Lakshminivasa: ಜಾಹ್ನವಿ ಇಷ್ಟೊಂದು ದಡ್ಡಿನಾ? ಫೋನ್ ಕನೆಕ್ಟ್ ಕನ್‌ಫ್ಯೂಷನ್ ಯಾಕೆ, ಯೋಚ್ನೆ ಮಾಡು ಚಿನ್ನುಮರಿ
ಸೀರಿಯಲ್ ಆರ್ಟಿಸ್ಟ್‌ಗಳು ಎಷ್ಟೇ ಬುದ್ದಿವಂತರಾದರೂ ನಿರ್ದೇಶಕರ ಕೈಗೊಂಬೆಯೇ ಸರಿ. ಅವರು ಬರೆದ ಕಥೆಯಲ್ಲಿ ಪಾತ್ರ ದಡ್ಡಿಯಾಗಿದ್ರೆ ದಡ್ಡಿ, ಬುದ್ದಿವಂತೆಯಾಗಿದ್ರೆ ಬುದ್ದಿವಂತೆ. ಆ ರೀತಿಯೆ ತೋರಿಸುತ್ತಾರೆ. ಅದರೆ ಹೊರಗೆ ಕೂತು ನೋಡುವವರಿಗೆ ಇದು ಅತ್ಯಾಶ್ಚರ್ಯವಾಗುತ್ತೆ. ತಮಗೆ ತಾವೇ ಹೇಳಿಕೊಳ್ಳುತ್ತಾ ಇರುತ್ತಾರೆ. ಛೇ ಜಾಹ್ನವಿ ನೀನು ಹಿಂಗ್ಯಾಕೆ ಆದೆ ಅಂತಿರುತ್ತಾರೆ. ಆದರೆ ಅದು ಜಾಹ್ನವಿ ಮಾಡೋದಲ್ಲ ನಿರ್ದೇಶಕರು ಮಾಡೋದು.
ಧಾರಾವಾಹಿಗೆ ಜನ ತುಂಬಾನೇ ಕನೆಕ್ಟ್ ಆಗಿದ್ದಾರೆ. ಸಿಹಿ ಇರಲಿ ಕಹಿ ಘಟನೆ ಇರಲಿ. ಏನೋ ತಮ್ಮ ಅಕ್ಕಪಕ್ಕದಲ್ಲಿ ನಡೆಯುತ್ತಿದೆ ಎಂಬಂತೆ ಫೀಲ್ ಮಾಡಿಕೊಳ್ಳುತ್ತಾರೆ. ಅಷ್ಟೇ ಯಾಕೆ ನಾವೂ ಹೇಳಿದ ಮಾತು ಅವರಿಗೆ ಕೇಳಿಸಿಯೇ ಬಿಡುತ್ತೆ ಎಂಬಂತೆ ಟಿವಿ ಮುಂದೆ ಕೂತು ಮಾತನಾಡುತ್ತಾ ಇರುತ್ತಾರೆ. ಆದರೆ ಅದ್ಯಾವುದು ನಿರ್ದೇಶಕರ ಕಿವಿಗೆ ಬೀಳುವುದೇ ಇಲ್ಲ.

