Lakshmi nivasa: ಜಾಹ್ನವಿ ಎಲ್ಲಾ ಆಸೆ ಈಡೇರಿಸುತ್ತಿರುವ ಜಯಂತ್: ವಿಶ್ವನ ಎಂಟ್ರಿ ಇನ್ನೆಲ್ಲಿ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಲವ್ ಬರ್ಡ್ಸ್ ಸಂತಸ ಮುಗಿಲು ಮುಟ್ಟಿದೆ. ಮನೆಯಲ್ಲಿ ಜಾಹ್ನವಿಯ ಹುಟ್ಟು ಹಬ್ಬಕ್ಕೆ ತಯಾರಿ ನಡೆದಿದೆ. ಜಾಹ್ನವಿಗೆ ಕೇಕ್ ತಂದು, ಖುಷಿ ಪಡಿಸುವುದಕ್ಕೆ ತಂದೆ ಮಧ್ಯಾಹ್ನವೇ ರಜೆ ಹಾಕಿ ಮನೆಗೆ ಬಂದರೆ, ಅದಾಗಲೇ ಬಿಗ್ ಸರ್ಪೈಸ್ ಕೊಡುವುದಕ್ಕೆ ಅಳಿಯ ಜಾಹ್ನವಿಯನ್ನು ಕರೆದುಕೊಂಡು ಹೋಗಿದ್ದಾನೆ.
ಜಾಹ್ನವಿಗೆ ಮದುವೆಯಾಗಬೇಕೆಂಬ ಹುಡುಗನ ಬಗ್ಗೆ ಅಪಾರವಾದ ಕನಸಿತ್ತು. ಆ ಕನಸಿನಂತೆ ದೊಡ್ಡ ದೊಡ್ಡ ಆಸೆಗಳಿದ್ದವು. ಅದೆಲ್ಲವನ್ನು ಅರಿತು ಈಗ ಜಯಂತ್ ಈಡೇರಿಸುವುದಕ್ಕೆ ಶುರು ಮಾಡಿದ್ದಾನೆ. ಒಂಥರ ಅರೆಂಜ್ ಮ್ಯಾರೇಜ್ ಮದುವೆ ಬಗ್ಗೆ ಬೇಸರ ಮಾಡಿಕೊಂಡಿದ್ದ ಜಾಹ್ನವಿಯ ಮನಸ್ಸಲ್ಲಿ ಪ್ರೀತಿ ಚಿಗುರುವ ಎಲ್ಲಾ ಸಾಧ್ಯತೆಗಳು ಕಾಣಿಸುತ್ತಿವೆ.

ಜಾನು ಆಸೆಗಳು ಈಡೇರುತ್ತಿವೆ
ಜಾಹ್ನವಿ ತನ್ನ ಹುಟ್ಟುಹಬ್ಬಕ್ಕೆಂದು ದೊಡ್ಡ ಮಟ್ಟದ ಕನಸ್ಸನ್ನೇ ಹೇಳಿದಳು. ಜಯಂತ್ ಮನೆಗೆ ಬಂದಿರುವುದನ್ನು ಗಮನಿಸದೆ ಸಮುದ್ರದ ನಡುವೆ ಹುಟ್ಟುಹಬ್ಬ ಆಚರಿಸಿಕೊಂಡರೆ ಹೇಗೆ ಎಂದೆಲ್ಲಾ ಹೇಳಿದಳು. ಅಷ್ಟು ಆಸೆಗಳನ್ನು ಜಯಂತ್ ಕುಳಿತಲ್ಲಿಯೇ ರೆಡಿ ಮಾಡಿದ್ದ. ಜಾಹ್ನವಿಯನ್ನು ಕಣ್ಣು ಕಟ್ಟಿ ಕರೆದುಕೊಂಡು ಹೋಗಿದ್ದು ಮೊದಲಿಗೆ ಪ್ರೈವೇಟ್ ಜೆಟ್‌ನಲ್ಲಿ. ಬಳಿಕ ಸಮುದ್ರದ ನಡುವೆ ಹೋಗಿ ಕೇಕ್ ಕಟ್ ಮಾಡಿಸಿದ್ದಾನೆ. ಇಡೀ ದಿನ ಜಾಹ್ನವಿ ಖುಷಿಯಾಗಿರುವಂತೆ ನೋಡಿಕೊಂಡಿದ್ದಾನೆ. ಜಾಹ್ನವಿ ಆಕಾಶದಲ್ಲಿ ತೇಲಾಡಿದ್ದಾಳೆ. ತನ್ನ ಕನಸಿನ ಹುಡುಗ ಇವನೇ ಎಂದು ಮಾರು ಹೋಗಿದ್ದಾಳೆ.
ಮಳೆಯಲಿ ಐಸ್ ಕ್ರೀಂ ಜೊತೆಯಲಿ
ಜಾಹ್ನವಿಯ ಹುಟ್ಟುಹಬ್ಬಕ್ಕೆಂದು ಕೊಟ್ಟ ಉಡುಗೊರೆಯಲ್ಲಿ ಯಾವುದನ್ನು ಬಾಕಿ ಉಳಿಸಿದಂತೆ ಕಂಡಿಲ್ಲ. ಮಳೆ ಜೊತೆಗೆ ಐಸ್ ಕ್ರೀಂ ತಿನ್ನುವ ವಿಚಾರವನ್ನು ಅಷ್ಟೇ. ಪಾರ್ಕ್ ಒಳಗೆ ಕರೆದುಕೊಂಡ ಬಂದ ಜಯಂತ್ ಸಖತ್ತಾಗಿರುವ ಐಸ್ ಕ್ರೀಂ ಪಾರ್ಲರ್ ಮುಂದೆ ನಿಲ್ಲಿಸಿದ್ದಾನೆ. ಈ ಸಮಯದಲ್ಲಿ ಮಳೆ ಬಂದರೆ ಹೇಗಿರುತ್ತೆ ಅಲ್ವಾ ಎಂದಾಗ ಅದನ್ನು ಬರಿಸಿದ್ದಾನೆ. ಜಾಹ್ನವಿ ಸಂತಸದಿಂದ ಕುಣಿಯಲು ಬಿಟ್ಟಿದ್ದಾನೆ. ಐಸ್ ಕ್ರೀಂ ತಂದು ತಾನೂ ಜೊತೆಗೂಡಿ ಸವಿದಿದ್ದಾನೆ.

