Lakshmi nivasa: ಜಯಂತ್ ಪ್ರೋಮೋ ಹಾಕಿದ್ರೆ ಸಾಕು ಕಮೆಂಟ್‌ಗಳ ಸುರಿಮಳೆ!

ಲಕ್ಷ್ಮೀ ನಿವಾಸದಲ್ಲಿ ಮದುವೆ ಸಂಭ್ರಮ ಒಂದೊಂದೆ ಶುರುವಾಗಿದೆ. ಈಗಾಗಲೇ ಎಲ್ಲರಿಗೂ ಮದುವೆ ಕಾರ್ಡ್ ಕೊಟ್ಟು ಮದುವೆಗೆ ಆಹ್ವಾನ ನೀಡುತ್ತಿದ್ದಾರೆ. ಮಗಳು ಶ್ರೀಮಂತ ಹುಡುಗನನ್ನು ಕೈ ಹಿಡಿಯುತ್ತಿದ್ದಾಳೆ ಎನ್ನುವುದಕ್ಕಿಂತ ಒಬ್ಬ ಸಂಪ್ರದಾಯಸ್ಥ ಹುಡುಗ‌ನ ಕೈ ಹಿಡಿಯುತ್ತಿದ್ದಾಳೆ ಎಂದೇ ಲಕ್ಷ್ಮೀ-ಶ್ರೀನಿವಾಸ ನಂಬಿದ್ದಾರೆ. ಅದಕ್ಕಾಗಿಯೇ ಮದುವೆ ಎಂಬ ವಿಚಾರ ಬಂದಾಗ ಹುಡುಗನ ಬಗ್ಗೆ ಎಲ್ಲಾ ರೀತಿಯಿಂದಾನೂ ವಿಚಾರಿಸಿದ್ದಾರೆ. ಹುಡುಗ ಒಳ್ಳೆಯವನು, ಸಭ್ಯತೆ ಇರುವವನು ಎಂದು ತಿಳಿದ ಮೇಲೆ ಮದುವೆ ಮಾತುಕಥೆಗೆ ಮುನ್ನುಡಿ ಬರೆದಿದ್ದಾರೆ.

ಜಯಂತ್ ಕೂಡ ಮದುವೆ ಗೊತ್ತಾದ ಮೇಲೆ ಜಾಹ್ನವಿಯ ಮನೆಯವರನ್ನು ಇಂಪ್ರೆಸ್ ಮಾಡುವ ಪ್ರಯತ್ನದಲ್ಲಿಯೇ ಇದ್ದಾನೆ. ಎಲ್ಲಾ ರೀತಿಯಲ್ಲೂ ಅದಾಗಲೇ ಜಾಹ್ನವಿಯ ಮನಸ್ಸನ್ನು ಗೆದ್ದಿದ್ದಾನೆ. ಮನೆಯವರ ಮನಸ್ಸನ್ನು ಗೆದ್ದಾಗಿದೆ. ಆದರೆ ವೀಕ್ಷಕರಿಗೇನೆ ಇನ್ನು ಅನುಮಾನ. ಆದಷ್ಟು ಬೇಗ ಜಯಂತ್ ರಿಯಲ್ ಬಣ್ಣ ತೋರಿಸಲು ಕೋರಿದ್ದಾರೆ.

Lakshmi nivasa kannada serial Written Update on march 15th episode

ಮಾವನ ಮನೆಗೆ ಬಂದ ಜಯಂತ್

ಜಯಂತ್ ತಾನೊಬ್ಬ ಅನಾಥ ಎಂದೇ ಹೇಳಿಕೊಂಡಿರುವವನು. ನನಗೆ ಅಂತ ಯಾರೂ ಇಲ್ಲ, ಈಗ ನೀವೆ ನನಗೆ ಎಲ್ಲಾ ಎನ್ನುತ್ತಾನೆ. ಹೀಗಾಗಿಯೇ ಏನೇ ಕೆಲಸವನ್ನು ಶುರು ಮಾಡುವಾಗಲೂ ಮೊದಲು ಲಕ್ಷ್ಮೀ ಹಾಗೂ ಶ್ರೀನಿವಾಸನ ಆಶೀರ್ವಾದವನ್ನು ಪಡೆಯುತ್ತಾನೆ. ಈಗ ಮದುವೆ ಕಾರ್ಯಗಳೆಲ್ಲಾ ಶುರುವಾಗಿರುವ ಕಾರಣ, ಬೆಳಗ್ಗೆಯೇ ಮನೆಗೆ ಬಂದಿದ್ದಾನೆ. ಅತ್ತೆ-ಮಾವ ಪ್ರೀತಿಯಿಂದ ಸ್ವಾಗತ ಮಾಡಿದ್ದಾರೆ. ಆತಿಥ್ಯ ನೀಡಿದ್ದಾರೆ.

