Lakshmi nivasa: ಜಯಂತ್ ರೀತಿಯ ಹುಡ್ಗ ರಿಯಲ್ ಆಗಿ ಸಿಗೋಕೆ ಸಾಧ್ಯನಾ ಅಂತಿದ್ದಾರೆ ಗರ್ಲ್ಸ್..!

By ಎಸ್ ಸುಮಂತ್

ಲಕ್ಷ್ಮೀ ನಿವಾಸದಲ್ಲಿ ಮದುವೆಯ ಸಂಭ್ರಮ ಮನೆ ಮಾಡಿದೆ. ಇತ್ತಿಚೆಗಷ್ಟೇ ಎಲ್ಲರೂ ಖುಷಿ ಖುಷಿಯಾಗಿ ಮದುವೆ ತಯಾರಿ ಮಾಡಿಕೊಂಡಿದ್ದರು. ಆದರೆ ವಿಧಿ ಬೇರೆಯದ್ದೆ ಆಟ ಆಡಿದ್ದರ ಪರಿಣಾಮ ಭಾವನಾಳ ಮದುವೆ ನಿಂತು ಹೋಯಿತು. ಭಾವನಾಳ ಮದುವೆಗಾಗಿ ಶ್ರೀನಿವಾಸ್ ಸಾಲ ಮಾಡಿಕೊಂಡಿದ್ದಿದ್ದು ಕಡಿಮೆ ಏನು ಅಲ್ಲ. ಇದ್ದ ಒಂದು ಸೈಟ್ ಕೂಡ ಅಡವಿಟ್ಟು ಬಡ್ಡಿಗೆ ಹಣ ತೆಗೆದುಕೊಂಡಿದ್ದ. ಆದರೆ ಜಯಂತ್ ಎಲ್ಲವನ್ನು ವಾಪಾಸ್ ಕೊಟ್ಟು, ಮಗಳನ್ನು ಕೇಳಿದ್ದಾನೆ.

ಈಗ ಶ್ರೀನಿವಾಸ್ ಮನೆಯಲ್ಲಿ ಮತ್ತೊಂದು ಮದುವೆ ತಯಾರಿ ನಡೆದಿದೆ. ಅದು ಜಾಹ್ನವಿಯದ್ದು. ಮನೆಯಲ್ಲಿ ಬ್ಯಾಕ್ ಟು ಬ್ಯಾಕ್ ಮದುವೆ ಕಾರ್ಯಕ್ರಮಗಳು ನಡೆದರೆ ಹಣದ ಸಮಸ್ಯೆ ಹೇಗಾಗುತ್ತದೆ ಎಂಬುದು ಗೊತ್ತಿರುವ ಸಂಗತಿ. ಈ ಜವಾಬ್ದಾರಿಯನ್ನು ಜಯಂತ್ ಚೆನ್ನಾಗಿಯೇ ಅರಿತಿದ್ದಾನೆ. ಅದಕ್ಕೆ ಮಾವನಿಗೆ ಕಷ್ಟ ಕೊಡದೇ ಎಲ್ಲವನ್ನು ಮುಂದೆ ನಿಂತು ನಿಭಾಯಿಸುತ್ತಿದ್ದಾನೆ.

Lakshmi nivasa kannada serial Written Update on march 4th episode

ಮಕ್ಕಳಿಗೆ ಒಡವೆ ಖರೀದಿಸಲು ಹೊರಟ ಕುಟುಂಬ

ಹೆಣ್ಣು ನೋಡಿದ್ದು, ಹೆಣ್ಣು ಕೇಳಿದ್ದು ಅಷ್ಟೇ. ಮದುವೆಯ ಕೆಲಸಗಳು ಲಕ್ಷ್ಮೀ ನಿವಾಸದಲ್ಲಿ ಬಹಳ ಬೇಗನೇ ಶುರುವಾಗಿ ಬಿಟ್ಟವು. ನಿಶ್ಚಿತಾರ್ಥವೂ ನಡೆದು ಹೋಯ್ತು, ಜಾಹ್ನವಿಯ ಹುಟ್ಟುಹಬ್ಬವೂ ಮುಗಿದು ಹೋಯ್ತು. ಈಗ ಮದುವೆಯ ತಯಾರಿಯಲ್ಲಿರುವ ಕುಟುಂಬ ಜವಳಿ ಖರೀದಿಗೆ ಹೋಗಿದೆ. ಜೊತೆಗೆ ಒಡವೆಯ ಖರೀದಿಯನ್ನು ಮಾಡಿ ಮುಗಿಸಿದ್ದಾರೆ.

