Lakshmi Nivasa: ಅಯ್ಯಯ್ಯೋ ಜಯಂತನ ಚಿನ್ನುಮರಿ ಕಾಣ್ತಿಲ್ಲ; ಹಕ್ಕಿ ಹಾರುತ್ತಿದೆ ನೋಡ್ರೋ!!

By ಎಸ್ ಸುಮಂತ್

ಜಯಂತ್ ಚಿನ್ನುಮರಿ ಮನೆ ಬಿಟ್ಟು ಎಲ್ಲಿಯೂ ಹೋಗಬಾರದು. ಮನೆಯೊಳಗಿನ ರೂಮುಗಳು, ಅಡುಗೆ ಮನೆಯೇ ಪ್ರಪಂಚವಾಗಿರಬೇಕು. ತವರು ಮನೆಗೂ ಹೋಗಬಾರದು. ಇದು ಜಯಂತನ ಮಹದಾಸೆ. ತನ್ನ ಆಸೆಯಂತೆಯೇ ಜಾಹ್ನವಿಯನ್ನು ಮನೆಯೊಳಗೆ ಬಂಧಿಸಿದ್ದಾನೆ. ಯಾರನ್ನು ಸಂಪರ್ಕಿಸಬಾರದೆಂದು ನೆಟ್ವರ್ಕ್ ಕಟ್ ಮಾಡಿದ್ದಾನೆ. ಈ ಬೆಳವಣಿಗೆಗಳು ಜಾಹ್ನವಿಗೆ ಪಂಜರದ ಗಿಳಿಯ ಫೀಲ್ ಕೊಡುತ್ತಿದೆ. ಅದಕ್ಕೆ ಈಗ ಸಿಕ್ಕಿದ್ದೆ ಚಾನ್ಸ್ ಅಂತ ಹಾರಿ ಹೋಗಿದೆ.

ಜಯಂತ್ ಏನು ಆಗಬಾರದು ಎಂದು ಭದ್ರ ಮಾಡಿಟ್ಟಿದ್ದನೋ ಅದೇ ಆಗಿದೆ. ಈಗ ಸರಿ ಮಾಡುವುದಕ್ಕೆ ದಾರಿಗಳೇ ಇಲ್ಲ. ಹಿತ್ತಿಲಿನ ಬಾಗಿಲನ್ನು ಭದ್ರ ಮಾಡಿದರು ಜಾಹ್ನವಿಯ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ. ಜಾಹ್ನವಿಯ ಅನುಮಾನಕ್ಕೆ ಜಯಂತ್ ಕಾರಣೀಭೂತನಾಗುತ್ತಾನೆ. ಮುಂದೆ ಏನು ಮಾಡಬಹುದು ಎಂಬುದೇ ಕುತೂಹಲವಾಗಿದೆ.

Lakshmi nivasa kannada serial Written Update on June 3rd episode

ಬಾಗಿಲು ಕಂಡೊಡನೆ ಖುಷಿಯೋ ಖುಷಿ

ಜಾಹ್ನವಿಗೆ ಮನೆಯಲ್ಲಿದ್ದು ಇದ್ದು ತಿಕ್ಕಲು ಒಂದು ಹಿಡಿಯುವುದು ಬಾಕಿ ಇದೆ. ಆ ಒಂಟಿತನದ ಪರಿಸ್ಥಿತಿಯನ್ನು ಅದಾಗಲೇ ಜಯಂತ್ ಬಳಿ ಹೇಳಿಕೊಂಡಿದ್ದಾಳೆ. ತುಂಬು ಕುಟುಂಬದಲ್ಲಿ ಬೆಳೆದವಳು. ಒಂದು ನಿಮಿಷ ನಾನು ಮಾತನಾಡದೆ ಇದ್ದರೆ ಮನೆಯಲ್ಲಿ ಎಲ್ಲರೂ ಬಂದು ಮಾತನಾಡಿಸುತ್ತಿದ್ದರು. ಇಲ್ಲಿ ಯಾರಿದ್ದಾರೆ ಮಾತನಾಡುವುದಕ್ಕೆ. ಇದು ನನ್ನ ಮನೆ ಅನ್ನೋ ಭಾವನೆನೇ ಬರುತ್ತಿಲ್ಲ ಎಂದಿದ್ದಳು. ಈಗಲೂ ಅದೇ ಬೇಸರ ಅವಳಿಗೆ. ಸೆಕ್ಯೂರಿಟಿಯನ್ನ ಕರೆದರು ಕಿವುಡನಂತೆ ನಿಂತಿದ್ದ. ಮನೆಯೆಲ್ಲಾ ಹುಡುಕಾಡಿದಾಗಲೇ ಹಿತ್ತಿಲಿನ ಬಾಗಿಲು ಕಂಡಿದೆ.

