ಅಜ್ಜಿ ಕಥೆ ಮುಗಿಸೋ ಪ್ಲಾನ್; ಮನೆಗೆ ಬಂದ ಲಕ್ಷ್ಮೀ ಶ್ರೀನಿವಾಸರನ್ನು ನೋಡಿ ಅಳಿಮಯ್ಯ ದಂಗು
ಲಕ್ಷ್ಮೀಗೆ ಕೆಟ್ಟ ಕನಸೊಂದು ಬೀಳುತ್ತದೆ. ಜಾಹ್ನವಿಗೆ ಏನೋ ಆಗಿದೆ ಎನ್ನುವ ಮುನ್ಸೂಚನೆ. ಆದರೆ ತಾನು ಕನಸು ಕಂಡಿದ್ದು ಮಾತ್ರ ನಿಜ ಆಗದೆ ಇರಲಿ ದೇವರೇ ಎಂದು ಲಕ್ಷ್ಮೀ ದೇವರ ಬಳಿ ಪ್ರಾರ್ಥನೆ ಮಾಡುತ್ತಾಳೆ. ಲಕ್ಷ್ಮೀಯ ತಳಮಳ ಕಂಡು ಶ್ರೀನಿವಾಸ ರಾಯರು ನಾವು ಯಾಕೆ ಜಾಹ್ನವಿ ಮನೆಗೆ ಹೋಗಿ ಆಕೆಯನ್ನು ನೋಡಿಕೊಂಡು ಬರಬಾರದು ಎಂದು ಹೆಂಡತಿಯ ಜೊತೆ ಹೇಳಿದಾಗ ಲಕ್ಷ್ಮೀಗೆ ಕೂಡ ಹಾಡೆನಿಸುತ್ತದೆ. ಜಾಹ್ನವಿ ಗರ್ಭಿಣಿ ಆಗಿರುವುದರಿಂದ ಲಕ್ಷ್ಮೀಗೆ ಇನ್ನಷ್ಟು ಆತಂಕ ಹೆಚ್ಚಾಗುತ್ತಲೇ ಇತ್ತು ಹೊರತು ಕಡಿಮೆ ಆಗುತ್ತಿರಲಿಲ್ಲ.
ಲಕ್ಷ್ಮೀಗೆ ತನ್ನ ಮಕ್ಕಳೆಂದರೆ ಬಹಳ ಪ್ರೀತಿ. ಯಾರಿಗೆ ಏನಾದರು ಆದರೂ ಅದನ್ನು ತಡೆದುಕೊಳ್ಳಲು ಲಕ್ಷ್ಮೀಗೆ ಆಗುವುದಿಲ್ಲ. ಇತ್ತ ಶ್ರೀನಿವಾಸ ರಾಯರಿಗೆ ಹಣದ್ದೇ ಚಿಂತೆ. ಹೇಗಪ್ಪಾ ನಾನು ಅಷ್ಟೊಂದು ಹಣವನ್ನು ಆರೆಂಜ್ ಮಾಡುವುದು? ಜಾಹ್ನವಿ ಮನೆಗೆ ಹೋಗಲು ತನ್ನ ಬಳಿ ಹಣವಿಲ್ಲವಲ್ಲ ಎನ್ನುವ ಬೇಸರ ಆಕೆಗೆ ಮೂಡುತ್ತದೆ. ಇದೆಲ್ಲವನ್ನೂ ಗಮನಿಸಿದ ವೀಣಾ, ಸಂತೋಷ್ ಬಳಿಗೆ ಹೋಗುತ್ತಾಳೆ. ವೀಣಾ ಸಂತೋಷ್ ಬಳಿಗೆ ಬಂದು ಮಾವನಿಗೆ ಹಣದ ತೊಂದರೆ ಇದೆ. ಅವರು ಜಾಹ್ನವಿ ಮನೆಗೆ ಹೋಗಬೇಕು ಎಂದುಕೊಂಡಿದ್ದರು. ಆದರೆ ಅದು ಸಾಧ್ಯ ಆಗುತ್ತಿಲ್ಲ. ಅವರಿಗೆ ಹೋಗಲು ಸ್ವಲ್ಪ ಹಣ ಕೊಡಿ ಎಂದಾಗ ಸಂತೋಷ್ ತನ್ನ ಬಳಿ ಹಣ ಇದ್ದರೂ ಇಲ್ಲ ಎಂದು ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ.

