'ಲಕ್ಷ್ಮಿ ನಿವಾಸ' ಸೈಕೋ ಜಯಂತ್ ಇದೀಗ ಕಿರುತೆರೆಯ ಬೆಸ್ಟ್ ಹೀರೋ; ಸಿನಿಮಾದಲ್ಲೂ ಮೋಡಿ ಮಾಡಬಹುದೇ?

By ಅನಿತಾ ಬನಾರಿ

ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಧಾರಾವಾಹಿಗಳ ಪೈಕಿ 'ಲಕ್ಷ್ಮಿ ನಿವಾಸ'ವೂ ಒಂದು. ವಿಭಿನ್ನ ಕಥಾ ಹಂದರದ ಜೊತೆಗೆ ಪಾತ್ರವರ್ಗದ ಮೂಲಕ ಈ ಧಾರಾವಾಹಿಯು ಕಿರುತೆರೆ ವೀಕ್ಷಕರ ಮನ ಸೆಳೆದಿದೆ. ಅದರಲ್ಲಿ ಜಾಹ್ನವಿಯ ಪತಿ ಸೈಕೋ ಜಯಂತ್ ಪಾತ್ರವಂತೂ ವೀಕ್ಷಕರಲ್ಲಿ ಒಂದು ರೀತಿಯ ಭಯ ಮೂಡಿಸಿದೆ. ಹೌದು, ಜಯಂತ್ ಪಾತ್ರ ಬಂದಾಗಲ್ಲೆಲ್ಲಾ ಏನು ಆವಾಂತರ ಮಾಡುತ್ತಾನೋ ಇವನು, ಜಾಹ್ನವಿಯ ಮೇಲಿನ ಪ್ರೀತಿಗಾಗಿ ಇನ್ಯಾವ ತೊಂದರೆ ಮಾಡುತ್ತಾನೋ ಎಂಬ ಟೆನ್ಶನ್ ವೀಕ್ಷಕರಿಗಾದರೆ ಮತ್ತೊಂದೆಡೆ ಜಾಹ್ನವಿಯ ಕಷ್ಟಕ್ಕೆ ಮರುಗುತ್ತಾರೆ.

ಇದ್ದಕ್ಕಿದ್ದಂತೆ ಜಯಂತ್ ಪಾತ್ರದ ಬಗ್ಗೆ ಇಷ್ಟೆಲ್ಲಾ ಯಾಕೆ ಮಾತಾಡುತ್ತಿದ್ದೇವೆ ಎಂಬ ಕುತೂಹಲ ನಿಮಗೆ ಮೂಡುವುದು ಸಹಜ. ಆದರೆ, ಅಸಲಿ ವಿಷಯ ಬೇರೆಯೇ ಇದೆ. ಸೈಕೋ ಜಯಂತ್ ಆಗಿ ನಿಮ್ಮನ್ನು ರಂಜಿಸುತ್ತಿರುವ ದೀಪಕ್ ಸುಬ್ರಹ್ಮಣ್ಯ ಇದೀಗ ಬೆಸ್ಟ್ ನಾಯಕ ನಟ. ಕಳೆದ ವಾರವಷ್ಟೇ ಅದ್ಧೂರಿಯಾಗಿ ಜರುಗಿದ ಜೀ ಕುಟುಂಬ ಅವಾರ್ಡ್ಸ್‌ನಲ್ಲಿ ಬೆಸ್ಟ್ ನಾಯಕ ನಟ ಪ್ರಶಸ್ತಿಯನ್ನು ದೀಪಕ್ ಸುಬ್ರಹ್ಮಣ್ಯ ಪಡೆದುಕೊಂಡಿದ್ದಾರೆ.

Lakshmi Nivasa Psycho Jayant fame Deepak Subramanya is got best lead actor award

"ಜೀ ಕುಟುಂಬ ಕನ್ನಡ ಅವಾರ್ಡ್ಸ್ 2024 ಬೆಸ್ಟ್ ನಾಯಕ ನಟ ಅವಾರ್ಡ್ 'ಲಕ್ಷ್ಮಿ ನಿವಾಸ' ಧಾರಾವಾಹಿಯ ಜಯಂತನ ಪಾತ್ರಕ್ಕೆ ದೊರಕಿದೆ. ತುಂಬಾ ಖುಷಿಯಾಗಿದೆ. ಇನ್ನು ಹೆಚ್ಚಿನ ಹುಮ್ಮಸ್ಸಿನಿಂದ ಕೆಲಸವನ್ನು ಮಾಡುವುದಕ್ಕೆ ಈ ಅವಾರ್ಡ್ ಮಾರ್ಗವನ್ನು ತೋರಿಸಿಕೊಟ್ಟಿದೆ. ಪ್ರೀತಿ, ಪ್ರೋತ್ಸಾಹ ನೀಡಿ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದಗಳು" ಎಂದು ದೀಪಕ್ ಸುಬ್ರಹ್ಮಣ್ಯ ಹೇಳಿಕೊಂಡಿದ್ದಾರೆ.

