ಸೋಷಿಯಲ್ ಮೀಡಿಯಾದಲ್ಲೆಲ್ಲಾ 'ಲಕ್ಷ್ಮೀ ನಿವಾಸ' ಖುಷಿ ಕರಿಮಣಿ ಮಾಲೀಕನದ್ದೇ ಸದ್ದು..!
ಮಕ್ಕಳ ನಟನೆಯನ್ನು ನೋಡುವುದೇ ಚೆಂದ. ಅವುಗಳ ತುಂಟಾಟ, ತರಲೆಗೆ ಫಿದಾ ಆಗಿ ಹೋಗುತ್ತೀವಿ. ಇನ್ನು ನವರಸಗಳಲ್ಲೂ ನಮ್ಮನ್ನು ಕಾಡಿದರೆ ಹೇಗಿರಬೇಡ ಅಲ್ವಾ. ಇತ್ತೀಚಿನ ಧಾರಾವಾಹಿಗಳಲ್ಲಿ ನಟಿಸುತ್ತಿರುವ ಮಕ್ಕಳಂತು ಎಲ್ಲರಿಂದ ಶಬ್ಬಾಶ್ ಗಿರಿ ಪಡೆಯುತ್ತಿವೆ. ಪ್ರತಿಯೊಬ್ಬರು ಮುದ್ದಾಗಿ ನಟಿಸುತ್ತಿದ್ದಾರೆ.
'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಖುಷಿ ಪಾತ್ರದಲ್ಲಿ ನಟಿಸುತ್ತಿರುವ ಮಗು ಎಲ್ಲರ ಖುಷಿಗೆ ಕಾರಣವಾಗಿದ್ದಾಳೆ. ಇಷ್ಟು ಚಿಕ್ಕ ವಯಸ್ಸಿಗೆ ಅವಳ ಅಭಿನಯ ಪ್ರಬುದ್ಧವಾಗಿದೆ. ಅವಳ ನಟನೆಗೆ ಅದೆಷ್ಟೋ ಜನ ಫಿದಾ ಆಗಿದ್ದಾರೆ. ಸಿಕ್ಕಾಪಟ್ಟೆ ಫಾಲೋವರ್ಸ್ ಹುಟ್ಟಿಕೊಂಡಿದ್ದಾರೆ. ಫ್ಯಾನ್ ಪೇಜ್‌ಗಳು ಕ್ರಿಯೇಟ್ ಆಗಿವೆ. ಖುಷಿಯ ನಿಜವಾದ ಹೆಸರು ನಿಶಿತಾ.

ನಿಜವಾದ ಖುಷಿ ಹೇಗಿದ್ದಾಳೆ..?
ಲಕ್ಷ್ಮೀ ನಿವಾಸ ಧಾರಾವಾಹಿ ಆರಂಭವಾಗಿ ಕೆಲವೇ ವಾರಗಳು ಕಳೆದರೂ ಸಂಚಿಕೆಗಳು ಮಾತ್ರ ಫಾಸ್ಟ್ ಆಗಿ ರನ್ ಆಗುತ್ತಿವೆ. ಪ್ರೇಕ್ಷಕರಿಗೆ ಬೋರ್ ಹೊಡೆಸುವ ಧಾರಾವಾಹಿಗಳ ನಡುವೆ ಈ ಧಾರಾವಾಹಿ ಸಿಕ್ಕಾಪಟ್ಟೆ ಫಾಸ್ಟ್ ಆಗಿದೆ. ಪ್ರೇಕ್ಷಕರು ಕೂಡ ಆರಂಭದಲ್ಲಿಯೇ ಈ ಅನುಮಾನ ವ್ಯಕ್ತಪಡಿಸಿದ್ದರು. ಈ ಧಾರಾವಾಹಿಯಲ್ಲಿ ಖುಷಿಗೆ ಒಬ್ಬಳು ತಾಯಿಬೇಕು ಅಂತಾನೇ ಭಾವನಾಳನ್ನು ಮದುವೆ ಮಾಡಿಕೊಳ್ಳಲು ಶ್ರೀಕಾಂತ್ ರೆಡಿಯಾಗಿದ್ದ. ಆದರೆ ಈಗ ಖುಷಿ ಅನಾಥೆಯಾಗಿದ್ದಾಳೆ. ಖುಷಿ ಪಾತ್ರ ನೋಡಿದ ಎಂಥವರಿಗೂ ಕಣ್ಣಲ್ಲಿ ನೀರು ಬರದೆ ಇರುವುದಿಲ್ಲ. ಆದರೆ ರಿಯಲ್ ಆಗಿಯೂ ನಿಶಿತಾ ಹೀಗೆ ಇದ್ದಾಳಾ ಅಂದ್ರೆ ಖಂಡಿತಾ ಇಲ್ಲ. ಫುಲ್ ಆಕ್ಟೀವ್ ಆಗಿ, ಖುಷಿ ಖುಷಿಯಾಗಿ ಇದ್ದಾಳೆ.
ಡ್ಯಾನ್ಸ್, ಡೈಲಾಗ್ ರಾಣಿ ನಿಶಿತಾ
ಈಗ ಸೋಷಿಯಲ್ ಮೀಡಿಯಾ ಜಮಾನ. ಅದರಲ್ಲೂ ರೀಲ್ಸ್ ಜಮಾನ. ಕೊಂಚ ಡ್ಯಾನ್ಸ್, ಆಕ್ಟಿಂಗ್ ಕ್ರೇಜ್ ಇರುವವರಿಗೂ ಇದು ದೊಡ್ಡ ಫ್ಲಾಟ್ ಪಾರಂ ಅಂತಾನೇ ಹೇಳಬಹುದು. ಖುಷಿ ಪಾತ್ರಧಾರಿ ನಿಶಿತಾ ಕೂಡ ಸೋಷಿಯಲ್ ಮೀಡಿಯಾ ಕ್ವೀನ್ ಅಂತಾನೇ ಹೇಳಬಹುದು. ಈಗ ಅಂತ ಅಲ್ಲ ವರ್ಷಗಳ ಹಿಂದಿನಿಂದಾನೂ ನಿಶಿತಾ ಸಿಕ್ಕಾಪಟ್ಟೆ ಆಕ್ಟೀವ್ ಆಗಿದ್ದಾಳೆ. ಡ್ಯಾನ್ಸ್ ಮಾಡುವುದರಲ್ಲಿ ಬಳುಕುವ ಬಳ್ಳಿ, ಡೈಲಾಗ್ ಹೊಡೆಯುವಲ್ಲಿ ನಿಸ್ಸೀಮಳು. ಎಕ್ಸ್‌ಪ್ರೆಷನ್ ಕೊಟ್ಟರೆ ಎದುರಿದ್ದವರು ಕಳೆದೆ ಹೋಗಬೇಕು. ಅಷ್ಟು ಟ್ಯಾಲೆಂಟೆಡ್ ಗರ್ಲ್.

