ಮಂಕಿ-ಪಾಂಕಿ ಥರದ ಫೋಟೋ ಹಾಕಿದ ಭಾವನಾ, ಗೌಡ್ರು ಎಷ್ಟು ಮುದ್ದಾಗಿ ಪ್ರಶ್ನೆ ಮಾಡ್ತಾರೆ ನೋಡಿ!
ಅಂತೂ ಇಂತೂ ಲಕ್ಷ್ಮೀ ನಿವಾಸ ವೀಕ್ಷಕರ ಹಾರ್ಟ್ ಬೀಟ್ ಅನ್ನು ನಿರ್ದೇಶಕರು ನಾರ್ಮಲ್ ರೇಂಜಿಗೆ ತಂದಿದ್ದಾರೆ. ಭಾವನಾಳ ಕುತ್ತಿಗೆಯಲ್ಲಿ ತಾಳಿ ಇರುವುದು ಮನೆಯವರಿಗೆಲ್ಲಾ ಗೊತ್ತಾಗಿತ್ತು. ಆದರೆ ಆತನ ಸುಳಿವು ಇರಲಿಲ್ಲ. ಅತ್ತ ಗೌಡ್ರು ಹೇಳಿ ಬಿಡುತ್ತೇನೆ ಎಂದು ಧೈರ್ಯ ಮಾಡಿದಾಗಲೂ ಅಡತಡೆಗಳು ಬರುತ್ತಿದ್ದವು. ಈ ಅಡತಡೆಗಳೇ ವೀಕ್ಷಕರ ಟೆನ್ಶನ್ ಹೆಚ್ಚಿಸುತ್ತಾ ಇತ್ತು. ಫೈನಲೀ ಸಿದ್ದೇಗೌಡ್ರು ತಮ್ಮ ಪ್ರೀತಿಯನ್ನ ಹೇಳಿದ್ದಾರೆ. ಈ ಮೂಲಕ ನೋಡುಗರ ಎದೆ ಬಡಿತ ಸಹಜ ಸ್ಥಿತಿಯಲ್ಲಿದೆ.
ಇತ್ತ ಭಾವನಾ ಮನೆಯಲ್ಲಿ ದೊಡ್ಡ ಅಣ್ಣ ಸಂತೋಷನಿಂದ ಯಾರಿಗೂ ಸಂತಸವೇ ಇಲ್ಲದಂತೆ ಆಗಿದೆ. ಅದರಲ್ಲೂ ಭಾವನಾಳಿಗೆ ತುಂಬಾನೇ ನೋವು ಕೊಡುತ್ತಿದ್ದಾನೆ. ಇದರಿಂದ ಮನೆಯವರ ನೆಮ್ಮದಿಯೂ ಹಾಳಾಗುತ್ತಿದೆ. ಭಾವನಾಗೂ ನೋವು ಹೆಚ್ಚಾಗುತ್ತಿದೆ. ಇದರ ನಡುವೆ ಭಾವನಾ ಹಾಗೂ ಸಿದ್ದೇಗೌಡ್ರ ಬ್ಯೂಟಿಫುಲ್ ಫೋಟೋ ಗಮನ ಸೆಳೆಯುತ್ತಿದೆ.

ಸಮಾವೇಶದಲ್ಲಿ ತೆಗೆಸಿಕೊಂಡ ಫೋಟೋ
ಭಾವನಾ ಹಾಗೂ ಸಿದ್ದೇಗೌಡ್ರ ಜೀವನದ ಬಹುದೊಡ್ಡ ಸತ್ಯವೊಂದು ಎಲ್ಲರ ಮುಂದೆ ರಿವೀಲ್ ಆಗಿದೆ. ಜವರೇಗೌಡ ಹಾಗೂ ಮುನಿಸ್ವಾಮಿ ಇಬ್ಬರ ರಾಜಕೀಯ ಜೀವನಕ್ಕೇ ಅಂತ ವೇದಿಕೆ ನಿರ್ಮಾಣವಾಗಿತ್ತು. ಆ ಸಮಾವೇಶದಲ್ಲಿಯೇ ಸತ್ಯವನ್ನಿ ಬಯಲು ಮಾಡಲಾಗಿದೆ. ಆ ಸಮಾವೇಶ ಗೌಡ್ರಿಗೂ ಬಹಳ ಮುಖ್ಯವಾಗಿತ್ತು. ಹೀಗಾಗಿ ದೊಡ್ಡಮಟ್ಟಕ್ಕೆ ಕಟೌಟ್ ನಿಲ್ಲಿಸಿದ್ದರು. ಆ ಕಟೌಟ್ ಮುಂದೆ ಭಾವನಾ ಹಾಗೂ ಸಿದ್ದೇಗೌಡ್ರು ಸಖತ್ ಪೋಸ್ ನೀಡಿದ್ದಾರೆ.