ಮಾನೆಯಲ್ಲಿ ಜಾಹ್ನವಿ ಕಾಣದೆ ಕಂಗಾಲು

ಜಾಹ್ನವಿ ಏನು ಮಾಡುತ್ತಿದ್ದಾಳೆಂದು ನೋಡುವುದೇ ಜಯಂತ್ ಕೆಲಸ. ಈಗ ತನ್ನ ಚಿನ್ನುಮರಿ ಏನು ಮಾಡ್ತಾ ಇದೆ ಅಂತ ನೋಡುವುದಕ್ಕೆ ಸಿಸಿಟಿವಿ ಚೆಕ್ ಮಾಡಿದ್ದಾನೆ. ಅಲ್ಲಿ ಚಿನ್ನುಮರಿ ಎಲ್ಲಿಯೂ ಕಂಡಿಲ್ಲ. ಒಂದು ಕ್ಷಣ ಗಾಬರಿಯಾಗಿದ್ದಾನೆ. ವಾಶ್ ರೂಮಿಗೆ ಹೋಗಿರಬಹುದೆಂದು ಸಮಾಧಾನ ಮಾಡಿಕೊಂಡರು, ಸಿಸಿಟಿವಿಯನ್ನು ಸ್ವಲ್ಪ ಹಿಂದೆ ಓಡಿಸಿ ನೋಡಿದಾಗ ಅಕ್ಷರಶಃ ಗಾಬರಿಯಾಗುತ್ತಾನೆ, ಎಂಥ ತಪ್ಪು ಮಾಡಿದೆ ಎಂದು ಕೊರಗುತ್ತಾನೆ.

ಜಾಹ್ನವಿ ಜಸ್ಟ್ ಮಿಸ್

ಜಾಹ್ನವಿ ಹಿತ್ತಲ ಬಾಗಿಲಿನಿಂದ ಹೋಗಿರುವುದಂತು ಕನ್ಫರ್ಮ್ ಆಯ್ತು. ಏನು ಆಗಬಾರದು ಅಂದುಕೊಂಡಿದ್ದನೋ ಅದೇ ಆಯಿತು. ಜಾಹ್ನವಿಗೆ ಹೊರಗಿನ ಪ್ರಪಂಚದ ಸಂಪರ್ಜವಿದ್ದರೆ ನನ್ನ ಮೇಲೆ ಕಾಳಜಿ ಇರಲ್ಲ, ಪ್ರೀತಿ ಬರಲ್ಲ ಅನ್ನೋ ಭಯ ಅವನಲ್ಲಿ ಕಾಡಿದೆ. ಬಹಳ ದೂರ ಅಂತೂ ಎಲ್ಲೂ ಹೋಗಿರಲ್ಲ. ಮನೆಯ ಸುತ್ತಮುತ್ತಲೇ ಓಡಾಡುತ್ತಿರುತ್ತಾಳೆ ಎಂದು ಮನೆಯ ಬಳಿ ಹೋಗುತ್ತಾನೆ. ಅವಳನ್ನು ಹುಡುಕುತ್ತಾನೆ. ಆದರೆ ಸಿಗುವುದಿಲ್ಲ. ಜಾಹ್ನವಿ ಮೊಬೈಲ್ ಕೂಡ ಸ್ವಿಚ್ಡ್ ಆಫ್ ಆಗುತ್ತೆ. ಜಯಂತ್ ಮುಂದೆಯೇ ಪಾಸ್ ಆದರೂ ಕಣ್ಣಿಗೆ ಕಾಣಲ್ಲ.

Lakshmi nivasa kannada serial Written Update on June 3rd episode

ಜಯಂತ್ ಶಿಕ್ಷೆಗೆ ಬೆದರಿದ ವೀಕ್ಷಕರು

ಜಾಹ್ನವಿ ಈ ರೀತಿ ಪಂಜರದಿಂದ ಹಕ್ಕಿ ಹಾರಿದಂತೆ ಹಾರಿ ಹೋಗಿದ್ದು ವೀಕ್ಷಕರಿಗೆ ಭಯವಾಗಿದೆ. ಜಯಂತ್‌ನ ವರ್ತನೆ ಎಲ್ಲರಿಗೂ ತಿಳಿದಿದೆ. ಹೀಗಾಗಿ ಜಾಹ್ನವಿಗೆ ಏನು ಮಾಡುತ್ತಾನೋ ಎಂಬ ಭಯ. ಸ್ವಲ್ಪ ತಪ್ಪು ಕಂಡರು ಶಿಕ್ಷೆ ನೀಡುವ ಜಯಂತ್ ಈ ಬಾರಿ ಅದ್ಯಾವ ಥರದ ಶಿಕ್ಷೆ ನೀಡುತ್ತಾನೋ ಎಂಬ ಭಯ. ಹಕ್ಕಿಯಂತೆ ಹಾರಾಡಿದ ಜಾಹ್ನವಿಗೆ ರೆಕ್ಕೆ ಕಟ್ಟು ಮಾಡಿಬಿಡುತ್ತಾನೋ ಏನೋ. ಆ ಭಯದಲ್ಲಿಯೇ ವೀಕ್ಷಕರು ಕಮೆಂಟ್ ಮೂಲಕ ಕಾಳಜಿ ತೋರುತ್ತಿದ್ದಾರೆ.

More from Filmibeat

English summary
Zee kannada serial Lakshmi nivasa today episode. Here is the details about Jahnavi went out from the back door;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X