Lakshmi nivasa: ಖುಷಿ ಮನೆಗೆ ಬಂದಾಯ್ತು.. ಸಿದ್ದೇಗೌಡ್ರು ಭಾವನಾ ಮನಸ್ಸು ಗೆದ್ದಾಯ್ತು

By ಎಸ್ ಸುಮಂತ್

ಲಕ್ಷ್ಮೀ ನಿವಾಸದಲ್ಲಿ ಭಾವನಾಳ ಬದುಕಿನ ಬಗ್ಗೆಯೇ ಸಾಕಷ್ಟು ಬೇಸರ ಇತ್ತು. ಇಬ್ಬರು ಗಂಡು ಮಕ್ಕಳು ದುಡಿಯುವಷ್ಟು ದೊಡ್ಡವರಾಗಿದ್ದರು ಕೂಡ, ಮನೆಯ ಯಾವೊಂದು ಜವಾಬ್ದಾರಿಯನ್ನು ಇಬ್ಬರು ಒಪ್ಪಿಕೊಂಡಿಲ್ಲ. ತಂದೆಗೆ ವಯಸ್ಸಾಗಿದ್ದರೂ, ಅವರಿಗೆ ಕಷ್ಟವಾಗುತ್ತಿದೆ ಎಂಬುದು ಗೊತ್ತಾದರೂ ಸಹ ತಮ್ಮದೇ ನೆಮ್ಮದಿ, ಸುಖ ಜೀವನವನ್ನು ಎರಡು ಮಕ್ಕಳು ನೋಡಿಕೊಳ್ಳುತ್ತಿದ್ದಾರೆ.

ಯಾವುದೇ ಜವಾಬ್ದಾರಿ ವಹಿಸಿಕೊಳ್ಳದಿದ್ದರೂ ಮನೆಯಲ್ಲಿ ಅಧಿಕಾರ ಚಲಾಯಿಸಲು ನೋಡುತ್ತಾರೆ. ಭಾವನಾ ವಿಚಾರದಲ್ಲೂ ಅದನ್ನೇ ಮಾಡಲು ಹೋಗಿ ತಂದೆಯಿಂದ ಛೀಮಾರಿ‌ ಹಾಕಿಸಿಕೊಂಡು ಸಂತೋಷ್ ಸುಮ್ಮನಾಗಿದ್ದಾನೆ.

Lakshmi nivasa kannada serial Written Update on march 12th episode

ಭಾವನಾ ಸಿಕ್ಕಾಪಟ್ಟೆ ಮೃದು ಸ್ವಭಾವ ಇರುವವಳು. ಯಾರಿಗೂ ಜೋರಾಗಿ ಮಾತನಾಡಲ್ಲ, ಯಾರಿಗೂ ಕೆಟ್ಟದ್ದನ್ನು ಮಾಡಲ್ಲ. ತನಗೆ ಮದುವೆ ಆಗುತ್ತಿಲ್ಲವಲ್ಲ ಎಂಬ ಬೇಸರವೂ ಅವಳಲ್ಲಿ ಇಲ್ಲ. ಜೀವನ ಹೇಗೆ ಬರುತ್ತೋ ಹಾಗೇ ಸುಮ್ಮನೆ ನಡೆದುಕೊಂಡು ಹೊರಟು ಬಿಡುವ ಹುಡುಗಿ. ಆದರೆ ಈಗ ವಿಧಿಯೇ ಅವಳಿಗೆ ಎಲ್ಲವನ್ನು ಕೊಟ್ಟಿದೆ. ತಾನೂ ಬಯಸಿದ ಖುಷಿ ಭಾವನಾಳಿಗೆ ಸಿಕ್ಕಿದೆ.

ಆಸ್ತಿಗಾಗಿ ಖುಷಿಯನ್ನೇ ಬಿಟ್ಟ ಸೌಪರ್ಣಿಕ

ಶ್ರೀಕಾಂತ್ ಸಾಯುವುದಕ್ಕೂ ಮೊದಲೇ ತನ್ನ ಆಸ್ತಿಯ ಬಗ್ಗೆ ವಿಲ್ ಬರೆದಿಟ್ಟಿದ್ದ. ರವಿಯ ಕುತಂತ್ರದಿಂದ ಆಕ್ಸಿಡೆಂಟ್‌ನಲ್ಲಿ ತೀರಿ ಹೋದ. ಈಗ ವಿಲ್ ಓಪನ್ ಮಾಡಿದಾಗ ಭಾವನಾಳಿಗೆ ಎಲ್ಲಾ ಅಧಿಕಾರ ನೀಡಲಾಗಿತ್ತು. ಸಮಾಧಾನವಾಗಿ ಮಾತನಾಡಿ, ಭಾವನಾಳಿಂದ ಎಲ್ಲಾ ಆಸ್ತಿಯನ್ನು ಬರೆಸಿಕೊಳ್ಳುವ ಪ್ರಯತ್ನ ಮಾಡಿದರು. ಭಾವನಾಳಿಗೆ ಖುಷಿ ಎಂದರೆ ಪ್ರಾಣ ಎಂದು ಗೊತ್ತಿದ್ದ ಲಕ್ಷ್ಮೀ, ಆಸ್ತಿ ಕೊಡುತ್ತೀವಿ ಮಗು ಕೊಡಿ ಎಂಬ ಡಿಮ್ಯಾಂಡ್ ಇಟ್ಟಳು. ಆರಂಭದಲ್ಲಿ ಒಪ್ಪದ ಸೌಪರ್ಣಿಕಳ ಮನಸ್ಸು ಕೆಡಿಸಿದ ರವಿ, ಆಸ್ತಿಗಾಗಿ ಖುಷಿಯನ್ನೇ ಬಿಟ್ಟಿದ್ದಾರೆ. ಭಾವನಾ, ಖುಷಿಗಾಗಿ ಇಡೀ ಆಸ್ತಿ ಬಿಟ್ಟು ಬಂದಿದ್ದಾಳೆ.

