Lakshmi nivasa: 'ಲಕ್ಷ್ಮೀ ನಿವಾಸ'ದಲ್ಲಿ ಮದುವೆ ಸಂಭ್ರಮ: ಸಿದ್ದೇಗೌಡ್ರು ರೀಲ್ಸ್ ಮಾಡೋದ್ರಲ್ಲಿ ಬ್ಯುಸಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯವರು, ನೆಂಟರೆಲ್ಲ ಮದುವೆ ಸಂಭ್ರಮದಲ್ಲಿ ಮಿಂದೆದ್ದಿದ್ದಾರೆ. ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಿ, ಒಂದು ಸುಂದರವಾದ ಮನೆ ಕಟ್ಟಬೇಕು ಎಂಬುದೇ ಲಕ್ಷ್ಮೀ ಶ್ರೀನಿವಾಸರ ಆಸೆಯಾಗಿದೆ. ಆ ಆಸೆಯಲ್ಲಿ ಒಂದು ಆಸೆ ನೆರವೇರಿದೆ.
ಭಾವನಾ ಮೂಲ ನಕ್ಷತ್ರದಲ್ಲಿ ಹುಟ್ಟಿರುವುದೇ ತೊಂದರೆಯಾಗಿದೆ. ಮದುವೆಗೆ ಬಂದವರಿಗೆ ಹುಡುಗಿ ಇಷ್ಟವಾದರೂ ಜಾತಕ ಇಷ್ಟ ಆಗುತ್ತಿಲ್ಲ. ಹೀಗಾಗಿ ಭಾವನಾಗೆ ಮದುವೆಯಾಗದೆ ಹಾಗೇ ಉಳಿದು ಬಿಟ್ಟಿದ್ದಾಳೆ. ಭಾವನಾಳದ್ದು ಒಂದು ಮದುವೆ ಆಗಿ ಬಿಟ್ಟರೆ ಲಕ್ಷ್ಮೀ-ಶ್ರೀನಿವಾಸರಿಗೆ ನೆಮ್ಮದಿ. ಸದ್ಯಕ್ಕೆ ಸಿದ್ದೇಗೌಡ್ರು ಭಾವನ ಹಿಂದೆ ಹಿಂದೆ ಹೋಗುತ್ತಾ ಇದ್ದಾರೆ. ಭಾವನಾಳನ್ನು ಮನಸಾರೆ ಪ್ರೀತಿ ಮಾಡುತ್ತಿದ್ದಾರೆ. ಅದೇ ಖುಷಿಯಲ್ಲಿ ಮದುವೆ ಮನೆಯಲ್ಲೆಲ್ಲಾ ರೀಲ್ಸ್ ಮಾಡಿಕೊಂಡು ಓಡಾಡುತ್ತಿದ್ದಾರೆ.

ಭಾವನಾ ಹಿಂದೆ ಹಿಂದೆ ಸಿದ್ದೇಗೌಡ್ರು
ಭಾವನಾ ಲಕ್ಷ್ಮಕ್ಕನ ಮಗಳು ಎಂದು ಗೊತ್ತಾಗಿದ್ದೆ ತಡ ಸಿದ್ದೇಗೌಡ್ರು ಆಕಾಶದಲ್ಲಿ ತೇಲಾಡುತ್ತಿದ್ದಾರೆ. ಅದರಲ್ಲೂ ತನ್ನ ಸ್ವಂತ ಅಕ್ಕನ ನಾದಿನಿ ಅಂದ್ರೆ ಕೇಳಬೇಕೆ. ಈಗ ಸಿದ್ದೇಗೌಡ್ರಿಗೆ ಸ್ವರ್ಗಕ್ಕೆ ಮೂರೇ ಗೇಣು. ಭಾವನಾ ಎಲ್ಲೋದ್ರು ಹಿಂದೆನೇ ಹೋಗ್ತಾ ಇರ್ತಾನೆ. ಭಾವನಾ ಎಲ್ಲೇ ಬಂದ್ರು ಸುಮ್ಮನೆ ಮಾತನಾಡಿಸುತ್ತಲೇ ಇರುತ್ತಾನೆ. ಭಾವನಾಗೆ ಇದು ಯಾಕೋ ಅತಿಯಾಗಿದೆ ಅಂತಾನೇ ಅನಿಸಿದೆ. ಎಚ್ಚರಿಕೆಯನ್ನು ಕೊಟ್ಟಿದ್ದಾಳೆ. ಆದರೆ ಏನು ಮಾಡೋದು ಅತ್ತಿಗೆಯ ತಮ್ಮ ಬೇರೆ.
ಸಿದ್ದೇಗೌಡ್ರು ಬಿಂದಾಸ್
ಸಿದ್ದೇಗೌಡ್ರು ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾರೆ. ಸೆಟ್‌ನಲ್ಲಿ ಕೊಂಚ ಬಿಡುವಾದರೂ ಸರಿ ರೀಲ್ಸ್ ಮಾಡುತ್ತಾ ಇರುತ್ತಾರೆ. ಆ ರೀಲ್ಸ್ ನೋಡಿದರೇನೆ ಗೊತ್ತಾಗುತ್ತೆ. ಸಿದ್ದೇಗೌಡ್ರು ಎಲ್ಲರ ಜೊತೆಗೆ ಎಷ್ಟು ಬಾಂಧವ್ಯದಿಂದ ಇರುತ್ತಾರೆ ಎಂಬುದು. ಶೂಟಿಂಗ್‌ನಲ್ಲಿ ಕೋ ಆರ್ಟಿಸ್ಟ್‌ಗಳ ಜೊತೆಗೊಂದು ರೀಲ್ಸ್ ಮಾಡುತ್ತಾ, ನಗು ಮುಖದಿಂದ ದಿನ ಕಳೆಯುತ್ತಾರೆ. ಈ ರೀತಿಯ ವಾತಾವರಣವಿದ್ದರೆ ಶೂಟಿಂಗ್ ಹೇಗಾಯ್ತು ಅನ್ನೋದೆ ಗೊತ್ತಾಗಲ್ಲ.

