Disha Madan: ಬೋಲ್ಡ್ ಆಗಿ ಕಾಣಿಸಿಕೊಂಡ ದಿಶಾ ಮದನ್; ಭಾವನಾ ಅವತಾರಕ್ಕೆ ಫ್ಯಾನ್ಸ್ ಬೇಸರ

By ಪೂರ್ವ

ಭಾವನಾ ಎಂದ ಕೂಡಲೇ 'ಲಕ್ಷ್ಮೀ ನಿವಾಸ' ಧಾರಾವಾಹಿ ನೆನಪಿಗೆ ಬರುತ್ತದೆ. ಹೌದು ಭಾವನಳನ್ನು ಸಿದ್ದೆ ಗೌಡರು ಮದುವೆ ಆಗಿದ್ದಾರೆ. ಅದನ್ನು ಯಾರ ಜೊತೆಯೂ ಹೇಳದೆ ಮುಚ್ಚಿಟ್ಟು ಭಾವನಾ ಜೊತೆ ಆಟ ಆಡಿದ್ದಾರೆ. ಸೀರಿಯಲ್‌ನಲ್ಲಿ ಬಹಳ ಗಟ್ಟಿಗಿತ್ತಿ. ಹಾಗೆಯೇ ಸೂಕ್ಷ್ಮ ಮನಸ್ಥಿತಿಯವರಾಗಿರುವ ಈ ನಟಿಯ ನಿಜ ಜೀವನವೇ ಬೇರೆಯಿದೆ. ಅಂದ್ಹಾಗೆ, ಭಾವನಾ ರೂಪದಲ್ಲಿರುವವರ ನಿಜವಾದ ಹೆಸರು ದಿಶಾ ಮದನ್.

ಈ ನಟಿ ಫ್ಯಾಷನ್ ಸೆನ್ಸ್ ಸೂಪರ್. ಹಾಗೆಯೇ ಎಲ್ಲರ ಜೊತೆ ಬಹಳ ಖುಷಿ ಖುಷಿಯಿಂದಲೇ ಇರುವ ಭಾವ ಜೀವಿ. ತನ್ನ ತಂದೆ ಎಂದರೆ ಜೀವ ಬಿಡುವ ಭಾವನಾಗೆ 'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸಿಕ್ಕಿದ್ದು ಬರೀ ನೋವು ಅಷ್ಟೇ.

Lakshmi Nivasa serial actress Disha Madan new photoshoot

ಭಾವನಾ ಸ್ಥಿತಿ ನೋಡಲಾಗದೆ ಸಾಕಷ್ಟು ಮಂದಿ ವೀಕ್ಷಕರು ಬಹಳ ಬೇಸರ ಪಟ್ಟುಕೊಂಡಿದ್ದಾರೆ. ಭಾವನಾ ಕತ್ತಿನಲ್ಲಿ ತಾಳಿ ಇರುವ ವಿಚಾರ ಇದೀಗ ಎಲ್ಲರಿಗೆ ತಿಳಿದಿದೆ. ಇದೆಲ್ಲ ನಡೆದರು ಕೂಡ ಲಕ್ಷ್ಮೀ ಯಾಕೆ ಎಲ್ಲೂ ಕಾಣಿಸುತ್ತಿಲ್ಲ ಎಂದು ಅಭಿಮಾನಿಗಳು ಆಗಾಗ ಕೇಳುತ್ತಲೇ ಇರುತ್ತಾರೆ. ಇತ್ತೀಚಿಗೆ ಲಕ್ಷ್ಮೀ ಪಾತ್ರಧಾರಿ ಸೀರಿಯಲ್‌ನಿಂದ ಕಾಣಿಸುತ್ತಿಲ್ಲ. ಲಕ್ಷ್ಮೀ ಅವರು ಎತ್ತ ಹೋಗಿದ್ದಾರೆ ಎಂದು ಆಗಾಗ ಸೀರಿಯಲ್ ಪ್ರೇಮಿಗಳು ಪ್ರಶ್ನೆ ಮಾಡುತ್ತಲೇ ಇದ್ದಾರೆ.

ಸೀರಿಯಲ್‌ನಲ್ಲಿ ಮುದ್ದು ಮುದ್ದಾಗಿ ಕಾಣಿಸಿಕೊಳ್ಳುತ್ತಾರೆ. ಆದರೆ, ಇವರು ನಿಜ ಜೀವನದಲ್ಲಿ ಇವರು ಮಾಡರ್ನ್ ಲೇಡಿ. ತನ್ನ ಕಾಸ್ಟ್ಯೂಮ್, ಫ್ಯಾಷನ್‌ಗೆ ಹೆಚ್ಚಿನ ಮಹತ್ವವನ್ನು ನೀಡುತ್ತಾರೆ. ಇದೀಗ ಭಾವನಾಳನ್ನು ಹೊಸ ಅವತಾರದಲ್ಲಿ ನೋಡಿದ ಅಭಿಮಾನಿಗಳು ಬಹಳ ಶಾಕ್ ಆಗಿದ್ದಾರೆ. ಹೌದು ವಿದೇಶಕ್ಕೆ ಹಾರುತ್ತಾ ಇದ್ದ ಹಾಗೆಯೇ ಭಾವನ ವೇಷ ಭೂಷಣ ಬದಲಾಯಿತಾ ಎಂದು ಸೀರಿಯಲ್ ಫ್ಯಾನ್ಸ್ ಪ್ರಶ್ನೆ ಮೇಲೆ ಪ್ರಶ್ನೆ ಮಾಡುತ್ತಿದ್ದಾರೆ.