ಇತ್ತ ವೀಣಾ ಮಾತ್ರ ಸಂತೋಷ್ ಕೂಡಿಟ್ಟ ಹಣದ ಬಾಕ್ಸ್ ಬಳಿಗೆ ಬಂದು ಹಣವನ್ನು ತೆಗೆದುಕೊಂಡು ಮಾವನಿಗೆ ಕೊಡುತ್ತಾಳೆ. ಮೊದಲಿಗೆ ಶ್ರೀನಿವಾಸ್ ಆ ಹಣವನ್ನು ತೆಗೆದುಕೊಳ್ಳಲು ನಿರಾಕರಣೆ ಮಾಡುತ್ತಾನೆ ಆದರೆ ವೀಣಾ ಒತ್ತಾಯ ಮಾಡಿ ಹಣವನ್ನು ಕೊಡುತ್ತಾಳೆ. ಇದರಿಂದ ಲಕ್ಷ್ಮೀ ಹಾಗೂ ಶ್ರೀನಿವಾಸ್ ಜಾಹ್ನವಿ ಮನೆಗೆ ಹೋಗಲು ತಯಾರಾಗುತ್ತಾರೆ. ಜಾಹ್ನವಿಯನ್ನು ಆಸ್ಪತ್ರೆಗೆ ಅಡ್ಮಿಟ್ ಮಾಡಲು ಡಾಕ್ಟರ್ ಹೇಳುತ್ತಾರೆ. ಜಯಂತ್ ಮನೆಗೆ ಬರುತ್ತಾನೆ. ಆತನಿಗೆ ಮೊಬೈಲ್‌ನದ್ದೆ ಚಿಂತೆ. ಅದರಲ್ಲಿದ್ದ ರಹಸ್ಯಗಳದ್ದೇ ಚಿಂತೆ.
ಮೊಬೈಲ್ ನೋಡುತ್ತಿದ್ದಂತೆ ದಂಗಾದ ಜಯಂತ್
ಸೋಫಾ ಕೆಳಗೆ ಜಯಂತ್ ಮೊಬೈಲ್ ಸಿಗುತ್ತೆ. ಮೊಬೈಲ್ ನೋಡುತ್ತಿದ್ದಂತೆ ಆತನಿಗೆ ಒಂದು ಶಾಕಿಂಗ್ ವಿಚಾರ ಕಾದಿರುತ್ತದೆ. ಜಾಹ್ನವಿಗೆ ಎಲ್ಲಾ ವಿಚಾರ ತಿಳಿದಿದೆ ಅನ್ನೋದು ಗೊತ್ತಾಗುತ್ತೆ. ಇದನ್ನೆಲ್ಲ ನೋಡಿದ ಜಯಂತ್‌ಗೆ ಬಹಳ ಆತಂಕ ಕಾಡುತ್ತೆ. ಜಾಹ್ನವಿಗೆ ಎಲ್ಲಾ ವಿಚಾರ ತಿಳಿದು ಹೋಗಿದೆ. ನಾನು ಹೇಗೆ ಅವರ ಜೊತೆ ಇರುವುದು. ಹೇಗೆ ಮುಖ ತೋರಿಸಲಿ. ಇನ್ನು ಮುಂದೆ ಜಾಹ್ನವಿ ಖಂಡಿತವಾಗಿಯೂ ನನ್ನ ಜೊತೆ ಸಂಸಾರ ಮಾಡುವುದಿಲ್ಲ ಎಂದು ಮನದಲ್ಲಿ ಅಂದುಕೊಂಡು ಭಯಪಡುತ್ತಾನೆ. ಇಷ್ಟೆಲ್ಲ ಆಗಿದ್ದು ಈ ಅಜ್ಜಿಯಿಂದಾಗಿ. ಅಜ್ಜಿಯ ಕಥೆ ಮುಗಿಸಿದರೆ ಏನೂ ತೊಂದರೆ ಇಲ್ಲ ಎಂದುಕೊಂಡು ನೇರವಾಗಿ ಅಜ್ಜಿಯ ರೂಮ್ ಬಳಿ ಬರುತ್ತಾನೆ.

ಅಜ್ಜಿ ರೂಮ್‌ಗೆ ಬಂದ ಜಯಂತ್
"ಅಜ್ಜಿ.. ಮನೆಯಲ್ಲಿ ಇಷ್ಟೆಲ್ಲ ಆಗಲು ನೀವೇ ಕಾರಣ. ನಿನ್ನಿಂದಾಗಿ ಜಾನೂ ನನ್ನ ಬಿಟ್ಟು ಹೋಗುತ್ತಿದ್ದಾಳೆ. ನಿಮ್ಮನ್ನು ನಾನು ಸುಮ್ಮನೆ ಬಿಡುವುದಿಲ್ಲ ಎಂದು ಹೇಳುತ್ತಿರುವಾಗ ಹೊರಗಿನಿಂದ ಲಕ್ಷ್ಮೀ ಹಾಗೂ ಶ್ರೀನಿವಾಸ್ ಜಯಂತ್ ಮನೆಗೆ ಬರುತ್ತಾರೆ. ಇದೀಗ ಜಯಂತ್‌ಗೆ ಆತಂಕ ಇನ್ನೂ ಹೆಚ್ಚಾಗುತ್ತದೆ. ಶ್ರೀನಿವಾಸರಾಯರು ಸರಿಯಾದ ಕ್ಷಣದಲ್ಲಿ ಬಂದದ್ದರಿಂದ ಅಜ್ಜಿ ಬದುಕುಳಿದರು. ಶ್ರೀನಿವಾಸ ಹಾಗೂ ಲಕ್ಷ್ಮೀಯನ್ನು ನೋಡಿದ ಜಯಂತ್‌ಗೆ ಕೈ ಕಾಲೆ ಆಡುತ್ತಿಲ್ಲ. ಮನೆಯ ಹೊರಗಡೆಯಿಂದಲೇ ಶ್ರೀನಿವಾಸರಾಯರು ಜಾಹ್ನವಿ ಎಂದು ಕರೆಯುತ್ತಾ ಒಳಗೆ ಬಂದಿದ್ದಾರೆ. ಮುಂದೇನು ಅನ್ನೋ ಪ್ರಶ್ನೆ ವೀಕ್ಷಕರಲ್ಲಿದೆ.


Click it and Unblock the Notifications











