Lakshmi nivasa: ಭಾವನಾಳ ಸಮಸ್ಯೆ ಸಿದ್ದೇಗೌಡರ ಕಣ್ಣಮುಂದೆ: ಇನ್ನಾದ್ರೂ ಖುಷಿ ಸಿಗುತ್ತಾಳ..?

By ಎಸ್ ಸುಮಂತ್

ಲಕ್ಷ್ಮೀ ನಿವಾಸದಲ್ಲಿ ಭಾವನಾಗೆ ಮದುವೆಯೇ ಆಗದೇ ಇದ್ದರು ಚಿಂತೆ ಇಲ್ಲ. ಆದರೆ ಖುಷಿ ಒಬ್ಬಳು ಜೊತೆಗೆ ಇದ್ದರೆ ನೆಮ್ಮದಿ. ಆಸ್ತಿಯ ದುರಾಸೆಗಾಗಿ ಖುಷಿಯ ಸೋದರತ್ತೆ-ಮಾವ ಕೊಡಬಾರದ ಹಿಂಸೆಯನ್ನು ನೀಡುತ್ತಿದ್ದಾರೆ. ಅದನ್ನು ಸಹಿಸಲಾಗದ ಮಗು ಈಗ ಭಾವನಾ ಅಮ್ಮನನ್ನು ಹುಡುಕಿಕೊಂಡು ಬಂದಿದ್ದಾಳೆ.

ಖುಷಿ‌ ಇನ್ನು ಪುಟ್ಟ ಮಗು. ಆಕ್ಸಿಡೆಂಟ್ ಆದಾಗ ಕಾಲಿಗೆ ಪೆಟ್ಟಾಗಿದೆ. ಅದು ವಾಸಿಯಾಗುವುದಕ್ಕೂ ಮುನ್ನವೇ ಇಡೀ ಮನೆಯ ಕೆಲಸವನ್ನು ಅವಳಿಂದಾನೇ ಮಾಡಿಸಲಾಗುತ್ತಿದೆ. ಬಟ್ಟೆ ಒಣಗಿ ಹಾಕಿದರೆ ಅವಳಿಂದಾನೇ ತರಿಸಿ, ಮಡಿಚಿಡುವುದು, ಕಸ ಗುಡಿಸುವುದು, ನೆಲ ಒರೆಸುವುದು. ಮಗುವಿನ ಕೈನಲ್ಲಿ ಅಸಾಧ್ಯವೆನಿಸುವ ಎಲ್ಲಾ ಕೆಲಸವನ್ನು ಮಾಡಿಸುತ್ತಿದ್ದಾನೆ ಮಾವ ರವಿ.

Lakshmi nivasa kannada serial Written Update on march 6th episode

ಭಾವನಾ ಮೇಲೆ ಸೌಪರ್ಣಿಕ ಗಲಾಟೆ

ಖುಷಿಗೆ ಭಾವನಾ ಅಮ್ಮ ಎಂದರೆ ಇನ್ನಿಲ್ಲದ ಪ್ರೀತಿ. ಭಾವನಾ ಇದ್ದರೆ ಎಲ್ಲಾ ಕಷ್ಟಗಳನ್ನು ಮರೆಯುತ್ತಾಳೆ. ಖುಷಿಯ ಖುಷಿಗಾಗಿಯೇ ಶ್ರೀಕಾಂತ್ ಹಾಗೂ ತಾಯಿ ಭಾವನಾಳನ್ನು ಸೊಸೆ ಮಾಡಿಕೊಳ್ಳಲು ಒಪ್ಪಿಕೊಂಡಿದ್ದರು. ಆದರೆ ರವಿಯ ದುಷ್ಟತನ ಆ ಇಬ್ಬರನ್ನು ಬಲಿ ಪಡೆದುಕೊಂಡಿತ್ತು. ಅಂದಿನಿಂದ ರವಿಯ ಅಧೀನದಲ್ಲಿ ಖುಷಿ ಕಷ್ಟ ಪಡುತ್ತಿದ್ದಳು. ಆ ಕಷ್ಟದಿಂದ ಹೇಗೆ ಹೊರಬರಬೇಕು ಎಂಬುದು ಆ ಪುಟ್ಟ ಮಗುವಿಗೆ ತಿಳಿಯಲೇ ಇಲ್ಲ. ಈಗ ಅಲ್ಲಿಂದ ತಪ್ಪಿಸಿಕೊಂಡು ಬಂದಿದ್ದಾಳೆ. ಇದಕ್ಕೆ ಭಾವನಾ ಕಾರಣ ಎಂದು ಅವರ ಮನೆಗೆ ಬಂದು ಸೌಪರ್ಣಿ ಗಲಾಟೆ ಮಾಡುತ್ತಿದ್ದಾಳೆ.

