Lakshmi Nivasa:ಮದ್ವೆ ಇಷ್ಟ ಇಲ್ಲ ಅಂತ ಹೇಳಿ ಗೌಡ್ರನ್ನ ಯಾಮಾರಿಸ್ತಿದ್ದಾಳಾ ಪೂರ್ವಿ?ಸಿದ್ದೇಗೌಡ್ರಿಗೆ ಎಚ್ಚರಿಕೆ ಕೊಟ್ಟಿದ್ಯಾಕೆ?
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಸಿದ್ದೇಗೌಡ್ರು ಅಂದ್ರೆ ಎಲ್ಲರಿಗೂ ಪ್ರೀತಿ. ಅವರ ಮಾತು, ಅವರ ನಡವಳಿಕೆ, ಅವರ ಒಳ್ಳೆಯತನ, ಅವರ ನಗಿಸುವ ಗುಣ ಎಲ್ಲವೂ ಇಷ್ಟ. ಅದರಲ್ಲೂ ಜವರೇಗೌಡರ ಮಗನಾಗಿರುವ ಗತ್ತಿಗೆ ಅದೆಷ್ಟು ಹೆಣ್ಣು ಮಕ್ಕಳು ಅವರಿಂದೆ ಬೀಳುತ್ತಾರೋ ಏನೋ. ಆದರೆ ಸಿದ್ದೇಗೌಡ್ರು ಮಾತ್ರ ಇಷ್ಟ ಪಡೋದು ಭಾವನಾಳನ್ನು ಮಾತ್ರ. ಆದರೆ ಏನು ಮಾಡೋದು ಭಾವನಾಗೆ ಪ್ರೀತಿ ಹೇಳುವಷ್ಟು ಧೈರ್ಯ ಸಿದ್ದೇಗೌಡ್ರಿಗೆ ಇಲ್ವಲ್ಲ.
ಅತ್ತ ಇನ್ನು ಪ್ರೀತಿ ಹೇಳಿಕೊಂಡಿಲ್ಲ. ಇತ್ತ ಮನೆಗೆ ಸೊಸೆ ಬರಬೇಕೆಂಬ ಆಸೆ ನಿಂತಿಲ್ಲ. ಹುಡುಕಿ, ತಡಕಾಡಿ ಕಡೆಗೂ ಸಿದ್ದೇಗೌಡ್ರಿಗೆ ಪೂರ್ವಿನೆ ಬೆಸ್ಟ್ ಜೋಡಿ ಎನಿಸಿ ಮನೆಯವರೆಲ್ಲ ಒಪ್ಪಿ, ಆಶೀರ್ವಾದ ಮಾಡಿ, ನಿಶ್ವಿತಾರ್ಥವನ್ನು ಮುಗಿಸಿ ಬಿಟ್ಟಿದ್ದಾರೆ. ಆದರೆ ಈಗ ಆ ಮದುವೆ ಮುರಿದುಕೊಳ್ಳುವುದು ಹೇಗೆ ಎಂದು ಗೌಡ್ರು ಪ್ಲ್ಯಾನ್ ಮಾಡ್ತಾ ಇದಾರೆ.

ತಂದೆಯ ಬಳಿ ಒಪ್ಪಿಗೆ ನೀಡಿದ್ದ ಪೂರ್ವಿ
ಸಿದ್ದೇಗೌಡ್ರ ಮನೆಯವರು ಹೆಣ್ಣು ಕೇಳುವುದಕ್ಕೆ ಬಂದಾಗ ಪೂತ್ವಿ ಆರಂಭದಲ್ಲಿ ಒಪ್ಪಿರಲಿಲ್ಲ. ಆಮೇಲೆ ಅಪ್ಪ ಅಮ್ಮನ ಮಾತಿಗೆ ಒಪ್ಪಿದಳು. ಎಂಗೇಜ್ಮೆಂಟ್ ಗೆ ಕೂಡ ಖುಷಿಯಾಗಿಯೇ ಬಂದಳು. ಆದರೆ ಸಿದ್ದೇಗೌಡ್ರ ಬಳಿ ನನಗೂ ಇದು ಗೊತ್ತಿರಲಿಲ್ಲ ಅಂತ ಸುಳ್ಳು ಹೇಳಿದಳು.