ಮಾಡರ್ನ್ ಡ್ರೆಸ್‌ನಲ್ಲಿ ದಿಶಾ ಮದನ್

ದಿಶಾ ಮದನ್ ನಿಜ ಜೀವನದಲ್ಲಿ ಮಾಡರ್ನ್ ಲೇಡಿ. ತನಗೆ ಇಷ್ಟವೆನಿಸಿದ ಔಟ್‌ಫಿಟ್ ಅನ್ನು ಧರಿಸುತ್ತಾರೆ. ಅಷ್ಟೇ ಅದ್ಭುತವಾದ ಕಮ್ಯೂನಿಕೇಷನ್ ಕೂಡ ಇದೆ. ಸೀರಿಯಲ್ ಬಿಟ್ಟು ರಿಯಲ್ ಲೈಫ್‌ನಲ್ಲಿ ದಿಶಾ ಮದನ್ ಮಾಡರ್ನ್ ಡ್ರೆಸ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇತ್ತೀಚೆಗೆ ದಿಶಾ ಮದನ್ ಸೈಮಾ ಪ್ರಶಸ್ತಿ ಸಮಾರಂಭಕ್ಕೆ ಹೋಗಿದ್ದರು. ಈ ವೇಳೆ ಹಸಿರು ಬಣ್ಣದ ಡಿಸೈನರ್ ಗೌನ್ ಧರಿಸಿದ್ದು ನೆಟ್ಟಿಗರ ಗಮನ ಸೆಳೆದಿದೆ.

ಫ್ಯಾನ್ಸ್‌ಗೆ ಕಾಮೆಂಟ್‌ಗಳೇನು?

ಇತ್ತೀಚಿಗೆ ನಡೆದ ಸೈಮಾ ಅವಾರ್ಡ್ ಕಾರ್ಯಕ್ರಮದಲ್ಲಿ ದಿಶಾ ಮದನ್ ಭಾಗಿಯಾಗಿದ್ದರು. ಹಾಗೆಯೇ ಈ ಕಾರ್ಯಕ್ರಮಕ್ಕೆ ಬೇರೆ ಬೇರೆ ಚಿತ್ರರಂಗದ ಸ್ಟಾರ್‌ಗಳು ಜೊತೆ ದಿಶಾ ಮದನ್ ಕೂಡ ಮಿಂಚಿದ್ದಾರೆ. ದಿಶಾ ಅವರ ಹೊಸ ಸ್ಟೈಲ್ ನೋಡಿ ಅಭಿಮಾನಿಗಳು ಮಾತ್ರ "ಸಿದ್ದೇ ಗೌಡರಿಗೆ ನೀವು ಮೋಸ ಮಾಡಬೇಡಿ. ನಿಮ್ಮ ಅವತಾರ ನೋಡಿ ನಮಗೆ ಭಯ ಆಗುತ್ತಿದೆ" ಎಂದೆಲ್ಲ ಬೇಸರ ಹೊರ ಹಾಕುತ್ತಿದ್ದಾರೆ.

ಜಾಹೀರಾತಿನಲ್ಲಿ ದಿಶಾ ನಟನೆ

ಇನ್ನು ದಿಶಾ ಮದನ್ ಅವರು ಹಂಬಲ್ ಪೊಲಿಟೀಷಿಯನ್ ನಾಗರಾಜ್ ಮತ್ತು ಫ್ರೆಂಚ್ ಬಿರಿಯಾನಿ ಸಿನಿಮಾದಲ್ಲಿ ದಿಶಾ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಇನ್ನೂ ಹಲವು ಜಾಹಿರಾತಿನಲ್ಲಿ ಕೂಡ ದಿಶಾ ಮದನ್ ಅವರು ಅಭಿನಯ ಮಾಡಿದ್ದಾರೆ. ಏನೇ ಆಗಲಿ ಸೈಮಾ ಅವಾರ್ಡ್ ನಲ್ಲಿ ಕಾಣಿಸಿಕೊಂಡ ನೆಚ್ಚಿನ ನಟಿಯ ಅವತಾರ ನೋಡಿ ಅಭಿಮಾನಿಗಳು ಮಾತ್ರ ಫುಲ್ ಬೇಸರಗೊಂಡಿದ್ದಾರೆ.

More from Filmibeat

Read more about: actress poorva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X