ಜಯಂತ್‌ಗೆ ಜಾಹ್ನವಿ ಸರ್ಪ್ರೈಸ್
ಜಾಹ್ನವಿ ಒಬ್ಬಳೇ ಮನೆಯಲ್ಲಿದ್ದು ಇದ್ದು ಕೋಪಗೊಳ್ಳುತ್ತಿದ್ದಾಳೆ. ಆದರೆ ಜಯಂತ್‌ಗಾಗಿ ಇದ್ದಕ್ಕಿದ್ದ ಹಾಗೆ ಇಷ್ಟದ ಅಡುಗೆಯನ್ನು ಮಾಡಿ ಬಡಿಸಿದ್ಳು. ಜೊತೆಗೆ ತಾನೇ ತಿನ್ನಿಸಿದಳು. ಆಫೀಸಿಗೆ ಹೊರಡುವಾಗ ತಾನೇ ಸಾಕ್ಸ್ ಹಾಕಿದ್ದಳು. ಇದೆಲ್ಲವೂ ಜಯಂತ್‌ಗೆ ತನ್ನ ಬಾಲ್ಯದ ನೆನಪು ಮರುಕಳುಹಿಸುವಂತೆ ಮಾಡಿತ್ತು.
ಜಾನುಗೆ ಜಯಂತ್ ಸರ್ಪೈಸ್
ಜಾಹ್ನವಿ ಸ್ವಲ್ಪ ಪ್ರೀತಿ ತೋರಿಸಿದರೂ ಜಯಂತ್ ಜಾಸ್ತಿ ಪ್ರೀತಿ ತೋರಿಸುತ್ತಾನೆ ಎಂಬುದಕ್ಕೆ ಪಾರ್ಟಿಯೇ ಉದಾಹರಣೆ. ಮೊನ್ನೆ ಜಾನು ಕೊಟ್ಟ ಸರ್ಪೈಸ್‌ಗೆ ಇಂದು ಜಯಂತ್ ಕೂಡ ಪಾರ್ಟಿ ಕೊಟ್ಟಿದ್ದಾನೆ. ಕೇಕ್ ತಂದು, ಜಾನುಗೆ ಖುಷಿ ನೀಡಿದ್ದಾನೆ. ಇಬ್ಬರು ಕೂತು ಪ್ರೀತಿಯ ಮಾತುಗಳನ್ನು ಆಡಿದ್ದಾರೆ. ಕೇಕ್ ಕಟ್ ಮಾಡಿ ತಿನ್ನಬೇಕು ಎನ್ನುವಷ್ಟರಲ್ಲಿ ಜಾನುಗೆ ಆಗಮನ ಕಾಲ್ ಬಂದಿದೆ.
ಜಾತ್ರೆಗೆ ಕರೆಯಲು ಪೋಷಕರ ಕರೆ
ಜಾನು ತುಂಬು ಕುಟುಂಬದಲ್ಲಿ ಬೆಳೆದ ಹುಡುಗಿ. ಸದಾ ಗಿಜಿಗುಡುತ್ತಿದ್ದ ಮನೆ. ಸೈಲೆಂಟ್ ಆಗಿದ್ದ ದಿನವೇ ಇಲ್ಲ. ಮನೆಯಲ್ಲೂ ಮಾತು ಕಾಲೇಜಲ್ಲೂ ಮಾತು. ಆದರೆ ಮದುವೆಯಾದ ಮೇಲೆ ಅದಕ್ಕೆ ತದ್ವಿರುದ್ದವಾದ ಜೀವನವನ್ನೇ ಕಳೆಯುತ್ತಿದ್ದಾಳೆ. ಈಗ ಅಮ್ಮನ ಕಾಲ್ ಬಂದಿದ್ದಕ್ಕೆ ಫುಲ್ ಖುಷಿಯಾಗಿದ್ದಾಳೆ. ಜಯಂತ್ ಸರ್ಪೈಸ್ ಕೊಟ್ಟಿದ್ದನ್ನು ಲೆಕ್ಕಕ್ಕೆ ಇಟ್ಟುಕೊಳ್ಳದೇ ಅಮ್ಮನ ಜೊತೆಗೆ ಮಾತನಾಡುತ್ತಾ ಕೂತಿದ್ದಾಳೆ.

ಜಯಂತ್ ಫುಲ್ ಗರಂ
ಜಾನು ಖುಷಿ ಕಂಡ ಜಯಂತ್ ಕೋಪಗೊಂಡಿದ್ದಾನೆ. ಹೇಳುವುದಕ್ಕೂ ಆಗದೇ ಬಿಡುವುದಕ್ಕೂ ಆಗದೆ ಹಲ್ಲು ಹಲ್ಲು ಕಡಿಯುತ್ತಿದ್ದಾನೆ. ಆದರೆ ಪ್ರಯೋಜನವೇನು? ಜಾನುಗೆ ಅದು ಅರ್ಥವೇ ಆಗುತ್ತಿಲ್ಲ. ಸುಮ್ಮನೆ ಖುಷಿ ಖುಷಿಯಾಗಿ ಮಾತನಾಡುತ್ತಲೇ ಇದ್ದಾಳೆ.
ಜಾನು ಇಷ್ಟೊಂದು ದಡ್ಡಿ ಯಾಕೆ..?
ಇದನ್ನೆಲ್ಲಾ ನೋಡಿದವರಿಗೆ ಜಾನು ಇಷ್ಟೊಂದು ದಡ್ಡಿ ಯಾಕೆ ಎಂಬ ಪ್ರಶ್ನೆಯೇ ಕಾಡುತ್ತಿದೆ. ಊರ ಜಾತ್ರೆ ಇದೆ ಅಂತ ಕರೆಯುವುದಕ್ಕೆ ಜಾನು ಅಪ್ಪ ಅಮ್ಮ ಕಾಲ್ ಮಾಡಿದ್ದಾರೆ. ಆ ಕಾಲ್ ಕನೆಕ್ಟ್ ಆಗಿದೆ. ಬೆಳಗ್ಗೆಯೆಲ್ಲಾ ನೆಟ್ವರ್ಕ್ ಇರುವುದೇ ಇಲ್ಲ. ಆದರೆ ರಾತ್ರಿಯಾದರೆ ಜಾನು ಮೊಬೈಲ್ ಕನೆಕ್ಟ್ ಆಗಿದೆ. ಅಮ್ಮನ ಜೊತೆಗೆ ಹ್ಯಾಪಿಯಾಗಿ ಮಾತನಾಡಿದ್ದಾಳೆ. ಇದು ಹೇಗೆ ಎಂಬ ಪ್ರಶ್ನೆ ಕೂಡ ಜಾನುಗೆ ಕಾಡುತ್ತಿಲ್ಲ. ಇದು ಪ್ರೇಕ್ಷಕರ ತಲೆಗೆ ಕೊರೆಯುತ್ತಿದೆ. ಜಾನು ಬುದ್ದಿವಂತೆಯಾಗಮ್ಮ ಅಂತಿದ್ದಾರೆ.


Click it and Unblock the Notifications











