Lakshmi Nivasa:ಮಗುವನ್ನು ಕಳೆದುಕೊಂಡ ನೋವಿನಲ್ಲಿ ಜಾಹ್ನವಿ; ಅಪ್ಪ-ಅಮ್ಮನ ಮುಂದೆ ಏನು ಹೇಳುತ್ತಾಳೆ?
ಮನೆಗೆ ಬಂದಿರುವ ಲಕ್ಷ್ಮಿ ಹಾಗೂ ಶ್ರೀನಿವಾಸ್ ಇಬ್ಬರ ಬಳಿನೂ ಜಯಂತ ಸುಳ್ಳು ಹೇಳುತ್ತಾನೆ. ಜಾಹ್ನವಿ ಆಸ್ಪತ್ರೆ ಸೇರಿರುವುದು ತಂದೆ ತಾಯಿಗೆ ಇಬ್ಬರಿಗೂ ಗೊತ್ತಿಲ್ಲ. ಏನೋ ಚೆಕಪ್‌ಗೆ ಹೋಗಿದ್ದಾಳೆ. ಅದಕ್ಕೆ ಇಷ್ಟು ಲೇಟ್ ಆಗಿದೆ ಎಂದು ಅಂದುಕೊಳ್ಳುತ್ತಾರೆ. ಜಯಂತ್ ಆಸ್ಪತ್ರೆಗೆ ಹೋಗಿ ಜಾಹ್ನವಿನ ಕರೆತರುವುದಾಗಿ ಹೇಳಿ ಅಲ್ಲಿಂದ ಹೊರಟು ಹೋಗುತ್ತಾನೆ. ಲಕ್ಷ್ಮೀ ವೆಂಕಿಗೆ ಭಯ. ಜಾಹ್ನವಿ ಒಬ್ಬಳೇ ಆಸ್ಪತ್ರೆಗೆ ಹೋಗಿದ್ದಾಳೆ. ಎಲ್ಲಾದರೂ ಏನಾದರು ಹೆಚ್ಚು ಕಮ್ಮಿ ಆದರೆ. ಆಕೆಯ ಜೊತೆಗೆ ಜಯಂತ್ ಕೂಡ ಹೋಗಬೇಕಾಗಿತ್ತು ಎಂದು ಅವರು ಅಂದುಕೊಳ್ಳುತ್ತಾರೆ.
ಅತ್ತೆಯನ್ನು ನೋಡಿಕೊಳ್ಳಲು ಯಾರು ಮನೆಯಲ್ಲಿ ಇಲ್ಲ. ಏನು ಮಾಡಲು ಆಗುವುದಿಲ್ಲ ಎಂದು ಲಕ್ಷ್ಮೀ ಅಂದುಕೊಳ್ಳುತ್ತಾಳೆ. ಜಯಂತ್ ತರಾತುರಿಯಿಂದ ಭಯದಿಂದ ಆಸ್ಪತ್ರೆ ಕಡೆಗೆ ಬರುತ್ತಾನೆ. ಮನೆಗೆ ಜಾಹ್ನವಿ ಹೆತ್ತವರು ಬಂದಿದ್ದಾರೆ. ಈ ಸಂದರ್ಭ ಅವರಿಗೆ ನಾನು ಯಾವ ರೀತಿ ಉತ್ತರವನ್ನು ನೀಡಲಿ ಎನ್ನುವ ಆತಂಕ ಆತನಿಗೆ. ಜಾಹ್ನವಿಗೆ ಜಯಂತ್ ಬಗ್ಗೆ ತಿಳಿದ ಬಳಿಕ ಆಕೆ ತನ್ನ ತಾಯಿಯ ಬಳಿ ಎಲ್ಲಾ ನಿಜ ವಿಚಾರವನ್ನು ಹೇಳಿ ಬಿಡಬೇಕು ಎಂದು ಅಂದುಕೊಂಡಿದ್ದಳು. ಆದರೆ ಜಾಹ್ನವಿ ತನ್ನ ತಾಯಿ ಬಳಿ ನಿಜ ಹೇಳುವ ಸಂದರ್ಭಗಳು ಜಾಹ್ನವಿಗೆ ಒದಗಿ ಬರುತ್ತಿರಲಿಲ್ಲ.

