Lakshmi nivasa: ಜಗ್ಗೇಶ್ ಜೊತೆಗೆ 'ತರ್ಲೆ ನನ್ಮಗ', ಲಕ್ಷ್ಮೀ ನಿವಾಸದಲ್ಲಿ ತರ್ಲೆ ನನ್ ಮಗಳು..!
ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಬರುತ್ತಿದೆ. ಈ ಧಾರಾವಾಹಿಯಲ್ಲಿ ಹಿರಿಯ ಕಲಾವಿದರೆಲ್ಲಾ ಒಟ್ಟಿಗೆ ಸೇರಿ ಅಭಿನಯಿಸುತ್ತಿದ್ದಾರೆ. ಅದರಲ್ಲೂ ಶ್ವೇತಾ ಅವರನ್ನು ಕಿರುತೆರೆಗೆ ಕರೆತರಲಾಗಿದೆ. ಈ ಧಾರಾವಾಹಿ ಮಿಡಲ್ ಕ್ಲಾಸ್ ಕಷ್ಟಸುಖದ ಜೊತೆಗೆ ಅದ್ದೂರಿ ಮನೆತನವನ್ನು ತೋರಿಸುತ್ತಿದೆ, ಶ್ರೀಮಂತಿಕೆಯ ಜನರು ಇದರಲ್ಲಿದ್ದಾರೆ. ಗೌಡರ ಮನೆತನವೂ ಇದರಲ್ಲಿದೆ. ಎಲ್ಲರೂ ಒಟ್ಟಾಗಿ ಎಲ್ಲಾ ವರ್ಗದವರನ್ನು ಸೆಳೆಯುವ ಧಾರಾವಾಹಿ ಇದಾಗಿದೆ.
ಜವರೇಗೌಡನ ಮನೆಯಲ್ಲಿ ಇಬ್ಬರು ಗಂಡು ಮಕ್ಕಳು, ಒಬ್ಬಳೇ ಮಗಳು. ಪ್ರೀತಿಸಿದ ಹುಡುಗ ಜೊತೆಗೆ ಓಡಿ ಹೋದ ಮಗಳು, ಆಗಾಗ ಮನೆಗೆ ಬರುತ್ತಾಳೆ ಇನ್ನು ಮೊದಲನೇ ಮಗನಿಗೆ ಮದುವೆಯಾಗಿದ್ದು, ಸೊಸೆಗೆ ಯಾವ ಸ್ವಾತಂತ್ರ್ಯವೂ ಇಲ್ಲದಾಗಿದೆ. ಇದೆಲ್ಲವೂ ಕೇವಲ ಧಾರಾವಾಹಿಯಲ್ಲಿ ಮಾತ್ರ.

