Lakshmi Nivasa: ಭಾವಾನಾಗೆ ಮಗು ಇರುವುದು ಕಂಡು ಬೆಚ್ಚಿಬಿದ್ದ ಸಿದ್ದೇಗೌಡ್ರು!
ಜಾಹ್ನವಿಯ ಮದುವೆ ಸಂಭ್ರಮದಲ್ಲಿ ಎಲ್ಲರಿಗಿಂತ ಹೆಚ್ಚು ಸಂತಸದಲ್ಲಿ ಸಿದ್ದೇಗೌಡ್ರು ಓಡಾಟ ನಡೆಸಿದ್ದಾರೆ. ನನ್ನ ಹೃದಯದ ಕಮಲಿ ಎಂದೇ ಭಾವನಾಳ ಹಿಂದೆ ಬಿದ್ದಿದ್ದಾನೆ. ಭಾವನಾ ಅಡ್ರೆಸ್ ಸಿಗದೇ ಕಂಗಲಾಗಿದ್ದ ಸಿದ್ದೇಗೌಡ್ರಿಗೆ, ತಾನು ಹೆಚ್ಚು ಇಷ್ಟಪಡುತ್ತಿದ್ದ ಲಕ್ಷ್ಮಕ್ಕನ ಮಗಳು ಎಂಬುದು ಗೊತ್ತಾದ ಕೂಡಲೇ ಸಿದ್ದೇಗೌಡ್ರು ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಭಾವನಾಳ ಹಿಂದೆ ಹಿಂದೆಯೇ ಓಡಾಡುತ್ತಿದ್ದಾನೆ.
ಸಿಂಚನಾಳ ಗಂಡನ ಮನೆಯವರು ಎಂದರೆ ಸಾಕು ಸಿದ್ದೇಗೌಡರ ಕೋಪ ನೆತ್ತಿಯ ತನಕ ಏರುತ್ತಿತ್ತು. ಅಕ್ಕನನ್ನು ಲವ್ ಮಾಡಿ ಕರೆದುಕೊಂಡು ಹೋಗಿ ಬಿಟ್ಟ ಅಂತ ಕುದಿಯುತ್ತಾ ಇದ್ದ ಸಿದ್ದೇಗೌಡ್ರು, ಈಗ ಲವ್ ನಲ್ಲಿ ಬಿದ್ದು, ಆ ಕೋಪ, ದ್ವೇಷವನ್ನೆಲ್ಲಾ ಮರೆತು ಹೋಗಿದ್ದಾರೆ. ಅದೇ ಬೀಗರ ಮನೆ ಈಗ ಸ್ವರ್ಗದ ಬಾಗಿಲಾಗಿದೆ. ಸಿದ್ದೇಗೌಡರ ತಂದೆ ಜವರೇಗೌಡರಿಗೂ ಇದು ಶಾಕಿಂಗ್ ಎನಿಸಿದೆ. ನಮ್ಮ ಸಿದ್ದೇಗೌಡ ಏನಿಷ್ಟು ಬದಲಾವಣೆಯಾಗಿದ್ದಾರಲ್ಲ ಎಂದು ಆಶ್ಚರ್ಯಚಕಿತರಾಗಿ ನೋಡುತ್ತಿದ್ದಾರೆ.

ಭಾವನಾ ಹಿಂದೆ ಹಿಂದೆ ಸಿದ್ದೇಗೌಡರು
ಮದುವೆ ಮನೆಗೆ ಬಂದಾಗಿನಿಂದ ಸಿದ್ದೇಗೌಡ್ರು, ಭಾವನಾಳ ಹಿಂದೆ ಓಡಾಡಿಕೊಂಡು, ರೇಗಿಸಿಕೊಂಡು ಇದ್ದಾನೆ. ಎಲ್ಲರೂ ಒಂದು ಕಡೆ ಇದ್ದರೆ, ಸಿದ್ದೇಗೌಡ್ರು ಮಾತ್ರ ಮತ್ತೊಂದು ಕಡೆ ಇದ್ದಾರೆ. ಇದನ್ನು ಅರ್ಥ ಮಾಡಿಕೊಳ್ಳುವುದಕ್ಕೆ ಭಾವನಾಗೆ ಬಹಳ ಸಮಯವೇನು ಬೇಕಾಗಿಲ್ಲ. ತನಗೆ ಸಿದ್ದೇಗೌಡ್ರು ಕಾಳು ಹಾಕುತ್ತಿರುವುದು ಬಹಳ ಬೇಗ ಗೊತ್ತಾಗಿದೆ.
ಸಿದ್ದೇಗೌಡ್ರು ಫುಲ್ ಆಕ್ಟೀವ್ ಗುರು
ಇನ್ನು ಮದುವೆ ಎಂದ ಮೇಲೆ ಸಾಕಷ್ಟು ಕೆಲಸಗಳು ಇದ್ದೆ ಇರುತ್ತವೆ. ಆ ಕೆಲಸಗಳಲ್ಲಿ ಎಲ್ಲರು ಕೈಜೋಡಿಸುವುದು ಸಾಮಾನ್ಯ. ಇದೀಗ ಸಿದ್ದೇಗೌಡ್ರು ಆ ಅವಕಾಶವನ್ನು ಬಿಟ್ಟುಕೊಟ್ಟಿಲ್ಲ. ಭಾವನಾಳ ಜೊತೆಗೆ ತಾನೂ ಊಟ ಬಡಿಸುತ್ತಿದ್ದಾನೆ. ಇದನ್ನು ಕಂಡ ಜವರೇಗೌಡನಿಗೆ ಶಾಕ್ ಆಗಿದೆ. ತನ್ನ ಅಮ್ಮನ ಬಳಿ, ಸಿದ್ದೇಗೌಡರ ಬದಲಾವಣೆಯ ಬಗ್ಗೆ ಮಾತನಾಡುತ್ತಿದ್ದಾರೆ. ಅತ್ತಿಗೆಗೂ ಆ ಬಗ್ಗೆ ಅನುಮಾನ ಮೂಡಿದೆ. ದೊಡ್ಡ ಮಗನ ಬಳಿ ಸೊಸೆ ಕಿವಿ ಚುಚ್ಚುತ್ತಿದ್ದಾಳೆ. ಸಿದ್ದೇಗೌಡ್ರಿಗೆ ಏನು ಬೇಕೋ ಅದನ್ನೇ ಮಾಡುತ್ತಿದ್ದಾರೆ ಎಂದಿದ್ದಾಳೆ. ಆದರ ಆ ಮಾತು ದೊಡ್ಡ ಮಗನಿಗೆ ಅರ್ಥವಾಗಿಲ್ಲ. ಅರ್ಥವಾದರೂ ಪ್ರಯೋಜನವಿಲ್ಲ.

