Lakshmi nivasa: 'ಲಕ್ಷ್ಮೀ ನಿವಾಸ' ಪ್ರೇಕ್ಷಕರ ಮನಸ್ಸು ಗೆದ್ದ ಜಯಂತ್, ಜಾಹ್ನವಿಯನ್ನು ಗೆಲ್ಲುತ್ತಾನಾ..?

By ಎಸ್ ಸುಮಂತ್

ಮದುವೆಯಾಗಬೇಕೆಂಬ ಹುಡುಗ ಹೀಗೆ ಇರಬೇಕೆಂಬ ಕನಸುಗಳು ಖಂಡಿತ ಎಲ್ಲಾ ಹೆಣ್ಣು ಮಕ್ಕಳಿಗೂ ಇದ್ದೇ ಇರುತ್ತದೆ. ಅದರಂತೆ ಜಾಹ್ನವಿಗೂ ದೊಡ್ಡ ಕನಸಿದೆ. ಅದರಲ್ಲೂ ತಾನೂ ಮದುವೆಯಾಗುವ ಹುಡುಗ ಹುಚ್ಚನಂತೆ ತನ್ನನ್ನು ಪ್ರೀತಿ ಮಾಡಬೇಕೆಂಬ ಆಸೆ ಇದೆ. ಆ ಪ್ರೀತಿ ಜಯಂತ್ ಕಡೆಯಿಂದ ಸಿಗುವುದಕ್ಕೆ ಅಸಾಧ್ಯ ಎಂದೇ ಜಾಹ್ನವಿ ಭಾವಿಸಿದ್ದಾಳೆ.

ಭಾವನಾಗೆ ಈ ಪ್ರೀತಿ-ಗೀತಿ-ಇತ್ಯಾದಿಗಳ ಮೇಲೆ ಅಷ್ಟೊಂದು ನಂಬಿಕೆ, ವಿಶ್ವಾಸ ಇರಲಿಲ್ಲ. ಆದರೆ ಈಗ ಆ ಪ್ರೀತಿ ಬಗ್ಗೆಯೇ ಹೆಚ್ಚೆಚ್ಚು ಫಿಲಾಸಪಿ ಮಾತುಗಳನ್ನು ಆಡುತ್ತಿದ್ದಾಳೆ. ಮನೆಯಲ್ಲಿ ಜಾಹ್ನವಿ ಹಾಗೂ ಭಾವನಾ ಬೆಸ್ಟ್ ಫ್ರೆಂಡ್ ಇದ್ದಂತೆ. ವಿಚಾರಗಳನ್ನು ಹಂಚಿಕೊಳ್ಳುತ್ತಾರೆ, ಎಲ್ಲಾ ವಿಚಾರಗಳಲ್ಲೂ ಸಲಹೆಗಳನ್ನು ಪಡೆದುಕೊಳ್ಳುತ್ತಾರೆ. ಇದೀಗ ಜಾಹ್ನವಿಯ ಕನಸಿಗೂ ಭಾವನಾ ರೆಕ್ಕೆ ಪುಕ್ಕ ಕಟ್ಟಿದ್ದಾಳೆ.

Lakshmi nivasa kannada serial Written Update on February 23rd episode

ಜಾಹ್ನವಿಯ ಹುಟ್ಟುಹಬ್ಬ

ಲಕ್ಷ್ಮೀ ನಿವಾಸ ಎಂದರೇನೆ ಅದೊಂದು ಕೂಡು ಕುಟುಂಬ. ಅದರಲ್ಲಿ ಕಷ್ಟ-ಸುಖ ಇರಲಿ ಮನೆ ಮಕ್ಕಳ ಸಂತೋಷವನ್ನಷ್ಟೇ ಬಯಸುವುದು. ಹೀಗಿರುವಾಗ ಕಡೆಯ ಮಗಳನ್ನೇ ಮರೆತರೆ ಹೇಗೆ..? ಅದರಲ್ಲೂ ಬಹಳಷ್ಟು ಕಡಿಮೆ ಬಜೆಟ್‌ನ ನಿರೀಕ್ಷೆಗಳನ್ನು ಇಟ್ಟುಕೊಂಡಿರುವ ಜಾಹ್ನವಿಯ ಬರ್ತ್ ಡೇ ಮರೆತರೆ ಹೇಗೆ..? ಇವತ್ತು ಮನೆಯವರು ಯಾರೂ ಕೂಡ ಜಾಹ್ನವಿಯ ಬರ್ತ್ ಡೇಗೆ ವಿಶ್ ಮಾಡಿಲ್ಲ. ಸಪ್ರೈಸ್ ಆಗಿನೇ ವಿಶ್ ಮಾಡಲು ತಯಾರಿ ನಡೆಸಿದ್ದರು.