ಅತ್ತಿಗೆ ಜೊತೆಗೆ ಫನ್ನಿ ರೀಲ್ಸ್
ಸಿದ್ದೇಗೌಡ್ರು ಸೀರಿಯಲ್‌ನಲ್ಲಿ ಎಷ್ಟು ಸೀರಿಯಸ್ ಆಗಿ ಇರುತ್ತಾರೊ ನಿಜ ಜೀವನದಲ್ಲಿ ಆ ಥರ ಇದ್ದಂತೆ ಕಾಣುತ್ತಿಲ್ಲ. ಫುಲ್ ಜಾಲಿಯಾಗಿ ಇರುತ್ತಾರೆ. ಅದರಲ್ಲೂ ಇತ್ತಿಚೆಗೆ ರೀಲ್ಸ್ ರಾಜಾ ಆಗೋಗಿದ್ದಾರೆ. ಅಂದ್ರೆ ಅವ್ರ ಸೋಷಿಯಲ್ ಮೀಡಿಯಾದಲ್ಲಿ ಕಣ್ಣು ಹಾಯಿಸಿದಲ್ಲೆಲ್ಲಾ ರೀಲ್ಸ್ ಕಾಣಿಸುತ್ತವೆ. ಅದರಲ್ಲೂ ಅವರ ಅತ್ತಿಗೆಯ ಜೊತೆಗೆ ರೀಲ್ಸ್ ಜಾಸ್ತಿ ಮಾಡುವುದು. ಮಾನಸ ಮನೋಹರ್ ಲಕ್ಷ್ಮೀ ನಿವಾಸದಲ್ಲಿ ಸಿದ್ದೇಗೌಡ್ರ ಅತ್ತಿಗೆಯಾಗಿ ಪಾತ್ರ ಮಾಡಿದ್ದಾರೆ. ಇಬ್ಬರು ಕಾಮಿಡಿ ವಿಡಿಯೋಗಳಿಗೆ ಆಕ್ಟ್ ಮಾಡುತ್ತಾ ಇರುತ್ತಾರೆ. ಅಷ್ಟೇ ಯಾಕೆ ಜಾಹ್ನವಿ ಮದುವೆ ಬ್ಯುಸಿಯಲ್ಲಿ ಮನೆಯವರೆಲ್ಲಾ ಇದ್ರೆ ಭಾವನಾ ಕೂಡ ತನ್ನ ಅತ್ತಿಗೆ - ಅಣ್ಣಂದಿರ ಜೊತೆಗೆ ಸೇರಿಕೊಂಡು ಸಿದ್ದೇಗೌಡ್ರ ಜೊತೆಗೆ ಡ್ಯಾನ್ಸ್ ಮಾಡಿದ್ದಾರೆ.
ಫ್ಯಾನ್ ಪೇಜ್‌ಗಳ ಅಬ್ಬರ
ಇನ್ನು ಸಿದ್ದೇಗೌಡ್ರು ಅಂದ್ರೆ ಹೆಣ್ಣು ಮಕ್ಕಳಿಗೆ ಇನ್ನಿಲ್ಲದ ಕ್ರೇಜು. ಸಿದ್ದೇಗೌಡ್ರ ಮಂಡ್ಯ ಭಾಷೆ, ಆ ಹಳ್ಳಿ ಹೈದನಂತೆ ಬಿಟ್ಟಿರುವ ಕೂದಲು, ಲೋಕಲ್ ರಾಜಕಾರಣಿಯಂತ ನಡೆ ಎಲ್ಲವೂ ಇಷ್ಟ. ಭಾವನಾ ಮತ್ತು ಸಿದ್ದೇಗೌಡ್ರು ಒಂದಾಗ್ಲಿ ಅಂತಾನೇ ಬಯಸುತ್ತಾರೆ. ಇದರ ಜೊತೆಗೆ ಅವರ ಹೆಸರಲ್ಲಿ ಫ್ಯಾನ್ ಪೇಜ್‌ಗಳು ಸಹ ಓಪನ್ ಆಗಿದ್ದು ಒಳ್ಳೆ ಪ್ರಮೋಷನ್ ಮಾಡುತ್ತಾ ಇದ್ದಾರೆ.


Click it and Unblock the Notifications











