Lakshmi nivasa: 'ಲಕ್ಷ್ಮೀ ನಿವಾಸ' ನೋಡುವವರಿಗೆಲ್ಲಾ ಒಂದೇ ಪ್ರಶ್ನೆ.. ಯಾರಿಗೆ ಯಾರು ಹೀರೋ ಗುರೂ..?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಕುಟುಂಬದ ಆಗು-ಹೋಗು, ಕಷ್ಟ-ಸುಖ ಮಾತ್ರವಲ್ಲ, ಅಲ್ಲೊಂದೆರಡು ಬ್ಯೂಟಿಫುಲ್ ಲವ್ ಸ್ಟೋರಿ ಕೂಡ ಇದೆ. ಈ ಲವ್ ಸ್ಟೋರಿಗಳು ಸಕ್ಸಸ್ ಆಗುವುಕ್ಕೆ ಸಮಯವು ಬೇಕು, ಹೆಚ್ಚಿನ ಕುತೂಹಲವೂ ಹುಟ್ಟಿಕೊಂಡಿದೆ. ಅದಕ್ಕೆ ಸೀರಿಯಲ್ ನಲ್ಲಿ ಆರಂಭದಿಂದಾನೇ ತೆಗೆದುಕೊಳ್ಳುತ್ತಿರುವ ಟ್ವಿಸ್ಟ್‌ಗಳು ಕುತೂಹಲವನ್ನು ಉಂಟು ಮಾಡುತ್ತಿವೆ.
ಲಕ್ಷ್ಮೀ ಹಾಗೂ ಶ್ರೀನಿವಾಸ ದಂಪತಿಗೆ ಐದು ಜನ ಮಕ್ಕಳು. ಇಬ್ಬರು ಗಂಡು ಮಕ್ಕಳು. ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳುವುದಿಲ್ಲ. ಆದರೆ ಅಧಿಕಾರ ಚಲಾಯಿಸುವುದರಲ್ಲಿ, ಕೊಂಕು ಮಾತಾಡುವುದರಲ್ಲಿ ಸದಾ ಮುಂದು. ಮೂವರು ಹೆಣ್ಣು ಮಕ್ಕಳು. ಒಬ್ಬಳಿಗೆ ಮದುವೆಯಾಗಿದೆ. ತಂದೆ-ತಾಯಿ ಬಳಿ ಹಣಕ್ಕಾಗಿಯೇ ಕಣ್ಣು. ಇನ್ನಿಬ್ಬರು ಹೆಣ್ಣು ಮಕ್ಕಳಿದ್ದಾರಲ್ಲ ಅವರದ್ದೇ ಈಗ ಟಾಪ್‌ನಲ್ಲಿ ನಡೆಯುತ್ತಿರುವ ಲವ್ ಸ್ಟೋರಿ. ಅದೇನು..? ನೋಡುಗರು ಯಾಕೆ ರೊಚ್ಚಿಗೆದ್ದಿದ್ದಾರೆ ಅನ್ನೋದನ್ನ ಮುಂದೆ ಓದಿ.

ದೀಪಕ್ ಸುಬ್ರಮಣ್ಯ ಎಂಟ್ರಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಬಳಗ ಮೊದಲೇ ದೊಡ್ಡದಿದೆ. ದೊಡ್ಡ ದೊಡ್ಡ ಕಲಾವಿದರಿದ್ದಾರೆ, ಪವಿತ್ರಾ ಲೋಕೇಶ್ ಹಾಗೂ ರಘು ಮುಖರ್ಜಿಯಂತ ಕಲಾವಿದರು ಹಿಂಗ್ ಬಂದು ಹಂಗೆ ಹೊರಟೆ ಹೋದರು. ಈಗ ಮತ್ತೊಂದು ಹೊಸ ಎಂಟ್ರಿಯಾಗಿದೆ. ಅದುವೆ ದೀಪಕ್ ಸುಬ್ರಮಣ್ಯ. ಈಗಾಗಲೇ ಹಲವು ಧಾರಾವಾಹಿ, ಸಿನಿಮಾಗಳಲ್ಲಿ ನಟಿಸಿರುವ ದೀಪಕ್, ಲಕ್ಷ್ಮೀ ನಿವಾಸಕ್ಕೆ ಹೊಸದಾಗಿ ಸೇರ್ಪಡೆಯಾಗಿದ್ದಾರೆ.
ಹೊಸ ಹುಡುಗನ ಕಂಡು ಜಾಹ್ನವಿ ಶಾಕ್
ಜಾಹ್ನವಿಯ ಕಾಲೇಜಿನಲ್ಲಿ ವಾರ್ಷಿಕೋತ್ಸವದ ಸಂಭ್ರಮ ನಡೆಯುತ್ತಿದೆ. ಇದಕ್ಕೆ ಸ್ಪೆಷಲ್ ಗೆಸ್ಟ್ ಆಗಿ, ಸಕ್ಸಸ್‌ಫುಲ್ ಬಿಸಿನೆಸ್‌ಮನ್ ಒಬ್ಬರನ್ನ ಕರೆಸಿದ್ದಾರೆ. ಫ್ರೆಂಡ್ಸ್ ಜೊತೆಗೆ ಬರುತ್ತಿದ್ದ ಜಾಹ್ನವಿಗೆ ಫ್ರೆಂಡ್ಸ್ ಕೈ ಮಿಸ್ ಆಗಿದೆ, ಬಿಸಿನೆಸ್‌ಮನ್ ಕೈ ಜೊತೆಯಾಗಿದೆ. ಆದರೆ ಆತನ ಬಗ್ಗೆಯೇ ನೋಡದೆಯೇ ಗುಣಗಾನ ಮಾಡುತ್ತಿದ್ದಾಳೆ. 'ಒಂದು ರೇಂಜಿಗೆ ಮುಖ ಚೆನ್ನಾಗಿದೆ. ಅದೇನು ಕಡಿದು ದಬ್ಬಾಕಿದ್ದಾನೆ ಗೊತ್ತಿಲ್ಲ' ಅಂತ ತಿರುಗಿದರೆ ಪೋಸ್ಟರ್‌ನಲ್ಲಿದ್ದ ವ್ಯಕ್ತಿಯೇ ಎದುರಿಗಿದ್ದಾನೆ. ಜಾಹ್ನವಿ ಫುಲ್ ಶಾಕ್ ಆಗಿದ್ದಾಳೆ.

