Lakshmi nivasa: ಸಿದ್ದೇಗೌಡ್ರ ತಾಯಿ ಯಾರು ಗೊತ್ತಾ? 'ಲಕ್ಷ್ಮೀ ನಿವಾಸ'ದಲ್ಲೇ ಹೂ ಮಾರುವ ಕುರುಡಿ!
ಜೀ ಕನ್ನಡದಲ್ಲಿ ಪ್ರಸಾರವಾಗುವ ಲಕ್ಷ್ಮೀ ನಿವಾಸ ಧಾರಾವಾಹಿ ಇಂಟ್ರೆಸ್ಟಿಂಗ್ ಆಗಿದೆ. ಅದರಲ್ಲೂ ಸಿದ್ದೇಗೌಡ್ರ ಎಪಿಸೋಡ್ ಬಂದರಂತು ನೋಡುಗರಿಗೆ ಫುಲ್ ಖುಷಿ. ಪಕ್ಕ ಮಂಡ್ಯ ಭಾಷೆಯಲ್ಲಿಯೇ ಎಲ್ಲರನ್ನು ಕಾಡುವ ಸಿದ್ದೇಗೌಡ್ರು ಸೋಷಿಯಲ್ ಮೀಡಿಯಾದಲ್ಲಂತೂ ಸಿಕ್ಕಾಪಟ್ಟೆ ಬ್ಯುಸಿ ಬಿಡಿ. ಸೀರಿಯಲ್ ಸ್ಪಾಟ್‌ನಲ್ಲಿ ಕೊಂಚ ಗ್ಯಾಪ್ ಸಿಕ್ಕಿದರೂ ರೀಲ್ಸ್ ಮಾಡುತ್ತಾ ಕುಳಿತು ಬಿಡುತ್ತಾರೆ.
ಸಿದ್ದೇಗೌಡ್ರಿಗೆ ಮಹಿಳಾ ಅಭಿಮಾನಿಗಳೇ ಜಾಸ್ತಿ. ಯಾಕಂದ್ರೆ ಭಾವನಾಳ ಹಿಂದೆ ಬಿದ್ದಿರುವ ಸಿದ್ದೇಗೌಡ್ರು ಇಂಪ್ರೆಸ್ ಮಾಡುವ ರೀತಿಯೇ ಎಲ್ಲರಿಗೂ ಇಷ್ಟವಾಗುತ್ತೆ. ಆದಷ್ಟು ಬೇಗ ಅವರಿಬ್ಬರು ಒಂದಾಗಲಿ ಎಂದೇ ಅಭಿಮಾನಿಗಳು ಬಯಸುತ್ತಿದ್ದಾರೆ. ಅದರಲ್ಲೂ ಸಿದ್ದೇಗೌಡರ ಸ್ಟೈಲ್, ಅವರ ಮಾತಂತು ಎಲ್ಲರೂ ಇಷ್ಟಪಡುತ್ತಾರೆ.

ಅಮ್ಮ ಮಗ ಒಂದೇ ಧಾರಾವಾಹಿಯಲ್ಲಿ
ಎಷ್ಟೋ ಬಾರಿ ಒಂದೇ ಸೀರಿಯಲ್‌ನಲ್ಲಿ ಕುಟುಂಬಸ್ಥರು ನಟನೆ ಮಾಡಿರುತ್ತಾರೆ. ಆದರೆ ಅದು ನೋಡುಗರಿಗೆ ಗೊತ್ತೆ ಆಗುವುದಿಲ್ಲ. ಈಗ ಸಿದ್ದೇಗೌಡರ ವಿಚಾರವೂ ಹಾಗೇ. 'ಲಕ್ಷ್ಮೀ ನಿವಾಸ'ದ ಸಿದ್ದೇಗೌಡ ಅಲಿಯಾಸ್ ಧನಂಜಯ್ ಹಾಗೂ ಅವರ ತಾಯಿ ಕೂಡ ಈ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ. ಧನಂಜಯ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಆ ವಿಡಿಯೋ ನೋಡಿದ ಮೇಲೆಯೇ ಗೊತ್ತಾಗಿದ್ದು ಸಿದ್ದೇಗೌಡರ ತಾಯಿ ಇವರೇ ಅಂತ.
ಅಮ್ಮನ ಜೊತೆಗಿನ ವಿಡಿಯೋ ವೈರಲ್
ಅಮ್ಮನ ಒಂದಷ್ಟು ಫೋಟೋಗಳನ್ನು ಕೊಲ್ಯಾಜ್ ಮಾಡಿರುವ ಸಿದ್ದೇಗೌಡ್ರು, ಅದಕ್ಕೊಂದು ಬ್ಯೂಟಿಫುಲ್ ಸಾಂಗ್ ಹಾಕಿ ಎಡಿಟ್ ಮಾಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಅಮ್ಮ ಎಂದು ಕ್ಯಾಪ್ಶನ್ ಹಾಕಿ, ಅದಕ್ಕೊಂದು ಹಾರ್ಟ್ ಸಿಂಬಲ್ ಹಾಕಿ ಪೋಸ್ಟ್ ಮಾಡಿದ್ದಾರೆ. ಆ ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ. 'ಇವರು ಕೂಡ ಸೀರಿಯಲ್ ಆರ್ಟಿಸ್ಟ್ ಅನ್ನಿಸುತ್ತೆ, ಹೌದು ಸಿದ್ದೇಗೌಡ್ರ ತಾಯಿ ಕೂಡ ಹಲವು ಧಾರಾವಾಹಿಗಳಲ್ಲಿ ಅಭಿನಯಿಸಿದ್ದಾರೆ, ಲಕ್ಷ್ಮೀ ನಿವಾಸದಲ್ಲಿ ಹೂ ಮಾರುವ ಪಾತ್ರ ಇವರದ್ದೇ' ಅಂತೆಲ್ಲ ಕಮೆಂಟ್ ಹಾಕಿದ್ದಾರೆ.

