ್ದಾಳೆ. ಮೊನ್ನೆಯಷ್ಟೇ ವಿಶ್ವ, ತನ್ನ ಪ್ರೀತಿಯನ್ನು ಹೇಳಿಕೊಂಡಿದ್ದ. ಆದರೆ ಜಾಹ್ನವಿ ಹಾಡು ಕೇಳುತ್ತಿದ್ದರಿಂದ ಯಾವುದು ಕೇಳಿಸಿರಲಿಲ್ಲ. ಈಗ ಅವಳು ಪ್ರೀತಿಯ ಬಗ್ಗೆಯೇ ಹೇಳುವುದಕ್ಕೆ ಬಂದಿದ್ದಾಳೆ ಎಂದೇ ವಿಶ್ವ ಭಾವಿಸಿದ್ದ. ಆದರೆ‌ ಜಾಹ್ನವಿಯ ಮನಸ್ಸಿನ ತುಡಿತವೇ ಬೇರೆ ಆಗಿತ್ತು.

ವಿಶ್ವನ ಪ್ರೀತಿ ಸ್ವೀಕರಿಸುತ್ತಾಳಾ..?

ಜಾಹ್ನವಿ ಹೇಳಿದ ಜಾಗಕ್ಕೆ ವಿಶ್ವ ಬಂದ. ಜಾಹ್ನವಿಯನ್ನು ವಿಷಯ ಕೇಳಿದ. ಆದರೆ ಜಾಹ್ನವಿ ಮೊದಲು ಆ ಹುಡುಗಿಯ ಬಗ್ಗೆ ಹೇಳು ಅಂದಿದ್ದೆ, ವಿಶ್ವ ತನ್ನ ಪ್ರೀತಿಯನ್ನು ಹೇಳುವುದಕ್ಕೆ ಶುರು ಮಾಡಿದ್ದಾನೆ. ನಾನು ನಿನ್ನನ್ನು ತುಂಬಾ ಪ್ರೀತಿ ಮಾಡುತ್ತೀದ್ದೀನಿ ಎಂದು ಹೇಳಿದ್ದಾನೆ. ಅವತ್ತಿಂದ ಕಾಯುತ್ತಿದ್ದ ಹುಡುಗಿ ಬೇರೆ ಯಾರೂ ಅಲ್ಲ, ಅದು ನೀನೆ ಎಂಬುದನ್ನು ಸ್ಪಷ್ಟಪಡಿಸಿದ್ದಾನೆ. ಇದನ್ನು ಕೇಳಿದ ಜಾಹ್ನವಿಗೆ ಒಂದು ಕ್ಷಣ ಶಾಕ್ ಆಗಿದೆ. ತಾನು ಹೇಳುವುದಕ್ಕೆ ಬಂದ ವಿಷಯವನ್ನೇ ಮರೆತು ದಿಗ್ಬ್ರಾಂತಳಾಗಿ ನಿಂತಿದ್ದಾಳೆ.

Lakshmi nivasa kannada serial Written Update on February 20th episode

ವಿಶ್ವನೇ ಶತ್ರುವಾಗ್ತಾನಾ..?

ಇತ್ತ ಜಯಂತ್ ಮನೆಗೆ ಬಂದು ಮನೆಯವರೆಲ್ಲರ ಮನಸ್ಸು ಕದ್ದಿದ್ದಾನೆ. ಮನೆಯವರೆಲ್ಲರೂ ಮದುವೆಗೆ ಒಪ್ಪಿದ್ದಾರೆ. ಆದರೆ ಜಾಹ್ನವಿಗೆ ಅಷ್ಟೊಂದು ಮನಸ್ಸಿಲ್ಲ. ಇದನ್ನ ವಿಶ್ವನ ಬಳಿ ಹಂಚಿಕೊಳ್ಳಲು ಬಂದಿದ್ದಾಳೆ. ಜಾಹ್ನವಿಗೆ ತನ್ನ ಹುಡುಗನ ಬಗ್ಗೆ ಅಪಾರವಾದ ಕನಸಿದೆ. ಅಪಾರವಾದ ನಿರೀಕ್ಷೆ ಇದೆ. ಹೀಗಾಗಿ ನದುವೆ ಎಂಬುದನ್ನು ತಕ್ಷಣಕ್ಕೆ ರಿಸೀವ್ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತಿಲ್ಲ. ಈಗ ವಿಶ್ವನ ಬಳಿ ಆ ಸಮಸ್ಯೆ ಹೇಳಿ ಪರಿಹಾರ ಕೇಳುವುದಕ್ಕೆ ಬಂದರೆ ಮತ್ತೊಂದು ಸಮಸ್ಯೆಯನ್ನು ಉಂಟು ಮಾಡಿದ್ದಾನೆ. ಜಯಂತ್ ವಿಚಾರ ಹೇಳಬೇಕೋ, ಇವನ ಪ್ರೀತಿಯನ್ನೋ ಒಪ್ಪಬೇಕೋ ಒಂದು ತಿಳಿಯದೇ ಗೊಂದಲದಲ್ಲಿ ನಿಂತಿದ್ದಾಳೆ.

More from Filmibeat

English summary
Lakshmi nivasa serial today update; Here is the details about Vishwa expressed his love
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X