ಖುಷಿ ನೆನೆದು ಭಾವನಾ ಕಣ್ಣೀರು

ಖುಷಿ ಕಾಣಿಸುತ್ತಿಲ್ಲ ಎಂಬುದನ್ನು ಕೇಳಿದ ಭಾವನಾ ಕುಸಿದು ಹೋಗಿದ್ದಾಳೆ. ಖುಷಿ ಎಲ್ಲಿ ಹೋದಳು ಎಂದು ಅವಳು ಹುಡುಕಾಟ ನಡೆಸಿದ್ದಾಳೆ. ಸೌಪರ್ಣಿಕಾ, ಆಫೀಸಿಗೆ ಕಾಲ್ ಮಾಡಿ ಕೂಡ ವಿಚಾರಿಸಿದ್ದಾಳೆ. ಆದರೆ ಅಲ್ಲಿಯೂ ಇಲ್ಲ ಎಂದು ಗೊತ್ತಾದ ಬಳಿಕ ಮತ್ತಷ್ಟು ಕುಗ್ಗಿ ಹೋಗಿದ್ದಾಳೆ‌. ಖುಷಿ ಎಲ್ಲಿ ಹೋಗಿ ಬಿಟ್ಟಳೊ ಎಂದು ಭಾವನಾ ಕಣ್ಣೀರು ಹಾಕುತ್ತಿದ್ದಾಳೆ. ಅದೇ ಸಮಯಕ್ಕೆ ಭಾವನಾಗೆ ಒಂದು ಕರೆ ಬಂದಿದೆ. ಅದರಿಂದ ಕೊಂಚ ನೆಮ್ಮದಿ ಸಿಕ್ಕಂತೆ ಆಗಿದೆ.

ಸಿದ್ದೇಗೌಡರಿಂದ ಭಾವನಾಗೆ ಮಾಹಿತಿ

ಖುಷಿ‌ ಮನೆಯಿಂದ ಹೊರಗೆ ಬಂದವಳು ರಸ್ತೆಯಲ್ಲಿ ಹೋಗುವವರನ್ನೆಲ್ಲಾ ನಿಲ್ಲಿಸಿ ನಿಮಗೆ ಭಾವನಾ ಅಮ್ಮನ ಮನೆ ಗೊತ್ತಾ ಎಂದು ಕೇಳುತ್ತಿದ್ದಾಳೆ. ಇಲ್ಲ ಎಂದವರನ್ನು ಬಿಟ್ಟು ಮುಂದೆ ಸಾಗಿದ್ದಾಳೆ. ಕಡೆಯಲ್ಲಿ ಸಿದ್ದೇಗೌಡರ ಬಳಿಯೇ ಬಂದು ಕೇಳಿದ್ದಾಳೆ. ಸಿದ್ದೇಗೌಡ್ರು ಇಷ್ಟಪಟ್ಟ ಹುಡುಗಿಯ ಹೆಸರು ಕೂಡ ಗೊತ್ತಿಲ್ಲ. ಆದರೆ ಮಗುವನ್ನು ಸಮಾಧಾನ ಮಾಡಿ, ಅಮ್ಮನ ನಂಬರ್ ತೆಗೆದುಕೊಂಡು ಕರೆ ಮಾಡಿದ್ದಾನೆ. ಭಾವನಾ ಧ್ವನಿ ಕೇಳುತ್ತಿದ್ದಂತೆ ಮನಸ್ಸಿಗೆ ತಟ್ಟಿದೆ, ನಿನ್ನ ಹುಡುಗಿ ಎಂದು ಮನಸ್ಸು ಎಚ್ಚರಿಸಿದೆ. ಆದರೆ ಸಿದ್ದೇಗೌಡ್ರು ಅದನ್ನು ಹೆಚ್ಚು ಗಮನಿಸದೇ ನಿಮ್ಮ ಮಗಳು ಇಲ್ಲಿಯೇ ಇದ್ದಾಳೆ ಎಂದು ಮಾಹಿತಿ‌ ನೀಡಿದ್ದಾರೆ.

Lakshmi nivasa kannada serial Written Update on march 6th episode

ಸಿದ್ದೇಗೌಡರ ಸಹಾಯ ಪಡೆಯುತ್ತಾಳಾ..?

ಭಾವನಾ ಕಷ್ಟ ಪಡುತ್ತಾ ಇದ್ದದ್ದೇ ಖುಷಿಯ ವಿಚಾರಕ್ಕೆ. ಅಂದು ಖುಷಿಯ ಮನೆಯ ಒಳಗೆ ಹೋಗಿ, ಖುಷಿಯನ್ನು ನೋಡಲು ಸಹಾಯ ಮಾಡಿದ್ದು ಕೂಡ ಇದೇ ಸಿದ್ದೇಗೌಡ್ರೇ. ಇದೀಗ ಮತ್ತೆ ಖುಷಿಯನ್ನು ಅವರೇ ತಲುಪಿಸುತ್ತಿದ್ದಾರೆ. ಸಿದ್ದೆಗೌಡರ ಮನುಷ್ಯತ್ವವನ್ನು ಅರ್ಥ ಮಾಡಿಕೊಂಡು, ಭಾವನಾ ತನ್ನ ನಿಜವಾದ ಸಮಸ್ಯೆ ಹೇಳಿಕೊಳ್ಳುತ್ತಾಳಾ ನೋಡಬೇಕಿದೆ. ಸಿದ್ದೇಗೌಡರಿಗೆ ಸಮಸ್ಯೆ ಗೊತ್ತಾದರೆ ಖಂಡಿತ ರವಿಯ ಹುಟ್ಟಡಗಿಸಿ, ಖುಷಿಯನ್ನು ಭಾವನಾಳಿಗೆ ತಲುಪಿಸುತ್ತಾರೆ.

More from Filmibeat

English summary
Lakshmi nivasa kannada serial today episode; Here is the details about Siddegowda called Bhavna about kushi;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X