ವೀಕ್ಷಕರು ಬಯಸಿದಂತೆ ನಡೆಯುತ್ತಿದೆ 'ಲಕ್ಷ್ಮೀ ನಿವಾಸ'; ಭಾವನಾ ಕಂಡು ಕಳೆದೋದ ಸಿದ್ದೇಗೌಡ !
ಭಾವನಾಳ ಲೈಫ್‌ಗೆ ಪಾಟ್ನರ್ ಸಿಗೋದೆ ಇಲ್ವಾ ಅನ್ನೋ ಭಯ ಅಪ್ಪ-ಅಮ್ಮನಿಗೆ ಶುರುವಾಗಿದೆ. ಇಷ್ಟು ದಿನ ಸಂಬಂಧಗಳೆಲ್ಲಾ ಕಳೆದು ಹೋಗುತ್ತಿದ್ದವು. ಆದರೆ, ಶ್ರೀಕಾಂತ್ ಮನಸ್ಪೂರ್ವಕವಾಗಿ ಒಪ್ಪಿಗೆ ನೀಡಿದ್ದರು. ಮದುವೆಯ ತಯಾರಿಯೂ ಆಗಿತ್ತು. ವಿಧಿಯ ಆಟವೇ ಬೇರೆಯದ್ದೇ ಆಗಿತ್ತು. ಆಕ್ಸಿಡೆಂಟ್‌ನಲ್ಲಿ ಶ್ರೀಕಾಂತ್ ಹಾಗೂ ತಾಯಿ ಸಾವನ್ನಪ್ಪಿದ್ದರು.
ಖುಷಿಗಾಗಿ ಇಬ್ಬರು ಮದುವೆಯಾಗಬೇಕೆಂದು ಬಯಸಿದ್ದರು. ಅಪ್ಪ-ಅಜ್ಜಿಯನ್ನು ಕಳೆದುಕೊಂಡ ಖುಷಿಗೆ ಭಾವನಾಳೇ ತಾಯಿಯಾಗಿದ್ದಾಳೆ. ದೊಡ್ಡ ಜವಾಬ್ದಾರಿಯನ್ನೇ ಹೆಗಲಿಗೇರಿಸಿಕೊಂಡಿದ್ದಾಳೆ. ಇದರ ನಡುವೆ ಭಾವನಾಳ ಬದುಕಲ್ಲಿ ಮತ್ತೆ ಮದುವೆಯೆಂಬ ಸುಂದರ ಘಳಿಗೆ ಬರಲಿದೆ ಎಂಬುದರ ಸುಳಿವು ಸಿಕ್ಕಿದೆ.

ಸಿದ್ದೇಗೌಡ ಕಳೆದೋಗಿದ್ದೇಕೆ..?
ಜವರೇಗೌಡರ ಮಗ ಸಿದ್ದೇಗೌಡರಿಗೆ ಮೂಗಿನ ಮೇಲೆ ಕೋಪ ಜಾಸ್ತಿ. ಆದರೆ, ಮನಸ್ಸು ಅಷ್ಟೇ ಒಳ್ಳೆಯದು. ತಪ್ಪು ಮಾಡಿದವರಿಗೆ ಬಾರಿಸುವ ಸಿದ್ದೇಗೌಡ್ರು, ಕಷ್ಟ ಎಂದವರಿಗೆ ಸಹಾಯ ಮಾಡದೆ ಇರುವುದಿಲ್ಲ. ತನ್ನಿಂದ ಯಾರಿಗೂ ಅನ್ಯಾಯವಾಗುವುದಕ್ಕೂ ಬಿಡುವುದಿಲ್ಲ. ಈಗ ಅದೇ ಸಿದ್ದೇಗೌಡ್ರು, ಭಾವನಾ ನೋಡಿ ಕಳೆದು ಹೋಗಿದ್ದಾರೆ. ಹಿಗ್ಗಾ ಮುಗ್ಗಾ ಯಾರಿಗೋ ಏಟು ಕೊಡುತ್ತಿದ್ದ. ಆದರೆ ಅದೇ ಸಮಯಕ್ಕೆ ಭಾವನಾ ಅದೇ ದಾರಿಯಲ್ಲಿ ಬಂದಿದ್ದಾಳೆ. ಶಂಕರಣ್ಣನ ಜೊತೆಗೆ ಬಂದ ಭಾವನಾಳನ್ನು ನೋಡುತ್ತಾ ನಿಂತ ಸಿದ್ದೇಗೌಡ, ಮೈಮರೆತಿದ್ದ.
ಪ್ರಾಣ ಉಳಿಸಿದ್ದ ಲಕ್ಷ್ಮಕ್ಕ
ಜವರೇಗೌಡನಿಗೆ ಹೋಲಿಕೆ ಮಾಡಿಕೊಂಡರೆ ಸಿದ್ದೇಗೌಡ ತುಂಬಾ ಒಳ್ಳೆಯ ವ್ಯಕ್ತಿತ್ವ ಇರುವ ವ್ಯಕ್ತಿ. ಆದರೆ ಯಾವಾಗಲೂ ಹೊಡೆದಾಟ ಬಡಿದಾಟ ಮಾತ್ರ ಹಾಗೇ ಇರುತ್ತದೆ. ಒಮ್ಮೆ ದೇವಸ್ಥಾನದಲ್ಲೂ ಹೊಡೆದಾಟ ಶುರು ಮಾಡಿಕೊಂಡಿದ್ದ. ಅಂದು ಭಾವನಾಳ ಮದುವೆಯ ಅಂಗವಾಗಿ ಪೂಜೆ ಮಾಡಿಸಲು ದೇವಸ್ಥಾನಕ್ಕೆ ಲಕ್ಷ್ಮೀ ಕೂಡ ಬಂದಿದ್ದಳು. ಭಾವನಾಗೆ ಆಶೀರ್ವದಿಸಿ ತಾಯಿಯ ಸೀರೆ ಕೊಡಲಾಗಿತ್ತು. ಅಂದು ಸಿದ್ದೇಗೌಡನ ಪ್ರಾಣ ಉಳಿಸಿದ್ದೆ ಆ ಸೀರೆ. ಅಂದಿನಿಂದ ಲಕ್ಷ್ಮೀ ಕಂಡರೆ ಸಿದ್ದೇಗೌಡನಿಗೆ ವಿಶೇಷ ಪ್ರೀತಿ ಇದೆ.

