Lakshminivasa: ಮದುವೆ ಬೆನ್ನಲ್ಲೇ ಚಿತ್ರೀಕರಣಕ್ಕೆ ಚಿನ್ನುಮರಿ; ಮೆಹಂದಿ, ಅರಿಶಿನ ದಾರವೇ ಸಾಕ್ಷಿ!

By ಎಸ್ ಸುಮಂತ್

ಚಂದನಾ ಅನಂತಕೃಷ್ಣ ಈಚೆಗಷ್ಟೇ ಮದುವೆಯಾಗಿದ್ದಾರೆ. ಮದುವೆಯಾದ ಮೇಲೆ ಕೆಲ ನಟಿಯರು ನಟನೆಯಿಂದ ಬ್ರೇಕ್ ತೆಗೆದುಕೊಳ್ಳುತ್ತಾರೆ. ಸಂಪೂರ್ಣವಾಗಿ ಅಲ್ಲದೇ ಹೋದರೂ ಕೊಂಚ ಸಮಯ ಬ್ರೇಕ್ ತೆಗೆದುಕೊಳ್ಳುವುದನ್ನು ನೋಡಿದ್ದೇವೆ. ಮಾಡುತ್ತಿದ್ದ ಪ್ರಾಜೆಕ್ಟ್ ಅನ್ನು ಮುಗಿಸಿಕೊಟ್ಟು ಮದುವೆಯಾಗುತ್ತಾರೆ. ಆದರೆ ಚಂದನಾ ಆ ರೀತಿ ಅಲ್ಲ. ಮದುವೆಯಾಗಿ ಬೇಗನೇ ಸಿರೀಯಲ್ ಸೆಟ್‌ಗೆ ಬಂದಿದ್ದಾರೆ.

ಎಷ್ಟೇ ಆಗಲಿ ಕಲೆಯನ್ನೇ ಉಸಿರಾಗಿಸಿಕೊಂಡವರ ಕುಟುಂಬಕ್ಕೆ ಸೊಸೆಯಾಗಿ ಹೋಗಿರುವುದಲ್ಲವೇ. ಚಂದನಾ ಅವರ ಅತ್ತೆ, ಮಾವ ಚಿತ್ರರಂಗದಲ್ಲಿಯೇ ಇದ್ದವರು. ಅವರ ಅತ್ತೆ ಸಾಕಷ್ಟು ಸೀರಿಯಲ್‌ಗಳನ್ನು ಮಾಡಿದ್ದಾರೆ. ಹೀಗಾಗಿ ಸೊಸೆಯ ಕಮಿಟ್ಮೆಂಟ್ ಬಗ್ಗೆ ತಿಳಿದವರಾಗಿರುವ ಕಾರಣ ಮದುವೆಯಾದ ಬಳಿಕ ಸೆಟ್‌ಗೆ ಮರಳಿದ್ದಾರೆ.

Lakshmi nivasa serial actress Chandana ananthakrishna returns to work post wedding

ಇಷ್ಟು ಬೇಗ ಶೂಟಿಂಗ್ ಬಂದ್ರಾ?

ಚಂದನಾ ಅನಂತಕೃಷ್ಣ ಹಾಗೂ ಪ್ರತ್ಯಕ್ಷ್ ಅವರದ್ದು ಅರೇಂಜ್ಡ್ ಮ್ಯಾರೇಜ್. ಆದರೂ ಚಂದನಾ ಅವರ ಕೆರಿಯರ್ ಬಗ್ಗೆ ಸಂಪೂರ್ಣ ಬೆಂಬಲ ನೀಡಿದ್ದಾರೆ. ಮದುವೆಯಾಗಿ ಕೈನಲ್ಲಿ ಇನ್ನು ಮೆಹಂದಿ ಅಳಿಸಿಲ್ಲ.. ಅರಿಶಿನದ ದಾರ ಹೋಗಿ ಕರಿಮಣಿ ಬಂದಿಲ್ಲ. ಆದರೂ ಚಂದನಾ ತಮ್ಮ ವೃತ್ತಿ ಬದ್ಧತೆ ಮೆರೆದಿದ್ದಾರೆ. ಸೀರಿಯಲ್ ಸೆಟ್‌ಗೆ ಮರಳಿದ್ದಾರೆ. ಅವರ ಕೈಯಲ್ಲಿದ್ದ ಮೆಹಂದಿ, ಕತ್ತಲ್ಲಿದ್ದ ಮಾಂಗಲ್ಯದ ದಾರ ಸೀರಿಯಲ್‌ನಲ್ಲಿ ಎದ್ದು ಕಾಣಿಸುತ್ತಿದೆ.

