Lakshmi nivasa: ಭವಿಷ್ಯ ಉದ್ದಾರ ಆಗಲು ಅಣ್ಣನ ಮಾತು ಕೇಳಿ ಆಸ್ತಿ ಕಬಳಿಸುತ್ತಾಳಾ ಭಾವನಾ?
ಶ್ರೀಕಾಂತ್‌ಗೆ ಭಾವನಾ ಮೇಲೆ ತುಂಬಾ ನಂಬಿಕೆ. ಅವಳು ಆಫೀಸ್ ಸಿಬ್ಬಂದಿಯಾಗಿದ್ದಾಗಲೂ ಅವಳ ನಡೆ-ನುಡಿ ಕಂಡು ನಂಬಿಕೆ ಇಟ್ಟುಕೊಂಡಿದ್ದ. ಆ ಕಾರಣಕ್ಕಾಗಿಯೇ ಅಮ್ಮ ಮದುವೆ ವಿಚಾರ ತೆಗೆದ ಕೂಡಲೇ ಭಾವನಾಳನ್ನು ಮದುವೆಯಾಗುವುದಕ್ಕೆ ಒಪ್ಪಿಕೊಂಡು ಬಿಟ್ಟ. ವಿಧಿಯಾಟಕ್ಕೆ ಬಲಿಯಾಗುವ ಸೂಚನೆ ಇತ್ತೋ ಏನೋ, ಮೊದಲೇ ಭಾವನಾ ಹೆಸರು ಸೇರಿಸಿ ವಿಲ್ ಮಾಡಿಟ್ಟಿದ್ದ.
ರವಿಯ ಕೆಟ್ಟ ಬುದ್ದಿಯ ಸೂಚನೆ ಮೊದಲೇ ಇದ್ದ ಕಾರಣ ಖುಷಿಯನ್ನು ಯಾರು ಸಾಕುತ್ತಾರೆ ಅವರಿಗೆ ಆಸ್ತಿಯಲ್ಲಿ ಅರ್ಧ ಭಾಗ ಎಂಬುದನ್ನು ಬರೆದಿದ್ದರು. ಜೊತೆಗೆ ಯಾವುದೇ ದಾಖಲೆಗಳು ಮುಂದಕ್ಕೆ ಹೋಗಬೇಕೆಂದರು ಭಾವನಾಳ ಸಹಿಯ ಅವಶ್ಯಕತೆ ಇತ್ತು. ಆ ರೀತಿ ವಿಲ್ ಬರೆಸಲಾಗಿತ್ತು.