ಸೋಲುತ್ತಿದ್ದಾಳೆ ಜಾಹ್ನವಿ
ಜಾಹ್ನವಿಗೆ ಹುಡುಗ ಹೇಗಿರಬೇಕು ಎಂದುಕೊಂಡಿದ್ದಳೋ ಆ ಎಲ್ಲಾ ಗುಣ ಜಯಂತ್‌ನಲ್ಲಿ ಕಾಣಿಸುತ್ತಿದೆ. ಹೀಗಿರುವಾಗ ಜಾಹ್ನವಿ ಲವ್‌ನಲ್ಲಿ ಬೀಳದೇ ಇರುವುದಕ್ಕೆ ಅಸಾಧ್ಯವಾ? ಖಂಡಿತಾ ಇಲ್ಲ. ಅದಾಗಲೇ ಸಮುದ್ರದ ಅಲೆಯ ನಡುವೆಯೇ ಜಾಹ್ನವಿಯ ಮನಸ್ಸು ಜಯಂತ್ ಕಡೆಗೆ ವಾಲಿದೆ. ಅದಕ್ಕೆ ಅಲ್ಲವೇ ಜಯಂತ್ ಕೈ ಜೊತೆಗೆ ತನ್ನ ಕೈಯನ್ನು ಸೇರಿಸಿದ್ದು. ಈಗ ಐಸ್ ಕ್ರೀಂ ಆಸೆಯನ್ನು ಈಡೇರಿಸಿ, ಕೃತಕವಾಗಿ ಮಳೆ ಬರಿಸಿದ ಜಯಂತ್‌ಗೆ ಸೋಲದೇ ಇರುತ್ತಾಳೆಯೇ ಜಾಹ್ನವಿ.
ವಿಶ್ವನ ಕಥೆ ಮುಗಿದಂತೆಯಾ..?
ವಿಶ್ವ ಮೊದಲೇ ಪ್ರೀತಿ ಹೇಳಿಕೊಂಡಿದ್ದರೆ ಏನಾದರೊಂದು ಆಗುತ್ತಿತ್ತೋ ಏನೋ. ಜಾಹ್ನವಿ ಆ ಬಗ್ಗೆ ಯೋಚನೆ ಮಾಡುತ್ತಿದ್ದಳೋ ಏನೋ. ಆದರೆ ವಿಶ್ವ ಮನದ ಪ್ರೀತಿಯನ್ನು ಹೇಳಿಕೊಳ್ಳುವುದಕ್ಕೆ ಹಿಂದೇಟು ಹಾಕಿದ್ದ. ಹೇಳುವ ಸಮಯ ಬರುವಷ್ಟರಲ್ಲಿ ಕಾಲ ಮಿಂಚಿ ಹೋಗಿತ್ತು. ಅದಾಗಲೇ ಜಯಂತ್ ಹೆಣ್ಣು ಕೇಳಿ ಆಗಿತ್ತು. ಹುಚ್ಚನಂತೆ ಪ್ರೀತಿ ಮಾಡುತ್ತಿರುವ ವಿಶ್ವ ಜಾಹ್ನವಿಯಿಂದ ಸಂಪೂರ್ಣವಾಗಿ ದೂರವಾಗುತ್ತಾನಾ? ಜಯಂತ್ ವಿಲನ್ ಆಗಬಹುದು, ವಿಶ್ವ ಮತ್ತು ಜಾಹ್ನವಿ ಮತ್ತೆ ಒಂದಾಗಬಹುದು ಎಂದೇ ಅಂದಾಜಿಸಲಾಗಿತ್ತು. ಆದರೆ ಈಗ ಜಾಹ್ನವಿಗೆ ಸಂಪೂರ್ಣವಾಗಿ ಜಯಂತ್ ಮೇಲೆ ಲವ್ ಆಗುವ ಸಾಧ್ಯತೆಯೇ ಹೆಚ್ಚಿದೆ.


Click it and Unblock the Notifications