ಸೊಸೆಗೆ ಸ್ವಾತಂತ್ರ್ಯ ಕೊಡದ ಮಾವ
ಜವರೇಗೌಡನ ಮನೆಯಲ್ಲಿ ಎಲ್ಲವೂ ಹಿರಿಯ ಮನುಷ್ಯ ಹೇಳಿದಂತೆಯೇ ನಡೆಯಬೇಕು. ಅದರಲ್ಲೂ ಜವರೇಗೌಡನಿಗೆ ಚಿಕ್ಕ ಮಗನೆಂದರೆ ಪ್ರೀತಿ, ದೊಡ್ಡ ಮಗನೆಂದರೆ ಅಷ್ಟಕ್ಕೆ ಅಷ್ಟೇ. ಹೀಗಾಗಿ ದೊಡ್ಡ ಸೊಸೆಗೂ ಸಿಗುವ ಗೌರವ ಅಷ್ಟೇನು ಇಲ್ಲ. ಹೀಗಾಗಿ ದೊಡ್ಡ ಸೊಸೆಯನ್ನು ಒಳ್ಳೆ ಜೈಲಿನಲ್ಲಿ ಕೂಡಿ ಹಾಕಿದಂತೆಯೇ ಆಗಿದೆ. ಸೊಸೆಗೆ ಸ್ವಾತಂತ್ರ್ಯ ಕೊಡುವುದಕ್ಕೆ ಅತ್ತೆಯಿಂದಾನು ಸಾಧ್ಯವಾಗುತ್ತಿಲ್ಲ.
ಅಜ್ಜಿ ಜೊತೆಗೆ ಮಗಳು-ಸೊಸೆ ರೀಲ್ಸ್
ಧಾರಾವಾಹಿಯಲ್ಲಿ ನಟಿಸುವವರು ನಿರ್ದೇಶಕರ ಸ್ಕ್ರಿಪ್ಟ್ ಏನಿರುತ್ತದೆಯೋ ಅದರಂತೆಯೇ ನಟಿಸುತ್ತಾರೆ. ಆದರೆ ಸೀರಿಯಲ್‌ನಿಂದ ಹೊರಗೆ ಎಲ್ಲಾ ಕಲಾವಿದರ ಬಾಂಧವ್ಯವೇ ಬೇರೆ ಆಗಿರುತ್ತದೆ. ಎಲ್ಲರೂ ಒಟ್ಟಿಗೆ ಖುಷಿ ಖುಷಿಯಾಗಿಯೇ ಬ್ರೇಕ್‌ನ ಸಮಯವನ್ನು ಕಳೆಯುತ್ತಾರೆ. ಈಗ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲೂ ಅಷ್ಟೇ ಧಾರಾವಾಹಿ ಬ್ರೇಕ್ ಸಿಕ್ಕಿದ ಕೂಡಲೇ ಮನೆಯ ಹಿರಿಯರನ್ನು ಕೂರಿಸಿ ರೀಲ್ಸ್ ಮಾಡಿದ್ದಾರೆ. ಜವರೇಗೌಡ ಇದ್ದಾಗ ಈ ರೀತಿಯೆಲ್ಲಾ ಫನ್ ಮಾಡುವುದಕ್ಕೆ ಆಗುವುದೇ ಇಲ್ಲ. ಆದರೆ ಜವರೇಗೌಡ ಮನೆಯಲ್ಲಿ ಇಲ್ಲ ಎಂದಾಗ ಫುಲ್ ಮೋಜು ಮಸ್ತಿ.
ಅತ್ತಿಗೆ ಮೈದುನದ್ದು ರೀಲ್ಸ್ ರಾಜ್ಯ
ಅದರಲ್ಲೂ ಅತ್ತಿಗೆ ಮತ್ತು ಮೈದುನನದ್ದು ಕಾಮಿಡಿ ಅಂದ್ರೆ ಕಾಮಿಡಿ. ರೀಲ್ಸ್ ಮಾಡುವುದರಲ್ಲಿ ಸದಾ ಮುಂದಿರುತ್ತಾರೆ ಮಾನಸ ಮನೋಹರ್ ಹಾಗೂ ಧನಂಜಯ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮಾನಸ ಅವರದ್ದು ಮಾತನಾಡಲು ಆಗದಂತ ಅಸಹಾಯಕ ಪಾತ್ರ. ಮಾತನಾಡಿದರು ಬೆಲೆಯೇ ಸಿಗದಂತೆ ಪರಿಸ್ಥಿತಿ. ಧನಂಜಯ್ ಅವರದ್ದು ಪ್ರಮುಖ ಪಾತ್ರ. ಜವರೇಗೌಡನ ಮುದ್ದಿನ ಮಗ. ಈಗ ಭಾವನಾಳಿಗಾಗಿ ಒದ್ದಾಡುತ್ತಿರುವ ಹೃದಯ. ಒರಟು ಹಾಗೇ ಮುಗ್ಧ ಮನಸ್ಸಿನ ಹುಡುಗನ ಪಾತ್ರ ಮಾಡಿದ್ದಾರೆ.

ತರ್ಲೆ ನನ್ ಮಗಳು ಎಂದ ಅಂಜಲಿ
ಅಂಜಲಿ ಯಾರಿಗೆ ಗೊತ್ತಿಲ್ಲ ಹೇಳಿ. ಕಾಶಿನಾಥ್, ಜಗ್ಗೇಶ್ ಅವರ ಸಿನಿಮಾಗಳಲ್ಲಿ ಹೀರೋಯಿನ್ ಆಗಿದ್ದವರು. ಬಹಳ ವರ್ಷಗಳ ಕಾಲ ಗ್ಯಾಪ್ ತೆಗೆದುಕೊಂಡು ಈಗ ಹಲವು ಸೀರಿಯಲ್‌ಗಳಲ್ಲಿ ನಟಿಸುತ್ತಿದ್ದಾರೆ. ಅವರ ಅಭಿನಯದ 'ತರ್ಲೆ ನನ್ಮಗ' ಎಲ್ಲರಿಗೂ ಅಚ್ಚುಮೆಚ್ಚು, ಅವರು ಫೇಮಸ್ಸು. ಈಗ ಸೊಸೆ, ಅತ್ತೆ, ಮಗಳ ಜೊತೆಗೆ ಅಂಜಲಿಯೂ ಹೆಜ್ಜೆ ಹಾಕಿದ್ದು, ಆ ರೀಲ್ಸ್‌ಗೆ ತರ್ಲೆ ನನ್ ಮಗಳು ಎಂದು ಕ್ಯಾಪ್ಶನ್ ಕೊಡುವ ಮೂಲಕ ಹಳೆ ಸಿನಿಮಾವನ್ನು ನೆನಪಿಸಿದ್ದಾರೆ. ಧಾರಾವಾಹಿಯಲ್ಲಿ ಅಂಜಲಿ ಅವರ ಮಗಳ ಪಾತ್ರ ಮಾಡಿರುವವರು ರೀಲ್ಸ್‌ನಲ್ಲಿ ಅಷ್ಟೇ ತರಲೆ ಮಾಡಿದ್ದಾರೆ.


Click it and Unblock the Notifications