ಭಾವನಾ ಮುಂದೆ ವಿಲ್ ರಿವೀಲ್
ಶ್ರೀಕಾಂತ್ ಬರೆದ ವಿಲ್ ರಿವೀಲ್ ಆಗಬೇಕು ಎಂದರೆ ಅಲ್ಲಿ ಭಾವನಾ ಇರಲೇಬೇಕು ಎಂದು ವಕೀಲರು ಹೇಳಿದ್ದರು. ಹೀಗಾಗಿ ಸೌಪರ್ಣಿಕ ಹಾಗೂ ರವಿ ಮಾತನಾಡಿ ಭಾವನಾಳನ್ನು ಕರೆಸಿದ್ದರು. ಭಾವನಾ ಜೊತೆಗೆ ಅವರ ಅಣ್ಣ ಕೂಡ ಬಂದಿದ್ದ. ವಿಲ್ ರಿವೀಲ್ ಆಯ್ತು ಅದರಲ್ಲಿ ಎಲ್ಲದಕ್ಕೂ ಭಾವನಾ ಸಹಿ ಬೇಕೆ ಬೇಕು ಎಂಬುದಿತ್ತು. ಅದಕ್ಕೆ ಸೌಪರ್ಣಿಕಾ ಸಿಕ್ಕಾಪಟ್ಟೆ ಕೋಪ ಮಾಡಿಕೊಂಡಳು. ಇದು ಅಸಾಧ್ಯ ಎಂದು ಭಾವನಾ ಕ್ಯಾರೆಕ್ಟರ್ ಮೇಲೆಯೇ ಅನುಮಾನ ಪಟ್ಟಳು. ಇದು ಅವರಣ್ಣನಿಂದ ಸಹಿಸಲಾಗದೇ ಅಲ್ಲಿಂದ ಕರೆದುಕೊಂಡು ಹೋಗಿ ಬಿಟ್ಟ.
ಮನೆಗೆ ಕರೆದುಕೊಂಡು ಹೊರಟ ಅಣ್ಣ
ಭಾವನಾಳ ಅಣ್ಣ ಅಲ್ಲಿಂದ ಕರೆದುಕೊಂಡು ಹೋಗಿದ್ದು, ಭಾವನಾಳ ಮೇಲಿನ ಪ್ರೀತಿ, ಕಾಳಜಿಯಿಂದ ಅಲ್ಲ. ಬದಲಿಗೆ ಅವಳ ಹೆಸರಲ್ಲಿ ಕೋಟ್ಯಾಂತರ ರೂಪಾಯಿ ಆಸ್ತಿ ಇದೆ. ಸಹಿ ಹಾಕುವುದರಿಂದ 'ಲಕ್ಷ್ಮೀ ನಿವಾಸ' ಉದ್ಧಾರ ಆಗುತ್ತದೆ ಎಂಬ ದುರಾಸೆ. ಅದಕ್ಕಾಗಿಯೇ ಮನೆಯ ಹೊಸ್ತಿಲು ತುಳಿಯುತ್ತಿದ್ದಂತೆ, ಅಲ್ಲಿ ನಡೆದ ವಿಚಾರವನ್ನು ಮನೆಯವರೆದುರು ತಿಳಿಸಿದಳು. ಬಳಿಕ ಇದರ ಬಗ್ಗೆ ಸ್ವಲ್ಪ ಯೋಚನೆ ಮಾಡು. ಹಣ ಇದ್ದರೆ ಜೀವನ ಎಂಬ ಸ್ವಾರ್ಥದಲ್ಲಿ ಮಾತನಾಡಿ ಹೋದ.
ಭಾವನಾಗೆ ಕರೆ ಮಾಡಿದ ಸೌಪರ್ಣಿಕಾ
ಸೌಪರ್ಣಿಕಾ ಈ ವಿಚಾರದಲ್ಲಿ ಕೋಪ ಮಾಡಿಕೊಳ್ಳುವುದರಲ್ಲಿ ಯಾವ ಅರ್ಥವೂ ಇರಲಿಲ್ಲ. ಲಾಯರ್ ಅದನ್ನು ಅಚ್ಚುಕಟ್ಟಾಗಿ ತಿಳಿಸಿದ್ದರು. ಇದು ಕೋಪ ಮಾಡಿಕೊಳ್ಳುವುದರಿಂದ ಸರಿಯಾಗುವುದಿಲ್ಲ. ಬದಲಿಗೆ ಭಾವನಾಳ ಜೊತೆಗೆ ಕೂತು ಮಾತನಾಡಿ ಎಂದಿದ್ದರು. ಅದನ್ನು ನೆನೆದು, ಸಮಾಧಾನವಾಗಿ ಯೋಚನೆ ಮಾಡಿ, ಮತ್ತೆ ಭಾವನಾಗೆ ಕಾಲ್ ಮಾಡಿದ್ದಾಳೆ. ವಿಲ್ ಬಗ್ಗೆ ಕೂತು ಮಾತನಾಡಬೇಕಿದೆ ಎಂದಿದ್ದಾಳೆ.

ಭಾವನಾ ಸಮಸ್ಯೆಗೆ ಪರಿಹಾರ ಹುಡುಕಲು ನಿರ್ಧಾರ
ನಡೆದ ಘಟನೆಯನ್ನು ಭಾವನಾ ಅದಾಗಲೇ ಅಪ್ಪ-ಅಮ್ಮನ ಬಳಿ ಹಂಚಿಕೊಂಡಿದ್ದಳು. ಹೀಗಾಗಿ ಸೌಪರ್ಣಿಕ ಕಾಲ್ ಮಾಡಿದಾಗ ಲಕ್ಷ್ಮೀಯೇ ರಿಸೀವ್ ಮಾಡಿದ್ದಾಳೆ. ವಿಚಾರ ಕೇಳಿದಾಗ ವಿಲ್ ಬಗ್ಗೆ ಮಾತನಾಡುವುದಕ್ಕೆ ಎಂದಿದ್ದಾಳೆ. ಹಾಗಾದರೇ ಮನೆಗೆ ಬಂದು ಆ ಬಗ್ಗೆ ಮಾತನಾಡುತ್ತೀವಿ ಎಂದಿದ್ದಾಳೆ. ಲಕ್ಷ್ಮೀ ಹಾಗೂ ಶ್ರೀನಿವಾಸ ಇಬ್ಬರಿಗೂ ಬೇರೆಯವರ ಹಣದ ಮೇಲೆ ಆಸೆ ಇಲ್ಲ. ಸ್ವಾಭಿಮಾನದ ಬದುಕನ್ನೇ ಬದುಕುತ್ತಿದ್ದಾರೆ. ಆದರೆ ಇಬ್ಬರು ಗಂಡು ಮಕ್ಕಳಿಗೆ ಮಾತ್ರ ಯಾರದ್ದೇ ಹಣವಾದರೂ ಸರಿ, ಅದನ್ನು ಖರ್ಚು ಮಾಡಿಸಿಬಿಡಬೇಕು ಎಂಬುದು, ನಮ್ಮದೇ ಆಗಬೇಕು ಎಂಬ ದುರಾಸೆ ಇದೆ. ಹಣ, ಆಸ್ತಿಗೆ ಆಸೆ ಪಡದ ಭಾವನಾ, ಖುಷಿಯನ್ನು ಕೇಳುವ ಸಾಧ್ಯತೆ ಇದೆ.


Click it and Unblock the Notifications











