Lakshmi nivasa: ಖುಷಿ-ಭಾವನಾ ಒಂದಾಗಲೂ ಕಾರಣವಾಗುತ್ತಾ ಆ ಒಂದು ವಿಲ್?
ಶ್ರೀಕಾಂತ್ ಸತ್ತ ಮೇಲೆ ಭಾವನಾಳ ಜೊತೆಗೆ ಖುಷಿ ವಾಸ ಮಾಡುತ್ತಿದ್ದಳು. ಆದರೆ ಖುಷಿಯನ್ನು ಅಲ್ಲಿಯೇ ಬಿಟ್ಟರೆ ಆಸ್ತಿಗೂ ಭಾವನಾ ಬಂದು ಬಿಡಬಹುದು ಎಂಬ ಭಯಕ್ಕೆ ಸೌಪರ್ಣಿಕ ಹಾಗೂ ರವಿ ಪ್ಲ್ಯಾನ್ ಮಾಡಿ ಭಾವನಾ ಹಾಗೂ ಖುಷಿಯನ್ನು ದೂರ ಮಾಡಿದರು. ಖುಷಿಗೂ ಕೊಡಬಾರದ ಹಿಂಸೆ ಕೊಟ್ಟರು. ಭಾವನಾ ಸಾಕಷ್ಟು ಸಲ ಖುಷಿಯನ್ನು ನೋಡುವುದಕ್ಕೆ ಬಂದರೂ ಅದಕ್ಕೂ ಅವಕಾಶ ಕೊಡಲಿಲ್ಲ.
ಖುಷಿಗೂ ಭಾವನಾ ಅಮ್ಮ ಇಲ್ಲದ ಬದುಕು ಕಷ್ಟಸಾಧ್ಯವಾಗಿತ್ತು. ಹೀಗಾಗಿಯೇ ಹೇಗೋ ಮಾಡಿ ಮನೆಯಿಂದ ತಪ್ಪಿಸಿಕೊಂಡು ಬಂದಿದ್ದಳು. ಸಿದ್ದೇಗೌಡ್ರಿಗೆ ಸಿಕ್ಕಿದ್ದಳು. ಖುಷಿಯ ನತಾದೃಷ್ಟ ಮತ್ತೆ ಅದೇ ಸೌಪರ್ಣಿಕಾ ಕೈಗೆ ತಗಲಾಕಿಕೊಂಡಳು. ಈಗ ಅಮ್ಮ-ಮಗುವನ್ನು ಒಂದು ಮಾಡುವುದಕ್ಕೆ ಶ್ರೀಕಾಂತ್ ಬರೆದ ವಿಲ್ ದಾರಿಯಾಗುವ ಎಲ್ಲಾ ಸಾಧ್ಯತೆಯೂ ಇದೆ.