ಏನಾದರೂ ಒಂದು ಅಡ್ಡಿ ಆತಂಕಗಳು ಎದುರಾಗುತ್ತದೆ. ಜಾಹ್ನವಿಗೆ ಅಜ್ಜಿಗೆ ಹೀಗೆಲ್ಲಾ ಆಗಲು ಕಾರಣ ನನ್ನ ಗಂಡ ಎನ್ನುವ ವಿಚಾರ ತಿಳಿದು ಹೋಗಿದೆ. ಮನೆ ತುಂಬಾ ಸಿಸಿಟಿವಿ ಕ್ಯಾಮರಾ. ಜಾಹ್ನವಿ ಎಲ್ಲಿ ನನ್ನ ಕೈ ತಪ್ಪಿ ಹೋಗುತ್ತಾಳೆ ಅನ್ನೋದು ಜಯಂತ್‌ಗೆ ಭಯ. ಹಾಗೆಯೇ ಜಾಹ್ನವಿ ಎಲ್ಲಿ ಎಲ್ಲಿ ಹೋಗುತ್ತಾಳೆ ಎನ್ನುವ ಅನುಮಾನದಿಂದ ಆಕೆಯ ಚಲನವಲನವನ್ನು ತಿಳಿಯಲು ಸಿಸಿಟಿವಿ ಕ್ಯಾಮರ ಹಾಕಿರುತ್ತಾನೆ. ಇದೆಲ್ಲವನ್ನೂ ತಿಳಿದ ಜಾಹ್ನವಿಗೆ ಶಾಕ್ ಆಗಿ ಅಬಾರ್ಶನ್ ಆಗಿ ಬಿಡುತ್ತದೆ. ಮಗುವಿನ ಬಗ್ಗೆ ಬಹಳಷ್ಟು ಕನಸು ಕಂಡಿದ್ದ ಜಾಹ್ನವಿ ಇದೀಗ ಮಗುವನ್ನು ಕಳೆದುಕೊಂಡಿದ್ದಾಳೆ.
ಜಯಂತ್ ಮುಖ ನೋಡಲು ಇಷ್ಟಪಡದ ಜಾಹ್ನವಿ
ಇತ್ತ ಜಯಂತ್ ಜಾಹ್ನವಿ ಇರುವ ವಾರ್ಡ್ ಕಡೆಗೆ ಬರುತ್ತಾನೆ. ಜಾಹ್ನವಿಗೆ ಆಗಷ್ಟೇ ಪ್ರಜ್ಞೆ ಬಂದಿರುತ್ತದೆ. ತನ್ನ ಗಂಡ ಇಂತಹ ನೀಚ ಎನ್ನುವ ವಿಚಾರ ಆಕೆಗೆ ಅದಾಗಲೇ ತಿಳಿದು ಬಿಟ್ಟಿತು. ಜಯಂತ್ ಮುಖ ನೋಡಲು ಜಾಹ್ನವಿ ಇಷ್ಟ ಪಡಲಿಲ್ಲ. ಜಯಂತ್ ಅದೆಷ್ಟೇ ಸಮಜಾಯಿಸಿ ಕೊಟ್ಟರು ಜಾಹ್ನವಿ ಮಾತ್ರ ಅಳುತ್ತಿರುತ್ತಾಳೆ. ಮಗುವನ್ನು ಕಳೆದುಕೊಂಡು ಕಂಗಾಲಗುತ್ತಾಳೆ. ಅಜ್ಜಿಯ ಸ್ಥಿತಿ ನೋಡಿ ಬಹಳಷ್ಟು ಬೇಸರ ಪಟ್ಟುಕೊಳ್ಳುತ್ತಾಳೆ.

