Lakshmi Nivasa: ತುಂಬು ಕುಂಟುಂಬದಲ್ಲಿ ನೂರೆಂಟು ಆಸೆಗಳನ್ನು ಹೊತ್ತ ಹತ್ತಾರು ಮನಸ್ಸುಗಳು

By ಪ್ರಿಯಾ ದೊರೆ

ಲಕ್ಷ್ಮೀನಿವಾಸ ಜೀ ಕನ್ನಡ ವಾಹಿನಿಯಲ್ಲಿ ಸೋಮವಾರದಿಂದ ಮೂಡಿ ಬರುತ್ತಿರುವ ಹೊಸ ಧಾರಾವಾಹಿ. ಈ ಧಾರಾವಾಹಿಯಲ್ಲಿ ತುಂಬು ಕುಟುಂಬದ ಸಂಸಾರವಿದೆ.

ಲಕ್ಷ್ಮೀ ಹಾಗೂ ಶ್ರೀನಿವಾಸ್ ಇಬ್ಬರೂ ಪ್ರೀತಿಸಿ ಮದುವೆಯಾದ ಜೋಡಿ. ಶ್ರೀಮಂತರ ಕುಟುಂಬದಿಂದ ಬಂದ ಲಕ್ಷ್ಮೀ ಹಾಗೂ ಶ್ರೀನಿವಾಸನಿಗೆ ಲಕ್ಷ್ಮಿ ಅಣ್ಣ ಅವಮಾನಿಸಿದ್ದ.

ಏನೂ ಗತಿ ಇಲ್ಲದ ಬಿಕಾರಿಯನ್ನು ಮದುವೆಯಾಗಿದ್ದೀಯಾ ಎಂದಿದ್ದ. ಹಾಗಾಗಿ ಲಕ್ಷ್ಮೀ ಅಣ್ಣನಿಗೆ ಮದುವೆಯಾದ ದಿನ ಚಾಲೆಂಜ್ ಮಾಡಿದ್ದಳು. ನಾವಿಬ್ಬರೂ ಸೇರಿ ಸ್ವಂತ ಮನೆ ಮಾಡುತ್ತೇವೆ. ಆಗಲೇ ಈ ಮನೆಗೆ ಕಾಲಿಡುವುದು ಎಂದಿದ್ದಳು.

Lakshmi Nivasa new kannada serial Written Update on january 16th episode

ಗಂಡು ಮಕ್ಕಳಿಗೆ ಜವಾಬ್ದಾರಿಯೇ ಇಲ್ಲ

ಶ್ರೀನಿವಾಸ್ ಸ್ವಂತ ಮನೆಯನ್ನು ಕಟ್ಟಬೇಕು ಎಂದು ಕನಸು ಕಾಣುತ್ತಿದ್ದಾನೆ. ಇವರಿಗೆ ಐದು ಜನ ಮಕ್ಕಳಿದ್ದು, ಮೊದಲನೆ ಮಗ ಜುಗ್ಗ. ಬೇರೆ ಮನೆ ಮಾಡಿದರೆ, ದುಡ್ಡು ಉಳಿಸಲು ಆಗುವುದಿಲ್ಲ ಎಂದು ಇಲ್ಲೇ ಇದ್ದಾನೆ. ಅಲ್ಲದೇ, ಮನೆಯವರಿಗೆ ತಿಳಿಯದಂತೆ ಸೈಟ್ ಅನ್ನು ಕೂಡ ಖರೀದಿಸಿದ್ದು, ಅದರ ಇಎಂಐ ಅನ್ನು ಪಾವತಿಸುತ್ತಿದ್ದಾನೆ. ಇವನ ಹೆಂಡತಿ ಸದಾ ಗೊಣಗುತ್ತಲೇ ಮನೆ ಕೆಲಸ ಮಾಡುತ್ತಿರುತ್ತಾಳೆ. ಆದರೆ, ಇವರ ಹೆಂಡತಿಗೆ ಬೇರೆ ಮನೆಯಲ್ಲಿ ಸಂಸಾರ ಮಾಡುವ ಆಸೆ.

ಕಿರಿಯ ಮಗನ ಕಥೆ

ಇನ್ನು ಎರಡನೆಯ ಮಗನಿಗೆ ಕೆಲಸವೇ ಇಲ್ಲ. ಸ್ಟಾರ್ಟಪ್ ಶುರು ಮಾಡಿ ತನ್ನದೇ ಬಿಸಿನೆಸ್ ಮಾಡಬೇಕು ಎನ್ನುವುದು ಇವನಿಗೆ ಇಷ್ಟ. ಕೆಲಸ ಸ್ವಂತ ಕಾಲಿನ ಮೇಲೆ ನಿಲ್ಲುವ ಮುನ್ನವೇ ಪ್ರೀತಿಸಿ ಶ್ರೀಮಂತ ಮನೆಯ ಹುಡುಗಿಯನ್ನು ಮದುವೆಯಾಗಿದ್ದಾನೆ. ಅವಳೇ ಕೆಲಸಕ್ಕೆ ಹೋಗಿ ಬರುತ್ತಾಳೆ. ದೊಡ್ಡ ಮಗಳ ಮದುವೆಯಾಗಿದೆ. ಇನ್ನು ಇಬ್ಬರು ಹೆಣ್ಣು ಮಕ್ಕಳ ಮದುವೆ ಮಾಡಬೇಕು ಎಂಬುದು ಲಕ್ಷ್ಮಿಯ ಕನಸು.