ಲಕ್ಷ್ಮೀ ನಿವಾಸದಲ್ಲಿ ಚೆಲ್ವಿಯ ತಾಯಿ
ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಇತ್ತಿಚೆಗಷ್ಟೇ ಎರಡು ಪಾತ್ರಗಳು ಹೊಸದಾಗಿ ಹುಟ್ಟಿಕೊಂಡಿವೆ. ಚೆಲ್ವಿ ಹಾಗೂ ಆಕೆಯ ಅವ್ವನ ಪಾತ್ರ. ಚೆಲ್ವಿ ಹೂ ಮಾರುವ ಹುಡುಗಿ. ಆಕೆಯ ತಾಯಿಗೆ ಕಣ್ಣು ಕಾಣಿಸುವುದಿಲ್ಲ. ದೇವಸ್ಥಾನ ಒಂದರ ಬಳಿ ಅವ್ವ ಮಗಳು ಹೂ ಮಾರುತ್ತಾ ಕೂರುತ್ತಾರೆ. ಸಿದ್ದೇಗೌಡ್ರ ರಿಯಲ್ ಅಮ್ಮ ಈ ಧಾರಾವಾಹಿಯಲ್ಲಿ ಕುರುಡಿಯಾಗಿ ಅಭಿನಯಿಸಿದ್ದಾರೆ.
ವೆಂಕಿಯನ್ನು ಮಾತನಾಡಿಸುವ ತಾಯಿ
ಇದೇ ಧಾರಾವಾಹಿಯಲ್ಲಿ ವೆಂಕಿ ಮೂಕನಾಗಿ ಅಭಿನಯಿಸಿದ್ದಾನೆ. ಲಕ್ಷ್ಮೀ-ಶ್ರೀನಿವಾಸ ಅವನನ್ನು ಮಗುವಿದ್ದಾಗಲೇ ತಂದು ಸಾಕಿದ್ದಾರೆ. ಅವರ ಋಣ ತೀರಿಸುವುದಕ್ಕೆ ವೆಂಕಿ, ನಾನು ಕೆಲಸಕ್ಕೆ ಹೋಗುತ್ತೀನಿ ಅಂತ ಒಂದು ದಿನಸಿ ಅಂಗಡಿಗೆ ಹೋಗುತ್ತಿದ್ದಾನೆ. ಕೆಲಸಕ್ಕೆ ಹೋಗುವುದಕ್ಕೂ ಮುನ್ನ ದೇವಸ್ಥಾನಕ್ಕೆ ಹೋಗುತ್ತಾನೆ. ಆ ದೇವಸ್ಥಾನದಲ್ಲಿಯೇ ಸಿಕ್ಕವಳು ಚೆಲ್ವಿ. ವೆಂಕಿಗೆ ಮಾತು ಬರಲ್ಲ ಅಂತ ಚೆಲ್ವಿಗೆ ಗೊತ್ತಿಲ್ಲ. ಆದರೆ ಕಣ್ಣು ಕಾಣದ ಚೆಲ್ವಿಯ ಅಮ್ಮನಿಗೆ ಗೊತ್ತು. ಚೆಲ್ವಿ ಯಾವಾಗಲೂ ವೆಂಕಿಯನ್ನು ಬೈಯ್ಯುತ್ತಲೇ ಇರುತ್ತಾಳೆ. ಆದರೆ ತಾಯಿ ಮಾತ್ರ ಬೈಯ್ಯುವುದಕ್ಕೆ ಬಿಡುವುದಿಲ್ಲ. ಅವರ ಅಮ್ಮನಿಗೆ ಚೆಲ್ವಿಗೊಂದು ಮದುವೆ ಮಾಡಬೇಕೆಂಬುದೇ ಆಸೆ. ಹೀಗಾಗಿ ಈ ಸಿದ್ದೇಗೌಡ್ರ ರಿಯಲ್ ತಾಯಿಯಿಂದಲೇ ವೆಂಕಿ ಲೈಫ್‌ಗೆ ಟರ್ನಿಂಗ್ ಪಾಯಿಂಟ್ ಸಿಗಬಹುದು.


Click it and Unblock the Notifications











