Lakshmi Nivasa: ಜಯಂತನ ವಿನಯತೆಗೆ ಪ್ರೇಕ್ಷಕರ ಭಯ; ಜಾಹ್ನವಿಗೆ ಮೋಸವಾಗದಂತೆ ಪ್ರಾರ್ಥನೆ
ಲಕ್ಷ್ಮೀ ನಿವಾಸದಲ್ಲಿ ಮತ್ತೆ ಮದುವೆ ಸಂಭ್ರಮ ಮನೆ ಮಾಡಿದೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಭಾವನಾ ಮದುವೆಯಾಗಿ, ಗಂಡನ ಮನೆಯಲ್ಲಿ ಸುಖ ಸಂಸಾರ ಮಾಡುತ್ತಿದ್ದಳು. ಆದರೆ ವಿಧಿ ಅವಳ ಹಣೆಯಲ್ಲಿ ಸಿದ್ದೇಗೌಡ್ರನ್ನು ಬರೆದಂತಿದೆ. ಹೀಗಾಗಿ ಭಾವನಾ ಮದುವೆ ಸಾಧ್ಯವಾಗಲಿಲ್ಲ. ಅವಳ ಮದುವೆಗಾಗಿ ಶ್ರೀನಿವಾಸ ಸಾಕಷ್ಟು ಸಾಲ ಮಾಡಿಕೊಂಡು ಸಂಕಷ್ಟಕ್ಕೆ ಸಿಲುಕಿದ್ದ. ಆ ಎಲ್ಲಾ ಕಷ್ಟಗಳನ್ನು ದೂರ ಮಾಡಿದ್ದು ಮಾತ್ರ ಜಯಂತ್.
ಜಾಹ್ನವಿಯ ಕಾಲೇಜು ಕಾರ್ಯಕ್ರಮಕ್ಕೆ ಹೋಗಿದ್ದ ಜಯಂತ್, ಅಲ್ಲಿಂದಾನೇ ಜಾಹ್ನವಿಯನ್ನು ಇಷ್ಟಪಟ್ಟಿದ್ದಾನೆ. ಅಂದೇ ಮನೆಯ ತನಕ ಹೋಗಿ ಹೆಣ್ಣನ್ನು ಕೇಳಿ ಆಗಿದೆ. ಈಗ ಆತನ ಹಿನ್ನೆಲೆಯನ್ನೆಲ್ಲಾ ಹುಡುಕಿ, ಮನೆಯವರು ಮದುವೆ ಮಾಡಲು ಹೊರಟಿದ್ದಾರೆ. ಮನೆಯವರ ಮಾತಿಗೆ ಜಾಹ್ನವಿಯೂ ಒಪ್ಪಿಗೆ ನೀಡಿದ್ದಾಳೆ. ಆದರೆ ಪ್ರೇಕ್ಷಕರಿಗೇನೆ ಆತಂಕ ಶುರುವಾಗಿದೆ.

ಜಾಹ್ನವಿಯ ನಿಶ್ಚಿತಾರ್ಥದ ತಯಾರಿ
ಲಕ್ಷ್ಮೀ ನಿವಾಸದಲ್ಲಿ ಮತ್ತೆ ಮದುವೆ ಸಂಭ್ರಮ ಶುರುವಾಗಿದೆ. ಚಿಕ್ಕ ಮಗಳು ಜಾಹ್ನವಿಯದ್ದೇ ನಿಶ್ಚಿತಾರ್ಥ ನಡೆದಿದೆ. ಲಕ್ಷ್ಮೀ ನಿವಾಸ ಪಳಪಳ ಅಂತ ಹೊಳೆಯುತ್ತಿದೆ. ಹೂಗಳಿಂದ ಅಲಂಕಾರಗೊಂಡಿದೆ. ಮನೆಯಲ್ಲೆಲ್ಲಾ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮನೆ ಮಕ್ಕಳೆಲ್ಲಾ ಖುಷಿ ಖುಷಿಯಲ್ಲಿದ್ದಾರೆ. ಅದರಲ್ಲೂ ಜಾಹ್ನವಿಯ ಇಬ್ಬರು ಅಣ್ಣಂದಿರು, ಭಾವನಾ ಮದುವೆಯಲ್ಲಿ ಇಷ್ಟೊಂದು ಖುಷಿಯಾಗಿರಲಿಲ್ಲ. ಆದರೆ ಜಾಹ್ನವಿಯ ಮದುವೆಯಲ್ಲಿ ಸಿಕ್ಕಾಪಟ್ಟೆ ಖುಷಿಯಾಗಿದ್ದಾರೆ. ಸಂತಸದಿಂದ ಓಡಾಡಿಕೊಂಡು ಕೆಲಸ ಮಾಡುತ್ತಿದ್ದಾರೆ.
ಮಧುಮಗನಾಗಿ ಬಂದ ಜಯಂತ್
ಜಯಂತ್ ದೊಡ್ಡ ಸಂಸ್ಥೆಯ ಮಾಲೀಕ. ಆದರೆ ಸಂಪ್ರದಾಯ, ಸಂಸ್ಕೃತಿ ವಿಚಾರದಲ್ಲಿ ಲಕ್ಷ್ಮೀ-ಶ್ರೀನಿವಾಸ್ ಅವರನ್ನು ಸೆಳೆಯುತ್ತಿದ್ದಾನೆ. ಮನೆಗೆ ಬಂದಾಗಲೇ ಎಲ್ಲರ ಕಾಲಿಗೆ ನಮಸ್ಕರಿಸಿ, ಸಂಸ್ಕಾರವಂತ ಎಂಬುದಾಗಿ ತೋರಿಸಿಕೊಟ್ಟ. ಈಗ ನಿಶ್ಚಿತಾರ್ಥಕ್ಕೂ ಮುನ್ನ ಏನೆಲ್ಲಾ ಶಾಸ್ತ್ರಗಳಿಗೆ ಅದರ ಪ್ರಕಾರವೇ ನಡೆದುಕೊಂಡಿದ್ದಾನೆ. ಅಪ್ಪ-ಅಮ್ಮ ಇಲ್ಲದೆ ಹೋದರೂ ಎಲ್ಲಾ ಸಂಸ್ಕಾರ ಇರುವುದಕ್ಕೆ ಲಕ್ಷ್ಮೀ ಮನೆಯವರು ಸಂಸತಸಗೊಂಡಿದ್ದಾರೆ. ಇನ್ನು ಈಗ ನಿಶ್ಚಿತಾರ್ಥಕ್ಕೆ ಮಧುಮಗನಾಗಿ ಎಂಟ್ರಿಕೊಟ್ಟಿದ್ದಾನೆ. ಹೀರೋ ರೇಂಜಿಗೆ ಬಂದಿದ್ದಾನೆ. ಜಯಂತ್ ಹಿಂದೆ ನಾಲ್ಕೈದು ಜನ ಬಾಡಿಗಾರ್ಡ್ಸ್ ಕೂಡ ಬಂದಿದ್ದಾರೆ.