Lakshmi Nivasa new kannada serial Written Update on january 16th episode

ಸಂಸಾರ ತೂಗಿಸುತ್ತಿರುವ ಲಕ್ಷ್ಮಿ-ಶ್ರೀನಿವಾಸ

ಮಗಳು ಭಾವನಾಳಿಗೆ ಈಗಾಗಲೇ ಮುವತ್ತೆರಡು ವರ್ಷವಾಗಿದ್ದು, ಮದುವೆ ಸೆಟ್ ಆಗುತ್ತಿಲ್ಲ. ಜಾಹ್ನವಿ ಕೊನೆಯ ಮಗಳು. ಜಾಹ್ನವಿ ಇನ್ನೂ ಓದುತ್ತಿದ್ದು, ಸ್ವಲ್ಪ ಬಜಾರಿ. ಮನೆಯವರ ಬಗ್ಗೆ ಹೆಚ್ಚು ಕಾಳಜಿ ಮಾಡುತ್ತಾಳೆ. ಇನ್ನು ಮನೆಯಲ್ಲಿ ಶ್ರೀನಿವಾಸನ ತಾಯಿ ಕೂಡ ಇದ್ದಾರೆ. ಮಕ್ಕಳ್ಯಾರು ಮನೆಯ ಜವಾಬ್ದಾರಿಯನ್ನು ತೆಗೆದುಕೊಳ್ಳಲು ಬಯಸುವುದಿಲ್ಲ. ಶ್ರೀನಿವಾಸ ಹಾಗೂ ಲಕ್ಷ್ಮಿ ಇಬ್ಬರೇ ಸಂಸಾರವನ್ನು ತೂಗಿಸಿಕೊಂಡು ಹೋಗುತ್ತಿದ್ದಾರೆ.

ಲಕ್ಷ್ಮೀಯ ಹುಟ್ಟುಹಬ್ಬ

ಈ ಸಂಸಾರ ಒಟ್ಟಿಗೆ ಇರಬೇಕು ಎನ್ನುವುದು ಲಕ್ಷ್ಮೀ ಆಸೆ. ಆದರೆ, ಗಂಡು ಮಕ್ಕಳಿಗೆ ಈ ಮನೆಯಿಂದ ಹೊರಗೆ ಹೋಗಿ ಬದುಕುವ ಬಯಕೆಯೇ ಹೆಚ್ಚಿದೆ. ಶ್ರೀನಿವಾಸ, ಲಕ್ಷ್ಮಿ ಹುಟ್ಟುಹಬ್ಬಕ್ಕೆ ಚಿನ್ನದ ಬಳೆಗಳನ್ನು ಮಾಡಿಸಿದ್ದಾನೆ. ಲಕ್ಷ್ಮಿಗೆ ತನ್ನ ಗಂಡ ಹುಟ್ಟುಹಬ್ಬದ ದಿನವನ್ನು ನೆನಪಿಟ್ಟುಕೊಂಡಿರುವುದು ಖುಷಿ ಕೊಡುತ್ತದೆ.

ಖುಷಿಗೆ ಭಾವನಾ ಎಂದರೆ ಇಷ್ಟ

ಇನ್ನು ಭಾವನಾ ಕೆಲಸ ಮಾಡುವ ಕಂಪನಿಯ ಬಾಸ್‌ಗೆ ಪಿಎ ಆಗಿದ್ದಾಳೆ. ಅವರ ಬಾಸ್ ಹೆಸರು ಶ್ರೀಕಾಂತ್ ಅರಸ್. ಆತನಿಗೆ ತನ್ನ ಮಗಳು ಖುಷಿ ಎಂದರೆ ಬಹಳ ಇಷ್ಟ. ಖುಷಿಗೆ ಅಪ್ಪ ಎಷ್ಟು ಇಷ್ಟವೋ ಭಾವನಾ ಕೂಡ ಅಷ್ಟೇ ಇಷ್ಟ. ಭಾವನಾಳೇ ಖುಷಿಗೆ ಕ್ರ್ಯಾಫ್ಟ್ ವರ್ಕ್ ಮಾಡಿಕೊಡುವುದು, ಅವಳ ಜೊತೆಗೆ ಮಾತನಾಡುವುದನ್ನು ಮಾಡುತ್ತಾಳೆ. ಆದರೆ. ಶ್ರೀಕಾಂತ್ ಅರಸ್ ಅವರ ಪತ್ನಿ ಹಾಗೂ ಅವನ ಕುಟುಂಬದ ಬಗ್ಗೆ ಹೆಚ್ಚಿನ ಮಾಹಿತಿ ಯಾರಿಗೂ ಗೊತ್ತಿಲ್ಲ. ಮುಂದಿನ ದಿನಗಳಲ್ಲಿ ಈ ಮಾಹಿತಿ ತಿಳಿಯಬೇಕಿದೆ.

ಮೊದಲ ಸಂಚಿಕೆ ಇಷ್ಟಪಟ್ಟ ವೀಕ್ಷಕರು

ಈ ಧಾರಾವಾಹಿಯ ಮೊದಲ ಸಂಚಿಕೆ ವೀಕ್ಷಕರಿಗೆ ಬಹಳ ಇಷ್ಟವಾಗಿದೆ. ಭಾವನಾ, ಶ್ರೀಕಾಂತ್ ಅರಸ್ ಅನ್ನೇ ಮದುವೆಯಾಗಬಹುದು ಎಂದು ಕೂಡ ಮೊದಲ ಎಪಿಸೋಡ್‌ನಲ್ಲಿ ಲೆಕ್ಕಾಚಾರ ಹಾಕಿದ್ದಾರೆ. ಲಕ್ಷ್ಮಿ ಆಸೆ ಹಾಗೂ ಶ್ರೀನಿವಾಸನ ಕನಸು ಹೇಗೆ ನೆರವೇರುತ್ತದೆ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.

More from Filmibeat

English summary
zee kannada channel telecasted new serial lakshmi nivasa and its family introduction;
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X