Lakshmi nivasa: ತವರಿಗೆ ಹೊರಟ ಜಾಹ್ನವಿಯನ್ನು ತಡೆಯಲು ಗ್ಲಾಸ್ ಒಡೆದು ಪೆಟ್ಟು ಮಾಡಿಕೊಂಡ ಜಯಂತ್!
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇರುವ ಜಯಂತ್ ಕ್ಯಾರೆಕ್ಟರ್ ನಿಜವಾಗಿಯೂ ಇರಬಹುದು. ಆದರೆ ಆ ಹೆಣ್ಣು ಮಗುವಿನ ಸ್ಥಿತಿ ನೆನೆಸಿಕೊಂಡರೇನೆ ಭಯವಾಗುತ್ತೆ. ಸಾಮಾನ್ಯರ ಜೀವನದಲ್ಲಿ ಅಲ್ಲ, ಎಷ್ಟೋ ನಟಿಮಣಿಯರಿಗೇನೆ ಈ ರೀತಿಯ ಸೈಕೋಗಳು ಸಿಕ್ಕಿದ್ದಾರೆ. ಆ ಸ್ಟೋರಿಗಳನ್ನು ನಾವೂ ಕೇಳಿದ್ದೇವೆ. ಅವರಿಂದ ಅದೆಷ್ಟು ಕಷ್ಟ ಪಟ್ಟು ಬಿಡಿಸಿಕೊಂಡು ಬಂದಿರಬೇಕು ಎಂಬುದನ್ನು ಈ ಧಾರಾವಾಹಿ ನೋಡಿ ನೆನೆಸಿಕೊಂಡರೇನೆ ಮೈ ಝುಮ್ ಎನ್ನುತ್ತದೆ.
ಜಯಂತ್ ವರ್ತನೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಜಾಹ್ನವಿ ತನ್ನ ಕಾಲೇಜು ಹುಡುಗರನ್ನು ಮಾತನಾಡಿಸಿದರೆ ಅದನ್ನು ಜಯಂತ್ ದ್ವೇಷ ಮಾಡಿದರೆ ಆಗ ಪೊಸೆಸಿವ್ ಎಂಬ ಅರ್ಥವನ್ನಾದರೂ ಕೊಡಬಹುದು. ಆದರೆ ಸ್ವಂತ ತಂದೆ-ತಾಯಿ, ಅಣ್ಣ,ಅಕ್ಕಂದಿರ ಜೊತೆಗೂ ನಗ್ತಾ ನಗ್ತಾ ಮಾತನಾಡಬಾರದು ಎಂದರೆ ಇದ್ಯಾವ ರೀತಿಯ ಮನಸ್ಥಿತಿ ಎಂಬುದೇ ಅರ್ಥವಾಗದೇ ವೀಕ್ಷಕರು ಭಯಗೊಂಡಿದ್ದಾರೆ.

ಮಗಳ ಜೊತೆಗೆ ಸಂತಸದ ಸಮಯ
ಮಗಳ ಫೋನ್ ಕನೆಕ್ಟ್ ಆಗ್ತಿಲ್ಲ ಅಂತ ಮಗಳ ಮನೆಗೆ ಬಂದ ಲಕ್ಷ್ಮೀ-ಶ್ರೀನಿವಾಸ ಕುಟುಂಬ, ವಾರವಿಡೀ ಅಳಿಯನ ಮನೆಯಲ್ಲಿಯೇ ಇದ್ದರು. ಈ ಸಮಯದಲ್ಲಿ ಜಾಹ್ನವಿಗೆ ಬೆಟ್ಟದಷ್ಟು ಖುಷಿಯಾದರೆ ಜಯಂತ್‌ಗೆ ತಡೆಯಲಾರದಷ್ಟು ಕೋಪ ಬರ್ತಾ ಇತ್ತು. ಅದರಲ್ಲೂ ಅಡುಗೆ ಮಾಡಲೆಂದು ಮನೆಯೆಲ್ಲಾ ಗಲೀಜು ಮಾಡಿದರೆ ಮನಸ್ಸಲ್ಲೇ ಒಂದಷ್ಟು ಶಾಪ ಹಾಕಿಕೊಳ್ಳುತ್ತಿದ್ದ. ಆದರೆ ಮಾತಲ್ಲಿ ಮಾತ್ರ ಪ್ರೀತಿ ತೋರುತ್ತಿದ್ದ.
ತವರಿಗೆ ಮಗಳು
ಲಕ್ಷ್ಮೀ, ಶ್ರೀನಿವಾಸ, ಅಜ್ಜಿ ಹಾಗೂ ವೆಂಕಿ ಮಗಳ ಮನೆಯಲ್ಲಿ ಸಖತ್ ಎಂಜಾಯ್ ಮಾಡಿದರು. ಈಗ ಮನೆಗೆ ಹೊರಡುವ ಸಮಯ. ಮಗಳನ್ನು ಕರೆದುಕೊಂಡು ಹೋಗುವ ಬಯಕೆ. ಅದಕ್ಕೆಂದೇ ಜಯಂತ್ ಬಳಿ ನಾವೂ ಜಾಹ್ನವಿಯನ್ನು ಕರೆದುಕೊಂಡು ಹೋಗುತ್ತೇವೆ. ಒಂದು ವಾರ ಇರಲಿ ಎಂದಿದ್ದಾರೆ. ಜಯಂತ್ ಮನಸ್ಸಲ್ಲಿ ಅದೆಷ್ಟೇ ಕೋಪ ತಾಪವಿದ್ದರು ಜಾಹ್ನವಿಯ ತಂದೆ ತಾಯಿಗೆ ಅದನ್ನು ಹೇಳುವಂತೆ ಇಲ್ಲ.

