Lakshmi nivasa: ಸಿದ್ದೇಗೌಡ್ರಿಗೆ ಭಾವನಾ ಅಂದ್ರೆ ಪ್ಯಾರ್; ಮಹಿಳಾ ಅಭಿಮಾನಿಗಳಿಗೆ ಸಿದ್ದೇಗೌಡ್ರ ಮೇಲೆ ಕ್ರಶ್!

By ಎಸ್ ಸುಮಂತ್

ಲಕ್ಷ್ಮೀ ನಿವಾಸ ಧಾರಾವಾಹಿ ಕೌಟುಂಬಿಕ ಧಾರಾವಾಹಿ. ಎಲ್ಲರೂ ಕೂತು‌ ನೋಡುವ ಧಾರಾವಾಹಿ. ಕೆಲ ಮೂಢನಂಬಿಕೆಗಳಿಗೆ ಬ್ರೇಕ್ ಹಾಕುವ ಧಾರಾವಾಹಿ, ಸ್ವಾರ್ಥದ ಮಕ್ಕಳು ಹೇಗೆಲ್ಲಾ ಇರ್ತಾರೆ, ತಂದೆ-ತಾಯಿ ಮಕ್ಕಳಿಗೋಸ್ಕರ ಎಷ್ಟೆಲ್ಲಾ ತ್ಯಾಗ ಮಾಡ್ತಾರೆ ಎಂಬುದೆಲ್ಲವನ್ನು ಈ ಧಾರಾವಾಹಿಯಲ್ಲಿ ತೋರಿಸಲಾಗುತ್ತಿದೆ.

ಭಾವನಾಳ ಮದುವೆ ನಿಂತ ಮೇಲೆ, ಮಗುವಿನ ಸಂಪೂರ್ಣ ಜವಾಬ್ದಾರಿಯನ್ನು ಭಾವನಾ ಹೊತ್ತಿದ್ದಾಳೆ. ಮಗುವಿಗಾಗಿಯೇ ಬದುಕುತ್ತಿದ್ದಾಳೆ. ಮನೆಯ ಗಂಡು ಮಕ್ಕಳಿಗೆ ಅದು ಇಷ್ಟವಿಲ್ಲದೆ ಹೋದರೂ ಎಲ್ಲರನ್ನು ಎದುರಿಸಿ ಭಾವನಾ ಬದುಕುತ್ತಿದ್ದಾಳೆ. ಇದರ ನಡುವೆ ಸಿದ್ದೇಗೌಡ್ರಿಗೆ ಭಾವನಾಳ ಮೇಲೆ ಮನಸಾಗಿದೆ. ಆ ಪ್ರೀತಿಯನ್ನ ಅದೇಗೆ ವ್ಯಕ್ತಪಡಿಸುತ್ತಾನೆ ಎಂಬುದು ಮಾತ್ರ ಗೊತ್ತಿಲ್ಲ.

Lakshmi nivasa Kannada serial Written Update on February 5th episode

ಲಕ್ಷ್ಮಕ್ಕನಿಗೆ ಪ್ರಮಾಣ ಮಾಡಿದ ಸಿದ್ದೇಗೌಡ

ಇನ್ನು ಲಕ್ಷ್ಮಕ್ಕನನ್ನು ಕಂಡರೆ ಸಿದ್ದೇಗೌಡನಿಗೆ ಅಭಿಮಾನ ಜಾಸ್ತಿ. ಸಿಕ್ಕಾಗೆಲ್ಲಾ ಆತ್ಮೀಯವಾಗಿಯೇ ಮಾತನಾಡಿಸುತ್ತಾನೆ. ಈಗ ಮತ್ತೆ ದೇವಸ್ಥಾನದಲ್ಲಿ ಸಿಕ್ಕಿದ್ದಾನೆ. ಮಗಳ ಮದುವೆ ಹೇಗೆ ಆಯಿತು ಅಕ್ಕ ಎಂದು ಕೇಳಿದಾಗ, ನಿಂತೋಯ್ತು ಕಣಪ್ಪ ಎಂದಿದ್ದಾರೆ ಲಕ್ಷ್ಮೀ. ಇದನ್ನು ಕೇಳಿಸಿಕೊಂಡ ಸಿದ್ದೇಗೌಡ, ಬೇಸರ ಮಾಡಿಕೊಳ್ಳಬೇಡಿ ಅಕ್ಕ. ದೇವರು ಒಂದು ಕಿತ್ತುಕೊಂಡಿದ್ದಾನೆ ಅಂದ್ರೆ ಅದಕ್ಕಿಂತ ಒಳ್ಳೆಯದ್ದನ್ನೇ ಕೊಡುತ್ತಾನೆ. ನಿಮ್ಮ ಮಗಳ ಮದುವೆ ಖಂಡಿತ ಆಗುತ್ತೆ. ಆ ಮದುವೆಯಲ್ಲಿ ನಾನು ಇದ್ದೇ ಇರುತ್ತೀನಿ ಎಂದು ಹೇಳಿ ಹೋಗಿದ್ದಾನೆ.