ಗೌಡ್ರ ಪೋಸ್ಟರ್ ಮುಂದೆ ಭಾವನಾ
ಇಬ್ಬರ ಬ್ಯೂಟಿಫುಲ್ ಫೋಟೋವನ್ನು ದಿಶಾ ಮದನ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಫೋಟೋಗೆ ಪೋಸ್ ನೀಡುವಾಗ ಭಾವನಾ ಲವ್ ಸಿಂಬಲ್ ತೋರಿಸಿ, ಗೌಡ್ರ ಸೊಂಟ ಬಳಸಿ ಹಿಡಿದಿದ್ದಾರೆ. ಇದು ಅವರ ಅಭಿಮಾನಿಗಳ ದಿಲ್ ಖುಷ್ ಮಾಡಿದೆ. ಈ ರೀತಿಯ ದಿನಕ್ಕಾಗಿಯೇ ನಾವೆಲ್ಲಾ ಕಾಯ್ತಾ ಇದ್ದದ್ದು ಅಂತ ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಹೀಗೆ ಖುಷಿಯಾಗಿ, ನಗ್ತಾ ನಗ್ತಾ ಇರಿ ಎಂದು ಹೇಳಿದ್ದಾರೆ.
ಮೇಡಮ್ಮೋರಿಗೆ ಪ್ರಶ್ನೆ ಮಾಡಿದ ಸಿದ್ದು
ಸಿದ್ದೇಗೌಡ್ರು ಅದೆಷ್ಟು ಇನೋಸೆಂಟ್ ಅನ್ನೋದನ್ನ ಹೇಳಬೇಕಿಲ್ಲ. ಅದು ಎಲ್ಲರಿಗೂ ಗೊತ್ತಿರುವ ಸತ್ಯ. ಧಾರಾವಾಹಿಯಲ್ಲೂ ಅಷ್ಟೇ, ರಿಯಲ್ ಆಗಿಯೂ ಅಷ್ಟೇ. ಇದೀಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡ ಫೋಟೋಗೆ ಕಮೆಂಟ್ ಕೂಡ ಅಷ್ಟೇ ಮುದ್ದು ಮುದ್ದಾಗಿ ಹಾಕಿದ್ದಾರೆ. ಫೋಟೋ ತೆಗೆಯುವಾಗ ಮೀಸೆ, ಕಣ್ಣು ಹೀಗೆ ಹಲವು ಇಮೋಜಿಗಳಿರುವ ಆಪ್ಶನ್ ಸಿಗುತ್ತದೆ. ಆ ಆಪ್ಶನ್ ಗಳನ್ನು ಬಳಸಿಕೊಂಡು ಫೋಟೋ ತೆಗೆದಾಗ ಫನ್ ಮೂಮೆಂಟ್ ಸೃಷ್ಟಿಯಾಗುತ್ತೆ. ಈ ಫೋಟೋಗೆ ಪೋಸ್ ಕೊಡುವಾಗಲು ಅಷ್ಟೇ ಒಂದು ಫೋಟೋಗೆ ಅದೇ ರೀತಿ ಹಾಕಲಾಗಿದೆ. ಅದನ್ನ ಸಿದ್ದು, ಅಲ್ಲಿಯೇ ಕಮೆಂಟ್ ಹಾಕಿದ್ದು, ಮೇಡಮ್ಮೋರೆ ಕಡೆ ಫೋಟೋನೂ ಶೇರ್ ಮಾಡಿಬಿಟ್ಟಿದ್ದೀರಾ ಅಙತ ಮಂಕಿ ಸಿಂಬಲ್ಸ್ ಹಾಕಿದ್ದಾರೆ.
ಫ್ಯಾನ್ಸ್ ಕಡೆಯಿಂದ ಹಾರ್ಟ್ ಸಿಂಬಲ್
ಇಬ್ಬರು ಧಾರಾವಾಹಿಯಲ್ಲಿ ಬೇರೆ ಥರನೇ ಇದ್ದರು ರಿಯಲ್ ಲೈಫ್‌ನಲ್ಲಿ ಫುಲ್ ಜಾಲಿ. ಯಾವಾಗಲೂ ಖುಷಿ ಖುಷಿಯಾಗಿ ಇರುತ್ತಾರೆ. ಜೊತೆಗೆ ಡ್ಯಾನ್ಸ್ ಮಾಡ್ತಾರೆ, ಜೊತೆಗೆ ರೀಲ್ಸ್ ಮಾಡ್ತಾರೆ. ಹೀಗಾಗಿ ಈ ಜೋಡಿಯನ್ನು ಜನ ರಿಯಲ್ ಆಗಿಯೂ ಇಷ್ಟಪಡುವವರೇ ಹೆಚ್ಚು.


Click it and Unblock the Notifications











