Lakshminivasa: ಗೌಡ್ರಿಗೆ ನಿಜಕ್ಕೂ ಇಷ್ಟೊಂದು ಧೈರ್ಯ ಬಂತಾ? ವೆಂಕಿ ಕನಸ್ಸಲ್ಲ ತಾನೇ?

By ಎಸ್ ಸುಮಂತ್

ಭಾವನಾ ಕೊರಳಿಗೆ ತಾಳಿ ಬಿದ್ದಾಗಿನಿಂದ ಭಾವನಾ ನೆಮ್ಮದಿಯಾಗಿ ಇಲ್ಲ. ಭಾವನಾಗೆ ನೋವು ಕೊಡುವ ಯಾವ ಉದ್ದೇಶವೂ ಸಿದ್ದೇಗೌಡರಿಗೆ ಇಲ್ಲ. ಅದರಲ್ಲೂ ಭಾವನಾ ನೊಂದುಕೊಂಡರೆ ಸಿದ್ದುಗೆ ಸಹಿಸುವುದಕ್ಕೆ ಆಗಲ್ಲ.

ಭಾವನಾ, ಸಿದ್ದೇಗೌಡರಿಗಿಂತ ವಯಸ್ಸಿನಲ್ಲಿ ಹಿರಿಯಳು. ಭಾವನಾಗೆ ಗೌಡ್ರ ಬಗ್ಗೆ ಆ ರೀತಿಯ ಯಾವ ಫೀಲಿಂಗ್ಸ್ ಕೂಡ ಇಲ್ಲ. ಆದರೆ ಮುಚ್ಚಿಟ್ಟ ಸತ್ಯ ಹೇಳಲು ಈಗ ಎಲ್ಲಾ ಸಮಯ ಒಟ್ಟಿಗೆ ಬಂದಿದೆ.

Lakshmi nivasa kannada serial Written Update on October 2nd episode

ಸಿದ್ದೇಗೌಡ್ರನ್ನ ಕಂಡರೆ ಈ ಮೊದಲೆಲ್ಲಾ ಭಾವನಾ ಇರಿಸು ಮುರಿಸು ಮಾಡಿಕೊಳ್ಳುತ್ತಿದ್ದಳು. ಗೌಡ್ರಿಗೆ ಅದ್ಯಾವಾಗ ಎಂಗೇಜ್ಮೆಂಟ್ ಆಯ್ತೋ ಅಂದಿನಿಂದ ಚೆನ್ನಾಗಿಯೇ ಮಾತನಾಡಿಸುವುದನ್ನು ಕಲಿತಿದ್ದಳು. ತನಗಾದ ನೋವನ್ನು ಸಿದ್ದೇಗೌಡ್ರಿಗೆ ಹೇಳಿಕೊಂಡು, ತಾಳಿ ಕಟ್ಟಿದವನನ್ನು ಹುಡುಕಲು ಸಮಯವನ್ನು ನೀಡಿದ್ದಳು. ಈಗ ಸಿದ್ದು ಎಲ್ಲರ ಎದುರು ಹೇಳಿಕೊಂಡು ಬಿಟ್ಟಿದ್ದಾನೆ.

ಸತ್ಯ ನುಡಿದುಬಿಟ್ಟ ಸಿದ್ದು

ಮುನಿಸ್ವಾಮಿ ಹಾಗೂ ಜವರೇಗೌಡ ಇಬ್ಬರ ಸ್ನೇಹ ಎಂಥದ್ದು ಎಂದು ಸಾರುವುದಕ್ಕೂ ಒಂದೊಳ್ಳೆ ವೇದಿಕೆ ರೆಡಿಯಾಗಿತ್ತು. ಇಬ್ಬರು ರಾಜಕೀಯದಲ್ಲೂ ಗಟ್ಟಿಯಾಗಿ ನಿಲ್ಲಬೇಕು, ಜನಸೇವೆ ಮಾಡುತ್ತೇವೆ ಎಂದು ಹೇಳಿದ ಅದೇ ವೇದಿಕೆಯಲ್ಲಿ ನಾವಿಬ್ಬರು ಇನ್ಮುಂದೆ ಬೀಗರು ಎಂಬುದನ್ನು ಜವರೇಗೌಡ ತಿಳಿಸಿದ್ದರು. ಅದೇ ವೇದಿಕೆಗೆ ಬಂದ ಬಂದ ಸಿದ್ದೆಗೌಡರು ನನಗೆ ಈಗಾಗಲೇ ಮದುವೆಯಾಗಿದೆ ಎಂದುಸತ್ಯ ಹೇಳಿದ.