ಇಷ್ಟವಿಲ್ಲ ಎಂದ ಪೂರ್ವಿ
ಎಂಗೇಜ್ಮೆಂಟ್ ಆದ ಮೇಲೆ ಸಿದ್ದೇಗೌಡ್ರು ತುಂಬಾ ಟೆನ್ಶನ್ ನಲ್ಲಿದ್ದರು. ಏನು ಮಾಡುವುದು ಎಂದು ತಿಳಿಯದೇ ಕಂಗಲಾಗಿ ನಿಂತಿದ್ದಾಗ ಪೂರ್ವಿಯ ಕಾಲ್ ಬಂತು. ಆಗ ಕೋಪದಲ್ಲಿಯೇ ಎಲ್ಲರೂ ನಂಗೆ ಮೋಸ ಮಾಡಿಬಿಟ್ರಲ್ಲ ಎಂದು ಬೈದಾಗ, ಪೂರ್ವಿ ಕೂಡ ನಂಗೂ ಈ ಮದುವೆ ಇಷ್ಟವಿಲ್ಲ. ಏನಾದರೂ ಪ್ಲ್ಯಾನ್ ಮಾಡೋಣ. ಮನೆಯವರ ಒತ್ತಾಯಕ್ಕೆ ಆಯ್ತು ಎಂದಿದ್ದಾಳೆ. ಇದನ್ನು ಕೇಳಿದ ಸಿದ್ದೇಗೌಡ್ರು ಸಂತಸದಿಂದ ಕುಣಿದಾಡಿದ್ದಾರ
ಪೂರ್ವಿಯನ್ನು ಭೇಟಿಯಾದ ಗೌಡ್ರು
ಪೂರ್ವಿ ಒಮ್ಮೆ ಭೇಟಿ ಮಾಡಿ, ಏನು ಮಾಡೋದು ಎಂಬುದನ್ನು ಪ್ಲ್ಯಾನ್ ಮಾಡೋಣಾ ಎಂದು ಕೇಳುತ್ತಾಕಲೆ. ಅದಕ್ಕೆ ಓಕೆ ಎಂದು ಸಂತಸದಿಂದಾನೇ ಒಪ್ಪಿಕೊಂಡು, ಒಂದು ಜಾಗದಲ್ಲಿ ಇಬ್ಬರು ಸೇರುತ್ತಾರೆ. ಕೈಕುಲುಕಿ ನಗುತ್ತಾ ಮಾತನಾಡುವಾಗಲೇ, ಪೂರ್ವಿ ತಂದೆ ಮುನಿಸ್ವಾಮಿ ಅವರ ಸ್ನೇಹಿತ ಫೋಟೋ ತೆಗೆಯುತ್ತಾನೆ. ಆ ಫೋಟೋಗಳನ್ನು ಮುನಿಸ್ವಾಮಿಗೂ ಕಳುಹಿಸಿ, ನಿಮ್ಮ ಅಳಿಯ ಮಗಳ ಅನ್ಯೋನ್ಯತೆ ನೋಡಿ ಎಂದು ಹೇಳಿದ್ದಾನೆ.
ಗೌಡ್ರೇ ಹುಷಾರು ಎಂದ ವೀಕ್ಷಕರು
ಗೌಡ್ರು ಏನೋ ಪ್ಲ್ಯಾನ್ ಮಾಡಲು ಹೋಗಿ ಇನ್ನು ಹೇಗೋ ತಗಲಾಕಿಕೊಳ್ಳುವ ಸಾಧ್ಯತೆ ಜಾಸ್ತಿ ಇದೆ. ಮೊದಲೇ ಇದು ಮನೆಯವರಿಗೂ ಸಂಬಂಧ ಪಟ್ಟ ವಿಚಾರವಾಗಿದೆ. ಮನೆಯವರಿಗೆ ನೋವು ಕೊಡದಂತೆ ನೋಡಿಕೊಳ್ಳಬೇಕಿದೆ. ಹೀಗಾಗಿ ಇದನ್ನು ಸೂಕ್ಷ್ಮವಾಗಿ ನಿರ್ಧಾರ ಮಾಡಲು ಪೂರ್ವಿ ಜೊತೆಗೆ ಕೈ ಜೋಡಿಸಿದ್ದಾರೆ. ಇದ್ಯಾಕೋ ವೀಕ್ಷಕರಿಗೆ ಸರಿ ಕಾಣುತ್ತಿಲ್ಲ. ಪೂರ್ವಿಯ ನಡವಳಿಕೆಯೂ ಸರಿ ಎನಿಸುತ್ತಿಲ್ಲ. ಗೌಡ್ರ ಮುಗ್ಧತೆಯನ್ನು ಬಳಸಿಕೊಳ್ಳುವಂತೆ ಫೀಲ್ ಆಗಿದೆ. ಅದಕ್ಕೆ ಸಿದ್ದೇಗೌಡ್ರಿಗೆ ಅವರ ಅಭಿಮಾನಿಗಳೆಲ್ಲ ಸೇರಿ, ಗೌಡ್ರೇ ಪೂರ್ವಿ ಡಬ್ಬಲ್ ಗೇಮ್ ಆಡ್ತಾ ಇದಾಳೆ. ಅವಳ ಮಾತನ್ನು ನಂಬಬೇಡಿ. ಅವಳ್ಯಾಕೋ ನಿಮ್ಮನ್ನೇ ಸಿಕ್ಕಿ ಹಾಕಿಸುತ್ತಾಳೆ. ಅವಳನ್ನ ನಂಬಿದ್ರೆ ಖಂಡಿತ ನಿಮಗೆ ಸಂಕಷ್ಟ. ಅವಳೇ ನಿಮ್ಮ ಜೀವನಕ್ಕೆ ವಿಲನ್. ಹುಷಾರಾಗಿ ಇರಿ' ಅಂತ ಎಚ್ಚರಿಕೆ ನೀಡಿದ್ದಾರೆ.


Click it and Unblock the Notifications