ಅಕ್ಕನ ನಾದಿನಿ ಅಂದ್ರೆ ಫುಲ್ ಚೇಂಜ್
ಲಕ್ಷ್ಮೀ ಸಿಕ್ಕಾಗೆಲ್ಲಾ ಪ್ರೀತಿಯಿಂದ ಮಾತನಾಡಿಸುತ್ತಾನೆ, ಸಹಾಯ ಮಾಡುತ್ತಾನೆ. ಪ್ರೀತಿಯಿಂದ ಅಕ್ಕ ಅಂತ ಕರೀಲಾ ಎಂದೇ ಕರೆಯುತ್ತಾನೆ. ತಾನೂ ಮನಸೋತಿರುವ ಹುಡುಗಿ ಲಕ್ಷ್ಮಕ್ಕನ ಮಗಳೇ ಎಂದು ಗೊತ್ತಾದರೆ, ಸಿದ್ದೇಗೌಡನ ಸಂತೋಷಕ್ಕೆ ಪಾರವೇ ಇರುವುದಿಲ್ಲ. ಸಿದ್ದೇಗೌಡ ಮನಸೋತಷ್ಟು ಸುಲಭವಾಗಿ ಭಾವನಾ ಮನಸೋಲುವುದಕ್ಕೆ ಸಾಧ್ಯವೇ ಇಲ್ಲ. ಅವಳಿಗೆ ಈಗಾಗಲೇ ಹೆಗಲ ಮೇಲೆ ಮಗುವಿನ ಜವಾಬ್ದಾರಿ ಇದೆ. ಅಷ್ಟೇ ಅಲ್ಲ ಶ್ರೀಕಾಂತ್‌ನನ್ನು ಭಾವನಾ ಮನಸಾರೆ ಇಷ್ಟಪಟ್ಟಿದ್ದಳು. ಆದರೆ, ಸಿದ್ದೇಗೌಡನಿಗೆ ತನ್ನ ಅಕ್ಕ ಮದುವೆಯಾಗಿರುವ ಗಂಡನ ಮನೆಯವರನ್ನು ಕಂಡರೇನೆ ಆಗುವುದಿಲ್ಲ. ಇನ್ನು ಅಕ್ಕನ ನಾದಿನಿ ಎಂದು ಗೊತ್ತಾದರೆ ಯಾವ ರೀತಿಯ ರಿಯಾಕ್ಷನ್ ಕೊಡುತ್ತಾನೋ ಗೊತ್ತಿಲ್ಲ.
ಅಭಿಮಾನಿಗಳ ಆಸೆಯಂತೆ ಸಾಗುತ್ತಿದೆ ಧಾರಾವಾಹಿ
'ಲಕ್ಷ್ಮೀ ನಿವಾಸ' ಧಾರಾವಾಹಿ ಶುರುವಾದ ಕೆಲವೇ ವಾರದಲ್ಲಿಯೇ ಎಲ್ಲರ ಮನಸ್ಸುಗಳನ್ನು ಗೆದ್ದಿದೆ. ನೋಡುಗರನ್ನು ಹಿಡಿದಿಟ್ಟುಕೊಂಡಿದೆ. ಭಾವನಾಳ ಮದುವೆ ಫಿಕ್ಸ್ ಆದಾಗಲೇ ಸಿದ್ದೇಗೌಡ-ಭಾವನಾ ಜೋಡಿ ಸೂಪರ್ ಎಂದು ಆ ಪ್ರೋಮೋಗೆ ಕಮೆಂಟ್‌ಗಳು ಬಂದಿದ್ದವು. ಆದರೆ ಇನ್ನು ಕೆಲ ನೋಡುಗರು ಶ್ರೀಕಾಂತ್ ಜೊತೆಗೆ ಮದುವೆಯಾಗುತ್ತೆ, ಮೂಲ ನಕ್ಷತ್ರ ಮೂಢನಂಬಿಕೆಯನ್ನು ಹೋಗಲಾಡಿಸುತ್ತಾರೆ ಎಂದೇ ನಂಬಿದ್ದರು. ಆದರೆ ಆ ಕಥೆಯೇ ಬೇರೆ ರೀತಿಯಾಗಿ ಹೋಯಿತು. ಕುತೂಹಲ ಹೆಚ್ಚಾದ ಮೇಲೆ ಇಂದು, ಸಿದ್ದೇಗೌಡ ಕಳೆದೋಗಿದ್ದು ಕಂಡು, ಕಥೆಗೊಂದು ಟ್ವಿಸ್ಟ್ ಸಿಗುವುದರ ಸುಳಿವು ಸಿಕ್ಕಿದೆ. ಇದೇ ವೀಕ್ಷಕರು ಬಯಸಿದ ಪ್ರೀತಿ.


Click it and Unblock the Notifications











