Lakshmi nivasa: ಭಾವನಾಳ ಖುಷಿ ಕಿತ್ತುಕೊಂಡ ಸೌಪರ್ಣಿಕಾ; ಸಹಾಯ ಮಾಡಿ ಮನಸ್ಸು ಗೆಲ್ತಾನಾ ಸಿದ್ದೇಗೌಡ..?
ಭಾವನಾ ಮನಸ್ಸಲ್ಲಿ ಬೆಟ್ಟದಷ್ಟು ಆಸೆ ಹುಟ್ಟಿಸಿದ್ದೇ ಶ್ರೀಕಾಂತ್. ಮದುವೆಯೇ ಆಗುವುದಿಲ್ಲ ಎಂಬ ಪರಿಸ್ಥಿತಿಗೆ ತಲುಪಿತ್ತು ಭಾವನಾಳ ಮನಸ್ಥಿತಿ. ಆದರೆ ಯಾವ ಜಾತಕವನ್ನು ತಾನೂ ನಂಬುವುದಿಲ್ಲ ಎಂದು ಪ್ರೂವ್ ಮಾಡಿದ್ದ ಶ್ರೀಕಾಂತ್, ಭಾವನಾಳನ್ನು ಮದುವೆಯಾಗುವುದಕ್ಕೆ ಒಪ್ಪಿದ್ದ. ಎಲ್ಲಾ ತಯಾರಿ ನಡೆದಾಗ ವಿಧಿ, ಶ್ರೀಕಾಂತ್‌ನನ್ನು ಕಿತ್ತುಕೊಂಡಿದೆ.
ನಿಜ ಹೇಳಬೇಕು ಅಂದರೆ ಭಾವನಾಳಿಗೆ ಮದುವೆ ಎಂಬ ವಿಚಾರ ಮೊದಲೇ ಜಿಗುಪ್ಸೆ ಬರಿಸಿತ್ತು. ಆದರೆ ಈಗ ಇನ್ನಷ್ಟು ಬೇಸರ ತರಿಸಿದೆ. ಈ ಬೇಸರದ ನಡುವಲ್ಲೂ ಖುಷಿಯಿಂದ ಕೊಂಚ ಸಮಾಧಾನ ತಂದುಕೊಂಡಿದ್ದಾಳೆ, ಆ ಸಮಯವನ್ನು ಮುಂದೂಡಿದ್ದಾಳೆ. ಆದರೆ ಈಗ ಆ ಖುಷಿಯಿಂದ ಮತ್ತೆ ಹೊಸ ಜೀವನ ಶುರುವಾಗುವ ಸಾಧ್ಯತೆ ಗೋಚರಿಸಿದೆ

ಭಾವನಾಳಿಂದ ನೋವು ಮರೆತಿರುವ ಖುಷಿ
ಮದುವೆ ನಿಂತು ಹೋದ ಮೇಲೆ, ಶ್ರೀಕಾಂತ್-ಜಾನಕಿ ಸತ್ತು ಹೋದ ಮೇಲೆ ಭಾವನಾ ತನ್ನ ಇಡೀ ಖುಷಿಗಾಗಿ ಅಂತ ತೀರ್ಮಾನ ಮಾಡಿದ್ದಾಳೆ. ಅವಳಿಗಾಗಿಯೇ ಬದುಕುತ್ತಿದ್ದಾಳೆ. ಅವಳ ಕಷ್ಟ-ಸುಖಗಳನ್ನು ನೋಡುತ್ತಾ, ಅವಳ ಖುಷಿಗಾಗಿ ಕಾಲ ಕಳೆಯುತ್ತಿದ್ದಾಳೆ. ಮನೆಯವರಿಗೆಲ್ಲಾ ಈಗಾಗಲೇ ತನ್ನ ಜೀವನ ಖುಷಿಗಾಗಿ ಅಂತ ಹೇಳಿ ಆಗಿದೆ. ಮನೆಯವರಲ್ಲಿ ಒಂದಷ್ಟು ಜನಕ್ಕೆ ಈ ನಿರ್ಧಾರ ಇಷ್ಟವಾಗದೆ ಇದ್ದರು, ಒಪ್ಪಿಕೊಳ್ಳಲೇಬೇಕಾದ ಪರಿಸ್ಥಿತಿ ಇದೆ. ಅಪ್ಪನ ಹಣದಲ್ಲಿಯೇ ಗಂಡು ಮಕ್ಕಳು ಬದುಕುತ್ತಿರುವಾಗ ಇನ್ನೆಲ್ಲಿ, ಮಾತನಾಡುವುದು. ಅದಕ್ಕೆ ಭಾವನಾಳ ಮಾತಿಗೆ ಒಪ್ಪಿಗೆ ಸಿಕ್ಕಿದೆ.
ಭಾವನಾಳಿಂದ ಮಗು ಕಸಿದುಕೊಳ್ಳುವ ಯತ್ನ
ಸೌಪಾರ್ಣಿಕ ತನ್ನ ತಾಯಿ ಹಾಗೂ ಅಣ್ಣ ಸತ್ತಾಗ ತುಂಬಾ ನೋವು ಪಟ್ಟಿದ್ದಾಳೆ. ಆ ಸಾವಿಗೆ ತನ್ನ ಗಂಡನೇ ಕಾರಣ ಎಂಬುದು ಮಾತ್ರ ಗೊತ್ತಿಲ್ಲ. ಮೊದಲೇ ಭಾವನಾಳನ್ನು ಕಂಡರೆ ಆಗುವುದಿಲ್ಲ. ಈಗ ಖುಷಿ ಅವಳ ಮನೆಯಲ್ಲಿಯೇ ಬೆಳೆಯುವುದು ಕೊಂಚವೂ ಇಷ್ಟ ಇಲ್ಲ ಹೀಗಾಗಿ ಪೊಲೀಸ್ ಠಾಣೆಯವರೆಗೂ ಬಂದು ನಿಂತಿದ್ದಾಳೆ. ಭಾವನಾ ಹಾಗೂ ಮಗುವನ್ನು ಪೊಲೀಸ್ ಠಾಣೆಗೆ ಕರೆಸಿಕೊಂಡ ಸೌಪರ್ಣಿಕ, ಭಾವನಾಳ ಅಪ್ಪ-ಅಮ್ಮನ ಮೇಲೂ ದ್ವೇಷದ ಮಾತುಗಳನ್ನಾಡಿದ್ದಾಳೆ.