ಸೈಕೋ ಜಯಂತ್ ಆಗಿ ಕಿರುತೆರೆ ವೀಕ್ಷಕರನ್ನು ರಂಜಿಸುತ್ತಿರುವ ದೀಪಕ್ ಸುಬ್ರಹ್ಮಣ್ಯ ಅವರ ಕಿರುತೆರೆ ಪಯಣ ಶುರುವಾಗಿದ್ದು, ಪೌರಾಣಿಕ ಧಾರಾವಾಹಿಯ ಮೂಲಕ. ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಪೌರಾಣಿಕ ಧಾರಾವಾಹಿ 'ದಾಸ ಪುರಂದರ'ದಲ್ಲಿ ಪುರಂದರದಾಸರಾಗಿ ಅಭಿನಯಿಸಿದ್ದರು ದೀಪಕ್ ಸುಬ್ರಹ್ಮಣ್ಯ. ಇದೀಗ ಜಯಂತ್ ಆಗಿ ಕಿರುತೆರೆಯಲ್ಲಿ ಬ್ಯುಸಿಯಾಗಿರುವ ಇವರು ನಟನೆಗೆ ಕಾಲಿಟ್ಟಿದ್ದು ರಂಗಭೂಮಿಯ ಮೂಲಕ.

Lakshmi Nivasa Psycho Jayant fame Deepak Subramanya is got best lead actor award

ಹೌದು, ರಂಗಭೂಮಿಯಲ್ಲಿ ತಮ್ಮನ್ನು ತಾವು ಸಕ್ರಿಯರಾಗಿ ತೊಡಗಿಸಿಕೊಂಡಿರುವ ದೀಪಕ್ ಸುಬ್ರಹ್ಮಣ್ಯ ಐವತ್ತಕ್ಕೂ ಹೆಚ್ಚಿನ ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದರ ಜೊತೆಗೆ ಒಂದಷ್ಟು ನಾಟಕಗಳ ನಿರ್ದೇಶನ, ನಿರ್ಮಾಣ ಮಾಡಿರುವ ದೀಪಕ್ ಅವರು ಸಿನಿಮಾದಲ್ಲಿಯೂ ಮೋಡಿ ಮಾಡಿದ್ದಾರೆ. 'ಶುದ್ಧಿ' ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪಾದಾರ್ಪಣೆ ಮಾಡಿದ ದೀಪಕ್ ಸುಬ್ರಹ್ಮಣ್ಯ 'ಹೊಸ ದಿನಚರಿ', 'ಅಯನ', 'ಅಂಬುಜ', 'ಪಿಂಕಿ ಎಲ್ಲಿ?', 'ಸಾರಾಂಶ' ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.

ಇದರ ಜೊತೆಗೆ ಇತ್ತೀಚೆಗಷ್ಟೇ 'Mr.ರಾಣಿ' ಸಿನಿಮಾದಲ್ಲಿ ದೀಪಕ್ ಅವರು ನಟಿಸಲಿದ್ದು ಇತ್ತೀಚೆಗಷ್ಟೇ ಬಿಡುಗಡೆಯಾಗಿರುವ ಪೋಸ್ಟರ್ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಪೋಸ್ಟರ್‌ನಲ್ಲಿ ವಿಭಿನ್ನ ಲುಕ್‌ನಲ್ಲಿ ದೀಪಕ್ ಸುಬ್ರಹ್ಮಣ್ಯ ಅವರು ಕಾಣಿಸಿಕೊಂಡಿದ್ದು, ಯಾವ ರೀತಿ ತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಕುತೂಹಲ ಸಿನಿಪ್ರಿಯರಲ್ಲಿ ಮೂಡಿದೆ. ಅದಕ್ಕೆ ಉತ್ತರ ಮುಂದಿನ ದಿನಗಳಲ್ಲಿ ಸಿಗಬೇಕಿದೆ.

More from Filmibeat

English summary
Lakshmi Nivasa Psycho Jayant fame Deepak Subramanya is got best lead actor award
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X