Lakshmi nivasa: ಜಯಂತ್ ನಡವಳಿಕೆಯಿಂದ ಸರ್ಪೈಸ್ ಕೊಡಲು ಹೋದ ಜಾಹ್ನವಿಗೆ ನೋವು ಗ್ಯಾರಂಟಿ!
ಲಕ್ಷ್ಮೀ ನಿವಾಸದಲ್ಲಿ ಜಾಹ್ನವಿ ಮದುವೆಯಾಗಿ ಗಂಡನ ಮನೆಗೆ ಹೋಗಿದ್ದಾಳೆ. ಭಾವನಾಳನ್ನು ಸಿದ್ದೇಗೌಡ್ರು ಲವ್ ಮಾಡುತ್ತಿದ್ದಾನೆ. ಆದರೆ ಸಿದ್ದೇಗೌಡರ ನಡವಳಿಕೆಯಿಂದ ಈಗಾಗಲೇ ಭಾವನಾಗೆ ಇದೆಲ್ಲ ಅರ್ಥವಾಗಿದೆ. ಎಚ್ಚರಿಕೆಯನ್ನು ಕೂಡ ಕೊಟ್ಟಿದ್ದಾಳೆ. ಆದರೂ ಸಿದ್ದೇಗೌಡ್ರು ಅದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳುತ್ತಿಲ್ಲ. ಅದರಲ್ಲೂ ಮನೆಯಲ್ಲೂ ಸುಳ್ಳು ಹೇಳಿ ಭಾವನಾಳನ್ನು ನೋಡುವುದಕ್ಕೆ ಬಂದಿದ್ದಾನೆ.
ಇತ್ತ ಜಾಹ್ನವಿಯನ್ನು ಮದುವೆ ಮಾಡಿಕೊಟ್ಟಾಗಿದೆ. ಆದರೆ ಮನೆಯವರಿಗೆ ಒಂದು ದಿನ ಕೂಡ ಜಯಂತ್ ಮನೆ ಯಾವುದು, ಎಲ್ಲಿ ಇದೆ ಎಂಬುದು ಗೊತ್ತಿಲ್ಲ. ಮಗಳು ಹೇಗಿದ್ದಾಳೋ ಎಂಬ ಚಿಂತೆಯಲ್ಲಿಯೇ ಇದ್ದಾರೆ. ಆದರೆ ಜಯಂತ್ ಸ್ಯಾಡಿಸ್ಟ್ ಎಂಬುದು ಇನ್ನು ತಿಳಿದಿಲ್ಲ. ಪ್ರೀತಿಯಿಂದ ಅಡುಗೆ ಮಾಡಿದ್ದರು, ಆ ಖುಷಿಯನ್ನು ಒಂದು ಕ್ಷಣದಲ್ಲಿಯೇ ಕಳೆಯುತ್ತಾನೆ.