ಭಾವನಾಳ ಕೈಹಿಡಿದು ನಿಂತ ಸಿದ್ದು

ಭಾವನಾ ತಂದೆ ಶ್ರೀನಿವಾಸ್ ಈಗಾಗಲೇ ಜವರೇಗೌಡರ ಮನೆಗೆ ಹೋಗಿ ಸಮಸ್ಯೆಯನ್ನು ಹೇಳಿದ್ದಾರೆ. ಭಾವನಾ ಕುತ್ತಿಗೆಗೆ ಯಾರೋ ತಾಳಿ ಕಟ್ಟಿದ್ದಾರೆ, ಅವರನ್ನು ಹುಡುಕಿಸಿಕೊಡಿ ಎಂದು ಕೇಳಿದ್ದಾರೆ. ತಾಳಿ ಕಟ್ಟಿದವನನ್ನು ಹುಡುಕಿಸಿಕೊಡುತ್ತೇನೆಂದು ಜವರೇಗೌಡ ಕೂಡ ಮಾತು ಕೊಟ್ಟಿದ್ದರು‌. ಈಗ ನೋಡಿದ್ರೆ ಸಿದ್ದೇಗೌಡ ತುಂಬಿದ ವೇದಿಕೆಯಲ್ಲಿ ಬಂದು, ಅದೇ ತಂದೆಯ ಮುಂದೆ ನಿಂತು, ನಾನು ಈ ಊರಿನ ಅಳಿಯ. ನಾನು ಮದುವೆಯಾಗಿರುವ ಹುಡುಗಿಯನ್ನು ನಿಮಗೆಲ್ಲಾ ತೋರಿಸುತ್ತೇನೆ ಎಂದು ಹೇಳಿ, ಭಾವನಾಳ ಕೈ ಹಿಡಿದು ಕರೆದುಕೊಂಡು ಹೋಗಿ ತೋರಿಸಿದ್ದಾನೆ.

ಗೌಡ್ರ ನಡೆಗೆ ಖುಷಿಪಟ್ಟ ವೆಂಕಿ

ಗೌಡ್ರು, ಭಾವನಾಳ ಕೈಹಿಡಿದು ವೇದಿಕೆ ಮುಂಭಾಗಕ್ಕೆ ಕರೆದುಕೊಂಡು ಹೋಗುತ್ತಿದ್ದಂತೆ ಎಲ್ಲರೂ ಶಾಕ್ ಆಗಿದ್ದಾರೆ. ಅದರಲ್ಲೂ ಭಾವನಾಗೆ ದಿಗ್ಭ್ರಮೆಯಾಗಿದೆ. ಭಾವನಾ ಮನೆಯವರೆಲ್ಲ ಕಲ್ಲು ಕಂಬದಂತೆ ನಿಂತು ಬಿಟ್ಟಿದ್ದಾರೆ. ಇದರ‌ ನಡುವೆ ಹೆಚ್ಚು ಖುಷಿ ಪಟ್ಟಿದ್ದು ಮಾತ್ರ ವೆಂಕಿ. ಯಾಕಂದ್ರೆ ಭಾವನಾಗೆ ಅನ್ಯಾಯವಾಗಬಾರದು ಎಂದು ವೆಂಕಿ ಸಾಕಷ್ಟು ಕಷ್ಟಪಟ್ಟಿದ್ದಾನೆ. ಸಿದ್ದುಗೂ ಈ ವಿಚಾರ ಹೇಳಿ, ಪ್ರಮಾಣ ಮಾಡಿಸಿಕೊಂಡಿದ್ದ. ಹೀಗಾಗಿ ವೇದಿಕೆ ಮೇಲೆ ಹೇಳಿದ ಕೂಡಲೇ ವೆಂಕಿ ಸಂತಸಗೊಂಡಿದ್ದಾನೆ.

ಕನಸಾಗದಿರಲಿ ಎಂದು ಹಾರೈಕೆ

ಈ ದಿನಕ್ಕಾಗಿ ವೀಕ್ಷಕರು ಕೂಡ ಕಾಯುತ್ತಿದ್ದರು. ಆದರೆ ಅದಕ್ಕೆ ವಿಘ್ನಗಳೇ ಹೆಚ್ಚು ಬರುತ್ತಿದ್ದವು. ಈಗ ಅದಕ್ಕೆ ಕಾಲ ಕೂಡಿ ಬಂದಿದೆ. ಸಿದ್ದೇಗೌಡರ, ತ್ರಿಲೋಕ ಜ್ಞಾನಿಗಳ ಆಶೀರ್ವಾದದಂತೆ ಎಲ್ಲರ ಎದುರು ಸತ್ಯ ಒಪ್ಪಿಕೊಂಡಿದ್ದಾನೆ. ಇದು ಯಾವುದೇ ಕಾರಣಕ್ಕೂ ಸುಳ್ಳಾಗಿರಬಾರದು ಎಂದು ವೀಕ್ಷಕರು ಮನವಿ ಮಾಡುತ್ತಿದ್ದಾರೆ. ಯಾಕಂದ್ರೆ ಈ ರೀತಿಯ ಟ್ವಿಸ್ಟ್ ಇರುವಂತ ಎಪಿಸೋಡ್‌ಗಳಲ್ಲಿ ಯಾರಿಗೋ ಬಿದ್ದ ಕನಸೇ ಆಗಿರುತ್ತದೆ. ಇಲ್ಲಿ ವೆಂಕಿ ಕಂಡ ಕನಸ್ಸಂತೆ ದಯವಿಟ್ಟು ತೋರಿಸಬೇಡಿ. ಇದು ಸತ್ಯವೇ ಆಗಿರಲಿ ಎಂದು ಮನವಿ ಮಾಡಿದ್ದಾರೆ.

More from Filmibeat

English summary
Lakshmi nivasa kannada serial today episode. Here is the details about It is difficult for Siddegowda to tell the truth about Siddegowda admitted the truth in front of Bhavana;
Read more about: tv serial sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X