ಮದುವೆ ವಾರ್ಷಿಕೋತ್ಸವಕ್ಕೆ ವೀಡಿಯೋ ಹಂಚಿಕೊಂಡ ನಟ ಮಧು ಹೆಗಡೆ
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಧಾರಾವಾಹಿಯಲ್ಲಿ ಕಂಜೂಸ್ ಸಂತೋಷ್ ಪಾತ್ರವನ್ನು ನಿಭಾಯಿಸುತ್ತಿರುವ ನಟ ಮಧು ಹೆಗಡೆ ಅವರು ತಮ್ಮ ಮದುವೆಯ ಫೋಟೋ ಮತ್ತು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಮಧು ಹೆಗಡೆ ಅವರು ಹಲವು ವರ್ಷಗಳಿಂದಲೂ ಮಧು ಹೆಗಡೆ ಅವರು ಕಿರುತೆರೆಯಲ್ಲಿದ್ದಾರೆ. ಕಿರುತೆರೆಯ ಅಭಿಮಾನಿಗಳಿಗೆ ಚಿರಪರಿಚಿತವಾಗಿರುವ ಮುಖ.
ಲಕ್ಷ್ಮೀ ನಿವಾಸದಲ್ಲಿನ ಇವರ ಪಾತ್ರವನ್ನು ಇಷ್ಟ ಪಡದವರೇ ಇಲ್ಲ. ಬಹಳ ಕಂಜೂಸ್ ಆಗಿ ನಡೆದುಕೊಂಡರೂ ವೀಕ್ಷಕರು ಬೈಯುತ್ತಲೇ ಮಧು ಅವರು ಇರುವ ಸೀನ್ ನೋಡಲು ಬಯಸುತ್ತಾರೆ.

ಮೂಲತಃ ಶಿವಮೊಗ್ಗ ಜಿಲ್ಲೆಯ ಹೊಸನಗರದವರಾದ ನಟ ಮಧು ಹೆಗಡೆ ಅವರು ಆರಂಭದಲ್ಲೇ ನೀನಾಸಂ ಸಂಸ್ಥೆಯಲ್ಲಿ ಅಭಿನಯವನ್ನು ಕಲಿತು ಪಳಗಿದ ವ್ಯಕ್ತಿ.
ಮಧು ಹೆಗಡೆ ಅವರು 'ಮೌನರಾಗ' ಧಾರಾವಾಹಿ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಬಳಿಕ 'ಮಳೆಬಿಲ್ಲು', 'ಗುಪ್ತಗಾಮಿನಿ', 'ಮನ್ವಂತರ', 'ಗೆಜ್ಜೆಪೂಜೆ', 'ಜೋಗುಳ', 'ಪಲ್ಲವಿ ಅನುಪಲ್ಲವಿ' ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿ ಹೆಸರುವಾಸಿಯಾಗಿದ್ದಾರೆ.
ನಟನೆ, ನಿರ್ದೇಶನವೇ ಜಗತ್ತು
ಸಿನಿಮಾ ಕ್ಷೇತ್ರದಲ್ಲೂ ಬಣ್ಣ ಹಚ್ಚಿರುವ ಮಧು ಹೆಗಡೆ ಅವರು 'ಈ ಬಂಧನ' ಚಿತ್ರದಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಜೊತೆ ನಟಿಸಿದ್ದರು. ಸಂಗೀತ ನಿರ್ದೇಶಕರು ಕೂಡ ಆಗಿದ್ದಾರೆ. 'ನಾಯಿ ನೆರಳು', 'ಕವಚ', 'ಮಿ.ಗರಗಸ', 'ಮೂರು ಗುಟ್ಟು ಒಂದು ಸುಳ್ಳು ಒಂದು ನಿಜ', 'ನಮ್ ನಾಣಿ ಮದ್ವೆ' ಸೇರಿದಂತೆ ಕೆಲ ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. 'ಪ್ರಾಯಶಃ' ಚಿತ್ರದಲ್ಲಿ ಮಧು ಹೆಗಡೆ ಅವರು ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಇನ್ನು ಸಂಗೀತ ನಿರ್ದೇಶಕರಾಗಿ ಕಳೆದ ಕೆಲ ವರ್ಷಗಳ ಹಿಂದೆ ಬಡ್ತಿ ಪಡೆದಿದ್ದಾರೆ. ಕನ್ನಡದಲ್ಲಿ 'ಒಂದಂಕೆ ಕಾಡು' ಹಾಗೂ ತೆಲುಗಿನಲ್ಲಿ 'ಅನಗನಗಾ ಒಕ ಅಡವಿ' ಎಂದು ಹೆಸರಿಸಲಾಗಿದೆ. ಈ ಎರಡೂ ಸಿನಿಮಾಗೆ ಮಧು ಹೆಗಡೆ ಅವರೇ ಸಂಗೀತ ನಿರ್ದೇಶಿಸಿದ್ದಾರೆ.
