Lakshmidevi: 'ಯಜಮಾನ' ಅಮ್ಮಮ್ಮ ಮೇಕಪ್; ಇಳಿ ವಯಸ್ಸಲ್ಲೂ ಲಕ್ಷ್ಮೀದೇವಿ ನಟನೆಗೆ ವೀಕ್ಷಕರ ಮೆಚ್ಚುಗೆ

By ಎಸ್ ಸುಮಂತ್

ಕೆಲವೊಂದಿಷ್ಟು ಕಲಾವಿದರಿಗೆ ಕಲೆ ಎಂಬುದು ಬರೀ ನಟನೆ, ದುಡಿಮೆ ಅಲ್ಲ. ಅದೇ ಜೀವನ. ಹಿಂದಿನ ಕಾಲದಲ್ಲಿ ಕಲಾವಿದರೆಲ್ಲಾ ನಟನೆಯನ್ನು ದೇವರಂತೆಯೇ ಪೂಜಿಸುತ್ತಿದ್ದರು. ಸಿಕ್ಕ ಪಾತ್ರಗಳಿಗೆ ಜೀವ ತುಂಬುತ್ತಿದ್ದರು. ಕೆಲವರು ಇಂದು ದೈಹಿಕವಾಗಿ ಅಗಲಿದ್ದರೂ, ಅವರ ನಟನೆ, ಅವರ ಪಾತ್ರಗಳೇ ಇಂದಿಗೂ ಜನರನ್ನು ಕಾಡುತ್ತಿವೆ.

ಇನ್ನು ಅದೆಷ್ಟೋ ಹಿರಿಯ ಕಲಾವಿದರಿಗೆ ನಟಿಸುವ ತುಡಿತವಿದ್ದರು, ನಟನೆಯ ಅವಕಾಶಗಳು ಕಡಿಮೆ. ಇಂಥ ಪರಿಸ್ಥಿತಿಗೆ ಹಿರಿಯ ಕಲಾವಿದರು ಕೂಡ ಬೇಸರ ಮಾಡಿಕೊಳ್ಳುತ್ತಾರೆ. ನಮ್ಮನ್ನ ಸೈಡ್ ಲೈನ್ ಮಾಡಿದ್ದು ಯಾಕೆ..? ಅವಕಾಶ ಸಿಕ್ಕರೆ ಖಂಡಿತಾ ನಟಿಸುತ್ತೇವೆ ಎನ್ನುತ್ತಾರೆ. ಅಂಥ ಬದ್ದತೆಯುಳ್ಳ ಕಲಾವಿದರಲ್ಲಿ ಲಕ್ಷ್ಮೀದೇವಿ ಅವರು ಕೂಡ ಒಬ್ಬರು.

 Lakshmi nivasa serial fame veteran actress Lakshmi Davi make up video goes viral

'ಲಕ್ಷ್ಮೀ ನಿವಾಸ'ದಲ್ಲಿ ಲಕ್ಷ್ಮೀ ದೇವಿ

ಜೀ ಕನ್ನಡದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿ ಆರಂಭವಾಗಿ ಎಲ್ಲರ ಮನಸ್ಸು ಗೆಲ್ಲುತ್ತಿದೆ. ಕೌಟುಂಬಿಕ ಕಥೆಯನ್ನು ಹೊಂದಿರುವ ಧಾರಾವಾಹಿ. ಕೂಡು ಕುಟುಂಬದ ಧಾರಾವಾಹಿ. ಈ ಧಾರಾವಾಹಿಯಲ್ಲಿ ಮಧ್ಯಮ ವರ್ಗದ ಕುಟುಂಬದ ತಂದೆ-ತಾಯಿ ಹೆಣ್ಣು ಮಕ್ಕಳ ಮದುವೆ ಮಾಡಬೇಕೆಂಬ ಆಸೆ ಹಾಗೂ ಒಂದು ಮನೆಯನ್ನು ಕಟ್ಟಬೇಕು ಎಂಬುದು ಆಸೆಯನ್ನು ಇಟ್ಟುಕೊಂಡಿದ್ದಾರೆ. ಈ ಕೂಡು ಕುಟುಂಬದಲ್ಲಿ ಮನೆಯ ಹಿರಿಯವರಾಗಿ ಲಕ್ಷ್ಮೀದೇವಿ ಕಾಣಿಸಿಕೊಂಡಿದ್ದಾರೆ.

