Lakshmi nivasa: ಬೀಗರು ಅಂದ್ರೆ ಉರಿದು ಬೀಳ್ತಿದ್ದ ಸಿದ್ದೇಗೌಡ್ರು, ಭಾವನಾ ವಿಚಾರಕ್ಕೆ ಕರಗಿ ಹೋದ್ರು!

By ಎಸ್ ಸುಮಂತ್

ಲಕ್ಷ್ಮೀ ನಿವಾಸದಲ್ಲಿ ಅದ್ದೂರಿಯಾಗಿ ಜಾಹ್ನವಿಯ ಮದುವೆ ನಡೆಯುತ್ತಿದೆ. ಜಯಂತ್ ಹಾಗೂ ಜಾಹ್ನವಿ ತುಂಬಾ ಬ್ಯೂಟಿಫುಲ್ ಆಗಿ ಸಿದ್ಧಗೊಂಡಿದ್ದಾರೆ. ಮದುಮಕ್ಕಳಿಗೆ ಅಜ್ಜಿಯಿಂದಾನೇ ಬಹುಪರಾಕ್ ಸಿಕ್ಕಿದೆ. ಅಜ್ಜಿಯ ಆಶೀರ್ವಾದವೂ ಸಿಕ್ಕಿದೆ. ಸಿಂಚನಾ ತಂದೆ-ತಾಯಿ ಯಾವುದೇ ಕಾರಣಕ್ಕೂ ಲಕ್ಷ್ಮೀ-ಶ್ರೀನಿವಾಸನ ಮನೆ ಬಾಗಿಲಿಗೆ ಹೆಜ್ಜೆ ಇಡಲ್ಲ ಎಂದಿದ್ದವವರು ಕೂಡ ಮದುವೆಗೆ ಬಂದಿದ್ದಾರೆ.

ಮದುವೆಯ ಎಲ್ಲಾ ಖರ್ಚು ವೆಚ್ಚಗಳನ್ನು ಜಯಂತ್ ನೋಡಿಕೊಳ್ಳುತ್ತಿರುವ ಕಾರಣ ಮದುವೆಯಲ್ಲಿ ಏನು ಕೊರತೆ ಬಾರದಂತೆ ಮಾಡುತ್ತಿದ್ದಾರೆ. ಜಾಹ್ನವಿಯ ಅಣ್ಣಂದಿರಿಂದ ಪೈಸೆಯಷ್ಟು ಹಣದ ಸಹಾಯವಿಲ್ಲದೇ ಇದ್ದರೂ, ಮದುವೆಯಲ್ಲಿ ಎಲ್ಲವೂ ತಮ್ಮದೇ ಎಂಬಂತೆ ಓಡಾಡುತ್ತಿದ್ದಾರೆ. ಇದೇ ಮದುವೆಯಲ್ಲಿ ಸಿದ್ದೇಗೌಡರಿಗೂ ತನ್ನ ಲೈಫ್‌ನ ಉತ್ತರ ಸಿಕ್ಕಂತೆ ಆಗಿದೆ.

Lakshmi nivasa kannada serial Written Update on march 21st episode

ದೇವಸ್ಥಾನಕ್ಕೆ ಹೋಗಿದ್ದ ಲಕ್ಷ್ಮಕ್ಕ

ಜವರೇಗೌಡರ ಮನೆಯವರೆಲ್ಲಾ ಜಾಹ್ನವಿಯ ಮದುವೆಗೆ ಬಂದಿದ್ದಾರೆ. ಆದರೆ ಸಿದ್ದೇಗೌಡ್ರು ಮದುವೆಗೆ ಬರುವುದಕ್ಕೆ ಒಪ್ಪಲೇ ಇಲ್ಲ. ಅತ್ತ ಲಕ್ಷ್ಮೀ ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿ ಬರುವಾಗ ಆಟೋ ಕೈ ಕೊಟ್ಟಿತ್ತು. ಅದೇ ಸಮಯಕ್ಕೆ ಸಿದ್ದೇಗೌಡ್ರು ಕೂಡ ಬಂದ್ರು. ಲಕ್ಷ್ಮಕ್ಕನಿಗೆ ಸಹಾಯ ಮಾಡುವುದಕ್ಕೆ ಹೋಗಿ ಚೌಟ್ರಿಯ ಒಳಗೆ ಬಂದ. ಅಲ್ಲಿ ನಡೆಯುತ್ತಿರುವುದು ತನ್ನ ಅಕ್ಕನ ಬೀಗರ ಮನೆಯ ಮದುವೆ ಎಂಬುದು ಮಾತ್ರ ಗೊತ್ತಿಲ್ಲ.

