Lakshmi nivasa: ಭಾವನಾಗೆ ಹೂ ಮುಡಿಸಿದ ಸಿದ್ದೇಗೌಡ್ರು: ಮದುವೆ ಯಾವಾಗ ಅಂತಿದ್ದಾರೆ ಫ್ಯಾನ್ಸ್

By ಎಸ್ ಸುಮಂತ್

ಲಕ್ಷ್ಮೀ ನಿವಾಸದಲ್ಲಿ ಸದ್ಯಕ್ಕೆ ಮದುವೆ ಸಂಭ್ರಮ ಮನೆ ಮಾಡಿದೆ. ಭಾವನಾಳ ಮದುವೆ ಮುರಿದು ಬಿತ್ತು ಎಂಬ ದುಃಖದಲ್ಲಿರುವಾಗಲೇ ಇನ್ನೊಂದು ಒಳ್ಳೆಯ ಸಂಬಂಧವೇ ಬಂದಿದೆ. ಜಾಹ್ನವಿಗೂ ಅಷ್ಟೇ ಶ್ರೀಮಂತಿಕೆಯ ಸಂಬಂಧ ಹುಡುಕಿಕೊಂಡು ಬಂದಿದೆ. ಹೀಗಾಗಿ ಮನೆಯಲ್ಲಿ ಮತ್ತೆ ಮದುವೆ ಸಂಭ್ರಮ ಕಳೆಗಟ್ಟಿದೆ.

ಜಾಹ್ನವಿ ಕೂಡ ಜಯಂತ್ ಪ್ರೀತಿಯಲ್ಲಿ ಕಳೆದು ಹೋಗಿದ್ದಾಳೆ. ಜಯಂತ್ ತೋರಿಸುವ ಕಾಳಜಿ, ಜಯಂತ್ ಕೊಡುವ ಸಪ್ರೈಸ್‌ಗಳು ಜಾಹ್ನವಿಯನ್ನು ಬೆರಗಾಗಿಸಿದೆ. ಜಯಂತ್ ಮಾತುಗಳಲ್ಲೇ ಕಳೆದು ಹೋಗಿದ್ದಾಳೆ. ಲಕ್ಷ್ಮೀ ನಿವಾಸದಲ್ಲಿ ಎರಡು ಪ್ರೇಮ ಪಕ್ಷಿಗಳು ಹಾರಾಡುತ್ತಿವೆ.

Lakshmi nivasa kannada serial Written Update on march 11th episode

ಲಕ್ಷ್ಮೀ ನಿವಾಸದಲ್ಲಿ ಶಿವರಾತ್ರಿ ಸಂಭ್ರಮ

ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಶಿವರಾತ್ರಿ ಸಂಭ್ರಮ ಜೋರಾಗಿದೆ. ಎಲ್ಲರೂ ಶಿವನ ಆರಾಧನೆಯಲ್ಲಿ ತೊಡಗಿದ್ದಾರೆ. ಲಕ್ಷ್ಮೀ ನಿವಾಸದವರೆಲ್ಲಾ ಒಟ್ಟಾಗಿ ದೇವಸ್ಥಾನಕ್ಕೆ ಬಂದಿದ್ದಾರೆ. ಶಿವನ ಆರಾಧನೆಯನ್ನು ಮಾಡಿದ್ದಾರೆ. ಶಿವರಾತ್ರಿಯಂದು ಮನೆಯಲ್ಲೆಲ್ಲಾ ಪೂಜೆ ಮಾಡಿ, ದೇವಸ್ಥಾನಕ್ಕೆ ಬಂದು, ಜಾಗರಣೆ ಮಾಡಿದ್ದಾರೆ. ಲಕ್ಷ್ಮೀ-ಶ್ರೀನಿವಾಸರೊಟ್ಟಿಗೆ ಕುಟುಂಬ ಸಮೇತ ದೇವಸ್ಥಾನಕ್ಕೆ ಬಂದು ಪೂಜೆ ಸಲ್ಲಿಸಿದ್ದಾರೆ. ಹೊಸದಾಗಿ ಸೇರ್ಪಡೆಯಾಗಿರುವ ಜಯಂತ್ ಕೂಡ ಈ ಬಾರಿ ಕುಟುಂಬದವರ ಜೊತೆಗೆ ಬಂದು ನಿಂತಿದ್ದಾರೆ. ದೇವಸ್ಥಾನದಲ್ಲಿಯೂ ಜಾಹ್ನವಿಯನ್ನೇ ಹೊಗಳುತ್ತಿರುವ ಜಯಂತ್, ಮುಂದೆ ಪ್ರೀತಿ ತೋರುತ್ತಾನೋ, ದುಷ್ಮನ್ ಆಗುತ್ತಾನೋ ತಿಳಿಯದ್ದಾಗಿದೆ‌.

