Lakshmi nivasa: ಜಾನು ಸಿಗದೇ ಸಾಯಲು ಹೊರಟ ವಿಶ್ವ: ಏನ್ ಟ್ವಿಸ್ಟ್ ಸಿಗುತ್ತೋ ಎನ್ನುವ ಕುತೂಹಲ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಜಯಂತ್ ಮನೆಯವರೆಲ್ಲರಿಗೂ ಇಷ್ಟವಾಗುತ್ತಿದ್ದಾನೆ. ಜಾಹ್ನವಿಯ ಫ್ಯಾಮಿಲಿಯನ್ನು ತನ್ನವರಂತೆ ನೋಡುತ್ತಿದ್ದಾನೆ. ಅವರೆಲ್ಲ ಕಷ್ಟಗಳನ್ನು ಹೇಳುವುದಕ್ಕೂ ಮುನ್ನವೇ ಅರ್ಥ ಮಾಡಿಕೊಳ್ಳುತ್ತಿದ್ದಾನೆ. ಏನೇ ಆದರೂ ಸಹಾಯಕ್ಕೆ ಮುಂದಾಗುತ್ತಿದ್ದಾನೆ. ಇದು ಮನೆಯವರ ಮನಸ್ಸನ್ನೆಲ್ಲಾ ಗೆಲ್ಲುವಂತೆ ಮಾಡುತ್ತಿದೆ.
ಮದುವೆಯ ಕಾರ್ಯಗಳು ಶುರುವಾಗಿದೆ. ಈಗಷ್ಟೇ ಒಂದು ಮದುವೆಯಿಂದ ಕೈ ಸುಟ್ಟಿಕೊಂಡಿರುವ ಶ್ರೀನಿವಾಸ್‌ಗೆ ಮತ್ತೊಂದು ಮದುವೆ ಮಾಡುವುದು ಅಷ್ಟು ಸುಲಭವಲ್ಲ. ಆದರೆ ಅವರೆಲ್ಲ ಕಷ್ಟವನ್ನು ಅರ್ಥ ಮಾಡಿಕೊಂಡಿರುವುದು ಜಯಂತ್. ಹೀಗಾಗಿಯೇ ಜಾಹ್ನವಿ ಹೃದಯವನ್ನು ಬೇಗ ಕದ್ದಿದ್ದಾನೆ.