ಜಾಹ್ನವಿಯನ್ನು ಗಮನಿಸುತ್ತಿದ್ದ ಜಯಂತ್

ಒಡವೆ ಖರೀದಿಗೂ ದೊಡ್ಡ ಶಾಪ್ ಒಂದಕ್ಕೆ ಕರೆದುಕೊಂಡು ಹೋಗಲಾಗಿತ್ತು. ಜಾಹ್ನವಿಗೆ ತನ್ನ ತಂದೆ-ತಾಯಿಯ ಕಷ್ಟ ಗೊತ್ತಿದ್ದ ಕಾರಣ ಕಡಿಮೆ ಬೆಲೆಯ ಒಡವೆಯನ್ನೇ ತೆಗೆದುಕೊಂಡಿದ್ದಾಳೆ. ದೊಡ್ಡ ದೊಡ್ಡ ಆಭರಣ ನೋಡಿ, ಅದರ ಮೇಲಿದ್ದ ಬೆಲೆ ಕಂಡು ಸುಮ್ಮನೆ ಆಗಿದ್ದಾಳೆ. ಇಬ್ಬರು ಅಣ್ಣಂದಿರು ಇದ್ದರು ಯಾವುದೇ ರೀತಿಯಾದ ಸಹಾಯ ಮಾಡುವುದಿಲ್ಲ ಎಂಬುದು ಜಾಹ್ನವಿಗೆ ಗೊತ್ತು. ಹೀಗಾಗಿ ಅಪ್ಪನ ಜೇಬಿನ ಹಣವನ್ನು ಲೆಕ್ಕ ಹಾಕಿ ಕಡಿಮೆ ಹಣದಲ್ಲಿಯೇ ಒಡವೆ ತೆಗೆದುಕೊಂಡಿದ್ದಾಳೆ.

Lakshmi nivasa kannada serial Written Update on march 4th episode

ಜಾಹ್ನವಿ ಇಷ್ಟಪಟ್ಟ ಒಡವೆ ಮನೆಯಲ್ಲಿ

ಜಾಹ್ನವಿಗೂ ದೊಡ್ಡ ದೊಡ್ಡ ಕನಸುಗಳಿವೆ. ಆ ಕನಸುಗಳನ್ನು ಈಡೇರಿಸಿಕೊಳ್ಳಲು ಸ್ವಾರ್ಥವಿಲ್ಲ. ಕಷ್ಟ ಸುಖಗಳನ್ನು ಅರ್ಥ ಮಾಡಿಕೊಳ್ಳುತ್ತಾಳೆ. ಆದರೆ ಜಾಹ್ನವಿಯ ಆಸೆಯನ್ನು ಜಯಂತ್ ಈಡೇರಿಸದೇ ಇರುವುದಿಲ್ಲ. ಜಾಹ್ನವಿಗೆ ಏನಿಷ್ಟ, ಏನು ಕಷ್ಟ ಎಂಬುದೆಲ್ಲವನ್ನು ಗಮನಿಸುತ್ತಾ ಇರುತ್ತಾನೆ. ಒಡವೆ ಅಂಗಡಿಯಲ್ಲೂ ಅಷ್ಟೇ ಜಾಹ್ನವಿ ಯಾವೆಲ್ಲ ಒಡವೆಗಳನ್ನು ನೋಡಿದಳು, ಯಾವೆಲ್ಲಾ ಒಡವೆಗಳನ್ನು ರೇಟ್ ಜಾಸ್ತಿ ಎಂದು ರಿಜೆಕ್ಟ್ ಮಾಡಿದಳು ಎಂಬುದೆಲ್ಲವನ್ನು ಗಮನಿಸಿದ್ದ. ಬಿಟ್ಟು ಬಂದ ಒಡವೆಯನ್ನೆಲ್ಲಾ ಜಯಂತ್ ಮನೆಗೆ ಕಳುಹಿಸಿದ್ದ. ಇದನ್ನು ಕಂಡು ಮನೆ ಮಂದಿಯೆಲ್ಲಾ ಶಾಕ್ ಆಗಿದ್ದರು. ಗೊಂದಲವಾಗಬಾರದೆಂದು ಜಾಹ್ನವಿಗೆ ಮೆಸೇಜ್ ಕೂಡ ಮಾಡಿದ್ದ.

ಜಯಂತ್ ಕಂಡು ಮಹಿಳಾಭಿಮಾನಿಗಳಿಗೆ ಹೊಟ್ಟೆ ಉರಿ

ಈ ಥರದ ಘಟನೆಗಳು ಧಾರಾವಾಹಿಯಲ್ಲಿ ಮಾತ್ರ ನಡೆಯುವುದಕ್ಕೆ ಸಾಧ್ಯ. ನಿಜಜೀವನದಲ್ಲಿ ಅಷ್ಟು ಸುಲಭವಲ್ಲ ಅಲ್ವಾ? ಎಂದು ನೋಡುಗರಿಗೂ ಅನ್ನಿಸದೇ ಇರದು. ಜಯಂತ್ ರೀತಿಯ ಗಂಡ ನಿಜ ಜೀವನದಲ್ಲಿ ಸಿಗುವುದಕ್ಕೆ ಅಸಾಧ್ಯ ಎಂದೇ ಕಮೆಂಟ್ ಹಾಕುತ್ತಿದ್ದಾರೆ. ಹಾಗೇ ಜಯಂತ್ - ಜಾಹ್ನವಿಯ ಮೇಲೆ ಯಾವುದೇ ಕಣ್ಣು ಬೀಳದಿರಲೆಂದು ಹಾರೈಸುತ್ತಿದ್ದಾರೆ. ಜಯಂತ್ ಗುಣ ಎಲ್ಲರಿಗೂ ಗೊಂದಲ ಮೂಡಿಸಿದ್ದು, ಮದುವೆಯ ದಿನ ಏನಾಗುತ್ತೋ ಎಂಬ ಕುತೂಹಲವಿದೆ.

More from Filmibeat

English summary
Lakshmi nivasa kannada serial today episode Written Update; Here is the details about Jayant gave a gift that Jahnavi liked;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X