ಲಕ್ಷ್ಮಕ್ಕನ ಮಗಳೆಂದು ತಿಳಿದು ಖುಷಿ

ಛತ್ರದ ಹೊರಗೆ ನಿಂತು ಯೋಚನೆ ಮಾಡುವಾಗಲೇ ಭಾವನಾ ಕಂಡಿದ್ದು. ಸಿದ್ದೇಗೌಡರಿಗಂತು ಫುಲ್ ಖುಷಿ ತನ್ನ ಕಮಲಿ ಸಿಕ್ಕಳಲ್ಲ ಅಂತ. ಅವಳಿಗೂ ಶಾಕ್ ಇವನ್ಯಾಕೆ ಇಲ್ಲಿಗೆ ಬಂದ ಅಂತ. ಅಷ್ಟರಲ್ಲಿ ಅಲ್ಲಿಗೆ ಬಂದ ಲಕ್ಷ್ಮೀ, ಭಾವನಾಳಿಗೆ ಸಿದ್ದೇಗೌಡ್ರನ್ನ ಪರಿಚಯ ಮಾಡಿದಳು. ಭಾವನಾ, ಲಕ್ಷ್ಮಕ್ಕನ ಮಗಳೆಂದು ತಿಳಿದು ಸಿದ್ದೇಗೌಡರಿಗೆ ಇನ್ನಿಲ್ಲದ ಸಂತಸ. ಲಕ್ಷ್ಮಕ್ಕ ಬೇರೆ ಸಿದ್ದೇಗೌಡ್ರ ಬಗ್ಗೆ ಹೊಗಳಿದ್ದು ಹೊಗಳಿದ್ದೆ, ಸಮಾಜಸೇವೆ ಮಾಡುವುದರಲ್ಲಿ ಮೇಲು ಗೈ ಅಂತ ಬೇರೆ ಹೇಳಿದ್ದಾಳೆ. ಈಗ ಸಿದ್ದೇಗೌಡ್ರ ಜವಾಬ್ದಾರಿಯನ್ನು ಭಾವನಾಗೆ ವಹಿಸಿದ್ದಾಳೆ ಲಕ್ಷ್ಮೀ.

ತಪ್ಪಿಸಿಕೊಳ್ಳಲು ಯತ್ನಿಸಿದ ಸಿದ್ದೇಗೌಡ್ರು

ಸಿದ್ದೇಗೌಡ್ರಿಗೆ ಫುಲ್ ಖುಷಿ. ಭಾವನಾ ಜೊತೆಗೆ ಮಾತನಾಡುವಾಗಲೇ ಸಿಂಚನಾ ಇಲ್ಲೆ ಇದ್ದಾಳೆಂದು ಗೊತ್ತಾಗಿದ್ದು. ಅಲ್ಲಿಂದ ತಪ್ಪಿಸಿಕೊಳ್ಳಬೇಕು ಎನ್ನುವಷ್ಟರಲ್ಲಿಯೇ ಸಿಂಚನಾ ಎದುರು ಬಂದಳು. ಅಕ್ಕನನ್ನೇ ನೀನೇನು ಇಲ್ಲಿ ಎಂದೇ ಕೇಳಿದ ಸಿದ್ದೇಗೌಡ್ರಿಗೆ ಸಿಂಚನಾ ಕ್ಲಾಸ್ ತೆಗೆದುಕೊಂಡಿದ್ದಾಳೆ. ಇದು ನನ್ನ ನಾದಿನಿ ಮದುವೆ. ನಾನು ಹೇಳಿದ್ದಕ್ಕೆ ತಾನೇ ನೀನು ಇಲ್ಲಿಗೆ ಬಂದಿದ್ದು, ಅಂತ ಕೇಳಿದ್ದಾಳೆ. ಇದು ಅಕ್ಕನ ಬೀಗರ ಮನೆಯವರ ಮದುವೆ ಅಂತ ಸಿದ್ದೇಗೌಡ್ರಿಗೆ ಗೊತ್ತಾಗಿದ್ದೆ ಆಗ.

Lakshmi nivasa kannada serial Written Update on march 21st episode

ಭಾವನಾಗಾಗಿ ಮದುವೆಯಲ್ಲಿ ಉಳಿದುಕೊಂಡ ಸಿದ್ದೇಗೌಡ್ರು

ಭಾವನಾಗೆ ಸಿದ್ದೇಗೌಡ್ರನ್ನ ಕಂಡು ಆಶ್ಚರ್ಯ. ಏನು ಇವ್ರಿಗೆ ಎಲ್ಲರೂ ಗೊತ್ತಿದೆಯಾ ಎಂದು ತನಗೆ ತಾನೇ ಪ್ರಶ್ನೆ ಮಾಡಿಕೊಳ್ಳುತ್ತಿದ್ದಾರೆ. ಇದನ್ನು ನೋಡಿದ ಅವರ ಭಾಮೈದ ಕೂಡ ಸುಮ್ಮನೆ ಹೋಗಿದ್ದಾನೆ. ಆದ್ರೆ ಸಿದ್ದೇಗೌಡ್ರಿಗೆ ಮಾತ್ರ ಇನ್ನಿಲ್ಲದ ಖುಷಿ. ತಾನೂ ಹುಡುಕುತ್ತಿದ್ದ ಹುಡುಗಿ ಸಿಕ್ಕೆ ಬಿಟ್ಟಳು. ಅದರಲ್ಲೂ ಆ ಹುಡುಗಿ ಈಗ ತಮ್ಮ ಬೀಗರ ಮನೆಯವಳೇ ಎಂದು ಗೊತ್ತಾದ ಮೇಲಂತು ಇನ್ನು ಖುಷಿಯಾಗಿದ್ದಾನೆ. ಬೀಗರ ಮನೆಗೆ ಹೆಜ್ಜೆ ಇಡಲ್ಲ ಅಂತಿದ್ದವ ಇನ್ನು ಮುಂದೆ ಬೀಗರ ಮನೆಯ ಅತಿಥಿಯಾಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ.

More from Filmibeat

English summary
Lakshmi nivasa kannada serial today episode. Here is the details about Siddegowda got the address of the girl's house
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X