ಕಾಳಜಿ ಮಾಡುವ ಜಯಂತ್

ಜಯಂತ್‌ಗೆ ಮೊದಲಿನಿಂದಾನೂ ಒಂಥರ ಭ್ರಮೆ. ನಮ್ಮಿಬ್ಬರ ಸಂಸಾರದಲ್ಲಿ ಬೇರೆ ಯಾರೂ ಬರಬಾರದು ಎಂಬಂತ ಯೋಚನೆ ಅವನದ್ದು. ಜಾಹ್ನವಿಯನ್ನು ಹೆಚ್ಚು ಪ್ರೀತಿ ಮಾಡುತ್ತಾನೆ. ಜಾಹ್ನವಿಗೆ ನೋವಾಗದಂತೆ ನೋಡಿಕೊಳ್ಳುತ್ತಾನೆ. ಆದರೆ ಜಾಹ್ನವಿ ಹಾಗೂ ತನ್ನ ನಡುವೆ ಮೂರನೇ ವ್ಯಕ್ತಿ ಬರುವುದು ಆತನಿಗೆ ಇಷ್ಟವಿಲ್ಲ. ಹೀಗಾಗಿ ಜಾಹ್ನವಿಯ ಕಾಳಜಿಗೆ ಮನೆಯವರು ಬರ್ತೀವಿ ಅಂದ್ರು ಅದನ್ನು ಸಹಿಸುವುದಕ್ಕೆ ಅವನಿಂದ ಆಗ್ತಿಲ್ಲ.

ಜಾನುಗೆ ಸೀರೆ ಗಿಫ್ಟ್

ಇನ್ನು ಲಲಿತಾಗೆ ಜಾಹ್ನವಿಯೇ ಲಕ್ಷ್ಮೀಯ ಮಗಳು ಎಂಬುದು ಅರ್ಥವಾಗಿದೆ. ಅಷ್ಟೇ ಅಲ್ಲ ತನ್ನ ಮಗ ಇಷ್ಟಪಟ್ಡಿದ್ದು ಜಾಹ್ನವಿಯನ್ನೇ ಎಂಬುದು ಅರ್ಥವಾಗಿದೆ. ಆಗಲೇ ಲಕ್ಷ್ಮೀ ಮಗಳು ಜಾನು ಎಂಬುದು ಗೊತ್ತಾಗಿದ್ದರೆ ಇಷ್ಟೊತ್ತಿಗೆ ವಿಶ್ವ ಪ್ರಪೋಸ್ ಮಾಡುವಂತೆ ಲಲಿತಾಳೇ ಮಾಡುತ್ತಿದ್ದಳು. ಈಗ ಕೊರಗುತ್ತಿದ್ದಾಳೆ. ಇದರ ನಡುವೆ ಜಾಹ್ನವಿ ತಾಯಿಯಾಗುತ್ತಿದ್ದಾಳೆಂಬುದು ಲಲಿತಾಗೆ ತಿಳಿದಿದೆ. ಹೀಗಾಗಿ ಸೀರೆಯೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ಈ ಉಡುಗೊರೆ ನೋಡಿ ಜಾನು ಖುಷಿಯಾಗಿದ್ದು, ಈ ವೇಳೆ ಕೈನಲ್ಲಿದ್ದ ಮೆಹಂದಿ, ಅರಿಶಿನದ ದಾರ ವೀಕ್ಷಕರಿಗೆ ಕಾಣಿಸಿದೆ.

ಜಯಂತ್ ಸರಿಯಾದ್ನಾ ?

ಜಾಹ್ನವಿಗೆ ಧಾರಾವಾಹಿಯಲ್ಲಿ ಇದು ಮೊದಲ ಮಗು‌. ಸಿಕ್ಕಾಪಟ್ಟೆ ಸುಸ್ತು, ವಾಕರಿಕೆಯ ಲಕ್ಷಣಗಳೆಲ್ಲಾ ಕಾಣಿಸುತ್ತಿದೆ. ಹೀಗಾಗಿ ಜೊತೆಯಲ್ಲಿ ಯಾರಾದರೂ ಇರಬೇಕು ಎನಿಸಿದೆ‌. ಮನೆಯವರನ್ನು ಕರೆಸಿಕೊಳ್ತೀನಿ ಎಂದರು ಜಯಂತ್ ಒಪ್ಪುತ್ತಿಲ್ಲ. ಅತ್ತ ಅಜ್ಜಿಗೆ ಜಯಂತ್ ಮೇಲೆ ಅನುಮಾನ ಮೂಡಿದೆ. ಹೀಗಾಗಿ ನಾವೆಲ್ಲಾ ಅಲ್ಲಿ ಹೋಗಿ ಜಾನುಗೆ ಹಾರೈಕೆ ಮಾಡೋಣ ಅಂತಾನೇ ಹೇಳಿದ್ದಾರೆ. ಇದರ ನಡುವೆ ಜಯಂತ್ ಮೇಲೆ ವೀಕ್ಷಕರಿಗೆ ಒಂದಷ್ಟು ಅನುಮಾನ ಸೃಷ್ಟಿಯಾಗಿದೆ. ಜಯಂತ್ ಮೊದಲೇ ನಮ್ಮಿಬ್ಬರ ನಡುವೆ ಮೂರನೇಯವರು ಬೇಡ ಎಂದಿದ್ದಾನೆ. ಆದರೆ ಜಾನು ಹಠಕ್ಕೆ‌ಮಗು ಉಳಿಸಿಕೊಂಡಿದ್ದಾನೆ. ಹೀಗಿರುವಾಗ ಮಗುಗೆ ಏನಾದರೂ ಮಾಡಿ ಬಿಡುತ್ತಾನ ಎಂದೇ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

More from Filmibeat

English summary
Actress Chandana ananthakrishna Proves Her Dedication For Work, Shoots For lakshmi nivasa serial after marriage.
Read more about: sumanth tv serial
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X