ಮನೆಗೆ ಬಂದ ಖುಷಿ

ಸೌಪರ್ಣಿಕಗೆ ಆಸ್ತಿಯನ್ನೆಲ್ಲ ಬರೆದುಕೊಟ್ಟು ಖುಷಿಯನ್ನು ಮನೆಗೆ ಕರೆ ತಂದಿದ್ದಾರೆ.‌ ಇಷ್ಟು‌ ದಿನ ಭಾವನಾ ಮುಖದಲ್ಲಿ ಕಳೆದು ಹೋಗಿದ್ದ ನಗು ಇಂದು ಮತ್ತೆ ಮೂಡಿದೆ. ಇದಕ್ಕೆಲ್ಲಾ ಕಾರಣ ಖುಷಿಯ ಹಾಜರಿ. ಮನೆಯಲ್ಲೂ ಖುಷಿಯನ್ನು ಚೆನ್ನಾಗಿ ನೋಡಿಕೊಳ್ಳುವವರು ಸಾಕಷ್ಟು ಜನ ಇದ್ದಾರೆ.

Lakshmi nivasa kannada serial Written Update on march 12th episode

ಸಂತೋಷ್ ಬಾಯಿ ಮುಚ್ಚಿಸಿದ ತಂದೆ

ಖುಷಿ‌ ಮನೆಗೆ ಬಂದಾಕ್ಷಣ ಸಂತೋಷ್ ಕಿರಿಕಿರಿ ತೆಗೆದಿದ್ದಾನೆ. ಆಸ್ತಿಯ ಮೇಲೆ ಸಂತೋಷ್ ಕಣ್ಣು ಹಾಕಿದ್ದ. ಭಾವನಾಳಿಗೆ ಆ ಬಗ್ಗೆ ಸೂಕ್ಷ್ಮವಾಗಿ ತಿಳಿಸಿದ್ದ. ನೀನು ಮನಸ್ಸು‌ ಮಾಡಿದರೆ ಲಕ್ಷ್ಮೀ ನಿವಾಸ ಉದ್ಧಾರ ಆಗುತ್ತದೆ. ಯೋಚನೆ ಮಾಡು ಸಹಿ ಹಾಕಬೇಡ ಎಂದೇ ಹೇಳಿದ್ದ. ಆದರೆ ಅಮ್ಮ-ಮಗಳು ಆಸ್ತಿಗೆ ಆಸೆ ಪಡದೇ ಆ ಮಗುವನ್ನು ಕರೆದುಕೊಂಡು ಬಂದಿದ್ದು ಸಂತೋಷನಿಗೆ ಹಿಡಿಸಲಿಲ್ಲ. ಆದರೆ ಶ್ರೀನಿವಾಸ್, ಕಷ್ಟಕ್ಕೆ ಆಗದ ಗಂಡು ಮಕ್ಕಳಿಗೆ ಸರಿಯಾಗಿಯೇ ಉತ್ತರ ಕೊಟ್ಟು ಭಾವನಾಳ ಪರವಾಗಿ ನಿಂತಿದ್ದಾನೆ.

ಸಿದ್ದೇಗೌಡ್ರಿಗೆ ಥ್ಯಾಂಕ್ಸ್ ಹೇಳಿದ ಭಾವನಾ

ಮನೆಗೆ ಖುಷಿ ಬಂದಾಕ್ಷಣಾ ಭಾವನಾಗೆ ನೆನಪಾಗಿದ್ದೆ ಸಿದ್ದೇಗೌಡ್ರು. ಅಂದು ಖುಷಿಯನ್ನು ಜೋಪಾನ ಮಾಡಿದ್ದರು ಎಂಬ ಋಣ ಅವಳಿಗೆ ಇತ್ತು. ಈಗ ಖುಷಿ ಮನೆಗೆ ಬಂದ ಖುಷಿಯನ್ನು ಹಂಚಿಕೊಳ್ಳಲು ಕಾಲ್ ಮಾಡಿದ್ದಾಳೆ. ಆ ಕಡೆ ಸಿದ್ದೇಗೌಡ್ರಿಗೆ ಮದುವೆಗೆಂದು ಹೆಣ್ಣನ್ನು ಹುಡುಕುತ್ತಿದ್ದರು. ಸಾಕಷ್ಟು ಫೋಟೋಗಳನ್ನು ಸಿದ್ದೇಗೌಡ್ರ ಮುಂದೆ ಇಟ್ಟು ಒಪ್ಪಲು ಹೇಳುತ್ತಿದ್ದಾಗಲೇ ಭಾವನಾಳ ಕಾಲ್ ಬಂದಿದೆ. ಆ ಮಗುವಿನ ತಾಯಿ ನನ್ನುಡುಗಿ ಎಂಬುದು ಇನ್ನು ಸಿದ್ದೇಗೌಡ್ರಿಗೆ ತಿಳಿಯದಾಗಿದೆ.

More from Filmibeat

English summary
Lakshmi nivasa kannada serial today episode. Here is the details about Bhavana called Siddegowda;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X