ಜಾಹ್ನವಿ ವರ್ತನೆಗೆ ಕೋಪಗೊಂಡ ಜಯಂತ್
ಜಯಂತ್ ಬಹಳ ಕೋಪದಿಂದ ಮನೆಯಲ್ಲಿ ಸಿಸಿ ಕ್ಯಾಮರ ಹಾಕಿದ್ದು ನಿಮ್ಮ ಒಳ್ಳೆಯದಕ್ಕಾಗಿ ಅಲ್ವಾ . ನೀವು ನೋಡಿದರೆ ನನ್ನನ್ನೇ ಬಯ್ಯುತ್ತಿರಾ. ನಾನು ನಿಮಗೆ ಒಳ್ಳೆಯದಾಗಲಿ ಎಂದು ಈ ರೀತಿ ಮಾಡಿದರೆ ನೀವು ಹೀಗೆಲ್ಲ ಅಂದುಕೊಳ್ಳುವುದಾ? ಅಜ್ಜಿ ಕೂಡ ಇದೆ ವಿಚಾರಕ್ಕೆ ಜಗಳವಾಡುತ್ತಿದ್ದರು. ಅದಕ್ಕೆ ಅಜ್ಜಿಗೆ ಈ ಸ್ಥಿತಿ ಬಂದಿರುವುದು ಎಂದು ಹೇಳಿದಾಗ ಜಾಹ್ನವಿ ಏನೂ ಮಾತನಾಡದೆ ಸುಮ್ಮನೆ ಇರುತ್ತಾಳೆ. ಇನ್ನು ಜಯಂತ್ ಡಾಕ್ಟರ್ ಬಳಿಗೆ ಬಂದು ಜಾಹ್ನವಿಯನ್ನು ಇವತ್ತೇ ಡಿಸ್ಚಾರ್ಜ್ ಮಾಡಿ ದಯವಿಟ್ಟು ನನಗೆ ಜಾಹ್ನವಿಯನ್ನು ಮನೆಗೆ ಕರೆದುಕೊಂಡು ಹೋಗಬೇಕು ಎಂದು ಅನ್ನಿಸುತ್ತಿದೆ ಎಂದಾಗ, ಡಾಕ್ಟರ್ ಜಾಹ್ನವಿ ಇರುವ ಸ್ಥಿತಿ ಬಗ್ಗೆ ವಿವರಣೆ ನೀಡುತ್ತಾರೆ. ಆದರೆ ಜಯಂತ್ ಇದ್ಯಾವುದನ್ನೂ ಕೇಳುವುದಿಲ್ಲ ಕೊನೆಗೆ ಡಾಕ್ಟರ್ ಡಿಸ್ಚಾರ್ಜ್ ಮಾಡಲು ಒಪ್ಪಿಗೆ ನೀಡುತ್ತಾರೆ.
ಅಮ್ಮ ಅಪ್ಪನನ್ನು ನೋಡಿ ಖುಷಿಪಟ್ಟ ಜಾಹ್ನವಿ
ಜಾಹ್ನವಿಯನ್ನು ಜಯಂತ್ ಮನೆಗೆ ಕರೆದುಕೊಂಡು ಬಂದಾಗ ಆಕೆಗೆ ಬಹಳ ಆಶ್ಚರ್ಯ ಆಗುತ್ತದೆ. ಯಾಕೆಂದರೆ ಮನೆಯಲ್ಲಿ ಲಕ್ಷ್ಮೀ ಶ್ರೀನಿವಾಸ ವೆಂಕಿ ಹಾಗೆಯೇ ಚೆಲುವಿಯನ್ನು ನೋಡಿ ಬಹಳಷ್ಟು ಖುಷಿ ಪಡುತ್ತಾಳೆ. ಹೆತ್ತವರನ್ನು ನೋಡಿದ ಖುಷಿಯಲ್ಲಿ ಜಾಹ್ನವಿ ತನ್ನ ನೋವನ್ನು ಮರೆತು ಬಿಡುತ್ತಾಳೆ. ಲಕ್ಷ್ಮೀ ಹಾಗೂ ಶ್ರೀನಿವಾಸರಾಯರು ಮಗಳ ಮೇಲಿನ ಮಮಕಾರದಿಂದ ಆನಂದ ಪಡುತ್ತಾರೆ. ಜಾಹ್ನವಿ ಆರೋಗ್ಯದ ಬಗ್ಗೆ ವಿಚಾರಣೆ ಮಾಡುತ್ತಾರೆ. ಆದರೆ ಹೊಟ್ಟೆಯಲ್ಲಿ ಮಗು ಇಲ್ಲ ಎಂದು ಹೇಳಲು ಜಾಹ್ನವಿಗೆ ಧೈರ್ಯ ಸಾಲುತ್ತಿಲ್ಲ. ಜಯಂತ್‌ಗೆ ಎಲ್ಲಿ ನನ್ನ ಬಂಡವಾಳವೆಲ್ಲ ಅತ್ತೆ ಮನೆಯವರ ಎದುರು ಬಯಲಾಗುತ್ತೆ ಎನ್ನುವ ಭಯ. ಜಾಹ್ನವಿ ನನ್ನ ಬಿಟ್ಟು ಹೋಗುತ್ತಾಳೇನೋ ಎನ್ನುವ ಅಂತಕ. ಮುಂದೇನು ಆಗುತ್ತೆ ಅನ್ನೋದು ಇವತ್ತಿ ಎಪಿಸೋಡ್‌ನಲ್ಲಿ ಗೊತ್ತಾಗಲಿದೆ.


Click it and Unblock the Notifications