ಜಾಹ್ನವಿಯ ಕನಸ್ಸಲ್ಲೆಲ್ಲಾ ಜಯಂತ್
ಜಯಂತ್ ಈಗಾಗಲೇ ಜಾಹ್ನವಿಯ ಕನಸ್ಸಲ್ಲಿ ಕಾಡುವುದಕ್ಕೆ ಶುರು ಮಾಡಿದ್ದಾನೆ. ತಡರಾತ್ರಿಯಲ್ಲೆಲ್ಲಾ ಮೆಸೇಜ್ ಮಾಡಿ, ಜಾಹ್ನವಿಯ ನಿದ್ದೆ ಕೆಡಿಸುತ್ತಿದ್ದಾನೆ. ಜಾಹ್ನವಿಯ ಇಷ್ಟಾರ್ಥಗಳನ್ನು ಅರ್ಥ ಮಾಡಿಕೊಂಡು ಈಡೇರಿಸುವ ಜಯಂತ್‌ಗೆ ಅದ್ಯಾವಾಗಲೋ ಮನಸೋತಿದ್ದಾಳೆ ಜಾಹ್ನವಿ. ಹೀಗಾಗಿ ಕುಂತರೆ, ನಿಂತರೆ ಜಯಂತ್‌ನದ್ದೇ ಧ್ಯಾನ ಮಾಡುತ್ತಿದ್ದಾಳೆ. ಹೇಳದೆಯೂ ತಮ್ಮ ಫ್ಯಾಮಿಲಿ ಕಷ್ಟವನ್ನು ಅರ್ಥ ಮಾಡಿಕೊಳ್ಳುವ, ತಮ್ಮ ಕುಟುಂಬದವರನ್ನು ತಮ್ಮರಂತೆ ಕಾಣುವ ಜಯಂತ್ ನನ್ನು ಇಷ್ಟ ಪಡದೆ ಇರುವುದಕ್ಕರ ಯಾರಿಂದ ತಾನೇ ಸಾಧ್ಯ ಎಂದು ಜಾಹ್ನವಿಯೇ ಯೋಚನೆ ಮಾಡುತ್ತಿದ್ದಾಳೆ. ಇಂಥ ಹುಡುಗ ಸಿಕ್ಕಿದ್ದು, ನನ್ನ ಪುಣ್ಯ ಎಂದೇ ಭಾವಿಸುತ್ತಿದ್ದಾಳೆ.
ಅಕ್ಕನ ಬಳಿ ಹೊಗಳುತ್ತಿರುವ ಜಾಹ್ನವಿ
ಭಾವನಾ ಆಗಾಗ ಜಾಹ್ನವಿಯ ಮನಸ್ಸನ್ನು ಕೆದಕುತ್ತಿರುತ್ತಾಳೆ. ಆರಂಭದಲ್ಲಿ ಜಯಂತ್ ಬಗ್ಗೆ ಜಾಹ್ನವಿಗೆ ಅಷ್ಟೇನು ಪ್ರೀತಿ, ನಂಬಿಕೆ ಇರಲಿಲ್ಲ. ಆದರೆ ಈಗ ಅವನ ನಡತೆಯಿಂದ ಜಾಹ್ನವಿಯ ಮನಸ್ಸು, ನಿರ್ಧಾರ ಎಲ್ಲವೂ ಬದಲಾಗಿದೆ. ಹೀಗಾಗಿ ಭಾವನಾ ಬಳಿ ಕೂತು ಜಯಂತ್ ಬಗ್ಗೆ ಹೇಳುತ್ತಿದ್ದಾಳೆ. ಮದುವೆಯ ದಿನಾಂಕವೂ ಗೊತ್ತಾಗಿದ್ದು, ನಿನ್ನ ಫ್ರೆಂಡ್ಸ್‌ಗೆಲ್ಲಾ ಹೇಳಿದ್ಯಾ ಅಂತ ಭಾವನಾ ಕೇಳಿದಾಗ, ಎಲ್ಲರಿಗೂ ಹೇಳಿದ್ದೀನಿ. ಆದರೆ ವಿಶ್ವ ಕಾಲ್ ಕೂಡ ರಿಸೀವ್ ಮಾಡ್ತಿಲ್ಲ, ಕಾಲೇಜಿಗೂ ಬರುತ್ತಿಲ್ಲ ಎಂದಿದ್ದಾಳೆ.
ಜಾಹ್ನವಿ ಸಿಗದೇ ಸಾಯಲು ಹೊರಟ ವಿಶ್ವ
ವಿಶ್ವ, ಜಾಹ್ನವಿಯನ್ನು ಮನಸಾರೆ ಪ್ರೀತಿಸುತ್ತಿದ್ದ. ಆದರೆ ಜಾಹ್ನವಿಗೆ ಒಂಚವೂ ಭಾವನೆಗಳು ಬದಲಾಗಿಲ್ಲ. ವಿಶ್ವನನ್ನು ತನ್ನ ಆತ್ಮೀಯ ಸ್ನೇಹಿತ ಎಂದೇ ಕಾಣುತ್ತಿದ್ದಳು. ವಿಶ್ವ ಕೂಡ ಪ್ರೀತಿ ಹೇಳಿಕೊಳ್ಳುವುದಕ್ಕೆ ತಡ ಮಾಡಿದ. ಅಷ್ಟರಲ್ಲಾಗಲೇ ಜಾಹ್ನವಿಗೆ ಮದುವೆಯೂ ಫಿಕ್ಸ್ ಆಗಿತ್ತು. ಜಾಹ್ನವಿಗೆ ಆ ಪ್ರೀತಿಯ ಮಾತುಗಳು, ಭಾವನೆಗಳು ತಲುಪುವುದು ಕಷ್ಟ ಸಾಧ್ಯವಾಯಿತು. ಜಾಹ್ನವಿ, ಜಯಂತ್ ಜೊತೆಗೆ ಪ್ರೀತಿ ಬೆಳೆಸಿಕೊಂಡು ಜೀವನ ಮುಂದುವರೆಸುತ್ತಿರುವಾಗ, ವಿಶ್ವ ತನ್ನ ಪ್ರೀತಿಯನ್ನು ಮರೆಯಲು ಆಗದೆ ಒದ್ದಾಡುತ್ತಿದ್ದಾನೆ. ಕುಡಿಯುವುದನ್ನು ಜಾಸ್ತಿ ಮಾಡಿಕೊಂಡಿದ್ದಾನೆ. ಮನೆಯಲ್ಲೂ ಪ್ರೀತಿಯನ್ನು ಒಪ್ಪಿಕೊಳ್ಳುತ್ತಿಲ್ಲ. ಪ್ರೀತಿ ಮಾಡುವ ತಪ್ಪನ್ನು ಯಾವುದೇ ಕಾರಣಕ್ಕೂ ಮಾಡಬಾರದು ಎಂದೇ ಎಚ್ಚರಿಕೆ ಕೊಟ್ಟಿದ್ದಾನೆ. ಇದೆಲ್ಲದರಿಂದ ಹೊರಗೆ ಬರಲಾಗದೆ, ಪ್ರಾಣವನ್ನೇ ಕಳೆದುಕೊಳ್ಳುವುದಕ್ಕೆ ಮುಂದಾಗಿದ್ದಾನೆ.

ಮತ್ತೇನು ಟ್ವಿಸ್ಟ್ ಕಾದಿದ್ಯೋ?
ಇತ್ತ ಜಯಂತ್ ಧ್ಯಾನದಲ್ಲಿ ಜಾಹ್ನವಿ ಕಳೆದು ಹೋಗಿದ್ದರೆ, ಅತ್ತ ವಿಶ್ವ ಆತ್ಮಹತ್ಯೆಗೆ ಮುಂದಾಗಿದ್ದಾನೆ. ಬಿಲ್ಡಿಂಗ್ ಮೇಲಿಂದ ಬೀಳುವುದಕ್ಕೆ ಹೊರಟಿದ್ದಾನೆ. ಆದರೆ ಇದನ್ನು ನೋಡುಗರು ನಂಬುತ್ತಿಲ್ಲ. ಡೈರೆಕ್ಟರ್ ಅವರನ್ನ ನಂಬುವುದಕ್ಕೆ ಆಗಲ್ಲ, ಯಾವಾಗ ಯಾವ ರೀತಿಯ ಟ್ವಿಸ್ಟ್ ಬೇಕಾದರೂ ಕೊಡಬಹುದು ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ. ಈಗಾಗಲೇ ಭಾವನಾಳ ಕಥೆಯಲ್ಲಿ ಬೇರೆಯದ್ದೇ ರೀತಿಯಾಗಿ ಆಡಿದ್ದಾರೆ. ಟ್ವಿಸ್ಟ್‌ಗಳನ್ನು ನೀಡಿದ್ದಾರೆ. ಹೀಗಾಗಿ ಮದುವೆ ದಿನದ ತನಕ ಕಾಯೋಣಾ ಅಂತಿದ್ದಾರೆ ಪ್ರೇಕ್ಷಕರು.


Click it and Unblock the Notifications