ಗ್ಲಾಸ್ ಪುಡಿ ಪುಡಿ ಮಾಡಿದ ಜಯಂತ್
ಜಾಹ್ನವಿ ಹೊರಗಿನ ಪ್ರಪಂಚ ನೋಡುವುದೇ ಜಯಂತ್‌ಗೆ ಇಷ್ಟವಿಲ್ಲ. ಮನೆಯವರ ಜೊತೆಗೆ ಮಾತನಾಡುವುದನ್ನೇ ಸಹಿಸದೇ ಫೋನ್ ಲೈನ್ ಕಿತ್ತು ಬಿಸಾಡಿದ್ದಾನೆ. ಅಪ್ಪ ಅಮ್ಮನ ಜೊತೆಗೆ ಖುಷಿಯಾಗಿದ್ದದ್ದನ್ನು ಕಂಡು ಮನಸ್ಸಿನಲ್ಲಿಯೇ ಕೊತ ಕೊತ ಅಂತ ಕುದಿಯುತ್ತಿದ್ದಾನೆ. ಈಗ ಜಾನು ತವರಿಗೆ ಹೊರಟರೆ ಸುಮ್ಮನೆ ಇರುತ್ತಾನೆಯೇ. ಅದನ್ನು ತಪ್ಪಿಸಲು ಪ್ಲ್ಯಾನ್ ಮಾಡುವಾಗಲೇ ಜಾನುಗೆ ಬಿಕ್ಕಳಿಕೆ ಬಂದಿದೆ. ನೀರು ತರುತ್ತೀನಿ ಎಂದು ಹೋದವನು ನೀರಿನ ಗ್ಲಾಸ್ ಅನ್ನು ಕೈನಲ್ಲೇ ಪೀಸ್ ಪೀಸ್ ಮಾಡಿದ್ದಾನೆ. ಕೈ ತುಂಬಾ ರಕ್ತ ಬಂದಿದೆ.
ನಿರ್ದೇಶಕರ ಮೇಲೆ ವೀಕ್ಷಕರ ಬೇಸರ
ಜಯಂತ್ ಪ್ರತಿಸಲ ಜಾನುಗೆ ನೋವು ಕೊಟ್ಟು ಏನೋ ಒಂದು ಹೇಳಿ ಸಮಾಧಾನ ಮಾಡುತ್ತಾನೆ. ನನಗೆ ನೀವೂ ಬಿಟ್ಟರೆ ಇನ್ಯಾರಿದ್ದಾರೆ ಚಿನ್ನುಮರಿ. ನೀವೂ ಹೀಗೆ ಅಳಬಾರದು ಅಂತೆಲ್ಲಾ ಪೂಸಿ ಹೊಡೆಯುತ್ತಾನೆ. ಇವನ ಮಾತು, ನಡವಳಿಕೆ ನೋಡಿ ನೋಡಿ ಪ್ರೇಕ್ಷಕರು ಒಂದು ನಿರ್ಧಾರಕ್ಕೆ ಬಂದಿದ್ದಾರೆ. ಖಂಡಿತ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವ ವ್ಯಕ್ತಿ ಇಷ್ಟೇ ಸೈಕೋ ಆಗಿರಬೇಕು. ಅದಕ್ಕೆ ಈ ರೀತಿಯ ಕ್ರೂರತೆ ತೋರಿಸುತ್ತಿದ್ದಾನೆ ಎಂದೆಲ್ಲಾ ಕಮೆಂಟ್ ಹಾಕುತ್ತಿದ್ದಾರೆ.


Click it and Unblock the Notifications











