Lakshmi Nivasa serial:ಅಜ್ಜಿ ಮೇಲೆ ಜಯಂತ್ ಹಲ್ಲೆ; ಜಾಹ್ನವಿಗೆ ಗೊತ್ತಾಗಿ ಹೋಯ್ತು.. ಮುಂದೇನು?
ಜಾಹ್ನವಿಗೆ ತನ್ನ ಗಂಡನ ಬಂಡವಾಳ ಏನೆಂದು ಎಂದೋ ಗೊತ್ತಾಗಿದೆ. ಸತ್ಯ ತಿಳಿದ ಆಕೆಗೆ ಸಿಕ್ಕಾಪಟ್ಟೆ ನೋವಾಗಿದೆ. ಜಯಂತ್ ಆಗಾಗ ಮೊಬೈಲ್ ನೋಡುತ್ತಿರುವುದರಿಂದ ಜಾಹ್ನವಿಗೆ ಜಯಂತನ ಮೇಲೆ ಬಹಳ ಅನುಮಾನ ಮೂಡಿದೆ. ಮೊಬೈಲ್‌ನಲ್ಲಿ ಏನೋ ಇದೆ. ಇಲ್ಲವಾದರೆ ನನ್ನ ಗಂಡ ಇಷ್ಟೊಂದು ಮೊಬೈಲ್ ನೋಡುವುದು ಸಾಧ್ಯವೇ ಇಲ್ಲ. ಆ ಮೊಬೈಲ್‌ನಲ್ಲಿ ಏನಿದೆ ಎನ್ನುವುದನ್ನು ನಾನು ತಿಳಿದುಕೊಳ್ಳಲೇಬೇಕು ಎಂದು ಜಾಹ್ನವಿ ಅಂದುಕೊಳ್ಳುತ್ತಾಳೆ. ಜಯಂತನ ಮೇಲೆ ಜಾಹ್ನವಿಗೆ ಬಹಳ ಸಲ ಅನುಮಾನವೂ ಮೂಡಿದೆ.
ಸಿಸಿ ಕ್ಯಾಮೆರಾ ಯಾವಾಗ ಜಾಹ್ನವಿ ಕಣ್ಣಿಗೆ ಬಿತ್ತೋ ಅವತ್ತಿನಿಂದ ಜಾಹ್ನವಿಗೆ ಬಹಳ ನೋವಾಗಿದೆ. ತನ್ನ ಗಂಡ ಮನೆಯಲ್ಲಿ ಏನೇನೆಲ್ಲ ಚಲನವಲನಗಳು ನಡೆಯುತ್ತಿವೆಯೋ ಅದೆಲ್ಲವನ್ನು ತಿಳಿದುಕೊಳ್ಳಲು ಸಿಸಿ ಕ್ಯಾಮರಾ ಇಟ್ಟಿರೋದು ಗೊತ್ತಾಗಿದೆ. ಇನ್ನು ಅಜ್ಜಿಗೆ ಈ ರೀತಿ ಆಗಲು ಕಾರಣವಾದರೂ ಏನು ಎನ್ನುವ ಆಲೋಚನೆ ಜಾಹ್ನವಿಗೆ ಮೂಡುತ್ತದೆ. ಮನೆಗೆ ಬರುವಾಗ ಅಜ್ಜಿ ಬಹಳ ಖುಷಿಯಿಂದ ಇದ್ದರು. ಆದರೆ ಇದೀಗ ಅಜ್ಜಿ ಬದುಕುವುದೇ ಇಲ್ಲ ಎನ್ನುವ ಮಟ್ಟಿಗೆ ಆಗಿದ್ದಾರೆ. ಹೀಗೆ ಆಗಲು ಕಾರಣವಾದರೂ ಏನು ಎನ್ನುವುದು ಜಾಹ್ನವಿಗೆ ತಿಳಿದಿಲ್ಲ.

