Disha & Dhananjay: ಭಾವನಾ-ಗೌಡ್ರು ಮಾಡಿದ ಒಂದೇ‌ ಒಂದು ಡ್ಯಾನ್ಸ್‌ಗೆ ದರ್ಶನ್ ಫ್ಯಾನ್ಸ್ ಹಾಜರ್..!

By ಎಸ್ ಸುಮಂತ್

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಭಾವನಾ ಹಾಗೂ ಸಿದ್ದೇಗೌಡ್ರ ಜೋಡಿಗೆ ಸಿಕ್ಕಾಪಟ್ಟೆ ಫ್ಯಾನ್ಸ್ ಇದ್ದಾರೆ. ಅವರಿಬ್ಬರು ಧಾರಾವಾಹಿಯಲ್ಲಿ ಆಗಾಗ ಭೇಟಿಯಾದರೂ ಸರಿ ಜೈಕಾರ ಹಾಕ್ತಾ ಇರ್ತಾರೆ. ಇಬ್ಬರ ಜೋಡಿ ಸೂಪರ್ ಆಗಿದೆ. ಬೇಗ ಒಂದಾಗಿ ಅಂತ ಹಾರೈಸುತ್ತಿದ್ದಾರೆ.

ಸಿದ್ದೇಗೌಡ್ರಿಗೆ ಲವ್ ಅಟ್ ಫಸ್ಟ್ ಸೈಟ್ ಅಂತಾರಲ್ಲ ಅದಾದ‌ ಮೇಲಿಂದ ಭಾವನಾ ಕಂಡರೆ ಅದೇನೋ ಒಂದು ಥರದ ಲವ್ ಎಕ್ಸ್‌ಪ್ರೆಸ್‌ ಮಾಡ್ತಾ ಇದ್ರು. ಭಾವನಾಗೆ ಅದು ಮುಜುಗರ ತರ್ತಾ ಇತ್ತು. ಹೇಳದೆ ಕೇಳದೆ ತಾಳಿಯನ್ನು ಕಟ್ಟು ಬಿಟ್ಟಿದ್ದಾರೆ.

Lakshmi nivasa serial fame Disha and Dhanjay dance for Darshan s song

ಸಿದ್ದೇಗೌಡ್ರು ತಾಳಿ ಕಟ್ಟಿದ ಮೇಲೆ ಆ ಕಟ್ಟಿದವನನನ್ನ ಹುಡುಕಲು ಗೌಡ್ರ ಸಹಾಯವನ್ನೇ ಕೇಳಿದ್ದಾಳೆ ಭವನಾ. ಈಗ ಗೌಡ್ರು ಕಟ್ಟಿದ ತಾಳಿ ಒಬ್ಬೊಬ್ಬರಿಗೇನೆ ಗೊತ್ತಾಗ್ತಾ ಇದೆ. ಜಾನು ಮನೆಗೆ ಹೋದ ಭಾವನಾ, ತಾಳಿ ಬಗ್ಗೆ ಅರಿವಿಲ್ಲದೆ ಮಲಗಿದ್ದಾಳೆ. ಜಾನು ನೋಡಿ ಶಾಕ್ ಆಗಿದ್ದಾಳೆ. ಗೌಡ್ರು ಸೀರಿಯಲ್‌ನಲ್ಲಿ ಮಾತ್ರ ಅಲ್ಲ ಡ್ಯಾನ್ಸ್ ಮಾಡುವಾಗಲೂ ಭಾವನಾಳನ್ನ ಬಿಟ್ಟುಕೊಡುವ ಮಾತೇ ಇಲ್ಲ.

'ಸಖತ್ತಾಗವ್ಳೆ' ಎಂದ ಧನಂಜಯ

ದಿಶಾ ಮದನ್ ಹಾಗೂ ನಟ ಧನಂಜಯ ಬಹಳಷ್ಟು ಆತ್ಮೀಯರಾಗಿದ್ದಾರೆ. ಧಾರಾವಾಹಿಯಲ್ಲಿ ಸದ್ಯ ಗೌಡ್ರಿಗೆ ಭಾವನಾ ಮೇಲೆ ಸಿಕ್ಕಾಪಟ್ಟೆ ಲವ್ ಆಗಿದೆ. ಅದನ್ನ ಹೇಳಿಕೊಳ್ಳುವುದಕ್ಕೆ ಮಾತ್ರ ಆಗ್ತಿಲ್ಲ. ಆದರೆ ರಿಯಲ್ ಲೈಫ್‌ನಲ್ಲೂ ಇಬ್ಬರ ಆತ್ಮೀಯತೆಗೆ ಮೆಚ್ಚದವರಿಲ್ಲ. ಸದ್ಯ ದರ್ಶನ್ ಅಭಿನಯದ 'ಪೊರ್ಕಿ' ಚಿತ್ರದ ಹಾಡಿಗೆ ಹೆಜ್ಜೆ ಹಾಕಿದ್ದಾರೆ. 'ಸಖತ್ತಾಗವ್ಳೆ..‌ಸುಮ್ನೆ ನಗ್ತಾವ್ಳೆ' ಅಂತ ಧನಂಜಯ, ದಿಶಾಗೆ ಹೇಳ್ತಾ ಇದ್ದಾರೆ.