ಚೆಂದವಾಗಿ ಕಾಣುತ್ತಿರುವ ಖುಷಿ
ಖುಷಿ ಎಂದರೆ ಭಾವನಾಗೆ ಮುದ್ದಿನ ಮಗಳು. ಅವಳಿಗಾಗಿಯೇ ಬದುಕುತ್ತಿದ್ದಾಳೆ. ಖುಷಿಗಾಗಿಯೇ ತನ್ನೆಲ್ಲಾ ದೊಡ್ಡಮಟ್ಟದ ಆಸ್ತಿಯನ್ನು ಬಿಟ್ಟಿದ್ದಾಳೆ. ಈಗ ಅವಳೇ ಸರ್ವಸ್ವ ಎಂದು ಬದುಕುತ್ತಿದ್ದಾಳೆ. ಮದುವೆಯಲ್ಲೂ ಖುಷಿಯನ್ನು ಚೆಂದವಾಗಿ ಸಿದ್ಧ ಮಾಡಿದ್ದಾಳೆ. ಖುಷಿ ಓಡಿ ಬಂದು ಅಮ್ಮನನ್ನು ತಬ್ಬಿಕೊಂಡಿದ್ದಾಳೆ. ಒಂದು ಮಗುವಿನ ತಾಯಿಯನ್ನು ನಾನು ಇಷ್ಟಪಟ್ಟಿದ್ದೀನಾ ಎಂಬ ಆಶ್ಚರ್ಯ ಸಿದ್ದೇಗೌಡ್ರಿಗೆ ಆಗಿದೆ.
ಮಗು ಇರುವುದು ಕಂಡು ಶಾಕ್
ಖುಷಿಯ ಪರಿಚಯ ಸಿದ್ದೇಗೌಡ್ರಿಗೆ ಮೊದಲೇ ಇದೆ. ಮಗುವಿನ ತಾಯಿ ಅಂತ ಭಾವನಾಳ ಹೆಸರನ್ನು ಕೂಡ ಈ ಮೊದಲೇ ಮೊಬೈಲ್ ನಲ್ಲಿ ಸೇವ್ ಮಾಡಿಕೊಂಡಾಗಿದೆ. ಈಗ ಭಾವನಾಳನ್ನು ಅಮ್ಮ ಅಂತ ಬೇರೆ ಮಗು ಕರೆಯುತ್ತಿದೆ. ಮಗು ಯಾರೆಂದು ನೋಡುವುದಕ್ಕೆ ಸಿದ್ದೇಗೌಡರಿಗೆ ಆಗಿಲ್ಲ. ಮಗುವಿನ ಮುಖ ಕಂಡರೆ ಮಾತ್ರ ಸತ್ಯ ಬಯಲಾಗುವುದು. ಅಥವಾ ಈ ಶಾಕಿಂಗ್ ಸುದ್ದಿಯಲ್ಲೇ ಸಿದ್ದೇಗೌಡ್ರು ಸತ್ಯವನ್ನೇ ತಿಳಿಯದೆ ಸುಮ್ಮನಾಗಿ ಬಿಡುತ್ತಾರಾ ಅಂತ. ಮನಸ್ಸಿಗೆ ಘಾಸಿಯಾಗಬಾರದೆಂದರೆ ಆ ಮಗು ಯಾರೆಂದು ಸಿದ್ದೇಗೌಡ್ರ ಗಮನಕ್ಕೆ ಬರಬೇಕು. ಮಗುವೊಂದನ್ನು ನೋಡಿದರೆ ಭಾವನಾಳ ಮಗು ಹೌದಾ ಅಲ್ವಾ ಎಂಬ ಸತ್ಯವೂ ಬಯಲಾಗುತ್ತದೆ.


Click it and Unblock the Notifications