ಕನಸಿನ ಹುಡುಗ ಇವನೇನಾ..?
ಈ ಸಕ್ಸಸ್ ಫುಲ್ ಬಿಸಿನೆಸ್‌ಮನ್ ಬಗ್ಗೆ ಅದಾಗಲೇ ಮೊದಲೇ ತಿಳಿದಿತ್ತು. ಜಾಹ್ನವಿ ಅಂದು ಅಕ್ಕನ ಬಳಿ ಕನಸಿನ ಹುಡುಗನ ಬಗ್ಗೆ ಹೇಳುವಾಗಲೇ ಈ ಬಿಸಿನೆಸ್‌ಮನ್ ಬಗ್ಗೆಯೂ ಸುಳಿವು ಕೊಡಲಾಗಿತ್ತು. ಇದೀಗ ಪೂರ್ತಿಯಾಗಿ ಮುಖ ತೋರಿಸಲಾಗಿದೆ. ಜಾಹ್ನವಿಗೆ ಕಳೆದೋಗುವ ಹುಡುಗ ಎಂಟ್ರಿಯಾಗಿದ್ದಾನೆ.
ಯಾರು-ಯಾರಿಗೆ ಜೋಡಿ ಗುರೂ..?
ಹೊಸ ಹುಡುಗನ ಎಂಟ್ರಿ ಏನೋ ಆಯಿತು. ಜಾಹ್ನವಿ ಲವ್ ಬೀಳುವುದು ಕನ್ಫರ್ಮ್ ಆಯಿತು. ಆದರೆ ಇದು ಪ್ರೇಕ್ಷಕರಿಗೆ ಅದೆಷ್ಟು ಗೊಂದಲ ಸೃಷ್ಟಿ ಮಾಡಿದೆ ಎಂದರೆ ಇರೋದು ಇಬ್ಬರೇ ಹೀರೋಯಿನ್ಸ್. ಆದರೆ ಹೀರೋನೆ ಫಿಕ್ಸ್ ಮಾಡುತ್ತಿಲ್ಲವಲ್ಲ ಎಂಬ ಮಟ್ಟಿಗೆ ತಲೆ ಕೆಡಿಸಿಕೊಂಡಿದ್ದಾರೆ.
ನೋಡುಗರಂತು ಫುಲ್ ಕನ್ಫ್ಯೂಸ್
ಮೊದಲು ಭಾವನಾಗೆ ಶ್ರೀಕಾಂತ್ ಜೋಡಿ ಎಂದುಕೊಂಡಿದ್ದರು. ಅವನು ಸತ್ತ, ಸಿದ್ದೇಗೌಡ ಬಂದ. ಈಗ ಜಾಹ್ನವಿಯನ್ನು ಅವನ ಕ್ಲೋಸ್ ಫ್ರೆಂಡ್ ಲವ್ ಮಾಡುತ್ತಿದ್ದಾನೆ. ಇನ್ನು ಪ್ರೀತಿ ಹೇಳಿಕೊಳ್ಳುವುದಕ್ಕೆ ಸಮಯವಾಗುತ್ತಿಲ್ಲ. ಇದರ ನಡುವೆಯೇ ಇನ್ನೊಬ್ಬನ ಎಂಟ್ರಿಯಾಗಿದೆ. ಹೀಗಾಗಿ ನೋಡುಗರದ್ದು ಒಂದೇ ಪ್ರಶ್ನೆ ಯಾರಿಗೆ..? ಯಾರು ಹೀರೋ ಎಂಬುದು.


Click it and Unblock the Notifications