ಜಯಂತ್ ಮಲಗಿರುವಾಗ ಜಾಹ್ನವಿ ಮೆತ್ತಗೆ ಎದ್ದು ಜಯಂತನ ಮೊಬೈಲ್ ನೋಡುತ್ತಾಳೆ. ಅದರಲ್ಲಿ ಮೊದಲಿಗೆ ಜಯಂತ್ ಅಜ್ಜಿಯ ಜೊತೆ ಮಾತನಾಡುತ್ತಿರುವುದು ಕಾಣಿಸುತ್ತದೆ. ಇದೇನಪ್ಪ ಅಜ್ಜಿ ಹಾಸಿಗೆಯಲ್ಲಿ ಮಲಗಿದ್ದಾರೆ. ಇವರು ಏನಪ್ಪಾ ಅಜ್ಜಿಯ ಜೊತೆ ಮಾತನಾಡುತ್ತಿದ್ದಾರೆ ಎಂದು ಜಾಹ್ನವಿ ಯೋಚನೆ ಮಾಡುತ್ತಾಳೆ. ಆಗ ಜಾಹ್ನವಿಗೆ ಅಜ್ಜಿ ಜೊತೆ ಜಯಂತ್ ನಾಟಕವಾಡುತ್ತಿದ್ದಾರೆ ಎನ್ನುವುದು ಗೊತ್ತಾಗುತ್ತೆ.
ಜಯಂತ್ ಮೊಬೈಲ್ ನೋಡಿ ಜಾಹ್ನವಿ ಶಾಕ್
ವಿಡಿಯೋದಲ್ಲಿ ಜಯಂತ್ ತನ್ನ ಸ್ನೇಹಿತನ ಬಾಯಿಗೆ ಬಟ್ಟೆ ತುರುಕುತ್ತಿರುವ ದೃಶ್ಯ ನೋಡುತ್ತಿದ್ದಂತೆ ಜಾಹ್ನವಿಗೆ ಬಹಳ ಭಯ ಆಗುತ್ತೆ. ಜಯಂತ್ ಈ ರೀತಿ ಯಾಕೆ ಮಾಡುತ್ತಿದ್ದಾರೆ ಎಂದು ಭಯ ಆಗುತ್ತೆ. ಹಾಗೇ ವಿಡಿಯೋ ನೋಡುವುದನ್ನು ಮುಂದುವರೆಸಿದಾಗ ಅಜ್ಜಿ ಜೊತೆ ಏನೋ ಮಾತನಾಡುತ್ತಿರುವ ದೃಶ್ಯ ಜಾಹ್ನವಿ ಕಣ್ಣಿಗೆ ಬೀಳುತ್ತೆ. ಅದನ್ನು ನೋಡಿ ಜಾಹ್ನವಿ ಎದೆ ನಡುಗುತ್ತಿರುತ್ತದೆ. ಕೊನೆಗೆ ಅಜ್ಜಿಯ ಕುತ್ತಿಗೆಯನ್ನು ಜಯಂತ್ ಹಿಡಿದಿರುವುದು ನೋಡಿ ಜಾಹ್ನವಿ ನಡುಗಿ ಹೋಗುತ್ತಾಳೆ.

ಅಜ್ಜಿ ಮೇಲೆ ಹಲ್ಲೆ ಜಾಹ್ನವಿಗೆ ಗೊತ್ತಾಯ್ತು
ಜಯಂತ್ ಹಲ್ಲೆ ಮಾಡಿದ ಬಳಿಕ ಅಜ್ಜಿ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತಾರೆ. ಜಯಂತ್ ಯಾರಿಗೂ ಗೊತ್ತಾಗದ ಹಾಗೆ ಸೋಫಾದಲ್ಲಿ ಮಲಗಿಸುತ್ತಾನೆ. ವಿಡಿಯೋದಲ್ಲಿ ಇದನ್ನು ನೋಡಿ ಜಾಹ್ನವಿ ತಬ್ಬಿಬ್ಬಾಗುತ್ತಾಳೆ. ತನ್ನ ಗಂಡ ಬಹಳ ದೊಡ್ಡ ಸೈಕೋ. ಅಜ್ಜಿಯ ಮೇಲೆ ಇಷ್ಟರವರೆಗೆ ತೋರಿಸಿದ ಪ್ರೀತಿ ಬರೀ ನಾಟಕ. ಬೇರೆ ಎಲ್ಲಾದರೂ ಅಜ್ಜಿಯನ್ನು ಕರೆದುಕೊಂಡು ಹೋದರೆ ಅಜ್ಜಿ ಬದುಕಿದರೆ ಎಲ್ಲಿ ತನ್ನ ಬಂಡವಾಳ ಹೊರ ಬರುತ್ತದೋ ಎಂದುಕೊಂಡು ಅಜ್ಜಿಯನ್ನು ಇಲ್ಲಿಯೇ ಇರಿಸಿಕೊಂಡಿದ್ದಾರೆ. ಅಜ್ಜಿ ಮೇಲೆ ಪ್ರೀತಿ ತೋರುವಂತೆ ನಾಟಕ ಮಾಡುತ್ತಾರೆ ಅನ್ನೋದು ಜಾಹ್ನವಿಗೆ ಗೊತ್ತಾಗುತ್ತೆ. ತನ್ನ ಗಂಡ ಇಷ್ಟೊಂದು ಕಟುಕ ಎನ್ನುವ ಟೆನ್ಷನ್‌ಗೆ ತಲೆ ತಿರುಗಿ ಬೀಳುತ್ತಾಳೆ. ಜಯಂತ್ ಮಧ್ಯರಾತ್ರಿ ಇದ್ದುಕೊಂಡು ಮನೆ ಕ್ಲೀನ್ ಮಾಡಲು ಬಂದಾಗ ಅಲ್ಲಿ ಜಾಹ್ನವಿ ತಲೆ ತಿರುಗಿ ಬಿದ್ದಿರುವುದನ್ನು ನೋಡಿದ ಜಯಂತ್‌ಗೆ ಆಘಾತವಾಗುತ್ತದೆ.


Click it and Unblock the Notifications