ಜವರೇಗೌಡರ ಮನೆಯಲ್ಲೂ ಶಿವರಾತ್ರಿ

ಅತ್ತ ಜವರೇಗೌಡನ ಮನೆಯಲ್ಲಿ ಶಿವರಾತ್ರಿ ಉತ್ಸವ ನಡೆದಿದೆ. ಅರ್ಚಕರನ್ನು ಕರೆಸಿ, ಶಿವನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ಮನೆ ಮಂದಿಯೆಲ್ಲಾ ಕುಳಿತು ಶಿವನ ಭಕ್ತಿಗೆ ಪಾತ್ರರಾಗಿದ್ದಾರೆ. ಶಾಸ್ತ್ರ - ಸಂಪ್ರದಾಯಗಳ ಜೊತೆಗೆ ಅರ್ಚಕರು ಶಿವನ ಪೂಜೆಯನ್ನು ಮಾಡಿದ್ದಾರೆ. ಪೂಜಾ ವಿಧಿ ವಿಧಾನ ಮುಗಿದ ಬಳಿಕ ಜವರೇಗೌಡರಿಗೆ ದೇವರ ಆಶೀರ್ವಾದ ಬೇಡಿದ ಹೂವನ್ನು ನೀಡಿದ್ದಾರೆ. ಆ ಹೂವನ್ನು ಪತ್ನಿಯ ತಲೆಗೆ ಮುಡಿಸಲು ಹೇಳಿದ್ದಾರೆ. ಈ ಮೂಲಕ ಶಿವ-ಪಾರ್ವತಿಯಂತೆ ಸಂಸಾರ ಮಾಡುವ ಆಶೀರ್ವಾದ ಸಿಕ್ಕಿದ್ದು, ಜವರೇಗೌಡ ತನ್ನ ಪತ್ನಿಗೆ ಹೂ ಮುಡಿಸಿದ್ದಾರೆ.

Lakshmi nivasa kannada serial Written Update on march 11th episode

ಭಾವನಾಗೆ ಹೂ ಮುಡಿಸಿದ ಸಿದ್ದೇಗೌಡ್ರು

ಅದು ದೇವರ ಹೂವನ್ನು ಮುಡಿಸಿದರೆ ಹೆಚ್ಚಿನ ಆಶೀರ್ವಾದ ಮಾಡಿದಂತೆಯೇ ಸರಿ. ಹೀಗಾಗಿ ಸಿದ್ದೇಗೌಡ್ರಿಗೂ ಆಸೆಯಾಗಿದೆ. ಅರ್ಚಕರ ಬಳಿ ಹೋಗಿ ನನಗೂ ಕೂಡ ಆ ಹೂ ಕೊಡಿ, ಇನ್ನೇನು ಮದುವೆಯಾಗಲಿದೆ ಎಂದಿದ್ದಾನೆ. ಅರ್ಚಕರು ದೇವರ ಆಶೀರ್ವಾದ ಪಡೆದು ಹೂವನ್ನು ಕೊಟ್ಟಿದ್ದಾರೆ. ಆ ಹೂವನ್ನು ತೆಗೆದುಕೊಂಡು ಹೋದ ಸಿದ್ದೇಗೌಡ್ರು, ಭಾವನಾಗೆ ಮುಡಿಸುವುದೇ ಒಂದು ಚಾಲೆಂಜಿಂಗ್ ಆಗಿದೆ. ಆದರೂ ಆ ಚಾಲೆಂಜ್ ಅನ್ನು ಸಿದ್ದೇಗೌಡ್ರು ಬಿಟ್ಟಿಲ್ಲ. ಭಾವನಾ ದೇವರ ಧ್ಯಾನದಲ್ಲಿ ಮಗ್ನಳಾಗಿದ್ದಾಗಲೇ ಸಿದ್ದೇಗೌಡ್ರು ಯಶಸ್ವಿಯಾಗಿ ಹೂ ಮುಡಿಸಿ ಬಂದಿದ್ದಾನೆ.

ದೇವಸ್ಥಾನದಲ್ಲಿ ಹಾಡು ಭಜನೆ

ಲಕ್ಷ್ಮೀ ನಿವಾಸ ಮನೆಯಲ್ಲಿ ಜಾಹ್ನವಿಯ ಗಾನ ಚೆಂದ. ಅದು ಈಗಾಗಲೇ ಪ್ರೂವ್ ಆಗಿದೆ. ಜಯಂತ್, ಜಾಹ್ನವಿಯನ್ನು ಲವ್ ಮಾಡಿದ್ದೇ ಹಾಡು ಹಾಡಿದ್ದರಿಂದ. ಈಗ ದೇವಸ್ಥಾನದಲ್ಲೂ ಜಾನೂ ಹಾಡಿದ್ದಾಳೆ. ಶಿವನಿಗಾಗಿ ಹಾಡನ್ನು ಅರ್ಪಿಸಿದ್ದಾಳೆ. ಈ ಹಾಡನ್ನು ಕೇಳಿ ನೆಟ್ಟಿಗರು ಫಿದಾ ಆಗಿದ್ದಾರೆ. ಎಲ್ಲರೂ ಕಮೆಂಟ್ ಮೂಲಕ ಜಾಹ್ನವಿಯನ್ನು ಸಪೋರ್ಟ್ ಮಾಡಿದ್ದಾರೆ. ನಿಮ್ಮ ವಾಯ್ಸ್ ಸೂಪರ್ ಆಗಿದೆ ಜಾಹ್ನವಿ ಎಂದೇ ಕಮೆಂಟ್ಸ್ ಹಾಕುತ್ತಿದ್ದಾರೆ. ಜೊತೆಗೆ ಇದೇ ವಿಡಿಯೋದಲ್ಲಿ ಸಿದ್ದೇಗೌಡ್ರ ಆಕ್ಟಿಂಗ್‌ಗೂ ಬೆಂಕಿ ಕಮೆಂಟ್ಸ್ ಹಾಕುತ್ತಿದ್ದಾರೆ. ಭಾವನಾ ಬೇಗ ಒಪ್ಪಿಕೊಳ್ಳಿ ಎನ್ನುತ್ತಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Lakshmi nivasa shivaratri;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X