ಪೊಲೀಸ್ ಠಾಣೆಯಲ್ಲಿ ಹೈಡ್ರಾಮಾ
ಇನ್ನು ಪೊಲೀಸ್ ಠಾಣೆಯಲ್ಲಿ ಅಣ್ಣನ ಮಗುವನ್ನು ಆಸ್ತಿಗಾಗಿ ಭಾವನ ಇರಿಸಿಕೊಂಡಿದ್ದಾಳೆ ಎಂದು ಸುಳ್ಳು ಹೇಳಿದ್ದಾಳೆ. ಇದಕ್ಕೆ ಪೊಲೀಸ್ ಕೂಡ ಸಪೋರ್ಟ್ ಮಾಡಿದ್ದು, ಅವರ ಮಗುವನ್ನು ಅವರಿಗೆ ಕೊಡಿ ಎಂದು ಭಾವನಾಳ ಅಪ್ಪ-ಅಮ್ಮನನ್ನೇ ಸ್ಟೇಷನ್ ಒಳಗೆ ಹಾಕಿದ್ದಾರೆ. ಮಗು ಕೊಡದೇ ಹೋದರೆ ನಿನ್ನನ್ನು ಹಾಕುತ್ತೀನಿ ಅಂತ ಹೆದರಿಸಿ, ಕಡೆಗೂ ಮಗುವನ್ನು ಸೌಪರ್ಣಿಕಾಗೆ ಒಪ್ಪಿಸುವಂತೆ ಮಾಡಿದ್ದಾರಡ. ಖುಷಿ ಹಠ ಮಾಡಿದರೂ ಪೊಲೀಸರು ಕ್ಯಾರೆ ಎಂದಿಲ್ಲ. ನೀನು ಅತ್ತೆಯ ಜೊತೆಗೆ ಹೋಗು ಎಂದಿದ್ದಾರೆ.
ಸಿದ್ದೇಗೌಡನಿಂದ ಸಹಾಯ..?
ಯಾರಿಗೆ ಅನ್ಯಾಯವಾದಾಗ ಸಿದ್ದೇಗೌಡ ಅಲ್ಲಿ ಸಿಡಿದು ನಿಲ್ಲುತ್ತಾನೆ. ಈಗ ತಾನೂ ಪ್ರೀತಿಸುತ್ತಿರುವ ಹುಡುಗಿಗೆ ಅನ್ಯಾಯವಾಗಿದೆ ಎಂದರೆ ಸುಮ್ಮನೆ ಇರುತ್ತಾನಾ. ಮೊದಲೇ ಭಾವನಾಳಿಗೆ ಖುಷಿ ಎಂದರೆ ಪ್ರಾಣ. ಸಿದ್ದೇಗೌಡ, ಪೊಲೀಸ್ ಠಾಣೆಯ ಕಡೆಗೆ ಬಂದು, ಭಾವನಾಳ ಸಮಸ್ಯೆಯನ್ನು ಬಗೆಹರಿಸುವ ಎಲ್ಲಾ ಸಾಧ್ಯತೆಯೂ ಇದೆ. ಮೊದಲೇ ಲಕ್ಷ್ಮಕ್ಕನ ಮಗಳು, ತನ್ನ ಕನಸಿನ ರಾಣಿಗೆ ನೋವಾದಾಗ ಪ್ರೀತಿಸುವ ಹೃದಯಕ್ಕೆ ತಿಳಿಯದೆ ಇರುತ್ತದೆಯೇ. ಇನ್ನು ಇಬ್ಬರ ಪರಿಚಯ ಬೇರೆ ಆಗಿಲ್ಲ. ಈ ಮೂಲಕ ಮುಖಾಮುಖಿಯಾಗುವ ಸಾಧ್ಯತೆಯೂ ಹೆಚ್ಚಾಗಿಯೇ ಇದೆ. ಭಾವನಾಳ ಮೇಲಿನ ಪ್ರೀತಿಗೆ ಇದೊಂದು ಸಮಸ್ಯೆ ಸೇತುವೆಯೂ ಆಗಬಹುದು.


Click it and Unblock the Notifications