ಬಸ್ಸಿನ ಬಳಿ ಸಿಕ್ಕ ಭಾವನಾ

ಸಿದ್ದೇಗೌಡ ಅನ್ಯಾಯವಾದಾಗ ಸುಮ್ಮನೆ ಇರುವ ಗುಣದವನಲ್ಲ. ಕಾಲೇಜು ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯುವುದಕ್ಕೆ ಸಮಯವಾಗಿತ್ತು. ಆದರೆ ಬಸ್ಸಿನವರದ್ದು ದೊಡ್ಡ ಕಿರಿಕಿರಿ. ಅದನ್ನು ತಡೆದು, ವಿದ್ಯಾರ್ಥಿಗಳಿಗೆ ಬಸ್ಸಿನ ವ್ಯವಸ್ಥೆ ಮಾಡಿದ್ದ ಸಿದ್ದೇಗೌಡ. ಈ ಗುದ್ದಾಟದ ನಡುವೆ ಭಾವನಾ ಕಂಡಿದ್ದಾಳೆ. ಹುಡುಗಿಯನ್ನು ಮತ್ತೆ ಕಂಡು ಮೈಮರೆತು ನಿಂತ ಸಿದ್ದೇಗೌಡನ ಮೇಲೆ ಹೂವಿನ ಹೂಮಳೆಯೇ ಸುರಿದಿದೆ. ಭಾವನಾ ಇದ್ಯಾವುದಕ್ಕೂ ಹೆಚ್ಚು ಗಮನ ನೀಡದೆ ಬಸ್ಸು ಹತ್ತಿ, ಹೊರಟಿದ್ದಾಳೆ.

Lakshmi nivasa Kannada serial Written Update on February 5th episode

ಯಾವ ರೀತಿಯಲ್ಲಿ ಮದುವೆಯಾಗಬಹುದು ..?

ಸಿದ್ದೇಗೌಡನಿಗೇನೋ, ಭಾವನಾ ಕನಸಿನ ಹುಡುಗಿ. ಅದಕ್ಕೆ ಬಹಳ ಖುಷಿಯಾಗಿದ್ದಾನೆ, ದೇವರಿಗೂ ಥ್ಯಾಂಕ್ಸ್ ಹೇಳಿದ್ದಾನೆ. ಆದರೆ ಭಾವನಾಗೆ ಸಿದ್ದೇಗೌಡನ ಮೇಲೆ ಪ್ರೀತಿ ಮೂಡುವುದಕ್ಕೆ ಸಾಧ್ಯವಾ...? ಹಾಗೇ ನೋಡಿದರೆ ಸಾಧ್ಯತೆ ತೀರಾ ಕಡಿಮೆ. ಈಗ ಖುಷಿಯ ಜವಾಬ್ದಾರಿ ಬೇರೆ ಹೆಗಲ ಮೇಲಿದೆ. ಶ್ರೀಕಾಂತ್ ಅವರನ್ನು ಮನಸಾರೆ ಒಪ್ಪಿದ್ದಳು ಭಾವನಾ. ನಡುವೆ ಜಾತಕದ ಸಮಸ್ಯೆಯೂ ಇದೆ. ಹೀಗಿರುವಾಗ ಸಿದ್ದೇಗೌಡನ ಮೇಲೆ ಪ್ರೀತಿಯಾಗುವುದು ಕಷ್ಟ. ಅಷ್ಟೇ ಯಾಕೆ, ಸಿದ್ದೇಗೌಡನ ತಾಯಿ ಭಾವನಾಳನ್ನು ಒಪ್ಪುವುದು ಅಷ್ಟು ಸುಲಭವಲ್ಲ. ವಿಧಿ ಬರಹದಲ್ಲಿ ಸಿದ್ದೇಗೌಡನ ಮಡದಿ, ಭಾವನಾಳೆ ಎಂದು ಬರೆದಾಗಿದ್ದರೆ, ದೇವರ ಶಕ್ತಿಯಿಂದಾನೇ ದೇವರ ಸನ್ನಿಧಿಯಲ್ಲೇ ಆಕಸ್ಮಿಕ ಮದುವೆಯಾಗಬಹುದು ಎಂಬ ಊಹೆ ಹೆಚ್ಚಾಗಿದೆ.

ಸಿದ್ದೇಗೌಡನ ಮೇಲೆ ಮಹಿಳಾಭಿಮಾನಿಗಳಿಗೆ ಕ್ರಶ್

ಲಕ್ಷ್ಮಿ ನಿವಾಸ ಕಥೆಯ ಸಿದ್ದೇಗೌಡ ರಫ್ ಅಂಡ್ ಟಫ್ ಆದರೂ ಮನಸ್ಸು ಮಾತ್ರ ಹೂವಿನಂತೆ. ತನ್ನಿಂದ ಯಾರಿಗಾದರೂ ನೋವಾಗಿದೆ ಎಂದು ಗೊತ್ತಾದರೆ ಖಂಡಿತ ಅದನ್ನು ಸಹಿಸುವುದೇ ಇಲ್ಲ. ಅಷ್ಟು ಒಳ್ಳೆಯ ಗುಣಗಳಿರುವ ಸಿದ್ದೇಗೌಡನಿಗೆ ಮಹಿಳಾ ಅಭಿಮಾನಿಗಳು ಜಾಸ್ತಿಯಾಗುತ್ತಿದ್ದಾರೆ. ಧಾರಾವಾಹಿಯಲ್ಲಿ ಸಿದ್ದೇಗೌಡನಿಗೆ ಭಾವನಾ ಮೇಲೆ ಕ್ರಶ್ ಆಗುತ್ತಿದ್ದರೆ, ಹೊರಗೆ ಮಹಿಳೆಯರಿಗೆ ಸಿದ್ದೇಗೌಡನ ಮೇಲೆ ಕ್ರಶ್ ಆಗಿದೆ. ಸೋಷಿಯಲ್ ಮೀಡಿಯಾದಲ್ಲಿ ಹಾಕುವ ಪ್ರೋಮೋಗಳಿಗೆ ಹಾರ್ಟ್ ಎಮೋಜಿ ನೀಡುತ್ತಿದ್ದಾರೆ.

More from Filmibeat

English summary
zee kannada serial Lakshmi nivasa Written Update on February 2nd episode. Here is the details about Siddegowda fell in love with Bhavana.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X