ಧಾರಾವಾಹಿಗಾಗಿ ಅಮ್ಮಮ್ಮ ಮೇಕಪ್

ಲಕ್ಷ್ಮೀದೇವಿ ಒಂದ್ಕಾದಲ್ಲಿ ಬಹುಬೇಡಿಕೆಯ ನಟಿಯಾಗಿದ್ದವರು. ಅದರಲ್ಲೂ 'ಯಜಮಾನ' ಸಿನಿಮಾ ಯಾರಿಗೆ ಮರೆಯುವುದಕ್ಕೆ ಸಾಧ್ಯ ಹೇಳಿ. ಆ ಸಿನಿಮಾದಲ್ಲಿ ಮಕ್ಕಳಿಗೆ ಅಮ್ಮಮ್ಮನಾಗಿ ಕಾಣಿಸಿಕೊಂಡಿದ್ದವರು. ಈಗಲೂ ಅಭಿಮಾನಿಗಳ ನೆಚ್ಚಿನ ಅಮ್ಮಮ್ಮನೇ ಆಗಿದ್ದಾರೆ. ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನಟಿಸುತ್ತಿರುವ ಅಮ್ಮಮ್ಮ, ಮೇಕಪ್ ಕೂಡ ಮಾಡುತ್ತಾರೆ. ತಲೆ ಕೂದಲಿಗೆ ಕ್ಲಿಪ್‌ಗಳನ್ನು ಹಾಕಿ, ಈ ವಯಸ್ಸಲ್ಲೂ ಆ ರೀತಿಯ ಮೇಕಪ್ ಮಾಡುತ್ತಿರುವುದನ್ನು ನೋಡಿದ ಜನ ವಾವ್ ಎನ್ನುತ್ತಿದ್ದಾರೆ. ಅವರ ಕೆಲಸದ ಮೇಲಿನ ಬದ್ಧತೆಗೆ ಹಾರ್ಟ್ ನೀಡಿದ್ದಾರೆ.

ಅಮ್ಮಮ್ಮನ ನಟನೆಗೆ ಫುಲ್ ಮಾರ್ಕ್ಸ್

'ಯಜಮಾನ' ಸಿನಿಮಾ ಬಂದೇ ಎಷ್ಟೋ ವರ್ಷಗಳು ಕಳೆದು ಹೋಗಿದೆ. ಆಗಲೇ ಲಕ್ಷ್ಮೀದೇವಿ ಅವರಿಗೆ ಸಾಕಷ್ಟು ವಯಸ್ಸಾಗಿತ್ತು. ಇನ್ನು ಈಗಂತೂ ಮನೆಯಲ್ಲಿ ಕೂತು ರೆಸ್ಟ್ ಮಾಡುವ ವಯಸ್ಸು. ಆದರೆ ಕಲಾದೇವಿಯ ಆರಾಧಕರು ಇವರೆಲ್ಲಾ. ಹೀಗಾಗಿ ಅಷ್ಟು ವಯಸ್ಸಿನಲ್ಲೂ ಸೆಟ್‌ಗೆ ಬಂದು, ಮೇಕಪ್ ಮಾಡಿಸಿಕೊಂಡು ಕ್ಯಾಮರಾ ಮುಂದೆ ನಿಲ್ಲುತ್ತಿದ್ದಾರೆ. ಇದನ್ನು ನೋಡಿದ ಎಂಥವರಿಗೆ ಆದರೂ ಸ್ಪೂರ್ತಿಯೇ ಸರಿ. ಹುಮ್ಮಸ್ಸು ತರದೇ ಇರುವುದಿಲ್ಲ.

ಲಕ್ಷ್ಮೀದೇವಿಗೆ ಮೆಚ್ಚುಗೆ

ಅಮ್ಮಮ್ಮನ ಪಾತ್ರವನ್ನು ಧಾರಾವಾಹಿಯಲ್ಲೂ ಎಲ್ಲರೂ ಮೆಚ್ಚಿಕೊಂಡಿದ್ದಾರೆ. ಇವರ ಮೇಕಪ್ ವಿಡಿಯೋ ಕಂಡು ಎಂಥಾ ಅದ್ಭುತ ನಟಿ ಅಲ್ವಾ ಎಂದು ಹಳೆಯ ದಿನಗಳನ್ನು ನೆನೆಸಿಕೊಂಡಿದ್ದಾರೆ. ಇಂಥ ನಟಿಗೆ ಪದ್ಮಭೂಷಣ ಪ್ರಶಸ್ತಿ ಕೊಡಬೇಕೆಂದು ಒಬ್ಬರು ಕಮೆಂಟ್ ಮಾಡಿದರೆ, ಇಂಥ ನಟಿ ಜೀ ಕನ್ನಡದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮಕ್ಕೆ ಇನ್ನು ಯಾಕೆ ಬಂದಿಲ್ಲ ಎಂದು ಇನ್ನೊಬ್ಬರು ಕಮೆಂಟ್ ಆಗಿದ್ದಾರೆ. ಇದರ ಜೊತೆಗೆ ಸಾಕಷ್ಟು ಜನ ಅಮ್ಮಮ್ಮನ ಪಾತ್ರವನ್ನು ಸಿಕ್ಕಾಪಟ್ಟೆ ಮೆಚ್ಚಿದ್ದಾರೆ.‌ ಲಕ್ಷ್ಮೀದೇವಿ ಸದ್ಯ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಮನೆಯ ಹಿರಿಯರಾಗಿ ಕಾಣಿಸಿದ್ದು, ಮಕ್ಕಳು ತಪ್ಪು ಮಾಡಿದರೆ ಬುದ್ದಿ ಹೇಳುವಂತರಾಗಿದ್ದಾರೆ. ಈಗ ಚಿಕ್ಕ ಮೊಮ್ಮಗಳ ಮದುವೆಯ ಬಗ್ಗೆಯೂ ಜೋರು ಧ್ವನಿಯಲ್ಲಿಯೇ ಮಾತನಾಡಿ, ಬೇಗ ಮುಗಿಸಿ ಅಂತಿದ್ದಾರೆ.

More from Filmibeat

English summary
Lakshmi nivasa serial actress Lakshmidevi makeup video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X