ದರ್ಶನ್ ಸಾಂಗ್ ಕೇಳಿ ಫ್ಯಾನ್ಸ್ ಹಾಜರಿ

ದರ್ಶನ್ ಸದ್ಯ ಕೊಲೆ ಆರೋಪದಲ್ಲಿ ಜೈಲಿನಲ್ಲಿದ್ದಾರೆ. ಅಭಿಮಾನಿಗಳು ರೀ-ರಿಲೀಸ್ ಆದ 'ಕರಿಯ' ಸಿನಿಮಾ ನೋಡಿ ಸಂಭ್ರಮಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಅವರ ಹಳೆಯ ಡೈಲಾಗ್ ಇರುವ ವಿಡಿಯೋಗಳನ್ನು ಹಾಕುತ್ತಿದ್ದಾರೆ. ಇದರ ನಡುವೆ ದಿಶಾ ಹಾಗೂ ಧನಂಜಯ ದರ್ಶನ್ ಅವರ ಹಾಡಿಗೆ ಹೆಜ್ಜೆ ಹಾಕಿದ್ದೇ ತಡ ಹಾಜರಿ ಹಾಕಿದ್ದಾರೆ. ಪೊರ್ಕಿ ಹಾಡು ಕೇಳಿ ಕಮೆಂಟ್ ಮೂಲಕ ಅಭಿಮಾನ ವ್ಯಕ್ತಪಡಿಸಿದ್ದಾರೆ. ಡಿ ಬಾಸ್.. ಡಿ ಬಾಸ್ ಎಂದು ಕಮೆಂಟ್‌ನಲ್ಲಿಯೇ ಜೈಕಾರ ಹಾಕಿದ್ದಾರೆ.

ರೀಲ್ಸ್ ಮಾಡುವ ಜೋಡಿ

ದಿಶಾ ಹಾಗೂ ಧನಂಜಯ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟೀವ್ ಆಗಿ ಇರುತ್ತಾರೆ. ಶೂಟಿಂಗ್ ಅಂತು ತುಂಬಾನೇ ಬ್ಯುಸಿ ಇರುತ್ತೆ. ಆದರೂ ಅದರ ನಡುವೆ ಸಣ್ಣದೊಂದು ಗ್ಯಾಪ್ ಸಿಕ್ಕಿದರು ಸಾಕು, ಇಬ್ಬರು ಟ್ರೆಂಡಿಂಗ್ ಹಾಡುಗಳಿಗೆ ರೀಲ್ಸ್ ಮಾಡುತ್ತಾ‌ ಇರುತ್ತಾರೆ. 'ಜೇನ ದನಿಯೋಳೆ' ಹಾಡಿಗೆ ಹೆಜ್ಜೆ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ ಕ್ಯೂಟ್ ಡ್ಯಾನ್ಸ್ ಅನ್ನು ಎಲ್ಲರು ಮೆಚ್ಚಿದ್ದರು.

ಗೌಡ್ರು ಜೊತೆ ಭಾವನಾ ಡ್ಯಾನ್ಸ್

ಭಾವನಾ ಯಾವತ್ತಿದ್ರು ಸಿದ್ದೇಗೌಡ್ರ ಸ್ವಂತ. ಮೇಡಮ್ಮೋರೇ ನೀವ್ ಯಾವತ್ತಿದ್ರು ನಮ್ಮೋರು.. ನಾವು ನಿಮ್ಮೋರೆ ಅಂತ ಸಿದ್ದೇಗೌಡ್ರು ಸಾಕಷ್ಟು ಸಲ ಹೇಳಿದ್ದಾರೆ. ಅದನ್ನ ರಿಯಲ್ ಲೈಫ್‌ನಲ್ಲಿ ಪಾಲಿಸ್ತಾ ಇದಾರೆ ಅನ್ಸುತ್ತೆ. ದಿಶಾ ಹಾಗೂ ಧನಂಜಯ ಅವರು ಒಂದೇ ಕಡೆ ಡ್ಯಾನ್ಸ್ ಕ್ಲಾಸ್ ಹೋಗ್ತಾರೆ ಅನ್ಸುತ್ತೆ. ಡ್ಯಾನ್ಸರ್ ಬಂದು ಡ್ಯಾನ್ಸ್ ಹೇಳಿ ಕೊಡುವಾಗ, ಏನ್ ಗುರು ನಿಂದು. ಅವ್ರು ನಮ್ಮೋರು ಅಂತ ಅವರಿಂದ ದೂರ ಮಾಡಿ, ದಿಶಾ ಜೊತೆಗೆ ಬಂದ ಸ್ಟೆಪ್ ಹಾಕಿ ಕೂತವರಿಗೆ ನಗು ಫ್ರೀಯಾಗಿ ನೀಡಿದ್ದಾರೆ.

More from Filmibeat

English summary
Here is the details about Darshan fans are happy with the dance done by Disha and Dhananjaya
Read more about: filmbeat original tv sumanth
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X