ಜಾಹ್ನವಿಯನ್ನೇ ಗಮನಿಸುತ್ತಿರುವ ಜಯಂತ್
ಜಾಹ್ನವಿ ಮನೆಯಲ್ಲಿ ಒಬ್ಬಳೆ ಇರುವುದು. ಆ ಮನೆಗೂ ಜಯಂತ್ ಪಾಸ್ವರ್ಡ್ ಹಾಕಿದರೆ ಮಾತ್ರ ಬಾಗಿಲು ಓಪನ್ ಆಗುವುದು. ಆ ರೀತಿಯ ಸೆಕ್ಯೂರಿಟಿ ಮಾಡಿಟ್ಟಿದ್ದಾನೆ. ಈಗ ಮನೆಯಲ್ಲಿರುವ ಜಾಹ್ನವಿಯನ್ನು ಆಫೀಸಲ್ಲೇ ಕುಳಿತು ಸಿಸಿಟಿವಿಯಲ್ಲಿ ನೋಡುತ್ತಿದ್ದಾನೆ. ಮನೆಯಲ್ಲಿ ಸಿಸಿಟಿವಿ ಇದೆ ಎಂಬುದು ಕೂಡ ಜಾಹ್ನವಿಗೆ ತಿಳಿಸಿಲ್ಲ. ಮನೆಯನ್ನು ಕ್ಲೀನ್ ಮಾಡಿದ್ದನ್ನು ಅಲ್ಲಿಯೇ ಕುಳಿತು ನೋಡಿದ್ದಾನೆ. ಅಮ್ಮನ ಜೊತೆಗೆ ಮಾತನಾಡಿದಾಗ ಅದನ್ನು ಅನುಮಾನದಿಂದ ನೋಡಿದ್ದಾನೆ.
ಸಿದ್ದೇಗೌಡ್ರಿಗೆ ಎಚ್ಚರಿಕೆ ಕೊಟ್ಟ ಭಾವನಾ
ಇತ್ತ ಭಾವನಾಳಿಗೆ ಸಿದ್ದೇಗೌಡರ ಕಾಟ ತಪ್ಪುತ್ತಿಲ್ಲ. ಭಾವನಾಗೆ ಒಂದು ಮಗು ಇದೆ ಎಂದು ಬೇಸರ ಮಾಡಿಕೊಂಡಿದ್ದ ಗೌಡ್ರು, ಇದೀಗ ಮಾಮೂಲಿ ಚಾರ್ಮ್‌ಗೆ ತೆರಳಿದ್ದಾನೆ. ಮತ್ತೆ ಭಾವನಾಳಿಗೆ ತನ್ನ ಪ್ರೀತಿ ಹೇಳುವ ನೆಪಗಳನ್ನು ಹುಡುಕುತ್ತಾ ಇದ್ದಾನೆ. ಅದಕ್ಕೆ ಅಕ್ಕಿರೊಟ್ಟಿ ಎಂದು ನೆಪವಿಟ್ಟುಕೊಂಡು, ಸಿಂಚನಾಳನ್ನು ನೋಡುತ್ತೇನೆಂದು ಬಂದು, ಭಾವನಾಳನ್ನು ಕಾಡಿಸುತ್ತಿದ್ದಾನೆ. ಇದು ಭಾವನಾಗೇನು ಗೊತ್ತಿಲ್ಲ ಎನ್ನುವಂತೆ ಇಲ್ಲ. ಲಕ್ಷ್ಮಕ್ಕ ಎನ್ನುತ್ತಿದ್ದ ಗೌಡ್ರು, ಈಗ ಲಕ್ಷ್ಮತ್ತೆ ಅಂತ ಬೇರೆ ಕರೆಯುತ್ತಿದ್ದಾನೆ.
ಖುಷಿಯೂ ಎದುರಿಗೆ ಬರ್ತಿಲ್ಲ
ಭಾವನಾ ಇದೆಲ್ಲವನ್ನು ನೋಡಿ ನೋಡಿ ಯಾಕೋ ಮುಂದಕ್ಕೆ ಸರಿ ಆಗಲ್ಲ ಎಂದೇ ಭಾವಿಸಿದ್ದಳು. ಅದಕ್ಕೆ ಕಣ್ಸನ್ನೆಯಲ್ಲಿಯೇ ಒಳಗೆ ಕರೆದಳು. ನೀವೂ ಈ ರೀತಿಯೆಲ್ಲ ಮಾಡಿದರೆ ನಿಮ್ಮ ಅಕ್ಕನಿಗೆ ವಿಷಯ ಹೇಳುತ್ತೀನಿ ಎಂದೇ ಹೆದರಿಸಿದಳು. ಆಮೇಲೆ ಯಾವುದೋ ಹುಡುಗಿ ಹಿಂದೆ ಹೋಗಿದ್ದ ಎಂದು ಹೇಳಿದಾಕ್ಷಣ ಸಿಂಚನಾ ಜೋರು ಬುದ್ದಿ ಹೇಳಿದ್ದಳು. ಸಿದ್ದೇಗೌಡ್ರಿಗೆ ಬೈಯ್ಯುತ್ತಿದ್ದದ್ದನ್ನು ಕಂಡು ಖುಷಿ ಹೆದರಿದ್ದಾಳೆ. ಅಮ್ಮನಿಗೆ ಕೋಪ ಬಂದಿರಬೇಕು. ನಾನಂತು ಈಗ ಹೋಗಲ್ಲಪ್ಪ ಎಂದು ಸುಮ್ಮನೆ ಆದಳು. ಮತ್ತೊಮ್ಮೆ ಬೈಯ್ಯುತ್ತಿದ್ದಾಗ ಅಂಕಲ್‌ನ ಮಾತನಾಡಿಸುವುದಿಲ್ಲ ಎಂದು ದೂರ ಉಳಿದು ಬಿಟ್ಟಳು. ಖುಷಿ ಏನಾದರೂ ಸಿದ್ದೇಗೌಡರನ್ನು ಮಾತನಾಡಿಸಿದರೆ ಎಲ್ಲಾ ಸತ್ಯ ಗೊತ್ತಾಗುತ್ತಿತ್ತು.

ಜಾಹ್ನವಿ ಖುಷಿಗೆ ಕಲ್ಲಾಕುತ್ತಾನಾ ಜಯಂತ್
ಜಾಹ್ನವಿ ಅಮ್ಮನನ್ನು ಕೇಳಿಕೊಂಡು ಪಲಾವ್ ಮಾಡಿಟ್ಟಿದ್ದಾಳೆ. ಯಾರ ಜೊತೆಗೆ ಫೋನ್‌ನಲ್ಲಿ ಇದ್ದಳು ಎಂದು ಅನುಮಾನಗೊಂಡ ಜಯಂತ್ ಕಾಲ್ ಮಾಡಿ ಮಾತನಾಡಿದಾಗ ಸರ್ಪೈಸ್ ಇದೆ ಎಂದಳು. ಕೆಲಸ ಮುಗಿಸಿ ಮನೆಗೆ ಬಂದಾಗ, ಬ್ಯೂಟಿಫುಲ್ ಆಗಿ ರೆಡಿಯಾಗಿದ್ದ ಜಾಹ್ನವಿ ಕಂಡು ಜಯಂತ್ ಖುಷಿಯಾದ. ಕಣ್ಣು ಮುಚ್ಚಿ, ಊಟದ ಟೇಬಲ್‌ಗೆ ಕರೆತಂದಳು. ಇನ್ನೇನು ಬಡಿಸಬೇಕು ಎನ್ನುವಷ್ಟರಲ್ಲಿ ಜಯಂತ್ ಕಣ್ಣು ಸಿಂಕ್ ಕಡೆಗೆ ಹೋಗಿದೆ. ನಾಳೆಯ ಎಪಿಸೋಡ್‌ನಲ್ಲಿ ಜಯಂತ್ ಸ್ಯಾಡಿಸ್ಟ್ ಮುಖ ಬಯಲಾಗಬಹುದು.


Click it and Unblock the Notifications