ಮನೆಯವರ ಮೇಲೆ ರೇಗಾಡಿದ ಜಾಹ್ನವಿ

ಬೆಳಗ್ಗೆ ಎದ್ದ ಕೂಡಲೇ ಎಲ್ಲರೂ ಬಂದು ವಿಶ್ ಮಾಡುತ್ತಾರೆ ಎಂದುಕೊಂಡಿದ್ದ ಜಾಹ್ನವಿಗೆ ನಿರಾಸೆಯಾಗಿದೆ. ಸೀದಾ ಅಡುಗೆ ಮನೆಗೆ ಬಂದ ಜಾಹ್ನವಿ ಎಲ್ಲರನ್ನು ಕ್ಲಾಸ್ ತೆಗೆದುಕೊಂಡಿದ್ದಾಳೆ. ಅಷ್ಟರಲ್ಲಾಗಲೇ ಜಯಂತ್ ಮನೆಗೆ ಬಂದು ಕುಳಿತಿದ್ದ. ಆದರೆ ಅದನ್ನು ಗಮನಿಸದೆ, ಜಯಂತ್‌ಗೂ ಕ್ಲಾಸ್ ತೆಗೆದುಕೊಂಡಿದ್ದಾಳೆ. ಮನೆಯವರಂತು ವಿಶ್ ಮಾಡಿಲ್ಲ. ಕೊನೆಪಕ್ಷ ಮದುವೆಯಾಗುವ ಹುಡುಗನಾದರೂ ಒಂದು ವಿಶ್ ಮಾಡಿಲ್ಲ ಅಂತ ಮನಸ್ಸಿನ ಕೋಪವನ್ನೆಲ್ಲ ಹೊರಗೆ ಹಾಕಿದ್ದಾಳೆ.

Lakshmi nivasa kannada serial Written Update on February 23rd episode

ಜಾಹ್ನವಿ ಆಸೆ ಈಡೇರಿಸುತ್ತಾನಾ ಜಯಂತ್..?

ಜಾಹ್ನವಿಗೆ ತನ್ನ ಮದುವೆಯಾಗುವ ಹುಡುಗನ ಬಗ್ಗೆ ಸಾಕಷ್ಟು ನಿರೀಕ್ಷೆಗಳಿವೆ.‌ ಈಗ ಬರ್ತ್ ಡೇ ಸಂದರ್ಭದಲ್ಲಿ ಅದನ್ನೇ ಹೇಳಿದ್ದಾಳೆ. ಬೆಳಗ್ಗೆನೇ ಬರೋಣ, ವಿಶ್ ಮಾಡೋಣ. ಹೊರಗೆ ಕರೆದುಕೊಂಡು ಹೋಗಿ ಒಂದೊಳ್ಳೆ ಗಿಫ್ಟ್ ಕೊಟ್ಟು, ಕೇಕ್ ಕಟ್ ಮಾಡಿಸೋಣ ಅನ್ನೋದು ಮದುವೆಯಾಗುವ ಹುಡುಗನಿಗೂ ಇಲ್ಲ. ನಿಮ್ಮಗಳಿಗೇನೆ ಏನು ನೆನಪಿಲ್ಲ. ಇನ್ನು ಅವನಿಗೆಲ್ಲಿ ನೆನಪಿರುತ್ತೆ ಎಂದು ಜೋರು ಮಾಡಿದ್ದಾಳೆ. ಜಯಂತ್ ಬಂದಿದ್ದಾನೆ ಎಂಬುದನ್ನು ತಿಳಿಸುವುದಕ್ಕೆ ಮನೆಯವರೆಲ್ಲ ಪ್ರಯತ್ನ ಪಟ್ಟಿದ್ದಾರೆ. ಆದರೂ ಅದು ಸಾಧ್ಯವಾಗಲಿಲ್ಲ. ಕಡೆಗೆ ವೆಂಕಿ, ಜಾಹ್ನವಿಯನ್ನು ಎಳೆದು ತಂದು ಜಯಂತ್ ಎದುರು ನಿಲ್ಲಿಸಿದ್ದಾನೆ.

ಹೆಣ್ಣು ಮಕ್ಕಳ ಹೃದಯ ಕದ್ದ ಜಯಂತ್

ದೀಪಕ್ ಸುಬ್ರಮಣ್ಯ ಈ ಮೊದಲು ಹಲವು ಧಾರಾವಾಹಿ, ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಆದರೆ ಕಿರುತೆರೆ ಲೋಕದಲ್ಲಿ ಮೋಡಿ ಮಾಡಿದ್ದಷ್ಟು ಬೇರೆಲ್ಲೂ ಮಾಡಿರಲಿಲ್ಲ. ಲಕ್ಷ್ಮೀ ನಿವಾಸಕ್ಕೆ ಬಂದ ಮೇಲೆ ಮಹಿಳಾ ವೀಕ್ಷಕರು ಮಾತ್ರ ಅಲ್ಲ ಪುರುಷರ ಮನಸ್ಸನ್ನು ಕದ್ದಿದ್ದಾರೆ. ಅವರ ಲುಕ್ ಕಂಪ್ಲೀಟ್ ಆಗಿ ಹೆಣ್ಣು ಮಕ್ಕಳ ಹೃದಯ ಕದ್ದಿದೆ. ಅದಕ್ಕೆ ಜೀ ಕನ್ನಡದವರ ಬಳಿಯೇ ಮನವಿ ಮಾಡುತ್ತಿದ್ದಾರೆ. ದಯವಿಟ್ಟು ನಮ್ಮ ಕ್ರಶ್‌ನ ಬದಲಿಸಬೇಡಿ, ವಿಲನ್ ಆಗಿ ಯಾವುದೇ ಕಾರಣಕ್ಕೂ ತೋರಿಸಬೇಡಿ ಎನ್ನುತ್ತಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Will Jayant fulfill Janhvi's desire?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X