ಆಸ್ತಿ ಆಸೆಗೆ ಬಿದ್ದ ರವಿ
ರವಿಗೆ ಮೊದಲಿಂದಾನೂ ಶ್ರೀಕಾಂತ್ ಆಸ್ತಿಯ ಮೇಲೆ ಕಣ್ಣಿತ್ತು. ಸೌಪರ್ಣಿಕಾ ಕೂಡ ಆಸ್ತಿಯ ಮೇಲೆ ಕಣ್ಣು ಹಾಕಿದ್ದವಳೇ. ಆದರೆ ಅಮ್ಮ, ಅಣ್ಣ ಸಾಯಲಿ ಎಂದು ಯಾವತ್ತು ಬಯಸಿದವಳಲ್ಲ. ಆದರೆ ರವಿ ಆಸ್ತಿಗಾಗಿ ಅವರಬ್ಬರನ್ನು ಕೊಂದೇ ಬಿಟ್ಟ. ಈಗ ಸ್ವಾರ್ಥದ ಮುಂದಿವರೆದ ಭಾಗವಾಗಿ ಇಡೀ ಆಸ್ತಿಯ ವಿಲ್ ಚೆಕ್ ಮಾಡುವುದಕ್ಕೆ ಪ್ರಯತ್ನ ಪಡುತ್ತಿದ್ದಾರೆ. ವಿಲ್‌ನಲ್ಲಿ ಏನಿದೆ ಎಂಬುದನ್ನು ತಿಳಿಯುವ ಪ್ರಯತ್ನದಲ್ಲಿದ್ದಾರೆ ಗಂಡ ಹೆಂಡತಿ.
ವಿಲ್‌ನಲ್ಲಿದೆ ಟ್ವಿಸ್ಟ್
ಅಂದಹಾಗೆ ವಿಲ್ ಓದುವಾಗ ಖುಷಿ ಇರಲೇಬೇಕು ಎಂಬುದು ಮನೆಯವರಿಗೆ ಮೊದಲೇ ಗೊತ್ತಿತ್ತು. ಆದರೆ ಈಗ ಲಾಯರ್ ಮತ್ತೊಂದು ಟ್ವಿಸ್ಟ್ ಕೊಟ್ಟಿದ್ದಾರೆ. ಈ ವಿಲ್ ರಿವೀಲ್ ಆಗಬೇಕು ಎಂದರೆ ಭಾವನಾ ಎಂಬುವವರು ಇಲ್ಲಿಯೇ ಇರಬೇಕು ಎಂದಾಗ ಸೌಪರ್ಣಿಕಾ ಹಾಗೂ ರವಿ ಶಾಕ್ ಆಗಿದ್ದಾರೆ. ಯಾಕಂದ್ರೆ ಭಾವನಾಳ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದಾರೆ, ಕೆಲಸದಿಂದಾನು ತೆಗೆದಿದ್ದಾರೆ. ಈಗ ವಿಲ್‌ನಲ್ಲಿ ಇರುವುದನ್ನು ತಿಳಿಯಬೇಕು ಎಂದರೆ ಭಾವನಾ ಬೇಕು ಎಂದರೆ ಹೇಗೆ ಎಂಬ ಚಿಂತೆಯಾಗಿದೆ. ಜೊತೆಗೆ ಅವಳು ಕೇವಲ ಆಫೀಸ್ ಸಿಬ್ಬಂದಿಯಾಗಿದ್ದವಳು. ಅವಳು ಯಾಕೆ ಎಂದು ಕೇಳಿದಾಗಲೂ, ಲಾಯರ್ ಹೇಳಿದ್ದು ಇಷ್ಟೇ, ಭಾವನಾರನ್ನು ಕರೆದ ಮೇಲೆ ಹೇಳಿ, ವಿಲ್ ಓಪನ್ ಮಾಡುತ್ತೇವೆ ಎಂದು.
ಭಾವನಾಗೆ ಕರೆ ಮಾಡಿದ ಸೌಪರ್ಣಿಕಾ
ವಿಲ್‌ಗೂ ಭಾವನಾಗೂ ಏನು ಸಂಬಂಧ ಎಂದು ರವಿ ಹಾಗೂ ಸೌಪರ್ಣಿಕ ತಲೆ ಕೆಡಿಸಿಕೊಂಡು ಕೂತಿದ್ದಾರೆ. ಏನು ಮಾಡುವುದಕ್ಕೆ ಆಗಲ್ಲ, ವಿಲ್‌ನಲ್ಲಿ ಇರುವುದನ್ನು ತಿಳಿದುಕೊಳ್ಳಬೇಕು ಎಂದರೆ ಭಾವನಾಳನ್ನು ಕರೆಸಬೇಕು. ಅವಳಿಗೆ ಫೋನ್ ಮಾಡು ಎಂದು ಫೋನ್ ಮಾಡಿದ್ದಾಳೆ. ಮೊದಲು ಮನೆಗೆ ಬಾ ಏನೋ ಮಾತನಾಡಬೇಕು ಎಂದು ಕಾಲ್ ಕಟ್ ಮಾಡಿದ್ದಾಳೆ ಸೌಪರ್ಣಿಕಾ. ಇದನ್ನು ಭಾವನಾ ಮನೆಯವರಿಗೆ ತಿಳಿಸಿದ್ದಾಳೆ. ಅಪ್ಪ-ಅಮ್ಮ ಕೂಡ ಶಾಕ್ ಆಗಿದ್ದಾರೆ.

ಶ್ರೀಕಾಂತ್ ಗೊತ್ತಿತ್ತು ರವಿ ವಿಚಾರ
ಶ್ರೀಕಾಂತ್ ಹಾಗೂ ತಾಯಿ ಜಾನಕಿ ಅವರಿಗೆ ಮಗಳು ಹಾಗೂ ಅಳಿಯನ ಬುದ್ದಿ ಮೊದಲೇ ಗೊತ್ತಿತ್ತು. ಭಾವನಾಳನ್ನು ಕಂಡರೆ ಖುಷಿಗೆ ಪ್ರೀತಿ ಎಂಬುದು ತಿಳಿದಿತ್ತು. ಆ ಕಾರಣದಿಂದಾಗಿಯೇ ವಿಲ್‌ನಲ್ಲಿ ಭಾವನಾಳ ಹೆಸರನ್ನು ಸೇರಿಸಲಾಗಿದೆ. ಈಗ ಆಸ್ತಿಗಾಗಿಯಾದರೂ ಸೌಪರ್ಣಿಕಾ ಹಾಗೂ ರವಿ, ಖುಷಿಯನ್ನು ಭಾವನಾಳ ಬಳಿಗೆ ಬಿಡಬಹುದು. ಈಗ ವಿಲ್ ಏನಿದೆ ಎನ್ನುವುದ ಕುತೂಹಲ ಮೂಡಿಸಿದೆ.


Click it and Unblock the Notifications