ಲಕ್ಷ್ಮೀ ಶುರುವಾಯ್ತು ಆತಂಕ

ಲಕ್ಷ್ಮೀಗೆ ಇದೊಂದು ಆತಂಕದಂತೆ ಕಾಡುತ್ತಿದೆ. ಭಾವನಾಳ ಮದುವೆ ನಿಂತು ಇನ್ನು ಕೆಲವೇ ದಿನಗಳು ಕಳೆದಿವೆ ಅಷ್ಟೇ. ಭಾವನಾಳನ್ನು ಮದುವೆ ಆಗಬೇಕಿದ್ದ ಹುಡುಗ ಕಾರಿನಲ್ಲಿ ಬರುವಾಗ ಆಕ್ಸಿಡೆಂಟ್ ಆಗಿನೇ ಸಾವನ್ನಪ್ಪಿದ್ದು. ಈಗ ಜಯಂತ್ ಕೂಡ ಸದಾ ಕಾರಿನಲ್ಲಿ ಓಡಾಡುವುದನ್ನು ಕಂಡು ಲಕ್ಷ್ಮೀ ಸಹಜವಾಗಿಯೇ ಆತಂಕಕ್ಕೆ ಗುರಿಯಾಗಿದ್ದಾಳೆ. ಅದಕ್ಕೆ ಎಂದೇ ಅಳಿಯಂದಿರಿಗೆ ಕಾರಿನಲ್ಲಿ ಓಡಾಡಬೇಡಿ ಎಂದು ಬುದ್ದಿ ಹೇಳಿದ್ದಾಳೆ. ಭಾವನಾಳ ಮದುವೆಯಲ್ಲಿ ಆದ ಘಟನೆಯನ್ನು ಇನ್ನು ಮರೆಯುವುದಕ್ಕೆ ಸಾಧ್ಯವಾಗಿಲ್ಲ ಎಂದೇ ಎಚ್ಚರಿಸಿದ್ದಾಳೆ.

Lakshmi nivasa kannada serial Written Update on march 15th episode

ಉತ್ತರ ಹುಡುಕಲು ಹೊರಟ ಪ್ರೇಕ್ಷಕರು

ಲಕ್ಷ್ಮೀ, ಭಾವನಾ ಮದುವೆಯಲ್ಲಿ ಆಗಿದ್ದನ್ನು ಕಂಡು ಆತಂಕಗೊಂಡಿದ್ದಳು. ಅದನ್ನು ಜಯಂತ್‌ಗೆ ಹೇಳಿದಾಗ, 'ರೆಸಾರ್ಟ್ ಒಳಗೆ ಒಮ್ಮೆ ಹೋದರೆ ಮುಗೀತು. ಮತ್ತೆ ಯಾವುದಕ್ಕೂ ಹೊರಗೆ ಬರುವ ಅವಶ್ಯಕತೆ ಇಲ್ಲ, ಬರುವುದು ಇಲ್ಲ' ಎಂಬಂತೆ ಹೇಳಿದ್ದಾನೆ. ಇದು ನೋಡುಗರಿಗೆ ತಲೆಗೆ ಹುಳ ಬಿಟ್ಟಂತೆ ಆಗಿದೆ. ಜಾಹ್ನವಿ ಹಾಗೂ ಜಯಂತ್ ಮದುವೆ ಆಗುವ ತನಕ ನಿರ್ದೇಶಕರ ಮೇಲೆ ನಂಬಿಕೆ ಇಲ್ಲ. ಈಗ ನೋಡಿ ರೆಸಾರ್ಟ್ ಒಳಗೆ ಹೋದರೆ ಹೊರಗೆ ಬರುವ ಗ್ಯಾರಂಟಿ ಇಲ್ಲ ಎಂಬಂತೆ ಮಾತನಾಡುತ್ತಿದ್ದಾನೆ ಎಂಬೆಲ್ಲಾ ರೀತಿಯಲ್ಲಿ ಕಮೆಂಟ್ ಹಾಕುತ್ತಿದ್ದಾರೆ.

ಜಯಂತ್‌ನ ಪ್ರತಿ ಕ್ಷಣ ಗಮನಿಸುವ ಪ್ರೇಕ್ಷಕರು

ಜಯಂತ್ ಸಿಕ್ಕಾಪಟ್ಟೆ ಸಾಧು ರೀತಿ ನಡೆದುಕೊಳ್ಳುತ್ತಾನೆ. ಅತಿ ವಿನಯಂ ದೂರ್ತ ಲಕ್ಷಣಂ ಅಂತಾರಲ್ಲ ಆ ತರ. ವೀಕ್ಷಕರಿಗೂ ಅದೇ ಅನುಮಾನ. ಜೀ ಕನ್ನಡದಲ್ಲಿ ಅವರಿರುವ ಒಂದೇ ಒಂದು ಪ್ರೋಮೋ ಹಾಕಿದರು ಸರಿ ನೂರೆಂಟು ಅನುಮಾನಗಳು ಹುಟ್ಟಿಕೊಳ್ಳುತ್ತವೆ. ಕೋಟ್ ಕೂಡ ಬದಲಾಯಿಸಿಲ್ಲ, ಆ ವಿನಯತೆಯಲ್ಲೂ ಸ್ವಲ್ಪವೂ ಬದಲಾವಣೆಯಾಗಿಲ್ಲ ಎಂದೇ ಪ್ರೇಕ್ಷಕರು ಹೇಳೋದು. ಜಯಂತ್ ವಿಚಾರದಲ್ಲಿ ಕಣ ಕಣದಲ್ಲೂ ಪ್ರೇಕ್ಷಕರು ಗಮನ ಹರಿಸುತ್ತಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about Jayant's behavior is suspicious;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X