ಮನಸ್ಸಾರೆ ಒಪ್ಪಿಲ್ಲವಾ ಜಾಹ್ನವಿ
ಜಾಹ್ನವಿ ಅಪ್ಪ-ಅಮ್ಮನ ಕಷ್ಟ ನೋಡಿಕೊಂಡು ಬೆಳೆದವಳು. ಅಣ್ಣಂದಿರ ಸ್ವಾರ್ಥ ನೋಡುತ್ತಲೇ ಬೇಸರ ಮಾಡಿಕೊಂಡವಳು. ಹೀಗಾಗಿ ಅಪ್ಪ-ಅಮ್ಮನಿಗೆ ಜಯಂತ್ ಇಷ್ಟವಾದ ಮೇಲೆ ಎಲ್ಲವನ್ನು ಯೋಚನೆ ಮಾಡಿದ್ದಾಳೆ. ಮದುವೆಗೆ ಒಪ್ಪಿದರೆ ಮನೆಯವರಿಗೆ ಅನುಕೂಲವಾಗುತ್ತದೆ ಎಂಬುದನ್ನು ತಿಳಿದ ಮೇಲೆ ಒಪ್ಪಿಗೆ ನೀಡಿದ್ದಾಳೆ. ಆದರೆ ಜಾಹ್ನವಿಯ ಡ್ರೀಮ್ ಬಾಯ್ ಬೇರೆಯೆ ಇದ್ದಾನೆ. ಹುಡುಗನ ಬಗ್ಗೆ ಏನೇನೋ ಕನಸ್ಸನ್ನು ಕಂಡಿದ್ದಳು. ಇದೀಗ ಆ ಕನಸ್ಸನ್ನೆಲ್ಲಾ ಬದಿಗೆ ಹೊತ್ತು, ಜಯಂತ್ ಜೊತೆಗೆ ಮದುವೆಯಾಗಲು ಒಪ್ಪಿದ್ದಾಳೆ. ಆದರೆ ನಿಶ್ಚಿತಾರ್ಥದ ದಿನ ಅವಳ ಮುಖದಲ್ಲಿ ನಗುವೆ ಇಲ್ಲದಂತೆ ಆಗಿದೆ.
ಪ್ರೇಕ್ಷಕರ ಮನವಿ ಏನು..?
ಲಕ್ಷ್ಮೀ ನಿವಾಸ ಧಾರಾವಾಹಿಗೆ ಪ್ರೇಕ್ಷಕರ ಸಂಖ್ಯೆ ಏನು ಕಡಿಮೆ ಇಲ್ಲ. ದಿನೇ ದಿನೇ ಕಥೆ ಫಾಸ್ಟ್ ಆಗಿ ಓಡುತ್ತಿರುವ ಕಾರಣ ನೋಡುಗರಿಗೆ ಎಲ್ಲಿಯೂ ಬೋರ್ ಹೊಡೆಸುತ್ತಿಲ್ಲ. ಹೀಗಾಗಿ ನೋಡುಗರ ಸಂಖ್ಯೆಯೂ ಹೆಚ್ಚಾಗಿದೆ. ಈಗ ಜಯಂತನ ಅತಿಯಾದ ವಿನಯತೆ ಕಂಡು, ಪ್ರೇಕ್ಷಕರಿಗೆ ಅನುಮಾನ ಶುರುವಾಗಿದೆ. 'ಅತಿ ವಿನಯಂ ದೂರ್ತ ಲಕ್ಷಣಂ' ಎಂಬುದನ್ನು ಒತ್ತಿ ಒತ್ತಿ ಹೇಳುತ್ತಿದ್ದಾರೆ. ಇಬ್ಬರ ಜೋಡಿ ಚೆನ್ನಾಗಿದೆ, ಜಯಂತ್ ಮೋಸ ಮಾಡದೇ ಇರಲಿ ಎನ್ನುತ್ತಿದ್ದಾರೆ. ಜಯಂತ್ ಈ ಧಾರಾವಾಹಿಯ ದೊಡ್ಡ ವಿಲನ್ ಇರಬಹುದು ಎಂಬ ಅನುಮಾನ ಕೆಲವರಿಗೆ ಶುರುವಾಗಿದೆ.


Click it and Unblock the Notifications