ಶಿವಮೊಗ್ಗದ ಹುಡುಗ
ನಟ ಮಧೂ ಹೆಗಡೆ ತಮ್ಮ ಇನ್ ಸ್ಟಾಗ್ರಾಂ ಪೇಜ್‌ನಲ್ಲಿ ಹೆಚ್ಚು ಪೋಸ್ಟ್ ಹಾಕದಿದ್ದರೂ ಕೂಡ ಆಕ್ಟರ್ ಬೈ ಚಾಯ್ಸ್, ಮ್ಯೂಸಿಕ್ ಡೈರೆಕ್ಟರ್ ಬೈ ಪ್ಯಾಷನ್ ಎಂದು ಬರೆದುಕೊಂಡಿದ್ದಾರೆ. ಅಂದರೆ, ನಟನೆಯನ್ನು ಆರಿಸಿಕೊಂಡಿದ್ದಾದರೆ, ಸಂಗೀತ ನಿರ್ದೇಶಕನಾಗಿದ್ದು ನನ್ನ ಪ್ಯಾಷನ್ ಎಂದಿದ್ದಾರೆ. ಶಿವಮೊಗ್ಗದಲ್ಲಿ ಜನಿಸಿದ ಮಧು ಹೆಗಡೆ ಅವರು ಅಲ್ಲೇ ಓದಿ ಬೆಳೆದಿದ್ದಾರೆ. ರಂಗಭೂಮಿಯಲ್ಲಿ ಇದ್ದಿದ್ದರಿಂದ ಮಧು ಅವರಿಗೆ ಸಂಗೀತದ ಮೇಲೆ ಒಲವಿತ್ತು. ಆದರೆ, ಹೆಚ್ಚು ಗಮನ ಹರಿಸಲು ಸಾಧ್ಯವಾಗಿರಲಿಲ್ಲ. ಇದೀಗ ಅದಕ್ಕೆ ಅವಕಾಶ ಸಿಕ್ಕಿದ್ದು ಸಂಗೀತ ನಿರ್ದೇಶಕರಾಗಿ ಸಕ್ಸಸ್ ಕಂಡಿದ್ದಾರೆ.
ಮಧು ಅವರ ಪತ್ನಿ ಯಾರು ಗೊತ್ತಾ..?
ಇನ್ನು ಮಧು ಹೆಗಡೆ ಅವರು ಆರು ವರ್ಷಗಳ ಹಿಂದೆ ನಮ್ರತಾ ಶರ್ಮಾ ಹೆಗಡೆ ಎಂಬಾಕೆಯನ್ನು ವಿವಾಹವಾಗಿದ್ದಾರೆ. ನಿನ್ನೆಯಷ್ಟೇ ವಿವಾಹ ವಾರ್ಷಿಕೋತ್ಸವ ಹಿನ್ನೆಲೆ ಮಧು ಅವರು ತಮ್ಮ ಮದುವೆಯ ವೀಡಿಯೋ ಮತ್ತು ಫೋಟೋವನ್ನು ಹಂಚಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಿಂದ ದೂರವೇ ಇರುವ ನಟ ಮಧು ಅವರು ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸಲು ಆರಂಭಿಸಿದಾಗಿನಿಂದ ಸೀರಿಯಲ್ ತಂಡದವರೊಂದಿಗೆ ಸೇರಿ ಕೆಲ ರೀಲ್ಸ್ ಗಳನ್ನು ಮಾಡುತ್ತಿರುತ್ತಾರೆ. ಈ ಎಲ್ಲಾ ವೀಡಿಯೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇನ್ನು ಮಧು ಅವರ ಪತ್ನಿ ನಮ್ರತಾ ಅವರು ತಮ್ಮದೇ ಬಟ್ಟೆಯ ಅಂಗಡಿಯನ್ನು ಹೊಂದಿದ್ದಾರೆ. ರಾಜರಾಜೇಶ್ವರಿ ನಗರದಲ್ಲಿ ಹರ ಸಾತಿಕ ಎಂಬ ಬಟ್ಟೆ ಅಂಗಡಿಯನ್ನು ಕಳೆದ ಐದು ವರ್ಷಗಳಿಂದ ವ್ಯಾಪಾರ ಮಾಡುತ್ತಿದ್ದಾರೆ. ಪತಿ ಮಧೂ ಹೆಗಡೆಗೆ ಹೋಲಿಸಿದರೆ ನಮ್ರತಾ ಅವರು ಕೊಂಚ ಡಿಫರೆಂಟ್ ಹೆಚ್ಚಾಗಿ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಹಾಕುತ್ತಿರುತ್ತಾರೆ. ಆಕ್ಟೀವ್ ಆಗಿರುತ್ತಾರೆ.


Click it and Unblock the Notifications