ಕರಿಮಣಿ ಮಾಲೀಕ ಹಾಡಿಗೆ ರೀಲ್ಸ್
ರೀಲ್ಸ್ ವಿಚಾರಕ್ಕೆ ಬರುವುದಾದರೆ ಯಾವ ಹಾಡು ಯಾವಾಗ ಟ್ರೆಂಡಿಂಗ್ ಆಗುತ್ತೆ ಎಂಬುದು ಯಾರೂ ಊಹೆ ಮಾಡುವುದಕ್ಕೆ ಸಾಧ್ಯವಿಲ್ಲ. ಇದೀಗ ಸೋಷಿಯಲ್ ಮೀಡಿಯಾದಲ್ಲೆಲ್ಲಾ ನೀನಲ್ಲ. ನೀನಲ್ಲ ಕರಿಮಣಿ ಮಾಲೀಕ ನೀನಲ್ಲ ಹಾಡಿಗೆ ಎಲ್ಲರೂ ಹೆಜ್ಜೆ ಹಾಕುತ್ತಿದ್ದಾರೆ. ಎಂಜಾಯ್ ಮಾಡುತ್ತಿದ್ದಾರೆ. ಸಾಮಾನ್ಯರಿಂದ ಹಿಡಿದು ಸೆಲೆಬ್ರೆಟಿಗಳ ತನಕವೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇದೀಗ ನಿಶಿತಾ ಕೂಡ ಇದಕ್ಕೆ ಹೊರತಾಗಿಲ್ಲ.
ಮೂರು ಬಾರಿ ಇದೇ ಹಾಡಿಗೆ ರೀಲ್ಸ್
ನಿಶಿತಾಗೆ ನೀನಲ್ಲ.. ನೀನಲ್ಲ. ಕರಿಮಣಿ ಮಾಲೀಕ ನೀನಲ್ಲ ಹಾಡು ಸಿಕ್ಕಾಪಟ್ಟೆ ಇಷ್ಟ ಆಗಿ ಬಿಟ್ಟಿದೆ ಎನಿಸುತ್ತದೆ. ಅದಕ್ಕೆ ಒಮ್ಮೆ ಅಲ್ಲ ಮೂರು ಮೂರು ಬಾರೀ ಈ ಹಾಡಿಗೆ ರೀಲ್ಸ್ ಮಾಡಿದ್ದಾಳೆ. ನಿಶಿತಾ ಪುಟ್ಟಳ ಈ ರೀಲ್ಸ್ ನೋಡಿ, ಒಂದೇ ಹಾಡಿಗೆ ಎಷ್ಟು ಬಾರಿ ಡ್ಯಾನ್ಸ್ ಮಾಡ್ತೀಯ ಪುಟ್ಟ ಅಂತ ಒಬ್ಬರು ಕೇಳಿದ್ರೆ, ಇನ್ನು ಹಲವರು ಬೆಂಕಿ ಕಮೆಂಟ್ ಹಾಕಿದ್ದಾರೆ. ನಿಶಿತಾ ಅವರ ವಿಡಿಯೋಗಳನ್ನೆಲ್ಲಾ ಪ್ರಿಯಾ ಎಂಬ ಅಕೌಂಟ್ ಮೂಲಕ ಪಬ್ಲಿಶ್ ಮಾಡಲಾಗುತ್ತಿದೆ.


Click it and Unblock the Notifications











